ಭೂಮಿಗೆ ಅಗತ್ಯವಾದ ರಂಜಕ, ಸಾರಜನಕವನ್ನು ಒದಗಿಸುವಲ್ಲಿ ಪೌಷ್ಟಿಕರಿಸಿದ ಎರೆಗೊಬ್ಬರ ಬಹಳಷ್ಟು ಸಹಕಾರಿಯಾಗುತ್ತದೆ. ಇದರ ತಯಾರಿಕೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.• ಒಂದು ಸ್ವಚ್ಛವಾದ ಸಿಮೆಂಟ್/ಗಟ್ಟಿಯಾದ ನೆಲದ ಮೇಲೆ ಒಂದು ಕ್ವಿಂಟಾಲ್ ಎರೆಗೊಬ್ಬರ ಅಥವಾ ಉತ್ತಮವಾದ ಕೊಟ್ಟಿಗೆ ಗೊಬ್ಬರ ಸುರಿಯಬೇಕು. ಅದರ ಜತೆಗೆ ಒಂದು ಕೆಜಿ ಅಜೋಸ್ಪಿರಿಲಂ ಅಥವಾ ಅಜಟೋಬ್ಯಾಕ್ಟರ್ ಮತ್ತು ಒಂದು ಕೆಜಿ ರಂಜಕ ಕರಗಿಸುವ ಗೊಬ್ಬರ ಹಾಕಬೇಕು.• ಮೇಲೆ ತಿಳಿಸಿದ ಎರೆಗೊಬ್ಬರ ಜತೆ ಜೈವಿಕ ಗೊಬ್ಬರಗಳನ್ನು ಮಿಶ್ರಣ ಮಾಡುವ ಸಂದರ್ಭದಲ್ಲಿ ನೀರನ್ನು ಶೇ. 50 ರಷ್ಟು ತೇವಾಂಶವಿರುವಂತೆ ಬೆರೆಸಿ ಗೊಬ್ಬರದ ಮೇಲೆ ಗೋಣಿ ಚೀಲಗಳನ್ನು ಹೊದಿಸಬೇಕು. ಆಗಾಗ್ಗೆ ನೀರು ಚಮಕಿಸುತ್ತ, ವಾರಕ್ಕೊಮ್ಮೆ ಮುಗಿಚಿ ಹಾಕಿ ತಿರುಗಿಸುತ್ತ ಕನಿಷ್ಠ 3 ವಾರದವರೆಗೂ ಗೋಣಿ ಚೀಲ ಹೊದಿಸಬೇಕು.• ನಂತರ ಪ್ರತಿ ಎಕರೆಗೆ 2 ರಿಂದ 5 ಕ್ವಿಂಟಾಲ್ ಪೌಷ್ಟಿಕರಿಸಿದ ಗೊಬ್ಬರ ಉಪಯೋಗಿಸಿದರೆ ಬೆಳೆಗಳ ಬೆಳವಣಿಗೆಗೆ ಬಹಳ ಸಹಕಾರಿಯಾಗುತ್ತದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.