Breaking
Tue. Dec 17th, 2024

ಸ್ವಯಂ ಉದ್ಯೋಗ ಮಾಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 1.5 ಲಕ್ಷ ಸಾಲ ಸೌಲಭ್ಯ

Spread the love

ಆತ್ಮೀಯ ರೈತ ಬಾಂಧವರೇ, ಸರ್ಕಾರವು ರೈತರ ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ತೆಗೆದುಕೊಂಡು ಬಂದಿದೆ. ಅಷ್ಟೇ ಅಲ್ಲದೆ ಉದ್ಯೋಗದ ಅವಕಾಶ ನೀಡಲು ಹಲವಾರು ರೀತಿಯ ಸಹಾಯಧನವನ್ನು ಕೂಡ ನೀಡಿದೆ. ಈಗ ಯುವಕರಿಗೆ ಸ್ವಯಂ ಉದ್ಯೋಗ ಮಾಡಲು ನಮ್ಮ ಸಮಾಜ ಕಲ್ಯಾಣ ಇಲಾಖೆ ಮತ್ತು ಪ್ರತಿಷ್ಠಾಪಂಗಡ ಇಲಾಖೆಗಳು ಅರ್ಜಿಯನ್ನು ಕರೆದು ಸ್ವಯಂ ಉದ್ಯೋಗ ಮಾಡಲು ಒಂದು ದೊಡ್ಡ ಅವಕಾಶವನ್ನು ಮಾಡಿಕೊಳ್ಳಲು ಸಾಲು ಸೌಲಭ್ಯವನ್ನು ನೀಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈಗ ಸ್ವಯಂ ಉದ್ಯೋಗ ಮಾಡಲು ಸಾಲ ಸೌಲಭ್ಯವನ್ನು ಪಡೆಯಬಹುದು.

ಎಷ್ಟು ವೆಚ್ಚದ ಘಟಕ ಸ್ಥಾಪನೆ ಮಾಡಿದರೆ ಎಷ್ಟು ಸಾಲ ಕೊಡುತ್ತಾರೆ?

ಒಂದು ವೇಳೆ ಐವತ್ತು ಸಾವಿರ ರೂಪಾಯಿಯ ವೆಚ್ಚದ ಘಟಕ ಇದ್ದರೆ 40,000ಗಳನ್ನು ಶೇಕಡಾ 4 ಪ್ರತಿಶತದಲ್ಲಿ ಸಾಲ ವಿತರಣೆ ಮಾಡುತ್ತಾರೆ. ಒಂದು ವೇಳೆ ಐವತ್ತು ಸಾವಿರ ರೂಪಾಯಿ ಇಂದ ಒಂದು ಲಕ್ಷದವರೆಗೆ ಘಟಕ ಸ್ಥಾಪನೆ ಯಾದರೆ ಅವರಿಗೆ 80,000ಗಳನ್ನು ಶೇಕಡ 4 ಬಡ್ಡಿ ದರದಲ್ಲಿ ಕೊಡುತ್ತಾರೆ. ಒಂದು ವೇಳೆ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಘಟಕವಚವಾದರೆ ಅವರಿಗೆ 1,75,000 ರೂಪಾಯಿಗಳ ಸಾಲವನ್ನು 4% ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಾರೆ.

ಈ ಸಾಲವನ್ನು ಪಡೆಯಲು ಯಾರು ಅರ್ಹರು?

ಈ ಸಾಲವನ್ನು ಪಡೆಯಲು ಜನರು ಕರ್ನಾಟಕದ ಖಾಯಂ ವಾಸಿಯಾಗಿರಬೇಕು. ಅಷ್ಟೇ ಅಲ್ಲದೆ ಅವರು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಅವರು ಈ ಯೋಜನೆಯಿಂದ ಹಿಂದೆ ಯಾವುದೇ ಯೋಜನೆಯ ಲಾಭವನ್ನು ಈ ಇಲಾಖೆಯಿಂದ ಪಡೆದುಕೊಂಡಿರಬಾರದು. ಅಷ್ಟೇ ಅಲ್ಲದೆ ಅವರ ವಾರ್ಷಿಕ ಆದಾಯವು 40,000ಗಳ ಒಳಗಡೆ ಇರಬೇಕು. ಒಂದು ವೇಳೆ ಅವರು ಪಟ್ಟಣ ಪ್ರದೇಶದವರಾಗಿದ್ದರೆ ಅವರ ಆದಾಯವು 55,000 ಇದ್ದರೂ ಸಾಕು. ವಯಸ್ಸು 18 ರಿಂದ 55 ವರ್ಷ ಇರಬೇಕು.

ಜನರು ಯೋಜನೆಯ ಅರ್ಜಿ ಸಲ್ಲಿಸಲು ನಾವು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ WWW.sevasindhu.com ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ಮೇಲೆ ಅದು ನಿಮ್ಮನ್ನು ಒಂದು ವೆಬ್ಸೈಟ್ಗೆ ಕರೆದುಕೊಂಡು ಹೋಗುತ್ತದೆ ಅಲ್ಲಿರುವ ಅರ್ಜಿಯನ್ನು ಸಂಪೂರ್ಣವಾಗಿ ತುಂಬಿ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿ ನಮೂನೆಯನ್ನು ತೆಗೆದುಕೊಂಡು ಬಂದು ನಮ್ಮ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ಎಲ್ಲ ದಾಖಲಾತಿಗಳನ್ನು ಒಪ್ಪಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.

ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ

ನಿಮ್ಮ ಹೊಲದ ಸರ್ವೆ ನಂಬರ್ ಇಂದ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಿರಿ

ಆಗಸ್ಟ್ ತಿಂಗಳಿನ ಅನ್ನ ಭಾಗ್ಯ ಹಣ ಜಮಾ ಆಗಿದೆ, ಕೂಡಲೇ ಸ್ಟೇಟಸ್ ಚೆಕ್ ಮಾಡಿ, 25 ಲಕ್ಷ ಹೆಚ್ಚುವರಿ ಬಿಪಿಎಲ್ ಕಾರ್ಡ್ ಗಳಿಗೆ ಜಮಾ

Related Post

Leave a Reply

Your email address will not be published. Required fields are marked *