₹1 ಕೋಟಿ ಬೆಳೆ ತೆಗೆವ ಉಡುಪಿ ರೈತಗೆ ಮೋದಿ ಪ್ರಶಸ್ತಿ ಈಗ ಕೇಂದ್ರದ ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಕುಂದಾಪುರದ ರಮೇಶ್ ನಾಯಕ್ ಆಯ್ಕೆ ನಾಡಿದ್ದು ಪ್ರಧಾನಿಯಿಂದ ಪ್ರದಾನ. ಕೃಷಿಯಿಂದಲೇ ವಾರ್ಷಿಕ 1 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕಟೆ ಗ್ರಾಮದ ಪ್ರಗತಿಪರ ಕೃಷಿಕ, ಹೈನೋದ್ಯಮಿ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರ ನೀಡುವ ‘ಬಿಲಿಯನೇರ್‌ರೈತ ಪ್ರಶಸ್ತಿ’ಗೆ ಆಯ್ಕೆಯಾಗಿ ದ್ದಾರೆ. ಡಿ.7ರ ಗುರುವಾರ ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಏನಿವರ ಸಾಧನೆ?
ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ 13 ಎಕರೆ ಜಮೀನು ಹೊಂದಿರುವ ರಮೇಶ್ ನಾಯಕ್ ವೈವಿಧ್ಯಮಯ ಕೃಷಿ ಪದ್ಧತಿ ಅಳವಡಿಸಿ 1634 ತಳಿ ಹಣ್ಣಿನ ಗಿಡ ನೆಟ್ಟಿರುವ ರೈತ # 30 ಸಾವಿರ ಅನಾನಸ್ ಗಿಡ ನಾಟಿ, 2 ಗಿಡಗಳ ಮಧ್ಯ ಪಪ್ಪಾಯಿ ಅಂತರ ಬೆಳೆ. ಸಾವಯವ ಪದ್ಧತಿಯ ಮೂಲಕ ಕೃಷಿ ಮಾಡಿ ಇತರೆ ರೈತರಿಗೆ ಮಾದರಿ. ಜಮೀನಿನಲ್ಲಿ ಇಂಗುಗುಂಡಿ ನಿರ್ಮಿಸಿ ಮಳೆ ನೀರು ಇಂಗಿಸುತ್ತಿರುವ ರಮೇಶ್. ಹೈನುಗಾರಿಕೆ ಜತೆಗೆ ರೈಸ್‌ಮಿಲ್ ಕೂಡ ನಡೆಸುತ್ತಿರುವ ಪ್ರಗತಿ ಪರ ರೈತ.
ಯಾವ ರೀತಿಯ ಬೆಳೆಗಳನ್ನು ಬೆಳೆದಿದ್ದಾರೆ?
ಪ್ರಗತಿಪರ ಕೃಷಿಕ ಹಾಗೂ ಉದ್ಯಮಿಯಾ ಗಿರುವ ರಮೇಶ್ ನಾಯಕ್, ವೈವಿಧ್ಯಮಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ರುವ ತಮ್ಮ 13 ಎಕರೆ ಜಾಗದಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. 11 ವಿವಿಧ ಜಾತಿಯ, 1,634 ವಿವಿಧ ತಳಿಯ ಹಣ್ಣಿನ ಗಿಡ ನೆಟ್ಟು ನೈಸರ್ಗಿಕ ಕೃಷಿಯ ಮೂಲಕ ಉತ್ತಮ ಫಸಲು ಬೆಳೆಯುತ್ತಿದ್ದಾರೆ. ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡ ನಾಟಿ ಮಾಡಿದ್ದಾರೆ. 2 ಗಿಡಗಳ ಮಧ್ಯದಲ್ಲಿ ಪಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಸಿದ್ದಾರೆ.
1634 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ವಾರ್ಷಿಕವಾಗಿ ಸುಮಾರು 1 ಕೋಟಿ ರು.ಗೂ ಅಧಿಕ ವಹಿ ವಾಟು ನಡೆಸುತ್ತಿದ್ದಾರೆ. ತಮ್ಮ ಹೊಲದಲ್ಲಿ ಇಂಗು ಗುಂಡಿಗಳನ್ನು ತೋಡಿ, ಅಂತರ್ಜಲದ ಮಟ್ಟ ಹೆಚ್ಚಲು ಕಾರಣರಾಗಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ, ತೆಕ್ಕಟ್ಟೆ ಯಲ್ಲಿ ಅವರು ರೈಸ್ ಮಿಲ್ ಕೂಡ ಹೊಂದಿದ್ದಾರೆ.
ಅರ್ಜಿ ಹಾಕಿರಲಿಲ್ಲ, ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ
‘ಬಿಲಿಯನೇರ್‌ರೈತ ಪ್ರಶಸ್ತಿ’ಗೆ ಆಯ್ಕೆ ಯಾಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಕೃಷಿ ಉದ್ದೇಶಕ್ಕಾಗಿ ಜಾಗ ಖರೀದಿ ಮಾಡಿರ ಲಿಲ್ಲ. ಕೃಷಿಯನ್ನು ಉದ್ಯಮವನ್ನಾಗಿ ಮಾಡ ಬೇಕು ಎನ್ನುವ ಆಸೆ ಇತ್ತು. ಹೀಗಾಗಿ, ಮೊದಲೇ ಖರೀದಿಸಿದ್ದ 13 ಎಕರೆ ಜಾಗದಲ್ಲಿ ಕೃಷಿ ಮಾಡಿ ದ್ದೇನೆ. ಆರು ತಿಂಗಳು ಅಲೆದಾಟ ನಡೆಸಿ, ಪ್ರಗತಿ ಪರ ಕೃಷಿಕರ ಬಳಿ ತೆರಳಿ ಅವರಿಂದ ಮಾಹಿತಿ ಪಡೆ ದುಕೊಂಡು ಕೃಷಿ ಮಾಡುತ್ತಿದ್ದೇನೆ. ನಾನೇನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ, ಬ್ರಹ್ಮಾವರ ಕೃಷಿ ಕೇಂದ್ರದವರು ಶಿಫಾರಸು ಮಾಡಿದ್ದರು. ರಮೇಶ್ ನಾಯಕ್ ಪ್ರಗತಿಪರ ರೈತ.
ಹೆಚ್ಚಿನ ಮಾಹಿತಿಗಾಗಿ ಮಾತ್ರ ಓದಿ
ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಾಕದಿರಿ
ರೈತರು ಬೆಳೆ ತ್ಯಾಜ್ಯವನ್ನು ಸುಡುತ್ತಿರುವುದರಿಂದ ಮಣ್ಣಿನಲ್ಲಿರುವ ಕೋಟ್ಯಂತರ ಜೀವರಾಶಿಗಳು ನಾಶವಾಗುತ್ತಿವೆ. ಕಬ್ಬು, ಬಾಳೆ, ತೆಂಗು, ಅಡಕೆ, ಮುಸುಕಿನ ಜೋಳ, ಹತ್ತಿ, ತೊಗರಿ… ಹೀಗೆ ಹಲವು ಬೆಳೆಗಳಲ್ಲಿ ಪ್ರತಿ ಎಕರೆಯಿಂದ ವರ್ಷದಲ್ಲಿ 3ರಿಂದ 6 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದಕ್ಕೆ ಬೆಂಕಿ ಹಚ್ಚುವುದರಿಂದ ಮಣ್ಣು, ನೀರು ಮತ್ತು ರೈತರ ಶ್ರಮದಿಂದ ವರ್ಷಪೂರ್ತಿ ಬೆಳೆದ ಸಾವಯವ ವಸ್ತುಗಳು ಸುಟ್ಟು ಬೂದಿಯಾಗುತ್ತಿದೆ. ಮಣ್ಣಿನಲ್ಲಿರುವ ಸಾವಯವ ಇಂಗಾಲವೂ ನಾಶವಾಗಿ ಮಣ್ಣು ತನ್ನ ಉತ್ಪಾದನಾ ಶಕ್ತಿ ಕಳೆದುಕೊಳ್ಳುತ್ತಿದೆ. ಆದ್ದರಿಂದ ಕೃಷಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ರೋಟೋವೇಟರ್/ ನೇಗಿಲು ಹೊಡಿಸುವ ಮೂಲಕ ಮಣ್ಣಿಗೆ ಸೇರಿಸಬೇಕು. ಇಲ್ಲವಾದಲ್ಲಿ ಗೊಬ್ಬರವಾಗಿ ಪರಿವರ್ತಿಸಬೇಕು.
ಸುಸ್ಥಿರ ಮಣ್ಣಿನ ನಿರ್ವಹಣಾ ಕ್ರಮಗಳು
ನೈಸರ್ಗಿಕ ವ್ಯವಸ್ಥೆಯ ನಿರ್ಣಾಯಕ ಅಂಶವಾಗಿ ಮತ್ತು ಮಾನವನ ಯೋಗಕ್ಷೇಮಕ್ಕೆ ಪ್ರಮುಖ ಕೊಡುಗೆಯಾಗಿ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 5ರಂದು ವಿಶ್ವದೆಲ್ಲೆಡೆ ವಿಶ್ವ ಮಣ್ಣು ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಲದ ಘೋಷ ವಾಕ್ಯ ಮಣ್ಣು ಮತ್ತು ನೀರು ಜೀವನದ ಮೂಲ ಎಂಬುದಾಗಿದೆ. ಮಣ್ಣು ದಿನಾಚರಣೆಯ ಮಹತ್ವದ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಮಣ್ಣು ಅಮೂಲ್ಯವಾದ ನೈಸರ್ಗಿಕ ಕೊಡುಗೆಯಾಗಿದ್ದು, ಕೃಷಿಗೆ ಫಲವತ್ತಾದ ಉತ್ತಮ ಆರೋಗ್ಯದ ಮಣ್ಣು ಮೂಲಾಧಾರವಾಗಿದೆ. ಮಣ್ಣಿನ ಆರೋಗ್ಯದ ನಿಷ್ಕಾಳಜಿಯಿಂದ ನೆಲ, ಜಲ ಹಾಗೂ ಜೀವರಾಶಿಗಳ ಆರೋಗ್ಯದ ಮೇಲೆ ಕಂಡುಬರುತ್ತಿದೆ. ಪ್ರತಿವರ್ಷ ಸುಮಾರು 10 ಮಿಲಿಯನ್‌ನಷ್ಟು ಪೋಷಕಾಂಶಗಳನ್ನು ನಾವು ಭೂಮಿಯಿಂದ ತೆಗೆಯುತ್ತಿದ್ದೇವೆ. ಇದರಿಂದ ಮಣ್ಣಿನಲ್ಲಿನ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತ ಸಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಣ್ಣಿನ ಉತ್ಪಾದನಾ ಶಕ್ತಿ ಕಡಿಮೆಯಾಗಿ ಮಣ್ಣು ಬರಡಾಗುತ್ತಿದೆ. ಅಧಿಕ ಇಳುವರಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಅತೀ ಮುಖ್ಯವಾಗಿದೆ.
ಇದಕ್ಕಾಗಿ ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನಲ್ಲಿ ಸಾವಯವ ಪದಾರ್ಥದ ಪ್ರಮಾಣ ಅಧಿಕಗೊಂಡು ಮಣ್ಣಿನ ಆರೋಗ್ಯ ಸುಧಾರಣೆಗೊಳ್ಳುವದು. ಕಂದು ಕ್ರಾಂತಿಯ ಮೂಲಕ ಮಣ್ಣನ್ನು ಮಣ್ಣು ಜೀವಿಗಳನ್ನು ಉಳಿಸುವ ರಕ್ಷಿಸುವ ಪಾಲಿಸುವ ಪೋಷಿಸುವ ವೈವಿಧ್ಯತೆ ಆಧಾರಿತ ಪ್ರಾಕೃತಿಕ ಕೃಷಿ ಪದ್ಧತಿಯನ್ನು ರೈತಬಾಂಧವರು ಆಳವಡಿಸಿಕೊಳ್ಳಬೇಕು.