Breaking
Wed. Dec 18th, 2024

ನೈಸರ್ಗಿಕ ಕೃಷಿ ಯೋಜನೆಯಡಿ 100 ಕೋಟಿ ರೂ ಬಿಡುಗಡೆ, ಈ ಕೃಷಿ ಮಾಡಲು ಸರ್ಕಾರದಿಂದ 7,000 ಸಹಾಯಧನ

Spread the love

ಆತ್ಮೀಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಅತಿ ಹೆಚ್ಚು ಕೃಷಿಗೆ ಆಗದೆ ಕೊಡುವ ಕಾರಣ, ಸರ್ಕಾರವು ರೈತರ ನೆರವಿಗಾಗಿ ಸದಾ ಸಜ್ಜಾಗಿರುತ್ತದೆ. ನೈಸರ್ಗಿಕ ಕೃಷಿ ಕಾರ್ಯಕ್ರಮ.ನೈಸರ್ಗಿಕ ಕೃಷಿ ಯೋಜನೆಯಡಿ ನೈಸರ್ಗಿಕ ಕೃಷಿ ಪದ್ಧತಿಯ ವೈಜ್ಞಾನಿಕ ಮೌಲೀಕರಣವನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರಾಜ್ಯದ ಎಲ್ಲ 10 ಹವಾಮಾನ ವಲಯಗಳ ಸಂಶೋಧನಾ ಕೇಂದ್ರಗಳಲ್ಲಿ ಮತ್ತು ಆಯ್ದ ರೈತರ ತಾಕುಗಳಲ್ಲಿ ಒಆರ್‌ಪಿ ಮಾದರಿಯಲ್ಲಿ 2018-19ನೇ ಸಾಲಿನ ಬೇಸಿಗೆ ಹಂಗಾಮಿನಿಂದ ಪ್ರಾಯೋಗಿಕ ಪ್ರಯೋಗ ಕೈಗೊಳ್ಳಲಾಗಿದೆ. 2022-23ನೇ ಸಾಲಿನಲ್ಲಿ ನೈಸರ್ಗಿಕ ಕೃಷಿ ಯೋಜನೆಯಡಿ 100 ಕೋಟಿ ರೂ. ಒದಗಿಸಲಾಗಿದೆ.

2022-23ನೇ ಸಾಲಿನಲ್ಲಿ ರಾಜ್ಯದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಮೂಲಕ ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆಯಡಿ ಪ್ರಾಯೋಗಿಕ ಪ್ರಯೋಗಗಳನ್ನು ಪ್ರಾರಂಭಿಸಲಾಗಿದ್ದು, ಇದು ಪ್ರತಿ ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯ 1 ಸಾವಿರ ಎಕರೆ ರೈತರ ಕ್ಷೇತ್ರಗಳಲ್ಲಿ ರೈತರ ಸಹಭಾಗಿತ್ವದ ಸಂಶೋಧನೆಯಾಗಿರುತ್ತದೆ. ಪ್ರಸ್ತುತ ಕಾರ್ಯಕ್ರಮದಡಿ ಯೋಜನಾ ಪ್ರದೇಶದಲ್ಲಿ ಆಯ್ಕೆಯಾಗಿರುವ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ 2 ಕಂತುಗಳಲ್ಲಿ ಪ್ರತಿ ಎಕರೆಗೆ 7 ಸಾವಿರ ರೂ, ನೀಡಲಾಗುತ್ತಿದೆ.

ನೈಸರ್ಗಿಕ ಕೃಷಿ ಏಕೆ ಮಾಡಬೇಕು?

ಮಣ್ಣಿನ ಫಲವತ್ತತೆ ಕಡಿಮೆ ಆಗುವುದನ್ನು ತಪ್ಪಿಸುವುದು ಸಾಂಪ್ರದಾಯಿಕ ಕೃಷಿಯಿಂದ ಆಗುವ ವೆಚ್ಚ ಹೆಚ್ಚಳಕ್ಕೆ ಬ್ರೇಕ್ ಹಾಕಲು ಈ ತರಹದ ಕೃಷಿಯನ್ನು ಅಳವಡಿಸಿಕೊಳ್ಳಲು ತಿಳಿಸಿದ್ದಾರೆ.ರಸಗೊಬ್ಬರ ಬಳಕೆ ಕಡಿಮೆ ಮಾಡುವುದು,ಆಹಾರ ಸುರಕ್ಷತೆಯ ಹೆಚ್ಚಳ ಮಾಡುವುದು,ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಹಾಗೂ ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಮುಖ್ಯ ಗುರಿಯಾಗಿದೆ.ಆಹಾರ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಳ್ಳುವುದು, ಭೂಮಿಯನ್ನು ಫಲವತ್ತಾಗಿಯೇ ಉಳಿಸಿಕೊಳ್ಳುವ ಸಲುವಾಗಿ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಮುಖ್ಯತೆಯ ಮೂಲಕ ರೈತರಿಗೆ ನೆರವಾಗುವ ಉದ್ದೇಶವಿದೆ. ಮಣ್ಣು ಫಲವತ್ತತೆ ಕಾಪಾಡಲು 88 ಲಕ್ಷ
ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರವರು ತಿಳಿಸಿದ್ದಾರೆ.

ರೈತರನ್ನು ಸ್ವಾವಲಂಬಿಯಾಗಿಸುವ ಕೃಷಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಸೂಕ್ತ ಬಳಕೆಯಿಂದ ಹಾಗೂ ಹೊರಗಡೆಯಿಂದ ಖರೀದಿಸಿದ ಪರಿಕರಗಳನ್ನು ಬಳಸದೆ ನೈಸರ್ಗಿಕ ತತ್ವಗಳ ಆಧಾರದ ಮೇಲೆ ಕೈಗೊಳ್ಳುವ ಪರಿಸರ ಸ್ನೇಹಿ ಕೃಷಿ ನೈಸರ್ಗಿಕ ಕೃಷಿ ರಾಸಾಯನಿಕ ಕೃಷಿಗಿಂತ ಹೆಚ್ಚು ವೈಜ್ಞಾನಿಕ ಹಾಗೂ ಕೌಶಲ್ಯಯುತವಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ತಂತ್ರಜ್ಞಾನ ಹಾಗೂ ಸುಸ್ಥಿರ ಬೇಸಾಯ ಪದ್ಧತಿಗಳನ್ನು ಅಳವಡಿಸಿ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸಮರ್ಥವಾಗಿ ಉಪಯೋಗ ಮಾಡಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ:- ಅತಿಯಾದ ಮಳೆಯಿಂದ ಹಾನಿಯಾಗಿರುವ ರೈತರಿಗೆ ಎಷ್ಟು?,ಬರ ಪ್ರದೇಶದ ರೈತರಿಗೆ ಎಷ್ಟು? ಹಾಗೂ ನೀರಾವರಿ ರೈತರಿಗೆ ಎಷ್ಟು ಹಣ ಬರಲಿದೆ ತಿಳಿಯಿರಿ

ಇದನ್ನೂ ಓದಿ:- ರೇಷ್ಮೆ ಹುಳು ಮನೆ ನಿರ್ಮಿಸಲು ಸರ್ಕಾರದಿಂದ 67000 – 3,60,000 ರೂಪಾಯಿಗಳ ಸಹಾಯಧನ

ಇದನ್ನೂ ಓದಿ:- ರೈತರಿಗಾಗಿ 975 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ 2000 ಜಮಾ ಆಗಿದೆಯಾ ನೋಡಿ

Related Post

Leave a Reply

Your email address will not be published. Required fields are marked *