ಆತ್ಮೀಯ ನಾಗರಿಕರೇ ಒಂದು ಕಡೆ ಶಿಕ್ಷಣದ ಬಲದಿಂದ ಸ್ವಂತ ಸಾಮರ್ಥ್ಯವನ್ನು ಹೊಂದಿ ತಮ್ಮ ಬದುಕನ್ನು ಸಾಗಿಸುವ ಮಾಧ್ಯಮ ವರ್ಗದ ಮಹಿಳೆಯರಿದ್ದಾರೆ. ಇನ್ನೊಂದು ಕಡೆ ಸಂಪೂರ್ಣವಾಗಿ ಶಿಕ್ಷಣ ದೊರೆಯದೆ, ತಮ್ಮ ಹೊಟ್ಟೆಪಾಡಿಗಾಗಿ ದುಡಿದು ತಿನ್ನುವ ಮಹಿಳೆಯರಿದ್ದಾರೆ. ಹಲವಾರು ಮಹಿಳೆಯರಿಗೆ ಸ್ವಂತ ಕೃಷಿ ಭೂಮಿ ಇಲ್ಲದ ಕಾರಣ ಬೇರೆ ಬೇರೆ ಕಡೆ ಹೋಗಿ ಅಲ್ಲಿ ಕೆಲಸ ಮಾಡಿ ಬರುವ ದುಡ್ಡಿನಲ್ಲಿ ಸಂಸಾರ ಸಾಗಿಸಲು ತುಂಬಾ ಕಷ್ಟಕರವಾಗಿದೆ. ಇಂತಹ ಬೇರೆ ಬೇರೆ ಸಾಮಾಜಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವ ಮಹಿಳೆಯರಿಗಾಗಿ ಇಲ್ಲಿದೆ ಒಂದು ಹೊಸ ಯೋಜನೆ. ಆದಕಾರಣ ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಯವರು ಗೃಹಿಣಿ ಶಕ್ತಿ ಎಂಬ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಿಂದ ಮಹಿಳೆಯರಿಗೆ ತುಂಬಾ ಸಹಾಯವಾಗಿದೆ.
ಹಾಗಾದರೆ ಈ ಯೋಜನೆಯ ವಿಶೇಷತೆ ಏನು?
ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಎರಡನೇ ಬಾರಿ ಮಂಡಿಸಿದ 2023-24 ನೇ ಸಾಲಿನ ಬಜೆಟ್ ನಲ್ಲೂ ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತಹ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಗಾಗಿ ಬೇಕಾಗುವ ಅನುದಾನವನ್ನು ನೀಡಲು ಘೋಷಣೆ ಮಾಡಿದ್ದಾರೆ. ಈಗ ಭೂಮಿಯನ್ನು ಹೊಂದಿರುವ ಮಹಿಳೆಯರಿಗೆ ಎಷ್ಟೋ ತೊಂದರೆಗಳು ಇರುವಾಗ, ಇನ್ನೂ ಬೋರ್ ಐತ ಅಲ್ಲದೆ ಕೃಷಿ ಕೂಲಿಯನ್ನೇ ಮೆಚ್ಚಿಕೊಂಡಿರುವ ಶ್ರಮಜೀವಿಗಳಾದ ಮಹಿಳೆಯರಿಗೆ ನೆರವು ಆಗಬೇಕೆಂಬ ಉದ್ದೇಶದಿಂದ ಪ್ರಮಯವರು ಗೃಹಿಣಿ ಶಕ್ತಿ ಯೋಜನೆಯನ್ನು ಘೋಷಿಸಿದ್ದಾರೆ.
ಎಷ್ಟು ಹಣ ದೊರೆಯುತ್ತದೆ?
ಈ ಯೋಜನೆಯಡಿಯಲ್ಲಿ ಭೂಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500ಗಳನ್ನು ಸಹಾಯಧನವಾಗಿ ಕೊಡಲು ಬಜೆಟ್ ನಲ್ಲಿ ಬೊಮ್ಮಾಯಿ ಅವರು ಘೋಷಿಸಿದ್ದರು. ನಂತರ ಸಹಾಯಧನವನ್ನು 1000 ಗಳನ್ನಾಗಿ ದ್ವಿಗುಣಗೊಳಿಸಲು ವಿಧಾನ ಮಂಡಲದಲ್ಲಿ ಪ್ರಕಟಿಸಿದ್ದಾರೆ. ಹೀಗೆ ಗ್ರಾಮೀಣ ಭಾಗದ ಕೃಷಿ ಮಹಿಳೆಯರಿಗೆ ಡಿಬೆಟಿ ಮೂಲಕವೇ ನೇರವಾಗಿ ನೆರವು ನೀಡಲು ಬೊಮ್ಮಾಯಿಯವರು ಘೋಷಿಸಿದ್ದಾರೆ. ಈ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.
ಅರ್ಹತೆ ಮತ್ತು ಬೇಕಾಗಿರುವ ದಾಖಲಾತಿಗಳು?
ಆ ಮಹಿಳೆ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರಬೇಕು, ಬಿಪಿಎಲ್ ಹೊಂದಿರಬೇಕು, ಭೂಮಿರಹಿತವಾಗಿರಬೇಕು, ಅವರು ಕೃಷಿ ಕೂಲಿ ಕಾರ್ಮಿಕರು ಆಗಿರಬೇಕು. ಬೇಕಾಗಿರುವ ದಾಖಲಾತಿಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಮತದಾರರ ಚೀಟಿ, ಎರಡು ಪಾಸ್ಪೋರ್ಟ ಫೋಟೋಗಳು, ಗುರುತಿನ ಚೀಟಿ, ನಿವಾಸ ಪ್ರಮಾಣ ಪತ್ರ, ಆ ಮಹಿಳೆ ವಿಳಾಸ ಪುರಾವೆ ಪರಿವಾರ ರಿಜಿಸ್ಟರ್ ನಂಬರ್ ಮುಂತಾದವು.
ಈ ಗೃಹಿಣಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಅರ್ಜಿದಾರರು ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ನಂತರ ಅಲ್ಲಿರುವ ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮಗೆ ನೊಂದಣಿ ಫಾರ್ಮ್ ಪರದೆ ಮೇಲೆ ಬರುತ್ತದೆ. ಆಮೇಲೆ ಅಗತ್ಯ ಇರುವ ದಾಖಲೆ ಮತ್ತು ಫಾರ್ಮ್ ನಲ್ಲಿರುವ ಎಲ್ಲಾ ವಿವರಗಳನ್ನು ತುಂಬಬೇಕು. ಮೇಲೆ ತಿಳಿಸಿರುವ ಎಲ್ಲ ದಾಖಲೆತೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ನಮೂನೆಯನ್ನು ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಕೊನೆಯದಾಗಿ ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಲು ದಿನಾಂಕ ವಿಸ್ತರಣೆ
ಇದನ್ನೂ ಓದಿ :- ಪಿಎಂ ಕಿಸಾನ್ ಬಿಗ್ ಅಪ್ಡೇಟ್ ಮೊಬೈಲ್ ನಂಬರ್ ಹಾಕಿ ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡಿ