ಈ ‘ರೈತ ಶಕ್ತಿ’ ಯೋಜನೆಯಡಿ ಲಭ್ಯವಾಗುವ ಪ್ರತಿ ಎಕರೆಗೆ ರೂ. 250 ಗಳಂತೆ ಗರಿಷ್ಟ 5ಎಕರೆಗೆ ರೂ. 1250 ವರೆಗೆ ಡಿ.ಬಿ.ಟಿ ನೇರ ನಗದು ವರ್ಗಾವಣೆ ಮೂಲಕ ಸಿಗುವ ಡೀಸಲ್ ಸಹಾಯಧನಕ್ಕಾಗಿ ಕೃಷಿ ಇಲಾಖೆ ಆಹ್ವಾನಿಸಿದ್ದು ಅದರಂತೆ ರೈತರು ಸಹಾಯಧನ ಪಡೆಯಲು ಫ್ರೂಟ್ಸ್ ವೆಬ್‌ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಏಕೆಂದರೆ FID ಹೊಂದಿದವರಿಗೆ ಮಾತ್ರ ಈ ಹಣ ಜಮಾ ಆಗಿದೆ.
ಆತ್ಮೀಯರೇ ನಾವೀಗಾಗಲೇ ಇದರ ಪಟ್ಟಿ ಬಿಡುಗಡೆ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಯಾರು ಹೆಸರಲ್ಲಿ ಫ್ರಟ್ಸ್ ಐಡಿ ಹೊಂದಿದ್ದಾರೆ ಆ ಎಲ್ಲ ರೈತರು ಇದರ ಫಲಾನುಭವಿಗಳಾಗುತ್ತಾರೆ ಎಂದು ನಿಮಗೆ ಈಗಾಗಲೇ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸಹ ನೋಡಲು ನಾವು ಮಾಹಿತಿಯನ್ನು ತಿಳಿಸಿದ್ದೇವೆ. ಹೀಗಾಗಿ ನಿಮ್ಮ ಹೆಸರಲ್ಲಿ ಎಫ್ ಐ ಡಿ ಇದ್ದರೆ ಸಾಕು ಇದು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ ಅದನ್ನು ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಇದನ್ನೂ ಓದಿ :- ಕೇವಲ ಮೊಬೈಲ್ ನಂಬರ್ ಹಾಕಿ ನೀವು ಪಿಎಂ ಕಿಸಾನ್ ಫಲಾನುಭವಿ ಹೌದೋ ಅಲ್ಲೋ ಎಂದು ತಿಳಿಯಿರಿ
ರೈತರಿಗೆ ಕೃಷಿ ಯಾಂತ್ರಿಕರಣವು ಡೀಸೆಲ್ ಇಂಧನದ ಮೇಲೆ ಬಹುತೇಕ ಅವಲಂಬಿತವಾಗಿದೆ. ಹೀಗಾಗಿ, ರೈತರ ಮೇಲಿನ ಆರ್ಥಿಕ ಹೊರೆ ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2012-13 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರೈತ ಶಕ್ತಿ ಯೋಜನೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೈತ ಶಕ್ತಿ ಯೋಜನೆ ಇದೇ ತಿಂಗಳಾಂತ್ಯಕ್ಕೆ ಜಾರಿಯಾಗಲಿದೆ.
ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಟ 5 ಎಕರೆಗೆ ಡಿಬಿಟಿ ಮೂಲಕ ಡೀಸೆಲ್‌ಗೆ ಸಹಾಯಧನವನ್ನು ನೀಡುವ ರೈತಶಕ್ತಿ ಯೋಜನೆಯನ್ನು ಈ ತಿಂಗಳಾಂತ್ಯಕ್ಕೆ ಅನುಷ್ಠಾನಗೊಳಿಸಲಾಗುತ್ತಿದೆ.
ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಅವರು ಸುಮಾರು 45 ಲಕ್ಷಕ್ಕೂ ಹೆಚ್ಚಿನ ರೈತಾಪಿ ಕುಟುಂಬಗಳಿಗೆ ಡಿಜಿಟ ಮೂಲಕ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು ರೈತರಿಗೆ ಪ್ರೋಟ್ಸ್ ಪೋರ್ಟಲ್ ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ.
ಹಣ ನಿಮಗೆ ಜಮಾ ಆಗಿಲ್ಲವೇ ಏನು ಮಾಡಬೇಕು?
ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೇ ಹೋಗಿ FID ಯನ್ನು ಮಾಡಿಸಬೇಕು. ಅಂದರೆ ಮಾತ್ರ ನಿಮಗೆ ಹಣ ಜಮಾ ಈ ವಾರದಲ್ಲಿ ಜಮಾ ಆಗುತ್ತದೆ . ಇಲ್ಲವಾದರೆ 1250 ರೂಪಾಯಿ ಜಮಾ ಆಗುವುದಿಲ್ಲ ಎಂದು ಕೃಷಿ ಇಲಾಖೆ ಇಂದ ಮಾಹಿತಿ ಬಂದಿದೆ.