ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://parihara.karnataka.gov.in/service92/
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಅಲ್ಲಿ ನೀವು Year/ವರ್ಷ – 2023-24, Season – Kharif, Calamity Type – Drought ಎಂದು ಹಾಕಿ Get Data/ ಹುಡುಕು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ನೀವು Search By ಎಂಬ ಆಯ್ಕೆಯಲ್ಲಿ Aadhaar Number ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Fetch ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಮುಂದೆ ದೊಡ್ಡ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿ.
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಹೆಸರು ಹುಡುಕಿ ನಿಮ್ಮ ಅದರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಮುಂದೆ ನಿಮ್ಮ ಪರಿಹಾರ ಸ್ಟೇಟಸ್ ಸಂಪೂರ್ಣ್ ಮಾಹಿತಿ ಸಿಗುತ್ತದೆ. ನಿಮಗೆ ಏಷ್ಟು ಜಮಾ ಜಮಾ ಆಗಿದೆ, ಯಾವ ದಿನಾಂಕಕ್ಕೆ ಜಮಾ ಆಗಿದೆ ಎಂದು ನೋಡಬಹುದು.
ಮೊಬೈಲ್ ನಂಬರ್ ಹಾಕಿ ಪರಿಹಾರ ಸ್ಟೇಟಸ್ check ಮಾಡಿ
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://parihara.karnataka.gov.in/service92/
ನೀವು Year/ವರ್ಷ – 2023-24, season – Kharif, Calamity Type – Drought ಎಂದು ಹಾಕಿ Get Data/ ಹುಡುಕು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ನೀವು Search By ಎಂಬ ಆಯ್ಕೆಯಲ್ಲಿ ಮೊಬೈಲ್ Number ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಮೇಲಿನ ಚಿತ್ರದಲ್ಲಿ ಇರುವ ಹಾಗೆ ನಿಮ್ಮ mobile number ಹಾಕಿ fetch ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ಹೆಸರು ಹುಡುಕಿ ನಿಮ್ಮ ಅದರ ಮೇಲೆ ಕ್ಲಿಕ್ ಮಾಡಿ. ನಿಮಗೆ ಪರಿಹಾರ ಸ್ಟೇಟಸ್ ಸಂಪೂರ್ಣ್ ಮಾಹಿತಿ ಸಿಗುತ್ತದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯ ಎಲ್ಲ ನಾಯಕರ ಬೆಂಬಲ
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಪ್ರಚಾರ ದಿನೇ ದಿನೇ ಬಿರುಸುಗೊಂಡಿದೆ. ಎಲ್ಲೆಡೆ ಅವರ ಪ್ರಚಾರಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಅವರು ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಯುಕ್ತ ಅವರ ಚುನಾವಣಾ ಪ್ರಚಾರದ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನಾವೆಲ್ಲ ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿದರು. ನಮ್ಮ ಗೆಲುವಿಗೆ ನಾವೆಲ್ಲ ಒಂದಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.
ಆನೆ ಬಲ ತಂದ ಸಚಿವರು ಸಂಯುಕ್ತ ಅವರ ಪ್ರಚಾರಕ್ಕೆ ಸಚಿವರಾದ ಆರ್ ಬಿ ತಿಮ್ಮಾಪುರ ಹಾಗೂ ಸಂಯುಕ್ತ ಅವರ ತಂದೆ ಹಾಗೂ ಸಚಿವರಾದ ಶಿವಾನಂದ ಪಾಟೀಲ್ ಅವರ ಜುಗಲ್ ಬಂದಿ ರಣತಂತ್ರ ಹೆಣೆಯುತ್ತಿದೆ. ಇಬ್ಬರೂ ಸಚಿವರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗಮನ ಸೆಳೆದ ಕಾಶಪ್ಪನವರ್ ಉಪಸ್ಥಿತಿ ಬಾಗಲಕೋಟೆ ಟಿಕೆಟ್ ಸಂಯುಕ್ತ ಪಾಟೀಲ್ ಅವರಿಗೆ ಘೋಷಣೆಯಾದಾಗಿನಿಂದ ಅಸಮಾಧಾನಗೊಂಡಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದುದು ಗಮನ ಸೆಳೆಯಿತು.
ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಕಾಶಪ್ಪನವರು ಸಂಯುಕ್ತ ಅವರೊಂದಿಗೆ ಗುರುತಿಸಿಕೊಂಡಿರಲಿಲ್ಲ. ಈ ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಶ್ರೀ ಆರ್ ಬಿ ತಿಮ್ಮಾಪುರ್ ಹಾಗೂ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಭೀಮಸೇನ ಚಿಮ್ಮನಕಟ್ಟಿ, ಶ್ರೀ ಎಚ್ ವೈ ಮೇಟಿ, ಶ್ರೀ ಜೆ ಟಿ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನೀಲ ಗೌಡ ಪಾಟೀಲ್, ಮಾಜಿ ಸಚಿವರಾದ ಎಸ್ ಆರ್ ಪಾಟೀಲ್, ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಆನಂದ ನ್ಯಾಮಗೌಡ, ಜಿಲ್ಲಾ ಕಾಂಗ್ರೆಸ್ ಇತರೆ ನಾಯಕರು ಉಪಸ್ಥಿತರಿದ್ದರು. ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ, ಒಗ್ಗಟ್ಟಿನಿಂದ ಕೆಲಸ ಮಾಡ್ತೀವಿ ಸಭೆ ಬಳಿಕ ಮಾತನಾಡಿದ ವಿಜಯಾನಂದ ಕಾಶಪ್ಪನವರ್ ಅವರು ಪ್ರಸಕ್ತ ಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ.
ಸಂಯುಕ್ತ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಅಸಮಾಧಾನ ನನಗೂ ಆಗಿತ್ತು, ಅವರಿಗೂ (ವೀಣಾ) ಆಗಿದೆ. ವೀಣಾ ಪ್ರಬಲ ಆಕಾಂಕ್ಷಿ ಆಗಿದ್ದರು. ಆದ್ದರಿಂದ ನೋವಾಗಿದೆ. ಕೆಲ ದಿನಗಳಲ್ಲಿ ವೀಣಾ ಕೂಡಾ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು. ಸ್ವಲ್ಪ ಕಾಲಾವಕಾಶ ಬೇಕು. ದೊಡ್ಡ ಮನಸ್ಸು ಇದ್ದವು ಬೇಗ ಮರಿತಾರೆ. ಅಸಮಾಧಾನ ಸರಿಪಡಿಸುತ್ತೇವೆ. ಪಕ್ಷದಿಂದ ನಮಗೆ ಅಧಿಕಾರ ಕೂಡಾ ಸಿಕ್ಕಿದೆ. ಮುಂದೆ ಎಲ್ಲಾ ಮರೆತು ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೈ ಟಿಕೆಟ್ ಕೂಡಾ ಸಿಕ್ಕಿತ್ತು. ಈ ಬಾರಿ ರಾಜ್ಯ ನಾಯಕರು ತೆಗೆದುಕೊಂಡ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಅಸಮಾಧಾನ ಇಲ್ಲ ವೀಣಾ ಸಹ ನನ್ನ ಮನೆ ಮಗಳು: ಶಿವಾನಂದ ಪಾಟೀಲ್ ನಮ್ಮಲ್ಲಿ ಈಗ ಯಾವುದೇ ಅಸಮಾಧಾನ ಇಲ್ಲ. ಕಾಶಪ್ಪನವರ್ ಅವರು ಈಗ ನಮ್ಮೊಂದಿಗೆ ಇದ್ದಾರೆ. ಮಗಳ ಗೆಲುವಿಗೆ ಅವರು ಕೈ ಜೋಡಿಸುತ್ತಾರೆ.
ಇದನ್ನು ಸ್ವತಃ ಅವರೇ ಇಂದು ಹೇಳಿದ್ದಾರೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ತಂದೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ಹೇಳಿದರು. ವೀಣಾ ಅವರದು ಅಸಮಾಧಾನ ಅಲ್ಲ ಅದು. ಅದು ಒಂದು ಆಸೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಅಂತ ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂದರು. ಈ ಜಿಲ್ಲೆ ಮೊದಲು ಒಂದು ಕಾಲದಲ್ಲಿ ನನ್ನ ಜಿಲ್ಲೆ ಆಗಿತ್ತು. ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಕಾಶಪ್ಪನವರ್ ನಮ್ಮ ಮನೆಯ ಸದಸ್ಯರು, ನಮ್ಮ ಜೊತೆ ಇರ್ತಾರೆ ಎಂದು ವಿವರಿಸಿದರು. ವೀಣಾ ಅವರು ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಮನೆ ಮಗಳ ತರಹ ಕೆಲಸ ಮಾಡಿದ್ದೇನೆ. ನನ್ನ ಮಗಳು ವೀಣಾ ತಂಗಿಯಾಗಿಯೂ ಕೆಲಸ ಮಾಡಿದ್ದಾಳೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ, ಇರೋದು ಇಲ್ಲ. ನಮ್ಮ ಮುಂದಿನ ಗುರಿ ಗೆಲುವು ಸಾಧಿಸುವುದು ಎಂದು ವಿವರಿಸಿದರು.
ನಿಮ್ಮ ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಪೇಮೆಂಟ್ ಸ್ಟೇಟಸ್ ಚೆಕ್ ಮಾಡಿ
https://bhoomisuddi.com/check-crop-compensation-payment-status-by-entering-your-mobile-number/