ಪ್ರಿಯ ರಾಜ ರೈತರೇ, ಈ ಸಾಲಿನ ಮುಂಗಾರಿನಲ್ಲಿ ಅತಿಯಾದ ಮಳೆಯಾದ ಕಾರಣ ಮುಂಗಾರಿನ ಬೆಲೆ ತುಂಬಾ ನಾಶವಾಗಿ ಹೋಗಿದೆ. ಅದಕ್ಕಾಗಿ ಸರ್ಕಾರವು ರೈತರ ನೆರವಿಗಾಗಿ ಕ್ರಾಪ್ ಇನ್ಸೂರೆನ್ಸ್ ಅಂದರೆ ಬೆಳೆ ವಿಮೆ ಅನ್ನು ನೀಡಲು ನಿರ್ಧಾರ ಮಾಡಿದ್ದಾರೆ. ಈ ಸಾಲಿನಲ್ಲಿ ರೈತರಿಗೆ ಅತಿ ನಷ್ಟವಾದ ಕಾರಣ ಸರ್ಕಾರವು ರೈತರಿಗೆ ಬಹಳ ಸಹಾಯಧನವನ್ನು ಬೆಳೆ ವಿಮೆ ಮುಖಾಂತರ ರೈತರ ಖಾತೆಗೆ ಡಿಪಿಟಿ ಮೂಲಕ ಜಮಾ ಮಾಡಲು ಸಜ್ಜಾಗಿದ್ದಾರೆ.
ಈ ಸಾಲಿನ ಮುಂಗಾರು ಬೆಳೆವಿಮೆ ಮಾಡಿಸಿರುವ ರೈತರಿಗೆ ಕೆಲವೊಂದು ಬೆಳಗಳಿಗೆ ಈಗಾಗಲೇ ಬೆಳೆ ವಿಮೆ ಹಣ ಬಂದು ತಲುಪಿದೆ. ನಮ್ಮ ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ಮೆಣಸಿನಕಾಯಿ ಅತಿ ಹೆಚ್ಚು ಬೆಳೆ ವಿಮೆ ಹಣವನ್ನು ಬಹಳ ಶೇಕಡ ರೂಪದಲ್ಲಿ ನೀಡಲು ನಿರ್ಧಾರ ಮಾಡಿದ್ದಾರೆ.
1 ಎಕರೆ ಮೆಣಸಿನಕಾಯಿ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಬರುತ್ತದೆ?
ಈ ಸಾಲಿನಲ್ಲಿ ಮೆಣಸಿನಕಾಯಿ ಬೆಳೆಯು ತುಂಬಾ ನಷ್ಟಕರವಾದ ಬೆಳೆ. ಏಕೆಂದರೆ ಈ ಬಾರಿ ಮೆಣಸಿನಕಾಯಿ ಅತಿ ಕಡಿಮೆ ಇಳುವರಿ ಬಂದಿದೆ. ಆದಕಾರಣ ರೈತರಿಗೆ ಹಣದ ಅಭಾವ ಬಂದಿದ್ದು. ನಮ್ಮ ಇನ್ಸೂರೆನ್ಸ್ ಕಂಪನಿಯು ಈ ಬಾರಿ ರೈತರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 2022-23 ಸಾಲಿನ ಮುಂಗಾರು ಬೆಳೆಯಾದ ಮೆಣಸಿನಕಾಯಿಗೆ 46.33 ಬೆಳೆ ವಿಮೆ ಕ್ಲೇಮ್ ಆಗಿದೆ. ಅಂದರೆ 1 ಎಕರೆ ಮೆಣಸಿನಕಾಯಿ ಬೆಳೆಗೆ 13,500ರೂಪಾಯಿಗಳನ್ನು ಬೆಳೆ ವಿಮೆ ಮುಖಾಂತರ ರೈತರ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲು ಕಂಪನಿ ಒಪ್ಪಿಕೊಂಡಿದೆ.
ಈ 13,500 ರೂಪಾಯಿಗಳು ಗದಗ್ ಜಿಲ್ಲೆಯ ರೈತರಿಗೆ ಜಮಾ ಆಗಲಿವೆ. ಇನ್ನು ಬೇರೆ ಬೇರೆ ಜಿಲ್ಲೆಯ ರೈತರು ನಿಮ್ಮ ಬೆಳೆಗೆ ಎಷ್ಟು ಬೆಳೆ ವಿಮೆ ಶೇಕಡ ಕ್ಲೀಮ್ ಆಗಿದೆ ಎಂದು ಆನ್ಲೈನ್ ಮೂಲಕ ತಿಳಿಯಬಹುದು. ನಿಮ್ಮ ಬಳಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಈ ಬೆಳೆ ವಿಮೆ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ನಿಮ್ಮ ಬೆಳೆಗೆ ಎಷ್ಟು ಶೇಕಡ ಬೆಳೆವಿಮೆ ಕ್ಲೇಮ್ ಆಗಿದೆ ಎಂದು ತಿಳಿಯುವುದು ಹೇಗೆ?
ಮೊದಲು ರೈತರು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.samrakshane.karnataka.gov.in/ ಅಲ್ಲಿ ನಿಮಗೆ ವರ್ಷ ಮತ್ತು ಋತುವಿನ ಆಯ್ಕೆ ಮಾಡಲು ಆಯ್ಕೆಗಳು ಇರುತ್ತವೆ. ಅಲ್ಲಿ ರೈತರು ವರ್ಷ 2022-2023 ಮತ್ತು ಋತು ಮುಂಗಾರು( kharif) ಆಯ್ಕೆ ಮಾಡಿಕೊಂಡು ಮುಂದೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮುಂದೆ ಒಂದು ಹೊಸ ಮುಖಪುಟ ತೆರೆಯುತ್ತದೆ ಅಲ್ಲಿ ನೀವು ಚೆಕ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮಗೆ ನಿಮ್ಮ ಪ್ರಪೋಸಲ್ ನಂಬರ್(proposal number) ಅಥವಾ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಅಲ್ಲಿ ನೀಡಿರುವ ಕ್ಯಾಪ್ಚ ಫೋಡನ್ನು ಬರೆದರೆ ಸಾಕು ಮುಂದೆ ಸರ್ಚ್ (search) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಬೆಳೆಗೆ ಎಷ್ಟು ಶೇಕಡ ಬೆಳೆ ವಿಮೆ ಬಂದಿದೆ ಎಂದು ತಿಳಿಯುತ್ತದೆ.
ಇದನ್ನೂ ಓದಿ :- ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ಸಂಖ್ಯೆ ಹಾಕಿ ನಿಮಗೆ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಿರಿ
ಇದನ್ನೂ ಓದಿ :- ಇ ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ 1000 ರೂಪಾಯಿಗಳು ಅರ್ಜಿ ನೋಂದಣಿ ಮಾಡುವುದು ಹೇಗೆ ?