Breaking
Tue. Dec 17th, 2024

106 ತಾಲೂಕಲ್ಲಿ 16000 ಕೃಷಿ ಹೊಂಡ ಕೃಷಿ ಭಾಗ್ಯ ಯೋಜನೆಯಡಿ ಸೌಲಭ್ಯ

Spread the love

ಆತ್ಮೀಯ ರೈತ ಬಾಂಧವರೇ, 106 ತಾಲೂಕಲ್ಲಿ 16000 ಕೃಷಿ ಹೊಂಡ ಕೃಷಿ ಭಾಗ್ಯ ಯೋಜನೆಯಡಿ ಸೌಲಭ್ಯ 1200 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿ ಕೃಷಿ ಹೊಂಡಗಳ ನಿರ್ಮಾಣ ನಿಟ್ಟಿನಲ್ಲಿ ಕ್ರಾಂತಿಕಾರ `ಹೆಜ್ಜೆಗಳನ್ನಿರಿಸಿರುವ ರಾಜ್ಯ ಸರಕಾರ, ಈಗ ಕೃಷಿ ಭಾಗ್ಯ ಯೋಜನೆಯಡಿ ರಾಜ್ಯದ ಮಳೆಯಾಶ್ರಿತ ಕೃಷಿಯ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಅಂದಾಜು 16,062 ಕೃಷಿ ಹೊಂಡಗಳ ನಿರ್ಮಾಣಕ್ಕೆ ಮುಂದಾಗಿದೆ.

ಬರ ಪೀಡಿತ ಪ್ರದೇಶದ ವಿಚಾರಕ್ಕೆ ಬಂದರೆ ದೇಶದಲ್ಲಿ ರಾಜಸ್ಥಾನದ ನಂತರದ ಸ್ಥಾನ ಕರ್ನಾಟಕದ್ದಾಗಿದೆ. ರಾಜ್ಯದ ಶೇ.68ರಷ್ಟು ಪ್ರದೇಶ ಮಳೆಯಾಶ್ರಿತ ಕೃಷಿ ಹೊಂದಿದ್ದರೂ, ಕೃಷಿ ಹೊಂಡಗಳ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಗೋಚರಿಸಿರಲಿಲ್ಲ. ಆದರೆ 2014ರ ಬಳಿಕ ಕೃಷಿ ಭಾಗ್ಯ ಯೋಜನೆ, ಹೊಂಡಗಳ ನಿರ್ಮಾಣಕ್ಕೆ ಉತ್ತೇಜನ, ಪ್ರಯೋಜನ-ಲಾಭದ ಮನವರಿಕೆಯ ಜಾಗೃತಿ, ವಿವಿಧ ಎನ್ ಜಿಒಗಳ ಸಾಥ್‌ನಿಂದಾಗಿ, ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ನಂತರದ ಸ್ಥಾನದಲ್ಲಿದ್ದ ರಾಜ್ಯವು ಲಕ್ಷಗಳ ಸಂಖ್ಯೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣದೊಂದಿಗೆ ಗಮನ ಸೆಳೆಯುವ ಸಾಧನೆ ತೋರಿದೆ.

ಪ್ರದೇಶ ಹೆಚ್ಚಿರುವ, ಬರಪೀಡಿತ ಜಿಲ್ಲೆಗಳಲ್ಲಿ ರೈತರಿಗೆ ಪರ್ಯಾಯ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ 2014-15ರಲ್ಲಿ ಜಾರಿಗೊಳಿಸಿದ ಕೃಷಿ ಭಾಗ್ಯ ಯೋಜನೆ ಇಂದು ಹಲವು ರೈತರ ಕೃಷಿ ಬದುಕಿಗೆ ಮಹತ್ವದ ಆಸರೆ ತಂದಿದೆ. ನೀರಾವರಿ ಸೌಲಭ್ಯದ ಪ್ರದೇಶಕ್ಕೂ ನಾವೇನು ಕಡಿಮೆ ಇಲ್ಲ ಎಂಬಂತೆ ರೈತರು ತರಕಾರಿ, ಪಪ್ಪಾಯಿ, ಪೇರಲ, ಬೆಳೆಗಳನ್ನು ಬೆಳೆಯುವಂತಾಗುವ ಮಟ್ಟಿಗೆ ಕೃಷಿ ತಮ್ಮದೇ ಕೊಡುಗೆ ನೀಡಿವೆ.

ಏಷ್ಟು ಖರ್ಚು ಆಗುವ ಸಂಭವ ಇದೆ?

ರಾಜ್ಯ ಸರಕಾರ ಕೃಷಿ ಭಾಗ್ಯ ಯೋಜನೆಯಡಿ ಒಟ್ಟು ಅಂದಾಜು 200 ಕೋಟಿ ರೂ.ವೆಚ್ಚದಲ್ಲಿ 24 ಜಿಲ್ಲೆಗಳ 106 ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 16,062 ಕೃಷಿ ಹೊಂಡಗಳು ಹಾಗೂ ಇತರೆ ಘಟಕಗಳ ನಿರ್ಮಾಣಕ್ಕೆ ಮಹತ್ವದ ನಿರ್ಣಯ ಕೈಗೊಂಡಿದೆ. ರಾಜ್ಯ ಸರಕಾರದ ಪೂರಕ ಅಂದಾಜುಗಳಲ್ಲಿ 100 ಕೋಟಿ ರೂ. ಹಾಗೂ ಕಂದಾಯ ಇಲಾಖೆ ವಿಪತ್ತು ಕ ನಿರ್ವಹಣೆಯಿಂದ 100 ಕೋಟಿ ರೂ.ಗಳನ್ನು ಯೋಜನೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

ಪ್ರತಿತಾಲೂಕಿಗೆ ಕೋಟಿರೂ.ಅಂದಾಜು ವೆಚ್ಚದಂತೆ 106 ತಾಲೂಕುಗಳಲ್ಲಿ 16,062 ಕೃಷಿ ಹೊಂಡಗಳು ನಿರ್ಮಾಣಗೊಳ್ಳಲಿವೆ. ಮುಖ್ಯವಾಗಿ ಮಳೆನೀರು ಕೊಯ್ದು ಅದರ ಸಮರ್ಪಕ ಬಳಕೆ, ಕೃಷಿ ಉತ್ಪನ್ನದಲ್ಲಿ ವೃದ್ಧಿಯ ಉದ್ದೇಶದ ಜತೆಗೆ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವುದು ಉದ್ದೇಶವಾಗಿದೆ. ಕೃಷಿ ಹೊಂಡ ನಿರ್ಮಾಣವಷ್ಟೇ ಅಲ್ಲದೆ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡದಲ್ಲಿನ ನೀರು ಇಂಗದಂತೆ ತಡೆಯುವ ನಿಟ್ಟಿನಲ್ಲಿ ಕೃಷಿ ಹೊಂಡಕ್ಕೆ ಪಾಲಿಥಿನ್ ಹೊದಿಕೆ ಅಳವಡಿಕೆ, ಕೃಷಿ ಹೊಂಡದಿಂದ ನೀರು ಮೇಲೆತ್ತಲು ಡಿಸೇಲ್ ಪಿಎಂಕೆಎಸ್‌ವೈ-ಪಿಡಿಎಂಸಿ ಅಥವಾ ಅಟಲ್ ಭೂ ಜಲ ಯೋಜನೆಗಳನ್ನು ಒಗ್ಗೂಡಿಸುವಿಕೆಯೊಂದಿಗೆ ತುಂತುರು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲು ತಂತಿ ಬೇಲಿ ಅಳವಡಿಕೆಯನ್ನು ಸಹ ಯೋಜನೆ ಹೊಂದಿದೆ.

ಕೃಷಿ ಹೊಂಡಗಳ ಅಳತೆಗಳು ಹೇಗೆ ಇವೆ?

ಕೃಷಿ ಹೊಂಡಗಳನ್ನು 12 ಮೀಟರ್ ಉದ್ದ, ಮೀಟರ್ ಅಗಲ ಹಾಗೂ ಮೂರು 12 ಮೀಟರ್ ಆಳದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ಅದು ಭರ್ತಿಯಾದರೆ ರೈತರು ಸುಮಾರು 0.50 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಬಹುದಾಗಿದೆ. ತುಂತುರು ನೀರಾವರಿ ಅಳವಡಿಸಿಕೊಂಡರೆ ಇನ್ನಷ್ಟು ಹೆಚ್ಚಿನ ಭೂಮಿಗೆ ನೀರು ಪಡೆಯಬಹುದಾಗಿದೆ. ಅದೇ ರೀತಿ 15/15 ಹಾಗೂ 3 ಮೀಟ‌ ಮಾಡಿದರೆ 0.60 ಹೆಕ್ಟೇರ್, 21/21 ಹಾಗೂ 3 ಮೀಟರ್‌ನಲ್ಲಿ 1 ಹೆಕ್ಟೇರ್, 28/28 ಹಾಗೂ 3 ಮೀಟರ್‌ನಲ್ಲಿ 1.20 ಹೆಕ್ಟೇರ್, 30/30 ಹಾಗೂ 3 ಮೀಟರ್ ಕೃಷಿ ಹೊಂಡದಿಂದ 1.50 ‘ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ನನ್ನ ಹೊಲದಲ್ಲಿ 100/100 ಹಾಗೂ 12 ಅಡಿ ಆಳದ ಕೃಷಿ ಹೊಂಡ ಮಾಡಿಕೊಂಡಿದ್ದೇನೆ.

ಬರದ ಸ್ಥಿತಿಯಲ್ಲಿ ಕೃಷಿ ಹೊಂಡದ ನೀರು ಮಹತ್ವದ ಆಸರೆಯಾಗಿದೆ. ಹಲವರ ಬೆಳೆಗಳು ಒಣಗಿದ್ದರೆ, ಕೃಷಿ ಹೊಂಡದ ನೀರಿನಿಂದಾಗಿ ಮೊಣಕಾಲು ನನ್ನ ಹೊಲದಲ್ಲಿ ಎತ್ತರಕ್ಕೆ ಉಳ್ಳಾಗಡ್ಡೆ ಬೆಳೆದು ನಿಂತಿದೆ. ಮೆಣಸಿನಕಾಯಿ ಬೆಳೆಗೂ ಇದೇ ನೀರು ನೀಡಬೇಕು ಅಂದುಕೊಂಡಿದ್ದೆ. ಅದೃಷ್ಟಕ್ಕೆ ಮಳೆ ಬಂದಿತು. ಇದೀಗ ಬೆಳೆಗೆ ನೀರಿನ ಅಗತ್ಯವಿಲ್ಲ. ಕೃಷಿ ಹೊಂಡಕ್ಕೂ ಒಂದಿಷ್ಟು ನೀರು ಹರಿದು ಬಂದಿದೆ. ಸರಕಾರ ಮತ್ತೆ 16ಸಾವಿರ ಕೃಷಿ ಹೊಂಡಗಳ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಕಾರ್ಯ. ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.

ಹಲವು ರೈತರು 100 ಅಡಿ ಉದ್ದ, 100 ಅಡಿ ಅಗಲ ಹಾಗೂ 12-15 ಅಡಿ ಆಳದ ಕೃಷಿ ಹೊಂಡ ಮಾಡಿಕೊಂಡು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇಳುವರಿ-ಆದಾಯ ಹೆಚ್ಚಳು ದೇಶದ ಜಿಲ್ಲೆಗಳಲ್ಲಿ ಕರ್ನಾಟಕ ಸೇರಿದಂತೆ 600 11 ರಾಜ್ಯಗಳ ಸುಮಾರು 250 ಜಿಲ್ಲೆಗಳು ತೀವ್ರ ಬರಪೀಡಿತವಾಗಿವೆ. ರಾಜ್ಯದಲ್ಲಿ ಉತ್ತರ ಕರ್ನಾಟಕದ್ದೂ ಸೇರಿದಂತೆ ಹಲವು ಜಿಲ್ಲೆಗಳು ಬರಪೀಡಿತ ಸ್ಥಿತಿಯೊಂದಿಗೆ ಮಳೆಯಾಶ್ರಿತ ಕೃಷಿ ಅವಲಂಬಿಸಿವೆ. ರಾಜ್ಯದ ಶೇ.68ರಷ್ಟು ಕೃಷಿ ಪ್ರದೇಶ ಮಳೆಯಾಶ್ರಿತವಾಗಿದ್ದು, ಶೇ.55ರಷ್ಟು ಆಹಾರಧಾನ್ಯ ಬೆಳೆಗಳ ಪ್ರದೇಶ, ಶೇ.75ರಷ್ಟು ಎಣ್ಣೆಕಾಳುಗಳ ಬಿತ್ತನೆ ಪ್ರದೇಶ ಮಳೆಯನ್ನು ಆಶ್ರಯಿಸಿದೆ.

ಅಂದಾಜು 1920 ಕೋಟಿ ರೂ. ವೆಚ್ಚದಲ್ಲಿ ಇದುವರೆಗೆ ಸುಮಾರು 1.93 ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣಕ್ಕೆ ಉತ್ತೇಜನ ನೀಡುವ ಮೂಲಕ ಸುಮಾರು 4.13 ಲಕ್ಷ ಹೆಕ್ಟೇರ್ ಪ್ರದೇಶದ ಭೂಮಿಗೆ ಪರ್ಯಾಯ ನೀರಾವರಿ ಸೌಲಭ್ಯ ಕಲ್ಪಿಸಿರುವ ರಾಜ್ಯ ಸರಕಾರ, ಇದೀಗ ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ 16,062 ಕೃಷಿ ಹೊಂಡಗಳ ಮೂಲಕ ನೀರಾವರಿ `ಪ್ರದೇಶದ ವಿಸ್ತರಣೆಗೆ ಹೆಜ್ಜೆ ಇರಿಸಿದೆ.

ಇದನ್ನು ಹಾಕಿಸಿದರೆ ಏಷ್ಟು ಇಳುವರಿ ಹೆಚ್ಚಿಗೆ ಆಗುತ್ತದೆ?

ಕೃಷಿ ಹೊಂಡಗಳ ನಿರ್ಮಾಣದಿಂದ ಕೃಷಿ ಬೆಳೆಗಳ ಇಳುವರಿಯಲ್ಲಿ ಶೇ.25-30ರಷ್ಟು ಹೆಚ್ಚಳವಾಗಿರುವುದು ಅಧ್ಯಯನ ಹಾಗೂ ರೈತರ ಅನುಭವ-ಅನಿಸಿಕೆಗಳ ಮೂಲಕ ವ್ಯಕ್ತವಾಗಿದೆ. ರೈತರ ಆದಾಯದಲ್ಲಿ ಶೇ.13-19ರಷ್ಟು ವೃದ್ಧಿಯಾಗಿದ್ದರೆ, ಕೃಷಿ ಹೊಂಡಗಳಿಂದಾಗಿ ಉದ್ಯೋಗದಲ್ಲಿ 130 ಮಾನವ ದಿನಗಳನ್ನು ಸೃಷ್ಟಿ ಮಾಡಿದ್ದರಿಂದ ಕೃಷಿ ಹೊಂಡಗಳಿಲ್ಲದ ಕಡೆ ಇದರ ಪ್ರಮಾಣ 93 ದಿನಗಳಾಗಿವೆ.

ಯಾವ ಯಾವ ಜಿಲ್ಲೆಗೆ ಈ ಸೌಲಭ್ಯ ಇದೆ?

ಪಕ್ಕಾ ಮಳೆಯಾಶ್ರಿತ ಪ್ರದೇಶವೆಂದೇ ಬಿಂಬಿತವಾದ ಉತ್ತರದ ಧಾರವಾಡ, ಗದಗ, ವಿಜಯಪುರ, ಕೊಪ್ಪಳ, ಬಳ್ಳಾರಿ ಇನ್ನಿತರ ಜಿಲ್ಲೆಗಳ ಹಲವು ರೈತರು ಕೃಷಿ ಹೊಂಡಗಳ ನಿರ್ಮಾಣದಿಂದಾಗಿ ತೋಟಗಾರಿಕಾ ಹಾಗೂ ತರಕಾರಿ ಬೆಳೆಗಳಿಗೂ ಮುಂದಾಗುವ ಮೂಲಕ ಇಳುವರಿ-ಆದಾಯ ಹೆಚ್ಚಳದೊಂದಿಗೆ ಸಂತಸದ ನಗೆ ಬೀರುತ್ತಿದ್ದಾರೆ. ಈಗ ಮತ್ತಷ್ಟು ಕೃಷಿ ಹೊಂಡಗಳ ನಿರ್ಮಾಣ ಹಾಗೂ ಪೂರಕ ಸೌಲಭ್ಯಗಳ ನೀಡಿಕೆಗೆ ಮುಂದಾಗಿರುವುದು ರೈತರ ಮೊಗದಲ್ಲಿ ಇನ್ನಷ್ಟು ಹರ್ಷ ತರಿಸಲಿದೆ.

ಇದನ್ನು ಓದಿ:- 📲ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?✅

Related Post

Leave a Reply

Your email address will not be published. Required fields are marked *