ಅನ್ನಭಾಗ್ಯ ಗ್ಯಾರಂಟೀ ಹಣ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. Select Year (ವರ್ಷ), Select Month (ತಿಂಗಳು), Enter RC Number ರೇಷನ್ ಕಾರ್ಡ್ ನಂಬರ್ ಹಾಕಿ. ಕ್ಯಾಪ್ಟ್ ಕೋಡ್ ಹಾಕಿ go ಮೇಲೆ ಕ್ಲಿಕ್ ಮಾಡಿ.
https://ahara.kar.nic.in/status1/status_of_dbt_new.aspx
ಚೆಕ್ ಮಾಡುವುದು ಹೇಗೆ?
https://bhoomisuddi.com/annabhagya-guarantee-money-is-170-deposit-how-to-check/
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ 5 ನೇ ಸುತ್ತಿನ ಕಾಲು, ಬಾಯಿ ರೋಗ ಲಸಿಕಾ ಕಾರ್ಯಕ್ರಮವು
ಏಪ್ರಿಲ್ 1 ರಿಂದ 10 ರವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ(ಎನ್.ಎ.ಡಿ.ಸಿ.ಪಿ) 5 ನೇ ಸುತ್ತಿನ ಕಾಲು, ಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಪೂರ್ವ ಸಿದ್ದತೆಗಳ ಪರಿಶೀಲನೆಗಾಗಿ ಧಾರವಾಡ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ಜರುಗಿತು. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ 5 ನೇ ಸುತ್ತಿನ ಕಾಲು, ಬಾಯಿ ರೋಗ ಲಸಿಕಾ ಕಾರ್ಯಕ್ರಮವು ಏಪ್ರಿಲ್ 1 ರಿಂದ 10 ರವರೆಗೆ ನಡೆಯಲಿದ್ದು, ಜಿಲ್ಲೆಯ ಪ್ರತಿ ದನಗಳ ಮಾರಾಟ ಕೇಂದ್ರಗಳಿಗೆ ಓರ್ವ ಅಧಿಕಾರಿ ನೇಮಕ ಮಾಡಿ ರೈತರೊಂದಿಗೆ ಚರ್ಚಿಸಿ ಅವರಿಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 1,36,023 ದನಗಳು, 47698 ಎಮ್ಮೆಗಳು ಸೇರಿ ಒಟ್ಟು 1,84,347 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವಿದ್ದು, 364 ಗ್ರಾಮಗಳ 160 ವಾರ್ಡಗಳ 1904 ಬ್ಲಾಗಳಲ್ಲಿ ಲಸಿಕೆ ಹಾಕಲಾಗುವುದು. ಮತ್ತು 214 ಲಸಿಕೆದಾರರಿದ್ದು, 4 ವಾಕ್ ಇನ್ ಕೂಲರ್, 19 ಐ.ಎಲ್.ಆರ್ ಹಾಗೂ 285 ವಾಕ್ಸಿನ್ ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ್, ಆರೋಗ್ಯ ಇಲಾಖೆಯ ಡಾ. ಮಂಜುನಾಥ ಸೊಪ್ಪಿಮಠ, ಡಾ.ಪ್ರಕಾಶ ಬೆನ್ನೂರ, ಡಾ. ಮಹೇಶ ಕುರಿ, ಡಾ.ದೇವೇಂದ್ರ ಲಮಾಣಿ ಹಾಗೂ ಇತರರು ಭಾಗವಹಿಸಿದ್ದರು.
ಬಡವರಿಗೆ ರಂಜಾನ್ ಕಿಟ್ ವಿತರಣೆ
ರಂಜಾನ್‌ನಂಥ ಪವಿತ್ರ ಮಾಸದಲ್ಲಿ ಪ್ರತಿಯೊಬ್ಬರೂ ಜನಪರ ಕಾರ್ಯ ಮಾಡಲು ಮುಂದಾಗಬೇಕು. ಕಳೆದ 3 ದಶಕಗಳಿಂದ ಬಾಗವಾನ್ ಜಮಾತ್ ಇಂಥ ಅನೇಕ ಜನಪರ ಕಾರ್ಯ ಮಾಡುತ್ತ ಬಂದಿದೆ. ಇದರ ಹಿಂದೆ ಸಮಾಜದ ಹಿರಿಯರ ಮಾರ್ಗದರ್ಶನ ಇದೆ. ಸಮಾಜದ ಯುವಕರು ಸ್ವಯಂಪ್ರೇರಿತರಾಗಿ ಬಡವರಿಗೆ ರಂಜಾನ್ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹಿರಿಯ ಮುಖಂಡ ಎಚ್.ಆರ್.ಬಾಗವಾನ ಹೇಳಿದರು. ಪಟ್ಟಣದ ಎಪಿಎಂಸಿ ಹತ್ತಿರ ತಾಳಿಕೋಟೆ ಬೈಪಾಸ್ ರಸ್ತೆ ಪಕ್ಕದಲ್ಲಿರುವ ದಿ ಬಾಗವಾನ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಂಜಾನ್ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಮೌಲಾನಾ ಮಹ್ಮದ್ ಹುಸೇನ್ ಉಮ್ಮಿ ಮಾತನಾಡಿ ರಂಜಾನ್ ತಿಂಗಳ ಪವಿತ್ರ ಮಾಸವು ದಾನದ ಮಹತ್ವ ತಿಳಿದುಕೊಳ್ಳುವ ಮಾಸವಾಗಿದೆ. ಮೊದಲ ನಮ್ಮ ಹೊಟ್ಟೆ ತುಂಬಿಸಿಕೊಂಡು ಆನಂತರ ಹಸಿದ ಹೊಟ್ಟೆ ತುಂಬಿಸುವುದು ದಾನವಾಗುವುದಿಲ್ಲ. ನಾವು ಹಸಿದಿದ್ದರೂ ಹಸಿದ ಬೇರೆಯವರ ಹೊಟ್ಟೆ ತುಂಬಿಸುವಲ್ಲಿ ಸಾರ್ಥಕತೆ ಇದೆ ಎಂದರು. ಮೌಲಾನಾ ಅಪ್ತಾಬ್ ಹುಸೇನ್ ಮಾತನಾಡಿ ಶ್ರಮವಹಿಸಿ ದುಡಿದ ಸಂಪತ್ತು, ಹಣ ದಾನಕ್ಕೆ ಯೋಗ್ಯವಾಗುತ್ತದೆ. ಪವಿತ್ರ ರಂಜಾನ್ ಮಾಸದಲ್ಲಿ ನೆರೆಮನೆಯ ಬಡವನು ರಂಜಾನ್ ಹಬ್ಬ ಆಚರಿಸುವಂತೆ ಸಹಾಯ ಮಾಡಿ ಎನ್.ಡಿ.ಹುಲಗಬಾಳ, ಎನ್.ಬಿ.ಹಳ್ಳೂರ, ಎನ್.ಡಿ.ಬಾಗವಾನ ಎ.ಕೆ.ಮಕೇದಾರ, ಬಾಗವಾನ ಜಮಾತ್ ಸದಸ್ಯರು, ಸೊಸೈಟಿಯ ಉಪಸ್ಥಿತರಿದ್ದರು.
ತಲಾ 1100 ರೂ ಮೌಲ್ಯದ ರಂಜಾನ್ ಆಡಳಿತ ಮಂಡಳಿಯವರು ಸೇರಿ ಹಲವರು ಕಿಟ್‌ಗಳನ್ನು ಅಂದಾಜು 100 ಬಡ ಮುಸ್ಲಿಮ್ ಕುಟುಂಬದವರಿಗೆ ವಿತರಿಸಲಾಯಿತು. ಕಿಟ್ ವಿತರಿಸುವ ಮತ್ತು ಪಡೆದುಕೊಳ್ಳುವ ಫೋಟೊ ತೆಗೆಯದಂತೆ ಮನವಿ ಮಾಡಿದ ಜಮಾತ್‌ನವರು ಕಿಟ್ ಪಡೆಯುವವರಿಗೂ ಸ್ವಾಭಿಮಾನ ಅನ್ನೋದು ಇರುವುದರಿಂದ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತಿರಲು ಈ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿ ಔದಾರ್ಯ ಮೆರೆದರು. ಎನ್.ಆರ್.ಮಮದಾಪೂರ ಕಾರ್ಯಕ್ರಮ ನಿರ್ವಹಿಸಿದರು.
Agri jobs