ಆತ್ಮೀಯ ರೈತ ಬಾಂಧವರೇ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 2000 ಗಳು ನಿಮಗೆ 16 ಕಂತುಗಳಲ್ಲಿ ಈಗಾಗಲೇ ಜಮಾ ಆಗಿದೆ. ಹಾಗೆಯೇ 17ನೇ ಕಂತನೆಯ ಹಣ ಕೂಡ ಈ ಸದ್ಯದಲ್ಲೇ ಜಮಾ ಆಗಲಿದ್ದು ಅದರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಹಾಗಾದರೆ ಯಾರು ಯಾರಿಗೆ ಈ ಕಂತಿನ ಹಣವು ಜಮಾ ಆಗುತ್ತದೆ ಎಂದು ತಿಳಿಯಿರಿ. ಹಲವು ಬಾರಿ ವಂದನೆ ಕಂತು ಜಮಾ ಆಗಿ ಎರಡನೇ ಕಂತು ಜಮಾ ಆಗದೆ ಮತ್ತು ಮೂರನೇ ಕಂತು ಜಮಾ ಆಗಿರುವುದನ್ನು ನಾವೀಗಾಗಲೇ ಕಂಡಿದ್ದೇವೆ. ಆದರೆ 12ನೇ ಕಂತಿನ ನಂತರ ಎಲ್ಲರಿಗೂ 13, 14, 15 ,16 ಕಾಂತಿನ ಹಣಗಳು ಸಾಲು ಸಾಲಾಗಿ ಜಮಾ ಆಗಿದೆ. ಅಂತೆಯೇ ಈಗಾಗಲೇ ಯಾರು 16ನೇ ಕಂತಿನ ಹಣವನ್ನು ಪಡೆದಿದ್ದೀರ ಅವರಿಗೆ ಮಾತ್ರ 17ನೇ ಆಗುತ್ತದೆ.
ನಿಮಗೆ ಜಮಾ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ಅನ್ನು ನಾವು ಈ ಕೆಳಗೆ ಒದಗಿಸಿದ್ದೇನೆ.
https://pmkisan.gov.in/
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ಮೇಲೆ ನಿಮಗೆ ಮೂರು ಬಹು ಆಯ್ಕೆಗಳು ದೊರೆಯುತ್ತವೆ. ಅದರಲ್ಲಿ know your status ಕಾಲಮನ್ನು ಕ್ಲಿಕ್ ಮಾಡಿ.
ಕ್ಲಿಕ್ ಮಾಡಿದ ನಂತರ ನಿಮ್ಮ ರಿಜಿಸ್ಟ್ರೇಷನ್ ನಂಬರನ್ನು ಹಾಕಿರಿ
ಹಾಕಿದ ನಂತರ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ. ಯಾವ ಬ್ಯಾಂಕಿಗೆ ಜಮಾ ಆಗಿದೆ. ಯಾವ ದಿನದಂದು ಜಮಾ ಆಗಿದೆ ಈ ಎಲ್ಲಾ ಮಾಹಿತಿಗಳನ್ನು ಈ ಒಂದು ಕ್ಲಿಕ್ ಮೂಲಕ ನಿಮಗೆ ತಿಳಿಯುತ್ತದೆ.
ಹಾಗಾದರೆ ಯಾರೂ ತಡ ಮಾಡಬೇಡಿ ಈ ಕೂಡಲೇ ಎಲ್ಲರೂ ನಿಮ್ಮ ಮೊಬೈಲ್ ನಲ್ಲಿ ಎಷ್ಟು ಕಂತಿನ ಹಣ ಜಮಾ ಆಗಿದೆ ಹಾಗೂ ಮುಂದಿನ ಹಂತದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂದು ಚೆಕ್ ಮಾಡಿ.
ಕೇಂದ್ರ ಸರ್ಕಾರವು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಧನ ಸಹಾಯವನ್ನು ನೀಡುವ ಸಲುವಾಗಿ 2019 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ವರ್ಷಕ್ಕೆ ಒಟ್ಟು 6,000 ರೂಪಾಯಿಗಳ ಆರ್ಥಿಕ ಧನ ಸಹಾಯ ಸಿಗಲಿದೆ. ಈ ಹಣವನ್ನು 3 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ :-ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಕೂಡಲೇ ಚೆಕ್ ಮಾಡಿ
ಈಗಾಗಲೇ 16 ಕಂತುನ ಹಣ ಜಮವಾಗಿ 17ನೇ ಕಂತಿನ ಹಣವು ಜಮಾ ಆಗಲು ಯಾಕೆ ತಡವಾಗುತ್ತಿದೆ ಅಂದರೆ ಈ ವರ್ಷದ 17ನೇ ಲೋಕಸಭಾ ಚುನಾವಣೆ ಈಗಾಗಲೇ ಕರ್ನಾಟಕದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ನಡೆದಿದ್ದು ಅದರ ರಿಸಲ್ಟ್ ಬರುವವರೆಗೂ ಯಾವ ರೀತಿಯ ಹಣವನ್ನು ಕೂಡ ಬಿಡುಗಡೆ ಮಾಡುವುದು ಆಗಲಿ ಹಾಗೂ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಲಿ ಮಾಡಬಾರದು ಎಂದು ನೀತಿ ಸಂಹ ಮಿತ ಜಾರಿಗೆಯನ್ನೂ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ನಾಲ್ಕರ ನಂತರ ಈ ಹಣವನ್ನು ನಿಮಗೆ ಹಾಕಲು ಸರ್ಕಾರ ತೀರ್ಮಾನ ಮಾಡಿದ್ದು. ಎಲ್ಲಾ ರೈತರು ನಿರೀಕ್ಷೆ ಮಾಡಬೇಕಾಗುತ್ತದೆ. ಯಾಕೆಂದರೆ ಜೂನ್ ನಾಲ್ಕರಂದು 17ನೇ ಲೋಕಸಭಾ ಚುನಾವಣಾ ಫಲಿತಾಂಶಗಳು ಹೊರಬೀಳಲಿದ್ದು ಹೊಸ ಸರ್ಕಾರ ಕರ್ತವ್ಯಗಳನ್ನು ತನ್ನ ತಲೆಯ ಮೇಲೆ ಹೊತ್ತುಕೊಳ್ಳಲಿದೆ. ಹಾಗಾಗಿ ಎಲ್ಲ ರೈತರು ತಾಳ್ಮೆಯಿಂದ 17ನೇ ಕಂತಿನ ಹಣ ಜಮಾ ಆಗುವರೆಗೂ ಕಾಯಬೇಕಾಗಿದೆ.
ಇದನ್ನೂ ಓದಿ :- ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಬೆಳೆ ವಿಮೆ ಕಟ್ಟುವ ದಿನಾಂಕ ಬಿಡುಗಡೆ ಆಗಿದೆ*
31.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು, ದಕ್ಷಿಣ ಕನ್ನಡ ಮಧ್ಯಾಹ್ನ ನಂತರ, ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಮಂಗಳೂರು ಸ್ವಲ್ಪ ಜಾಸ್ತಿಯೇ ಇರಬಹುದು. ಉಡುಪಿ ಒಂದೆರಡು ಕಡೆ ( ಕಾರ್ಕಳ ಸುತ್ತಮುತ್ತ ಹಾಗೂ ಕರಾವಳಿ ತೀರ ಭಾಗಗಳಲ್ಲಿ) ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಕೊಡಗು, ಹಾಸನ, ಚಿಕ್ಕಮಗಳೂರು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಒಂದೆರಡು ಕಡೆ ಒಂದೆರಡು ಕಡೆ ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ತುಮಕೂರು ಒಂದೆರಡು ಕಡೆ ಸಾಧಾರಣ ಮಳೆಯ ಮುನ್ಸೂಚೆನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಜೂನ್ 1ರಿಂದ ರಾಜ್ಯಕ್ಕೆ ಮುಂಗಾರು ಆಗಮನ ನಿರೀಕ್ಷೆ ಇದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಜೂನ್ 1ರಿಂದ ಮಳೆ ಆರಂಭವಾಗುವ ಲಕ್ಷಣಗಳಿವೆ. ಆದರೆ ಮುಂಗಾರು ಆರಂಭ ದುರ್ಬಲವಾಗಿರಲಿದೆ.
30.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಹೆಚ್ಚಿನ ಭಾಗಗಳಲ್ಲಿ ಮುಂಗಾರು ರೀತಿಯ ವಾತಾವರಣ ಉಂಟಾಗಿದೆ. ಉಡುಪಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚೆನೆ ಇದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಭಾಗಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ರಾಜ್ಯದ ದಕ್ಷಿಣ ಕರಾವಳಿ ಭಾಗಗಳಲ್ಲಿ ಮುಂಗಾರು ರೀತಿಯ ವಾತಾವರಣ ಉಂಟಾಗಿದ್ದು ಪ್ರಭಲವಾದ ಪಶ್ಚಿಮದ ಗಾಳಿಯು ಬೀಸುತ್ತಿದೆ.
ಈಗಿನಂತೆ ಮೇ 31ರಿಂದ ಈ ರೀತಿಯ ಗಾಳಿಯ ಪ್ರಭಾವ ಕಡಿಮೆಯಾಗುವ ಲಕ್ಷಣಗಳಿವೆ. ಮೇ 31ರಿಂದ ಮಳೆ ಕಡಮೆಯಾದರೂ ದಿನದಲ್ಲಿ ಒಂದೆರಡು ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಮುಂಗಾರು ಆರಂಭಿಕ ದುರ್ಬಲತೆ ಮುಂದುವರಿಯಲಿದೆ.
29.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಹ ಮೋಡದ ವಾತಾವರಣ ಇರಲಿದ್ದು, ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳ ಅಲ್ಲಲ್ಲಿ ಒಂದೆರಡು ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಜೂನ್ 1ರಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಜೂನ್ 2 ಅಥವಾ 3 ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮುಂಗಾರು ಆರಂಭ ದುರ್ಬಲತೆ ಮುಂದುವರಿಯಲಿದೆ.
28.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಬಂಟ್ವಾಳ, ಪುತ್ತೂರು, ಸುಳ್ಯ, ಧರ್ಮಸ್ಥಳ, ಚಾರ್ಮಾಡಿ ಭಾಗಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿ, ಉತ್ತರ ಕನ್ನಡ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಇದನ್ನು ಓದಿ:- 44.34 ಕೋಟಿ ಬೆಳೆವಿಮೆ ಹಣ ಬಿಡುಗಡೆ!! ರೈತರ ಖಾತೆಗೆ ಜಮಾ ಕೂಡಲೇ ಇಲ್ಲಿ ಚೆಕ್ ಮಾಡಿ
ಕೊಡಗು (ಕೇರಳ ಗಡಿ ಭಾಗಗಳಲ್ಲಿ) ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ ಮೋಡದ ವಾತಾವರಣ ಇರಲಿದ್ದು, ಚಿಕ್ಕಮಗಳೂರಿನ ಬಾಳೆಹೊನ್ನೂರು, ಕುದುರೆಮುಖ, ಶಿೃಂಗೇರಿ, ಆಗುಂಬೆ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಶಿವಮೊಗ್ಗ ಅಲ್ಲಲ್ಲಿ ಮೋಡದ ವಾತಾವರಣದೊಂದಿಗೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಮೈಸೂರು, ಚಾಮರಾಜನಗರ ರಾಯಚೂರು – ಆಂದ್ರಾ ಗಡಿಭಾಗಗಳಲ್ಲಿ, ಚಿತ್ರದುರ್ಗ, ದಾವಣಗೆರೆ, ಗದಗ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.
ಈಗಿನಂತೆ ರೇಮಲ್ ಚಂಡಮಾರುತವು ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಭಾರತದ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಹಳಷ್ಟು ಹಾನಿ ಮಾಡುವ ಸಾಧ್ಯತೆ ಇದೆ. ಜೂನ್ 1ರಿಂದ ಮುಂಗಾರು ಆಗಮನದ ನಿರೀಕ್ಷೆ ಇದ್ದರೂ ದುರ್ಬಲವಾಗಿರುವ ಸಾಧ್ಯತೆ ಹೆಚ್ಚಿದೆ. ಕರಾವಳಿ ಮಲೆನಾಡು ಭಾಗಗಳಲ್ಲಿ ತೋಟಗಳಿಗೆ ಔಷಧಿ ಸಿಂಪಡಿಸಲು ಜೂನ್ ಮೊದಲ ವಾರದಲ್ಲಿಯೂ ಅವಕಾಶ ಸಿಗಬಹುದು. ಆದರೂ ದಿನಕ್ಕೊಂದರಂತೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.