ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ. ಶೀಘ್ರವೇ 18177.44 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್ ಸಬ್ಸಿಡಿ, 12,577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ 363.68 ಕೋಟಿ ರೂಪಾಯಿ ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.
ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು. ಎನ್.ಡಿ.ಆರ್.ಎಫ್.ನಿಂದ 4663.12 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ.
ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದರು. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ
ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದರು. ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದ್ದರಿಂದ ಅಕ್ಟೋಬರ್ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್.ಡಿ.ಆರ್.ಎಫ್. ಅಡಿ 17,901.73 ಕೋಟಿ ರೂ. ಪರಿಹಾರ ಒದಗಿಸುವಂತೆ
ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ12,577.86 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್ ಪುಟ್ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟ ಮುಖ್ಯಮಂತ್ರಿಗಳು ರೈತರ ಹಿತರಕ್ಷಣೆಯ ದೃಷ್ಟಿಯಿಂದ ಪರಿಹಾರ ಬಿಡುಗಡೆ ಮಾಡುವಂತೆ ಮಾನ್ಯ ಪ್ರಧಾನ ಮಂತ್ರಿಗಳಿಗೆ ಕೋರಿದರು.
ಬೀಜ ಬಿತ್ತನೆ, ಎಡೆಕುಂಟೆ ಇದೀಗ ಸುಲಭ
ಬಾಡಿಗೆ ಬಿತ್ತನೆ ಯಂತ್ರ, ಗಣೇವು ಸಣ್ಣ ರೈತರಿಗೆ ದುಬಾರಿ. ಅಲ್ಲದೆ ಇದರಲ್ಲಿ ಬಿತ್ತಲು ಪದೇಪದೆ ಬಗ್ಗಿ ಏಳುವುದು ತ್ರಾಸು. ಜತೆಗೆ ಈ ವಿಧಾನದಲ್ಲಿ ಒಂದಕ್ಕಿಂತ ಹೆಚ್ಚು ಬೀಜಗಳು ಒಂದೇ ಕಡೆ ಭೂಮಿ ಸೇರುವ ಸಾಧ್ಯತೆಗಳಿವೆ. ಈ ಎಲ್ಲ ಸಮಸ್ಯೆ ಅರಿತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡಿನ ರೈತ ಗುರುಲಿಂಗಯ್ಯ ಹುಕ್ಕೇರಿಮಠ ಎರಡು ವರ್ಷದ ಹಿಂದೆ ತಮ್ಮದೇ ಕಲ್ಪನೆಯಲ್ಲಿ ಬೀಜ ಹಾಕುವ ಯಂತ್ರ ಆವಿಷ್ಕರಿಸಿದ್ದಾರೆ.
ಈಗ ಮಾರುಕಟ್ಟೆಯಲ್ಲಿ ಸಿಗುವ ಬೀಜ ಹಾಕುವ ಯಂತ್ರವನ್ನು ಇದು ಹೋಲುತ್ತದೆಯಾದರೂ ಆಸಲಿಯಾಗಿ ಅದಕ್ಕಿಂತ ಭಿನ್ನ. ಇದು ಹಗುರ ಸಾಧನವಾಗಿದ್ದು, ಬಳಸಬಹುದು. ಸುಲಲಿತವಾಗಿ ಒಂದೆಡೆಯಿಂದ ಮತ್ತೊಂದೆಡೆ ನಿರಾಯಾಸವಾಗಿ ಸಾಗಿಸಬಹುದು. ಹಾಗೆಯೇ ಬಿತ್ತನೆ ಮಾಡುವ ವ್ಯಕ್ತಿಯ ಎತ್ತರಕ್ಕೆ ತಕ್ಕಂತೆ ಯಂತ್ರವನ್ನು ಆಡಸ್ಟ್‌ಮೆಂಟ್ ಮಾಡಿಕೊಳ್ಳುವ ಸೌಲಭ್ಯವಿದೆ. ಇದರ ತಯಾರಿಕೆ ವೆಚ್ಚ 1500 ರೂ. ಇದರಿಂದ ಎಡೆಕುಂಟೆ ಹೊಡೆಯಲೂ ಸಾಧ್ಯ. ಆ ಪ್ರಕಾರ ಈ ಸಾಧನವನ್ನು ಅವರು ವಿನ್ಯಾಸ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 8749060723.
ಪರಿಸರ ಸ್ನೇಹಿ ಕೃಷಿಯ ಬಗ್ಗೆ ಆಸಕ್ತಿಯಿದೆಯೇ
ಆತ್ಮೀಯರೇ, ಪರಿಸರ ಸ್ನೇಹಿ ಕೃಷಿಯ ಬಗ್ಗೆ ಆಸಕ್ತಿಯಿದೆಯೇ ? ತೋಟ ಮಾಡುವ ತುಡಿತವಿದೆಯೇ ? ಕೃಷಿಯನ್ನು ಪ್ರಮುಖ ಉದ್ಯೋಗವನ್ನಾಗಿಸಿಕೊಂಡು ಆದಾಯ ಪಡೆಯುವ ಹಂಬಲವಿದೆಯೇ ? ಕೃಷಿಯ ಪ್ರಾಮುಖ್ಯತೆ ಮತ್ತು ಅದರ ಇತಿಮಿತಿ ಅರಿತುಕೊಳ್ಳಬೇಕೆ? ಮಣ್ಣಿನ ಪ್ರಾಮುಖ್ಯತೆ ಮತ್ತು ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವ ಮಾಹಿತಿ ಬೇಕೆ? ಕೃಷಿಯಲ್ಲಿ ಖುಷಿ ಕಾಣುವ ಮಾರ್ಗದ ಹುಡುಕಾಟದಲ್ಲಿದ್ದೀರಾ ? ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ತಿಳಿಯಬೇಕೆ? ವಿಷಮುಕ್ತ ಕೃಷಿ ಉತ್ಪನ್ನಗಳನ್ನು ಬೆಳೆಯಲು ತಗಲುವ ಬಜೆಟ್ ಮತ್ತು ಮಾರುಕಟ್ಟೆ ನಿರ್ವಹಣೆಯ ತಾಂತ್ರಿಕ ಮಾಹಿತಿ ತಿಳಿಯಬೇಕೆ ? ಹವಾಮಾನ ವೈಪರೀತ್ಯದಿಂದ ಕೃಷಿ ವಲಯದ ಮೇಲೆ ಬೀಳುತ್ತಿರುವ ಹೊರೆ ಬಗ್ಗೆ ತಿಳಿದಿದೆಯೇ ? ಹವಾಮಾನ ಬದಲಾವಣೆ ನಿಟ್ಟಿನಲ್ಲಿ ನಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆ ಮಾಡಿಕೊಳ್ಳಲು ಸಿದ್ದರಿದ್ದೀರಾ?
ಹಾಗಾದರೆ, ನಿಮ್ಮಗೆ ಆತ್ಮೀಯ ಆಹ್ವಾನ……
ಮೈಸೂರಿನ ಪರಿಸರ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ *’ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ”* ವಿಚಾರವಾಗಿ ನಾಲ್ಕು ದಶಕಗಳ ಕಾಲ ಮಣ್ಣು ಮತ್ತು ಕೃಷಿಯೊಂದಿಗೆ ಅನುಭವವಿರುವ ಸಾಧಕರೊಂದಿಗೆ ಮಾತುಕತೆ ಏರ್ಪಡಿಸಲಾಗಿದೆ.
ನಮ್ಮೊಂದಿಗೆ ಮಾತುಕತೆ ನಡೆಸುವ ಸಾಧಕರು:
ಡಾ ರಾಮಕೃಷ್ಣಪ್ಪ ಅಧ್ಯಕ್ಷರು,ಬೆಳವಲ ಪರಿಸರ ಕೇಂದ್ರ,ಮೈಸೂರು. ಡಾ ಚಂದ್ರಶೇಖರ ಇಂದ್ರಪ್ರಸ್ಥ ಸಾವಯವ ಕೃಷಿ ತೋಟ,ಮೈಸೂರು. ಶ್ರೀ ಶಿವಾನಂಜಯ್ಯ ಬಾಳೇಕಾಯಿ,ಸಹಜ ಕೃಷಿಕರು, ತುಮಕೂರು.
ಯಾವಾಗ:24/12/2023, ಭಾನುವಾರ.
ಸಮಯ:ಬೆಳ್ಳಗೆ 10 ರಿಂದ ಮದ್ಯಾಹ್ನ 3.30 ರ ವರಗೆ.
ಎಲ್ಲಿ:ಜೆ ಎಸ್ ಎಸ್ ಮಹಿಳಾ ಕಾಲೇಜು ಸಭಾಂಗಣ, ಸರಸ್ವತಿಪುರಂ,ಮೈಸೂರು.
ರೈತರು,ರೈತ ಮಹಿಳೆಯರು,ಯುವಕ/ಯುವತಿಯರು, ಪರಿಸರ ಪ್ರೇಮಿಗಳು,ತಮ್ಮ ಹೆಸರುಗಳನ್ನು ಮೊದಲೇ ನೋಂದಾಯಿಸಲು ಕರೆ ಮಾಡಲು ಮನವಿ.
ಸಂಪರ್ಕಿಸಿ– ಶ್ರೀ ಗಂಟಯ್ಯ : 9538732852 ಶ್ರೀ ಅವಿನಾಶ್:8197856132. ವಂದನೆಗಳೊಂದಿಗೆ, ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು.
ಉದ್ಯೋಗ ಹುಡುಕುತ್ತಿರುವ ವಿಕಲಚೇತನರಿಗೆ (ಅಂಗವಿಕರಿಗೆ) ಸುವರ್ಣ ಅವಕಾಶ
ಕೆಲವೇ ಸೀಟುಗಳು ಲಭ್ಯ. ಹೊಸೂರಿನಲ್ಲಿರುವ ಭಾರತದ ಮೊದಲ ಫೋನ್ ಉತ್ಪಾದನಾ ಘಟಕವನ್ನು ಸೇರಿ:
ವಿವರಗಳು:
1. ಅನುಭವ: ಫ್ರೆಶರ್ಸ್ ಮತ್ತು ಅನುಭವಿ.
2. ವಿದ್ಯಾರ್ಹತೆ: 10ನೇ, 12ನೇ, ಡಿಪ್ಲೊಮಾ, ಯಾವುದೇ ಪದವಿ.
3. ವಯಸ್ಸು: 18-35 ವರ್ಷಗಳು.
4. ಲಿಂಗ: ಸ್ತ್ರೀ/ಪುರುಷ.
5. ಸಂಬಳ: ರೂ. 14,000/- ತಿಂಗಳಿಗೆ. + ಪ್ರಯೋಜನಗಳು.
6. ಕೆಲಸದ ದಿನಗಳು: ವಾರಕ್ಕೆ 6 ದಿನಗಳು.
7. ಸ್ಥಳ: ಹೊಸೂರು.
ಸೂಚನೆ:-
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಕರೆ:- 7795485585. ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು VRWಗಳ ಮತ್ತು ಸಂಘ ಸಂಸ್ಥೆಗಳ ಶ್ರಮ ತುಂಬಾ ಮುಖ್ಯವಾಗಿದೆ. ಏಕೆಂದರೆ ನೀವು ಸರಿಯಾಗಿ ಮಾಹಿತಿ ನೀಡುತ್ತಿರುವುದರಿಂದ ನೂರಾರು ವಿಕಲಚೇತನರಿಗೆ ಉದ್ಯೋಗ ಸಿಗಲು ಸಾಧ್ಯವಾಗಿದೆ. ಹಾಗಾಗಿ ಅವರಿಗೆ ಉಪಯುಕ್ತ ಮಾಹಿತಿ ಇರುವುದರಿಂದ ತಾವೆಲ್ಲರೂ ತಮ್ಮ ಗ್ರೂಪ್ತಳಿಗೆ ಶೇರ್ ಮಾಡಿ.