ಆತ್ಮೀಯ ರೈತ ಮಿತ್ರರೇ ಇಲ್ಲಿದೆ ನಿಮಗೆ ಸಿಹಿ ಸುದ್ದಿ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವು ಹಾಗೂ ರೇಷ್ಮೆ ಇಲಾಖೆ ಪ್ರೋತ್ಸಾಹದಿಂದ ತಾಲೂಕಿನಲ್ಲಿ ಹಿಪ್ಪನೇರಳೆಯನ್ನು ಬೆಳೆದು ರೇಷ್ಮೆ ಸಾಕಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನರೇಗಾ ಯೋಜನೆಯಡಿ ರೇಷ್ಮೆಕೃಷಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಆದಕಾರಣ ಇದರ ರೈತರು ಸದುಪಯೋಗ ಪಡೆಸಿಕೊಳ್ಳಬೇಕು. ಆದಕಾರಣ ಈ ಲೇಖನವನ್ನು ಸರಿಯಾಗಿ ಓದಿ.
ಸಾಮಾನ್ಯ ಮತ್ತು SC ST ಅವರಿಗೆ ಏಷ್ಟು ಸಹಾಯಧನ?
ಮಹಾತ್ಮ ಗಾಂಧಿ ನರೇಗಾ ಯೋಜನೆನಯ ಅಡಿ 2022-23 ನೇ ಸಾಲಿ ನಲ್ಲಿ ರೈತರಿಗೆ 1 ಲಕ್ಷ ರೂ ಸಹಾಯಧನ ನೀಡಲಾಗಿದೆ.” ರೇಷ್ಮೆ ಕೃಷಿಕರು 1 ಎಕರೆ ಭೂಮಿ ಇದ್ದರೆ, 600 ಚದರ ಅಡಿ ಮನೆ ನಿರ್ಮಿಸ ಬಹುದು. ಸಾಮಾನ್ಯ ವರ್ಗದವರಿಗೆ ರೂ. 2.25 ಲಕ್ಷ ಹಾಗೂ ಎಸ್.ಸಿ(SC), ಎಸ್.ಟಿ(ST)ಗಳಿಗೆ ರೂ.2.50 ಲಕ್ಷರೂ ಸಹಾಯಧನದ ನೆರವು ಸಿಗಲಿದೆ. ರೇಷ್ಮೆ ಹುಳು ಸಾಕಾಣಿಕೆ ಸಲಕರಣೆ ಗಳಿಗೆ ಶೇ.70ರಷ್ಟು ಸಹಾಯಧನ ಸೌಲಭ್ಯ ಸಿಗಲಿದೆ ಎಂದು ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ತಿಳಿಸಿದ್ದಾರೆ. ರೈತರಿಗೆ 1 ಲಕ್ಷ ರೂ ಸಹಾಯಧನ ನೀಡಲಾಗಿದೆ. ಇಟಗಿ ಗ್ರಾಮದ 6 ಜನ ರೈತರು ಹೊಸದಾಗಿ ಹಿಪ್ಪುನೇರಳೆ ಮಾಡಿದ್ದಾರೆ. ಈರಯ್ಯ ಬಸಯ್ಯ ಕೂಡ ಇವರಿಗೆ ರೇಷ್ಮೆ ಹುಳು ಸಾಕಾಣಿಕೆ, ಮನೆಗೆ ಸಹಾಯಧನ ರೂ. ಲಕ್ಷ ನೀಡಲಾಗಿದೆ. 6 ಜನ ರೇಷ್ಮೆ ಬೆಳೆ ಗಾರರು ತಾತಾತ್ವಿಕ ಶೆಡ್ ನಿರ್ಮಾಣ ಮಾಡಿದ್ದು, ಅದರಲ್ಲಿ ಮೂರು ಜನರು
ಇಟಗಿ ಗ್ರಾಮದ ಯುವ ರೈತ ಗುರಪ್ಪ ಅಮರಪ್ಪ ಮಸಬಿನಾಳ, ಈರಯ್ಯ ಬಸಯ್ಯ ಕೂಡಗಿ ಮತ್ತು ಇತರ 15 ಜನ ರೇಷ್ಮೆ ಬೆಳೆಗಾರರು ಒಪ್ಪು ನೇರಳೆ ಬೆಳೆಯುತ್ತಾರೆ. ರೇಷ್ಮೆ ಹುಳು ಸಾಕಣೆ ಮಾಡುತ್ತಾ, ಗೂಡು ಉತ್ಸಾ ಬಸುವ ಮೂಲಕ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಸೇರಿ ಒಟ್ಟು ಇಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 32 ಎಕರೆಯಲ್ಲಿ ಎ-1 ತಳಿಯ ಹಿಪ್ಪನೇರಳೆ ಬೆಳೆಯುತ್ತಿದ್ದಾರೆ. ಈ ತಳಿಯ ಒಂದು ಎಕರೆಯಲ್ಲಿ 30 ಸಾವಿರ ಕೆಜಿವರೆಗೆ ಸೊಪ್ಪು ಕೊಡುತ್ತದೆ. ಎರಡು ವರ್ಷಗಳಿಂದ ಗ್ರಾಮದ 15 ಜನ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ಬೆಳೆಸಿ.ಹುಳು ಮೇಯಿಸಿ, ಮಟ್ಟದ ರೇಷ್ಮೆ ಗೂಡಗಳನ್ನು ಉತ್ತಾದಿ ಸುತ್ತಿದ್ದಾರೆ. 5400 ಮೊಟ್ಟೆಗಳನ್ನು ಸಾಕಾಣೆ ಮಾಡಿ 4080 ಕೆಜಿ ರೇಷ್ಮೆ ಉತ್ಪಾದನೆ ಮಾಡಿಕೊಂಡಿದ್ದಾರೆ, ಪ್ರಸುತ್ತ ಮಾರುಕಟ್ಟೆಯಲ್ಲಿ ಪ್ರತಿ ರೂ.605 ದರ ಇದೆ.
ಪಿಯುಸಿವರೆಗೆ ಓದಿರುವ ಇಟಗಿ ಗ್ರಾಮದ ಯುವ ರೈತ ಗುರಪ್ಪ ಅಮರಪ್ಪ ಮಸಬಿನಾಳ, ಮೊದಲು ಜಮೀನಿನಲ್ಲಿ ಕಬ್ಬು,ಈರುಳ್ಳಿ, ಮೆಕ್ಕೆಜೋಳ ಬೆಳೆಯುತ್ತಿದ್ದೇವು.ಆದರೆ, ಈಗ ನರೇಗಾ ಸೌಲಭ್ಯದೊಂದಿಗೆ ರೇಷ್ಮೆ ಕೃಷಿ ಮಾಡುತ್ತಿರುವೆ, ಕೂಲಿ ರೂಪದಲ್ಲಿ ನಾನು, ಪತ್ನಿ ಮತ್ತು ತಂದೆ, ತಾಯಿಯವರು ಉದ್ಯೋಗ ಪಡೆದಿದ್ದೇವೆ. ನರೇಗಾ ಯೋಜನೆಯಡಿ ರೇಷ್ಮೆಕೃಷಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ತಾಲ್ಲೂಕಿನ ರೈತರು ಸದುಪಯೋಗ ಪಡೆಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕ್ ಪಂಚಾಯಿತಿಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿರಿ.
ಇದನ್ನೂ ಓದಿ :- ಬೆಳೆ ಸಮೀಕ್ಷೆಯ ವಿವರಗಳನ್ನು ತಪ್ಪಾಗಿ ನೀಡಿರುವಿರೆ? ಅದನ್ನೂ ಸರಿ ಪಡಿಸೋದು ಹೇಗೆ?
ಇದನ್ನೂ ಓದಿ :- ಅಟಲ್ ಪಿಂಚಣಿ ಯೋಜನೆ ಬಳಸಿ ಮತ್ತು 5000 ಪಿಂಚಣಿ ಪಡೆಯಿರಿ
ಇದನ್ನೂ ಓದಿ :- ಕೇವಲ ಒಂದು ಕರೆ ಮಾಡಿದರೆ ಸಾಕು ಟ್ರಾಕ್ಟರ್ ಸಬ್ಸಿಡಿಯನ್ನು ಪಡೆಯುತ್ತೀರಿ