ನಮ್ಮ ತಾಯಿಯ ಕೆನರಾ ಬ್ಯಾಂಕ್ ಖಾತೆಗೆ ನಿನ್ನೆ ಮಧ್ಯಾಹ್ನ 4:00ಗೆ ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣವು ಜಮಾ ಆಗಿದೆ. ನೀವು ಕೆಳಗಿನ ಚಿತ್ರದಲ್ಲಿ ನೋಡಬಹುದು ಜಮಾ. ಆಗಿರುವುದನ್ನುYour a/c XXXX CREDITED with INR 2,000.00 on 10/08/2024. Avail.bal INR XXXX Canara Bank
ನಿಮ್ಮ ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://play.google.com/store/apps/details?id=com.dbtkarnataka
ನಿಮ್ಮ ಮುಂದೆ DBT ಆಪ್ ಬರುತ್ತದೆ. ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ನೀವು ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ ಅದನ್ನು ಹಾಕಿ.
Name,Address as per e-KYC, Click Here to Change the Address, Gender, Date of Birth, Mobile Number ಎಲ್ಲವನ್ನು ಹಾಕಿ.
ಒಂದು MPIN ನನ್ನು ಜನರೇಟ್ ಮಾಡಿಕೊಳ್ಳಬೇಕು. ನಂತರ ಚಿತ್ರದಲ್ಲಿ ಕಾಣುವ ಹಾಗೆ payment status ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮುಂದೆ ನಿಮ್ಮ ಯಾವಾಗ ಜಮಾ ಆಗಿದೆ ಎಷ್ಟು ಹಣ ಜಮಾ ಆಗಿದೆ ಎಂದು ನೀವು ತಿಳಿದುಕೊಳ್ಳಬಹುದು.
11.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ:
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಸಂಜೆ, ರಾತ್ರಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಸಣ್ಣ ಪ್ರಮಾಣದ ಗುಡುಗು ಸಾಧ್ಯತೆಯೂ ಇದೆ ಉತ್ತರ ಕನ್ನಡ ಮೋಡ ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೋಡ ಹಾಗೂ ಸಂಜೆ, ರಾತ್ರಿ ಅಲ್ಲಲ್ಲಿ ಮಳೆಯ ಮುನ್ಸೂಚೆನೆ ಇದೆ. ಗುಡುಗು ಸಾಧ್ಯತೆಯೂ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಒಂದೆರಡು ಕಡೆ ಸಾಮಾನ್ಯ ಮಳೆಯ ಸಾಧ್ಯತೆಯೂ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮುಂಗಾರು ದುರ್ಬಲತೆ ಮುಂದುವರಿಯಲಿದ್ದು, ಈಗಿನಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯು ಮುಂದಿನ 10 ದಿನಗಳವರೆಗೂ ಮುಂದುವರಿಯುವ ಲಕ್ಷಣಗಳಿವೆ. ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಭಾಗಗಳಲ್ಲಿಯೂ ಸಂಜೆಯ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ನಿಮ್ಮ ಹೊಲದಲ್ಲಿ ಮೆಲ್ಟಿಂಗ್ ದಿಂದಾಗುವ ಪ್ರಯೋಜನಗಳು
ಮೆಲ್ಟಿಂಗ್ ಎನ್ನುವುದು ಒಂದು ಸುಸ್ಥಿರ ಕೃಷಿ ಪದ್ಧತಿಯಾಗಿದ್ದು, ಸಸ್ಯದ ಅವಶೇಷಗಳು, ಎಲೆಗಳು, ಒಣಹುಲ್ಲಿನ ಅಥವಾ ಕೃಷಿ ತಾಜ್ಯಗಳಂತಹ ಸಾವಯವ ವಸ್ತುಗಳ ಪದರದಿಂದ ಮಣ್ಣನ್ನು ಮುಚ್ಚುವುದನ್ನು ಒಳಗೊಂಡಿರುತ್ತದೆ. ಮಲ್ಲಿಂಗ್ ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಅನುಕರಿಸುತ್ತದೆ. ಅಲ್ಲಿ ಸಸ್ಯದ ಅವಶೇಷಗಳು ಮತ್ತು ಸಾವಯವ ಪದಾರ್ಥಗಳು ಮಣ್ಣಿನ ಮೇಲೆಯಲ್ಲಿ ಸಂಗ್ರಹಗೊಳ್ಳುತ್ತವೆ. ಆರೋಗ್ಯಕರ ಮತ್ತು ಅಭಿವೃದ್ಧಿ ಹೊಂದುತ್ತಿರುವ ಮಣ್ಣಿನ ಪರಿಸರವನ್ನು ಉತ್ತೇಜಿಸುತ್ತದೆ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಮಣ್ಣಿನ ತಾಪಮಾನ ನಿಯಂತ್ರಣ
ಮಲ್ಫ್ ಒಂದು ಅವಾಹಕವಾಗಿ ಕಾರ್ಯನಿರ್ವಹಿಸುತ್ತದೆ, ಮಣ್ಣಿನ ಉಷ್ಣತೆಯ ಏರಿಳಿತಗಳನ್ನು ಕಡಿಮೆ ಮಾಡುತ್ತದೆ ಮತ್ತು ಸೂಕ್ಷ್ಮ ಜೀವಿಯ ಚಟುವಟಿಕೆ ಮತ್ತು ಬೇರಿನ ಬೆಳವಣಿಗೆಗೆ ಸೂಕ್ತವಾದ ತಾಪಮಾನ ನಿರ್ವಹಿಸುತ್ತದೆ.
ಮಣ್ಣಿನ ತೇವಾಂಶ ಸಂರಕ್ಷಣೆ
ಮಲ್ಸ್ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅವಿಯಾಗುವಿಕೆ ಮತ್ತು ಹರಿವನ್ನು ಕಡಿಮೆ ಮಾಡುತ್ತದೆ ಹಾಗೂ ಸಸ್ಯಗಳು ಸ್ಥಿರವಾದ ನೀರಿನ ಪೂರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ಕಳೆ ನಿಗ್ರಹ
ಮಲ್ಸ್ ಬೆಳಕನ್ನು ತಡೆಯುವ ಮೂಲಕ ಕಳೆ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಬೀಜ ಮೊಳಕೆಯೊಡೆಯುವುದನ್ನು ತಡೆಯುತ್ತದೆ. ನೀರು ಮತ್ತು ಪೋಷಕಾಂಶಗಳಿಗೆ ಸ್ಪರ್ಧೆಯನ್ನು ಕಡಿಮೆ ಮಾಡುತ್ತದೆ.
ಮಣ್ಣಿನ ಸವೆತ ತಡೆಗಟ್ಟುವಿಕೆ
ಮಣ್ಣನ್ನು ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಗಾಳಿ ಅಥವಾ ನೀರಿನ ಹರಿವಿನಿಂದ ಸವೆತ ಮತ್ತು ಮಣ್ಣಿನ ನಷ್ಟ ತಡೆಯುತ್ತದೆ.
ಅದಕ್ಕಾಗಿ ರೈತರು ಮಣ್ಣಿನ ಆರೋಗ್ಯವನ್ನು ಉತ್ತೇಜಿಸಲು, ಪರಿಸರದ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಕೃಷಿಯನ್ನು ಬೆಂಬಲಿಸಲು ಮಲ್ಡಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಕ್ರಮವಾಗಿದೆ. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ (ಸಾಮಾನ್ಯ ಕೋರ್ಸಿನ ವಿದ್ಯಾರ್ಥಿಗಳಿಗೆ) ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಸಾಮಾನ್ಯ ಪದವಿ ಕೋರ್ಸಿನ ಪ್ರವರ್ಗ-1, 2ಎ, 2ಬಿ, 3ಎ,3 ಬಿ, ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳಿಗೆ 2024- 25ನೇ ಸಾಲಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ : ಪ್ರವರ್ಗ-1 ಎಸ್.ಸಿ ಮತ್ತು ಎಸ್.ಟಿ ರೂ.2.50 ಲಕ್ಷ ಇರಬೇಕು. ಪ್ರವರ್ಗ 2ಎ, 2ಬಿ, 3ಎ,3 ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆರೂ.1.ಲಕ್ಷ ಇರಬೇಕು. ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಆ.9, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.
ಹೊಸ ಅರ್ಜಿಗಳನ್ನು ತಾಲೂಕು ಕಲ್ಯಾಣಾಧಿಕಾರಿಗಳು ಪರಿಶೀಲನೆ ಮಾಡಲು ಸೆ.6 ಅಂತಿಮ ದಿನವಾಗಿದೆ. ತಾಲೂಕು ಸಮಿತಿಯ ಮೂಲಕ ಆಯ್ಕೆಯಾದ ಹೊಸ ವಿದ್ಯಾರ್ಥಿಗಳ ಆಯ್ಕೆಪಟ್ಟಿಯನ್ನು ಸೆ. 11ರಂದು ಪ್ರಕಟಣೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಸೆ.17ರಂದು ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು https://shp.karnataka.gov.in/bcwd ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bcwdhelpline@gmail.com ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಥವಾ ತಾಲೂಕು ಅಧಿಕಾರಿಗಳು ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಸಹಾಯವಾಣಿ ಸಂಖ್ಯೆ 8050770004 2 8050770005 में ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಿಜಿಯೋಥೆರಪಿಸ್ಟ್, ಆಯಾ ಹುದ್ದೆಗಳು : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
2024-25ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆಯ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊಸಪೇಟೆ ತಾಲ್ಲೂಕಿನಲ್ಲಿ ವಿಕಲಚೇತನ ಮಕ್ಕಳಿಗಾಗಿ ಫಿಜಿಯೋಥೆರಪಿಸ್ಟ್ ಮತ್ತು ಆಯಾ ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 16ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಅರ್ಹತೆಗಳು: ಫಿಜಿಯೋಥೆರಪಿಸ್ಟ್ ಹುದ್ದೆಗೆ ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಅಥವಾ ಡಿಪ್ಲೋಮಾ ಇನ್ ಫಿಜಿಯೋಥೆರಪಿಯಲ್ಲಿ ಪದವಿ ಪಡೆದಿರಬೇಕು. ಆಯಾ ಹುದ್ದೆಗೆ ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು. ಆಸಕ್ತರು ಆಗಸ್ಟ್ 16ರೊಳಗೆ ಹೊಸಪೇಟೆಯ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿ.ಆರ್.ಸಿ)ದಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಅಂಚೆಯ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ. ಆಗಸ್ಟ್ 17ರಂದು ಹೊಸಪೇಟೆಯ ಬಿ.ಆರ್.ಸಿ. ಕೇಂದ್ರದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನದ ಭೇಟಿಗೆ ಯಾವುದೇ ಸಾರಿಗೆ ಭತ್ಯೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9480695078 ಗೆ ಸಂಪರ್ಕಿಸಬಹುದು ಎಂದು ಹೊಸಪೇಟೆಯ ಕ್ಷೇತ್ರ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಸ್ತಿ ಪಟುಗಳಿಂದ ಅರ್ಜಿ ಆಹ್ವಾನ
ಖೇಲೋ ಇಂಡಿಯಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಸಣ್ಣ ಖೇಲೋ ಇಂಡಿಯಾ ಕುಸ್ತಿ ತರಬೇತಿ ಕೇಂದ್ರದಲ್ಲಿ ತರಬೇತಿದಾರರಾಗಿ ಆಯ್ಕೆ ಮಾಡಲು ಅರ್ಹ ಕುಸ್ತಿ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗೌರವ ಧನ ಆಧಾರದ ಮೇಲೆ ಕಾರ್ಯನಿರ್ವಹಿಸಲು ಕುಸ್ತಿ ಕ್ರೀಡೆಯಲ್ಲಿ ಹಿಂದಿನ ಚಾಂಪಿಯನ್ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಆಸಕ್ತ ಕುಸ್ತಿ ಕ್ರೀಡಾಪಟುಗಳು ಆ.26 ರೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಷರತ್ತುಗಳು: ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು. ಅರ್ಜಿದಾರರು 40 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪದಕ ವಿಜೇತರಾಗಿರಬೇಕು, ಯಾವುದೇ ವಿಶ್ವವಿದ್ಯಾಲಯದಿಂದ ಪದವಿ/ಬಿ.ಪಿ.ಎಡ್/ಎಂ.ಪಿ.ಎನ್/ ಎನ್.ಐ.ಎಸ್ ಪದವಿದರರಾಗಿರಬೇಕು. ಅರ್ಜಿದಾರರು ಕನಿಷ್ಠ 3 ವರ್ಷ ಕುಸ್ತಿ ತರಬೇತಿ ನೀಡಿದ ಅನುಭವ (ರಾಜ್ಯ/ರಾಷ್ಟ್ರ/ ಅಂತರರಾಷ್ಟ್ರ) ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ:0831-2950306 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಸಾಲ ಮಾಡದೇ ಸ್ವಾವಲಂಭಿಯಾಗಿ ಬದುಕಿ : ಸಂಗಮೇಶ ಸಗರ
ಮತ್ತೊಬ್ಬರನ್ನು ನೋಡಿ ಆಡಂಬರದ ಬದುಕು ಸಾಗಿಸುವುದಕ್ಕಿಂತ ಹಾಸಿಗೆ ಇದ್ದ ಷ್ಟು ಕಾಲು ಚಾಚಲು ಕಲಿಯಬೇಕು. ಸಾಲ ಇಲ್ಲದ ಬಾನ ಉಣ್ಣುವಂತಾಗಬೇಕು. ಆಧುನಿಕ ಜಗತ್ತಿನ ಈ ನಾಗಾಲೋಟದಲ್ಲಿ ದಿನೆ ದಿನೇ ಖರ್ಚುಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಕೇವಲ ಕೃಷಿ ಮಾತ್ರ ಮಾಡಿದರೆ ಸಾಲದು, ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ಮಾಡುತ್ತಾ ಆದ ರೊಂದಿಗೆ ಉಪಕಸುಬುಗಳಾದ ಹೈನುಗಾರಿಕೆ, ಮೀನುಗಾರಿಕೆ, ಜೇನುಸಾಕಾಣಿಕೆ, ಆಡು, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಾ ದಿನನಿತ್ಯ ಲಾಭ ಪಡೆಯುವಂತಾಗಬೇಕು ಅಂದಾಗ ಮಾತ್ರ ರೈತ ಆತ್ಮಹತ್ಯೆಯಂತಹ ಕೆಟ್ಟು ಪಿಡುಗುಗಳನ್ನು ಈ ಸಾಮಾಜದಲ್ಲಿ ತಡೆಯಬಹುದಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತ ನಾಡಿದರು.
ವಿಜಯಪುರ ತಾಲೂಕಿನ ಆಹೇರಿ (ಜಂಬಗಿ) ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಮಿ ಜಿಗಳು ಹಾಗೂ ಅತಿಥಿಗಳೊಂದಿಗೆ ದೀಪ ಬೆಳಗಿಸುವದ ರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ರೈತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಮಾತನಾಡಿದರು. ರೈತ ಸಂಘಟನೆ ಎನ್ನುವುದು 1970ರಲ್ಲಿ ಪ್ರೋ. ಎಂ.ಡಿ ನಂಜುಡಸ್ವಾಮಿ ಅವರ ನೇತೃತ್ವದಲ್ಲಿ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುತ್ತಾ ರೈತರಿಗಾಗುವ ಅನ್ಯಾಯ ಹಾಗೂ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಲಂಚ ಮುಕ್ತ ವಾದ ಸಮಾಜ ನಿರ್ಮಾಣ ಮಾಡಲು ಹಾಗೂ ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟಕಡೆಯ ಹಳ್ಳಿಯ ರೈತರಿಗೂ ಸಿಗುವಂತೆ ಮಾಡುವುದರ ಜೊತೆಗೆ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಿ ರೈತರನ್ನು ಸ್ವಾವಲಂಭಿಯಾಗಿ ಸ್ವತಂತ್ರವಾಗಿ ಬದುಕು ಕಟ್ಟಿ ಕೊಳ್ಳುವಂತೆ ಸದಾ ರೈತರ ಏಳಿಗೆಗಾಗಿ ಶ್ರಮ ವಹಿಸುತ್ತಾ ಬಂದಿದೆ ಎಂದರು.
ಕೊಡೆಕಲ್ಲದ ಪುರಾಣಿಕರಾದ ಬಸವ ರಾಜ ಅವರು ಮಾತನಾಡುತ್ತಾ ಇಡೀ ನಾಡಿಗೆ ಯಾವುದೇ ಫಲಾಪೇಕ್ಷೆ ಮಾಡದೇ ಎಲ್ಲರಿಗೂ ಅನ್ನ ನೀಡುತ್ತಿರುವ ಅನ್ನದಾತರ ಸೇವೆ ಘಣನೀ ಯವಾದದು. ಈ ಸಂಘಟನೆ ಇಂದು ಈ ಗ್ರಾಮದಲ್ಲಿ ಪ್ರಾರಂಭವಾಗಿ ಪ್ರತಿಯೊಬ್ಬ ರೈತರು ಕೂಡಾ ಇದರಲ್ಲಿ ಸದಸ್ಯರಾಗಿ ಯಾರೊಬ್ಬರಿಗಾದರೂ ಅನ್ಯಾ ಯವಾದರೂ ಎಲ್ಲರೂ ಕೂಡಿಕೊಂಡು ಹೋರಾಟ ಮಾಡುವದರೊಂದಿಗೆ ನ್ಯಾಯ ಕೊಡಿಸುವ ಕೆಲಸ ಮಡಬೇಕು ಎಂದರು. ಈ ವೇಳೆ ಆಹೇರಿಯ ಮಠದ ಚಿಲ್ಲಾ ಲಿಂಗ ಸ್ವಾಮಿಜಿ, ಓಂ ಶಾಂತಿಯ ಮಹಾ ದೇವಪ್ಪ ತೇಲಿ, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ಶಿಕ್ಷಕರಾದ ಜಕರಾಯ ಪೂಜಾರಿ, ನಿವೃತ್ತ ಶಿಕ್ಷಕರಾದ ಆತ್ಮಾನಂದ ಇಬ್ರಾಹಿಂಪುರ ಅವರು ಮಾತನಾಡಿದರು. ಶರಣಪ್ಪ ಸಾತಿಹಾಳ ನಿರೂಪಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ಜಿಲ್ಲಾ ಸಂಚಾಲ ಕರಾದ ಮಹಾಂತೇಶ ಮಮದಾಪುರ, ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಉಪಾಧ್ಯಕ್ಷ ರಾದ ಪ್ರಕಾಶ ತೇಲಿ, ಬಸವರಾಜ ಮಸೂತಿ, ಬಸವರಾಜ ಗಾಣಗೇರ, ನಾಗಠಾಣ ಹೋಬಳಿ ಅಧ್ಯಕ್ಷರಾದ ರಾಮಸಿಂಗ ರಜಪೂತ, ಆಹೇರಿ ಗ್ರಾಮ ಅಧ್ಯಕ್ಷರಾದ ಆತ್ಮಾನಂದ ಭೈರೋಡಗಿ, ಮಹಾದೇವ ವಾಲಿ, ಚಂದ್ರಾಮ ಬಿಸನಾಳ, ಜಯ ಸಿಂಗ ರಜಪೂತ, ಬಸವಂತ ತೇಲಿ, ಚನ್ನು ವಾಲಿ, ಬಸವರಾಜ ಮಸೂತಿ, ತುಕಾರಾಮ ಪೂಜಾರಿ, ಚಂದ್ರಾಮ ಬಿಸನಾಳ, ಬಸವರಾಜ ಬೈರೋಡಗಿ, ಸಿದ್ದಲಿಂಗ ಹತ್ತರಕಾಳ, ರಾಜಾಸಾ ನದಾಫ, ಸೇರಿದಂತೆ ನೂರಾರು ಜನ ಇದ್ದರು.