Breaking
Tue. Dec 17th, 2024

ನಮ್ಮ ತಾಯಿಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂ ಜಮಾ, ಸ್ಟೇಟಸ್ ಚೆಕ್

Spread the love

ನಮ್ಮ ತಾಯಿಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಜಮಾ ಆಗಿದೆ.

ನಿಮ್ಮ ಗೃಹಲಕ್ಷ್ಮಿ ಹಣದ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊದಲ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಮೇಲೆ ಆ ಆ್ಯಪ್ ಡೌನ್ಲೋಡ್ ಮಾಡ್. ನಂತರ ಓಪನ್ ಮಾಡಿ.

https://play.google.com/store/apps/details?id=com.dbtkarnataka

ಆಮೇಲೆ ನಿಮಗೆ ಬೇಕಾದ Select Beneficiary, Enter mPIN (Secure Code) ಅನ್ನು ಹಾಕಿ login ಮಾಡಿ. ಆಮೇಲೆ Name, Address as per e-KYC, Click Here to Change the Address, Gender, Date of Birth, Mobile Number ಹಾಕಿ.

ಆಮೇಲೆ Payment Status, Seeding Status of Aadhar in Bank Account, Profile, Contact ನೋಡಬಹುದು. ಅಲ್ಲಿ Payment Status ನಲ್ಲಿ ನಿಮ್ಮ ಸಂಪೂರ್ಣ್ ಸ್ಟೇಟಸ್ ನೋಡಬಹುದು.

ಆಮೇಲೆ ಅಲ್ಲಿ ಫಲಾನುಭವಿಯು ಫಲಶೃತಿಯನ್ನು ಪಡೆದಿರುವ ಯೋಜನೆಗಳು
1) ರೈತ ಶಕ್ತಿ
2) ಗೃಹಲಕ್ಷ್ಮಿ
3) ಬೆಳೆ ನಷ್ಟಕ್ಕೆ ಇನ್ಸುಟ್ ಸಬ್ಸಿಡಿ
4) ಕನಿಷ್ಠ ಬೆಂಬಲ ಬೆಲೆ

ಅಲ್ಲಿ ಗೃಹಲಕ್ಷ್ಮಿ ಯೋಜನೆ ಆಯ್ಕೆ ಮಾಡಿ ಆಗ ನಿಮ್ಮ ಮುಂದೆ ಸಂಪೂರ್ಣ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

ಬರ ನಿರ್ವಹಣೆ ಗಂಭೀರತೆ ಅರಿತು ಸಮರ್ಥವಾಗಿ ನಿಭಾಯಿಸಿ

ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬರನಿರ್ವಹಣೆ ಗಂಭೀರತೆಯನ್ನು ಅರಿತು ಸಮರ್ಥವಾಗಿ ನಿಭಾಯಿಸಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಪ್ರಥಮಾದ್ಯತೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ವಾರಕ್ಕೊಂದು ಸಲ ಬರನಿರ್ವಹಣೆ ಕುರಿತು ಸಭೆ ಜರುಗಿಸಬೇಕು.

ಸಭೆಯಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡಲು ಆದ್ಯತೆ ಗ್ರಾಮಗಳಲ್ಲಿ ಬೊರ್‌ವೆಲ್ ಕೊರೆಸುವ ಬದಲಾಗಿ ಖಾಸಗಿ ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆ ಇದ್ದಲ್ಲಿ ಅವರಿಂದ ನೀರನ್ನು ಪಡೆಯಲು ಮುಂದಾಗಬೇಕು. ಹತ್ತಿರದಲ್ಲಿ ನೀರಿನ ಲಭ್ಯತೆ ಇಲ್ಲದಿದ್ದರೆ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದರು. ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ವಾಲ್‌ಮನ್ಗಳ ಸಭೆ ಕರೆದು ನೀರಿನ ಅಪವ್ಯಯವಾಗದಂತೆ ನಿಗಾವಹಿಸಲು ಸೂಚನೆ ನೀಡಬೇಕು. ನೀರನ್ನು ವೃಥಾಕಾರಣ ವ್ಯರ್ಥ ಮಾಡದೇ ಮಿತವಾಗಿ ಬಳಸುವಂತೆ ಜೀವಜಲದ ಮಹತ್ವ ಕುರಿತು ರೈತರು ಸೇರಿದಂತೆ ಸಾರ್ವಜನಿಕರಿಗೆ ತಿಳಿಹೇಳಬೇಕು ಎಂದರು.

ಪರಿಹಾರ ವಿತರಣೆ

ಜಿಲ್ಲೆಯಲ್ಲಿ 2023 ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ (ಬರಗಾಲದಿಂದ) ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿಗೆ 113778 ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂ. ಗಳಂತೆ ಒಟ್ಟು 22,41,78,565 ರೂ. ಪರಿಹಾರ ವಿತರಿಸಲಾಗಿದೆ. ತಾಲೂಕಾವಾರು ಫಲಾನುಭವಿಗಳ ವಿವರ ಇಂತಿದೆ: ನರಗುಂದ ತಾಲೂಕಿನಲ್ಲಿ 25988, ಮುಂಡರಗಿ 12905, ಗಜೇಂದ್ರಗಡ 17325.

ಬರ ಅನುದಾನದ ವಿವರ

ಬರ ನಿರ್ವಹಣೆಗಾಗಿ ಸರ್ಕಾರ ಅನುದಾನ ನೀಡಿದ್ದು ಅಗತ್ಯಕ್ಕನುಸಾರ ಬಳಕೆ ಮಾಡಿಕೊಳ್ಳಲು ఈ ಕೆಳಕಂಡಂತೆ ಅನುದಾನ ಲಭ್ಯವಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 2421.01 ಲಕ್ಷ ರೂ ಅನುದಾನ ಬರ ನಿರ್ವಹಣೆಗಾಗಿ ಲಭ್ಯವಿದ್ದು ತಾಲೂಕುವಾರು ಎಲ್ಲ ತಹಶೀಲ್ದಾರರ ಖಾತೆಯಲ್ಲಿ ಒಟ್ಟಾರೆ 274.74 ಲಕ್ಷ ರೂ.ಅನುದಾನ ಲಭ್ಯವಿದ್ದು, ತಾಲೂಕುವಾರು ವಿವರ. -41.81 ಗಜೇಂದ್ರಗಡ-21.06. ಲಕ್ಷೇಶ್ವರ- 7.53, ಮುಂಡರಗಿ-52.05, ನರಗುಂದ- 67.64.

ಕುಡಿಯುವ ನೀರಿನ ಸಮರ್ಪ

ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಯನ್ನು ಇರುವ ನೀರಿನ ಲಭ್ಯತೆಗನುಸಾರ ಅಧಿಕಾರಿಗಳು ಹಂಚಿಕೆ ಮಾಡಿ ಬರನಿರ್ವಹಣೆ ಮಾಡಬೇಕು.ಯಾವುದೇ ಕಾರಣಕ್ಕೂ ಅಧಿಕಾರಿಗಳು ಬರನಿರ್ವಹಣೆಯಲ್ಲಿ ನಿಷ್ಕಾಳಜಿ ಹಾಗೂ ನಿಧಾನಗತಿ ಕಾರ್ಯವನ್ನು ಸಹಿಸಲಾಗದು. ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಡಿಸಿ ವೈಶಾಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಹೇಳಿದ್ದಾರೆ. ಹೊಸದಾಗಿ ಬೋ‌ರ್ ವೆಲ್ ಕೊರೆಸಲು ಗುರುತಿಸಿದ ಪ್ರದೇಶಗಳ ಮಾಹಿತಿ, ಪೈಪ್‌ಲೈನ್ ದುರಸ್ತಿಗೆ ಸಂಬಂಧಿಸಿದ ವಿವರವಾದ ವರದಿಯನ್ನು ವಾಟ್ಸ್‌ಆಪ್ ಮುಖಾಂತರ ಸಲ್ಲಿಸಬೇಕು.

ತಮ್ಮ ಹಂತದಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ಸೂಚಿಸಿದಂತೆ ನದಿ ದಡದಲ್ಲಿ ಹಾಗೂ ಕೆರೆಗಳಲ್ಲಿನ ನೀರನ್ನು ರೈತರು ತಮ್ಮ ಬೆಳೆಗಳಿಗೆ ದೋಟರ್ ಮೂಲಕ ನೀರೆತ್ತುವುದನ್ನು ತಡೆಯಬೇಕು. ಅದಕ್ಕಾಗಿ ಈಗಾಗಲೇ ಶಿರಹಟ್ಟಿ, ಲಕ್ಷ್ಮೀಶ್ವರ ಹಾಗೂ ಮುಂಡರಗಿಯಲ್ಲಿ ಪೊಲೀಸ ಇಲಾಖೆಯ ಜಿಲ್ಲಾ ಮೀಸಲು ಪಡೆಯ ತುಕಡಿಯನ್ನು ತಾಲೂಕುವಾರು ನೀಡಲಾಗಿದೆ. ಅವುಗಳನ್ನು ಬಳಸಿಕೊಂಡು ರೈತರ ನೀರೆತ್ತುವ ಪಂಪ್ ಸೆಟ್‌ಗಳನ್ನು ತೆರವುಗೊಳಿಸಬೇಕು. ಇನ್ನೂ ಹೆಚ್ಚಿನ ಪೊಲೀಸ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು.

ಮೇವು ಬ್ಯಾಂಕ್

ಜಾನುವಾರುಗಳಿಗೆ ಮೇವಿನ ಅಭಾವ ತಲೆದೂರದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯ 11 ಗ್ರಾಮಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಅವುಗಳೆಂದರೆ ಗದಗ ತಾಲೂಕಿನ ಬಿಂಕದಕಟ್ಟಿ, ಅಂತರ್ಜಲ ಮಟ್ಟ ಬರಗಾಲದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಆಧೋಗತಿಗೆ ಸಾಗಿದ್ದು ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಅಧಿಕ ಆಗಬಹುದಾಗಿದೆ.ಶಿರಹಟ್ಟಿ -13.58 ಮೀಟರ್, ಲಕ್ಷೇಶ್ವರ – 19.60 ಮೀಟರ್, ರೋಣ- 13.07 ಮೀಟರ್, ಗಜೇಂದ್ರಗಡ- 20.97 ಮೀಟರ್, ನರಗುಂದ – 8.40 ಮೀಟರ್.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ರಾಕೋಡ್ , ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಡಿ.ಎಚ್.ಓ. ಡಾ.ವೆಂಕಟೇಶ ನಾಯ್ಕ, ತಿಂಗಟಾಲೂರು ಏತನೀರಾವರಿ ಕಾರ್ಯನಿರ್ವಾಹಕ ಆರ್.ಎ.ಗೌಡ ಸೇರಿದಂತೆ ಆಯಾ ತಾಲೂಕುಗಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರುಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Related Post

Leave a Reply

Your email address will not be published. Required fields are marked *