Breaking
Fri. Dec 20th, 2024

2023-24 ಮುಂಗಾರು ಬೆಳೆ ಸಮೀಕ್ಷೆ ಮಾಡುವ ಆ್ಯಪ್ ಬಿಡುಗಡೆಯಾಗಿದೆ

By mveeresh277 Jun22,2023 #crop survey
Spread the love

ಆತ್ಮೀಯ ರೈತ ಬಾಂಧವರೇ ರೈತರ ಆ್ಯಪ್-2023 ಬಿಡುಗಡೆಯಾಗಿದ್ದು ರೈತ ಬಾಂಧವರು ಈ ಕೆಳಗಿನ ಲಿಂಕ್ ಉಪಯೋಗಿಸಿ ಆಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಹೊಲದ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ನಮ್ಮ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಮಾಡಿಕೊಟ್ಟಿದೆ.

ಈ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?

ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು ಮುಂಗಾರು ಬೆಳೆ ಸಮೀಕ್ಷೆ 2023-24 ಎಂಬ ಹೆಸರಿನ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ-ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಂಡು, ನಮೂದಿಸಬಹುದು. ರೈತರು ಈ ಕೆಳಗಿನ ಲಿಂಕ್ ಬಳಸಿಕೊಂಡು ಬೆಳೆ ಸಮೀಕ್ಷೆ ಡೌನ್ಲೋಡ್ ಮಾಡಿಕೊಳ್ಳಿ. https://play.google.com/store/apps/details?id=com.csk.farmer23_24.cropsurvey

ಮೊದಲು ರೈತರು ಆ್ಯಪ್‌ನಲ್ಲಿ ಆರ್ಥಿಕ ವರ್ಷ ಹಾಗೂ ಋತು ದಾಖಲಿಸುವುದು. ನಂತರ ರೈತರ ಹೆಸರು, ಮೊಬೈಲ್ ಸಂಖ್ಯೆ ಓಟಿಪಿ ನಮೂದಿಸುವುದು. ಆಮೇಲೆ ಆಧಾರ್ ಕಾರ್ಡ್‍ನ್ನು ಸ್ಕ್ಯಾನ್ ಮಾಡುವುದು, ಸ್ಕ್ಯಾನ್ ಆಗದೇ ಇದ್ದಲ್ಲಿ ನಿಗದಿತ ನಮೂನೆಯಂತೆ ವಿವರ ದಾಖಲಿಸುವುದು. ರೈತರು ಮೊಬೈಲ್ ಆ್ಯಪ್‍ನಲ್ಲಿ ಮೊದಲು ಮಾಸ್ಟರ್ ವಿವರ, ಪಹಣಿ ವಿವರ ಮತ್ತು ಮಾಲೀಕರ ವಿವರ, ಪಾಲಿಗಾನ್ ಹಾಗೂ ಜಿಐಎಸ್ ಮ್ಯಾಪ್ ಡೌನ್‍ಲೋಡ್ ಮಾಡಿಕೊಳ್ಳುವುದು ಅವಶ್ಯಕತೆ ಇರುತ್ತದೆ. ನಂತರ ನಮ್ಮ ರೈತರು ಅಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ತಮ್ಮ ಜಮೀನಿನ ಸರ್ವೆ ನಂಬರ್‌ಗಳನ್ನು ಆ್ಯಪ್‍ಗೆ ಸೇರಿಸಿಕೊಳ್ಳಬೇಕು ಹಾಗೂ ಹಿಸ್ಸಾ ಇದ್ದರೆ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ.

ನಂತರ ನೀವು ಬೆಳೆ ಸರ್ವೇ ಪ್ರಾರಂಭಿಸಿ ಎಂದು ಕ್ಲಿಕ್ ಮಾಡಿ, ಮಾಲೀಕರ ಹೆಸರು ಆಯ್ಕೆ ಮಾಡಿ, ಕ್ಷೇತ್ರ ನಮೂದಿಸುವುದು. ಇಷ್ಟಾದ ಮೇಲೆ ಮಾಲೀಕರ ಪರವಾಗಿ ಬೇರೊಬ್ಬರು ದಾಖಲಿಸುತ್ತಿದ್ದರೆರ ರೈತರ ಪರವಾಗಿ ದಾಖಲಿಸುತ್ತಿದ್ದೇನೆ ಎಂದು ಆಯ್ಕೆ ಮಾಡುವುದು ಕೊನೆಗೆ ನೀವು ರೈತರ ಹೊಲಕ್ಕೆ ಹೋಗಿ ಸರ್ವೆ ನಂಬರ್‌ ಗಡಿ ರೇಖೆಯೊಳಗೆ ನಿಂತು ವಿವರ ದಾಖಲಿಸಬೇಕು.

ಕೊನೆಗೆ ನಮ್ಮ ರೈತರು ಮೊದಲು ಕೃಷಿಯೇತರ ಜಾಗವನ್ನು ದಾಖಲಿಸಿ 2 ಫೋಟೊ ತೆಗೆಯುವುದು, ನಂತರ ಪಾಳು ಬಿದ್ದ ಅಥವಾ ಕಟವಾದ ಪ್ರದೇಶದ ಮಾಹಿತಿಯನ್ನು ಸೇರಿಸಿ 2 ಫೋಟೊ ತೆಗೆಯುವುದು, ನಂತರ ಮೊದಲು ಬಹುವಾರ್ಷಿಕ ಬೆಳೆಗಳನ್ನು ದಾಖಲಿಸಿ ನಂತರ ವಾರ್ಷಿಕ ಬೆಳೆಗಳನ್ನು ದಾಖಲಿಸುವುದು. ರೈತರು ಎಲ್ಲಾ ಮಾಹಿತಿಯನ್ನು ಉಳಿಸಿದ ನಂತರ ಅಪ್‌ಲೋಡ್‌ ಮಾಡಿ ಮಾಹಿತಿಗಳನ್ನು ಸೇರಿಸಬೇಕು.

ಕೃಷಿ ಮ್ಯಾಪರ್ ಮೊಬೈಲ್ APP ಇಂದ ರೈತರಿಗೆ ಆಗುವ ಲಾಭಗಳೇನು?

ಇಂಡಿ ನಿಂಬೆಹಣ್ಣಿಗೆ ಕೇಂದ್ರ ಸರ್ಕಾರದಿಂದ ಜಿಯೋಗ್ರಾಫಿಕಲ್ಟ್ ಟಾಗ್ ಲಭಿಸಿದೆ

ಮೊದಲ ದಿನವೇ ಬರೋಬ್ಬರಿ 55 ಸಾವಿರ ಅರ್ಜಿ ಸಲ್ಲಿಕೆ, ಫ್ರೀ ಕರೆಂಟ್ ಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ

ರೈತರಿಗೆ ಗ್ರೀನ್ ಹೌಸ್ ನಿರ್ಮಾಣ ಮಾಡಲು ಸಹಾಯಧನ, ಕೂಡಲೇ ಅರ್ಜಿ ಸಲ್ಲಿಸಿ

Related Post

Leave a Reply

Your email address will not be published. Required fields are marked *