ಸರ್ಕಾರದ ಆದೇಶ ಸಂಖ್ಯೆ ಕೃಷಿ-16-ಎ,2023 ಬೆಂಗಳೂರು, ದಿನಾಂಕ: 20.06.2023 ರ ಪ್ರಕಾರ ಕರ್ನಾಟಕ ಸರ್ಕಾರವು 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿರುತ್ತದೆ. ಈ ಯೋಜನೆಯ ರೂಪರೇಷೆ ಮತ್ತು ವಿವರಗಳನ್ನು ಇಲ್ಲಿ ನೀಡಲಾಗಿದೆ. ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆದ ಅಥವಾ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದುಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ ಖಾತೆ ಪುಸ್ತಕ) ಪಾಸ್ ಪುಸ್ತಕ/ ಕಂದಾಯ ರಶೀದಿ ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಬಹುದು.
ಬೆಳೆಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣ Seule of Finance ಆಧಾರಮೇಲೆ ನಿರ್ಧರಿಸಲಾಗುವದು.ಸಾರ್ವಜನಿಕ ಸೇವಾ ಕೇಂದ್ರ (Common Service Centres (CSC-VLE) ಹಾಗೂ ಗ್ರಾಮ್ ಒನ್ ಗಳಲ್ಲಿ ನೋಂದಾಯಿಸಿದ ಬೆಳೆ ಸಾಲ ಪಡೆಯದ ರೈತರ ವಿವರಗಳನ್ನು “ಸಂರಕ್ಷಣೆ ಪೋರ್ಟಲ್‌ನಲ್ಲಿ ದಾಖಲಿಸಲು ಹಾಗೂ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಮತ್ತು ವಿಮಾ ಕಂತಿನ ಮೊತ್ತವನ್ನು ನೀಡಲು ಪರಿಷ್ಕರಿಸಿದ ಮಾರ್ಗಸೂಚಿಯನ್ವಯ ರೈತರು ನೋಂದಣಿ ಮಾಡುವ ಕೊನೆಯ ದಿನಾಂಕದಂದೇ ಅಂತಿಮಗೊಳಿಸುವುದು. ನೋಂದಣಿ ಹಂತದ ಸಮಯದಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪದೋಷಗಳುಉಂಟಾದಲ್ಲಿ ಅದರಿಂದಾಗುವ ಬೆಳೆವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೇ ನೇರ ಹೊಣೆಗಾರರಾಗಿರುತ್ತಾರೆ.
ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು, ತದನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುವುದು.
ಸಂಬಂಧಿಸಿದ ಬ್ಯಾಂಕ್‌ಗಳು ಈ ರೀತಿ ಸ್ವೀಕರಿಸಲಾಗದ ಮುಚ್ಚಳಿಕೆ ಪತ್ರಗಳನ್ನು ಇತರೆ ದಾಖಲೆಗಳೊಂದಿಗೆ ವ್ಯವಸ್ಥಿತವಾಗಿ ನಿರ್ವಹಿಸುವುದು.ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲಾಗುವುದು, ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ತಕ್ಷಣ ಸೂಚನೆ ನೀಡುವುದು ಮತ್ತು ಯಾವುದೇ ಸಂದರ್ಭದಲ್ಲಿ ಎಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸುವುದು.
ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನನ್ನ ನಿರ್ಧಾರಕರನ್ನು ಸಂಬಂಧ ಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸುವುದು. ವಿಮೆ ಸಂಸ್ಥೆಯಿಂದ ನೇಮಿಸಲ್ಪಟ್ಟ ನಪ್ಪ ನಿರ್ಧಾರಕರು ಮತ್ತು ಸ್ಥಳೀಯ ತಾಲ್ಲೂಕು ಹೋಬಳಿ ಮಟ್ಟದ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟ ನಿರ್ಧರಿಸುವುದು,
ಸರ್ಕಾರದಿಂದ ಯಾವ ಗೊಬ್ಬರಕ್ಕೆ ಎಷ್ಟು ಸಬ್ಸಿಡಿ ಎಂದು ತಿಳಿಯಿರಿ?
ಕೃಷಿ ಮ್ಯಾಪರ್ ಮೊಬೈಲ್ APP ಇಂದ ರೈತರಿಗೆ ಆಗುವ ಲಾಭಗಳೇನು?
ಮೊದಲ ದಿನವೇ ಬರೋಬ್ಬರಿ 55 ಸಾವಿರ ಅರ್ಜಿ ಸಲ್ಲಿಕೆ, ಫ್ರೀ ಕರೆಂಟ್ ಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ