Breaking
Tue. Dec 17th, 2024

21000 ರೂಪಾಯಿ ಬೆಳೆ ಪರಿಹಾರ ಜಮಾ ಆಗಿದೆ. ಮೂರನೇ ಹಂತದ ಬೆಳೆ ಪರಿಹಾರ ಯಾವಾಗ ಜಮಾ ಆಗುತ್ತದೆ??

Spread the love

ಆತ್ಮೀಯ ರೈತ ಬಾಂಧವರೇ,
2023-24ನೇ ಸಾಲಿನ ಬೆಳೆ ಹಾನಿ ಪರಿಹಾರವನ್ನು ಕಳೆದ ತಿಂಗಳು ತಾನೆ ಮಾನ್ಯ ಪ್ರಧಾನಮಂತ್ರಿಗಳಾದ ಮೋದಿಯವರು ಬಿಡುಗಡೆ ಮಾಡಿದ್ದಾರೆ.ರಾಜ್ಯದಲ್ಲಿ ಒಟ್ಟಾರೆ ಸೇರಿ 32 ಲಕ್ಷ ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮಾ ಮಾಡಲಾಗಿದೆ. ಅದರಲ್ಲಿ ನಿಮ್ಮ ಖಾತೆಗೆ ಮೊದಲ ಕಂತು ರೂ.2000 ಬಂತು 2ನೇ ಕಂತಿನ ಹಣ ಅಕೌಂಟಿಗೆ ಎಷ್ಟು ಬಂದಿದೆ ಎಂದು ನೀವು ಚೆಕ್ ಮಾಡಬೇಕು. ಆಗ ನಿಮಗೆ ತಿಳಿಯುತ್ತದೆ ನಿಮ್ಮ ಬೆಳೆ ಪರಿಹಾರ ಎಷ್ಟು ಜಮಾ ಆಗಿದೆ ಎಂದು.

ನಿಮ್ಮ ಖಾತೆಗೆ ಬಂದಿರುವ ಈಗಿನ ಬರ ಪರಿಹಾರ ಮೊತ್ತವೆಷ್ಟು?

ಮೂರು ಲಕ್ಷ ರೈತರ ಖಾತೆಗೆ ಕಾರಣಾಂತರಗಳಿಂದ ಬೆಳೆ ಹಾನಿಯನ್ನು ಜಮಾ ಮಾಡಲಾಗಿಲ್ಲ ಆದರೆ ಇದೀಗ ಜಮಾ ಮಾಡಲಾಗಿದೆ ಅಂದರೆ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ ರೈತರು ಕೆಲವೊಂದು ಕಾರಣಗಳನ್ನು ಇದ್ದರೂ ಸಹ ಅವುಗಳನ್ನು ಬಗೆಹರಿಸಿದ್ದಾರೆ ಅದರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದು ಈಗಾಗಲೇ ಹಣವನ್ನು ಸಹ ವರ್ಗಾವಣೆ ಮಾಡಲಾಗಿದೆ.

https://parihara.karnataka.gov.in/PariharaPayment/

3ನೆಯ ಕಂತಿನ ಹಣ ಯಾವಾಗ ಜಮಾ ಮಾಡಲಾಗುವುದು?

ಈಗಾಗಲೇ ಎರಡು ಕಂತಿನ ಬೆಳೆ ಹಾನಿ ಪರಿಹಾರ ಹಣ ರೈತರ ಖಾತೆಗೆ ಜಮಾ ವಾಗಿದ್ದು ಮೇಲೆ ತಿಳಿಸಿದಂತೆ 2000 ರೂಪಾಯಿ ಜನವರಿ ತಿಂಗಳಲ್ಲಿ ಹಾಗೂ 21000 ರೂಪಾಯಿ ಮೇ ತಿಂಗಳಲ್ಲಿ ಜಮಾ ಆಗಿದೆ. ಈ 21,000 ಹಣವು ಎರಡನೇ ಕಂತಿನ ಬೆಳೆ ಹಾನಿ ಪರಿಹಾರ ಹಣ ಎಂದು ರಾಜ್ಯ ಸರ್ಕಾರದಿಂದ ಘೋಷಿತವಾಗಿದೆ. ಮೊನ್ನೆ ತಾನೆ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳಾದ ಸಿ ಎಂ ಸಿದ್ದರಾಮಯ್ಯನವರು ಇನ್ನು ಕೆಲವೇ ದಿನಗಳಲ್ಲಿ ಮೂರನೇ ಕಂತಿನ ಬೆಳೆ ಪರಿಹಾರದ ಹಣವನ್ನು ಕೂಡ ಬಿಡುಗಡೆ ಮಾಡಿ ರೈತರ ಖಾತೆಗೆ ಜಮಾ ಮಾಡಲು ಸಿದ್ಧತೆಯನ್ನು ನಡೆಸಿ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ.

ಬರ ಪರಿಸ್ಥಿತಿ ಕುರಿತು ಸಚಿವ ಎಚ್.ಕೆ.ಪಾಟೀಲ ಅವರಿಂದ ಸಭೆ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ಬೇಡ ಎಂದು ಗದಗ ಜಿಲ್ಲೆಯಲ್ಲಿ ನಿನ್ನೆ ಒಂದು ಸಭೆಯನ್ನು ನಿರ್ಮಿಸಿ ಹೇಳಿದ್ದಾರೆ. : ಜಿಲ್ಲೆಯಲ್ಲಿ ಬರ ನಿರ್ವಹಣೆ ಸಮರ್ಪಕವಾಗಿ ನಿಭಾಯಿಸಬೇಕು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಖುದ್ದಾಗಿ ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಅತೀವೃಷ್ಟಿ : ಹವಾಮಾನ ವರದಿಯ ಪ್ರಕಾರ ಮುಂಬರುವ ದಿನಗಳಲ್ಲಿ ಅತಿವೃಷ್ಟಿಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಅತೀವೃಷ್ಟಿ ಸಮರ್ಪಕ ನಿರ್ವಹಣೆಗೆ ಸರಿಯಾಗಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಅತೀವೃಷ್ಟಿ ಆವರಿಸಿದಲ್ಲಿ ತಕ್ಷಣವೇ ಸ್ಪಂದಿಸುವ ಕಾರ್ಯಕೈಗೊಳ್ಳಬೇಕು. ಜೀವ ಹಾನಿ ತಡೆಗೆ ಮುಂಜಾಗೃತೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಹ ಸಭೆಯಲ್ಲಿ ಸೂಚಿಸಲಾಯಿತು.

ಅನುದಾನದ ಕೊರತೆಯಿಲ್ಲ : ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸಲು ಅನುದಾನದ ಕೊರತೆಯಿಲ್ಲ. ಅಧಿಕಾರಿಗಳು ಅಗತ್ಯವಿದ್ದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ಖಾಸಗಿ ಬೋವೆಲ್, ಟ್ಯಾಂಕರ್ ಬಳಸಿಕೊಳ್ಳಲು ತಿಳಿಸಲಾಗಿದೆ. ಬರ ನಿರ್ವಹಣೆಗೆ ಅನುದಾನ ಕೊರತೆಯಿಲ್ಲ. ಅಧಿಕಾರಿಗಳು ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಬೇಜವಾಬ್ದಾರಿ ಹಾಗೂ ನಿಧಾನಗತಿ ಸಹಿಸಲಾಗದು ಎಂದು ಸಚಿವ ಎಚ್.ಕೆ.ಪಾಟೀಲ ಎಚ್ಚರಿಸಿದರು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಅವರು ಮಾತನಾಡಿ ಬರ ಪರಿಹಾರ ವಿತರಣೆ ಮಾಡುವಾಗ ಪ್ರತಿಯೊಬ್ಬ ರೈತರ ಹೊಲದಲ್ಲಿಯೂ ಕ್ರಾಪ್ ಸರ್ವೇ ( ಬೆಳೆ ಸಮೀಕ್ಷೆ ) ಲಿಂಕ್ ಮಾಡಲಾಗಿದೆ. 5591 ಫಲಾನುಭವಿಗಳ ಆಧಾರ ಮತ್ತು ಬ್ಯಾಂಕ್ ಖಾತೆ, ಫೂಟ್ಸ್ ಐಡಿಗಳಲ್ಲಿ ಹೆಸರಿನ ವ್ಯತ್ಯಾಸ ಮತ್ತು ಇತರೆ ಕಾರಣದಿಂದಾಗಿ ಪರಿಹಾರ ಜಮೆ ಆಗದೇ ಇದ್ದು ಅವುಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. 2023 ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಾನಿಗೆ ಒಟ್ಟಾರೆ 1,13,778 ಫಲಾನುಭವಿಗಳಿಗೆ 1 ರಿಂದ 9 ಹಂತದವರೆಗೆ 22 ಕೋಟಿ ಬೆಳೆ ಹಾನಿ ಪರಿಹಾರ ಧನ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ವಿಕಲಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

ವಿಜಯಪುರ : ವಿಕಲಚೇತನ ಯುವಕ ಯುವತಿಯರು ಸ್ವಯಂ

ಉದ್ಯೋಗ ಕೈಗೊಳ್ಳುವ ಉದ್ದೇಶದಿಂದ ವಿಕಲಚೇತನನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಕೆಯ ವತಿಯಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಮೇ.25 ಅರ್ಜಿಗಳನನು ಸಲ್ಲಿಸಲು ಕೊನೆಯ ದಿನವಾಗಿದೆ.

ಕಂಪ್ಯೂಟರ್ ತರಬೇತಿ, ಮೊಬೈಲ್ ರಿಪೇರಿ, ತೋಟಗಾರಿಕೆ, ನರ್ಸರಿ, ಬಿಸಿನೆಸ್ ಪ್ರೋಸೆಸ್ ಔಟ್‌ ಸೊಸೊರ್ಂಗ್, ಬ್ಯೂಟೀಷಿಯನ್, ಟೈಲರಿಂಗ್‌, ಹೈನುಗಾರಿಕೆ, ಹೋಂ ಅಪ್ರೈಯನ್ಸಸ್ ರಿಪೇರ್ ವಿಷಯದ ಕುರಿತು ಉಚಿತವಾಗಿ ತರಬೇತಿ ನೀಡಲಾಗುವುದು. ಅರ್ಜದಾರರು ಮೇಲಿನ ಗರಿಷ್ಠ ಎರಡು ವಿಷಯಗಳನ್ನು ಆಯ್ಕೆ ಮಾಡಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ರವಿ ರಾಥೋಡ( ವಿಜಯಪುರ-9003555337), ಪರಶುರಾಮ ಬೋಸಲೆ (ಇಂಡಿ- 9972441464), (ಸಿಂದಗಿ-9980019635), ಎಸ್.ಡಿ. ಬಿರಾದಾರ ( ಬಸವನ ಬಾಗೇವಾಡಿ-8722135660) ಎಸ್. ಕೆ. ಘಾಟಿ(ಮುದ್ದೇಬಿಹಾಳ-9740682979) ಇವರನ್ನು ಹಾಗೂ ಕಚೇರಿ ದೂರವಾಣಿ 08352-796060ಗೆ ಸಂಒರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣದ ಅಧಿಕಾರಿ ರಾಜಶೇಖರ ಧೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *