ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಿದ ರೈತರಿಗೆ 1 ಏಕರೆಗೆ 22 ಸಾವಿರ ರೂ ಜಮಾ. ಈ ವೆಬ್ಸೈಟ್ ಗೆ ಭೇಟಿ ನೀಡಿ ಚೆಕ್ ಸ್ಟೇಟಸ್ ಮಾಡಿಕೊಳ್ಳಿ
https://samrakshane.karnataka.gov.in/
Check ಮಾಡುವ ವಿಧಾನ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ?
ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ. ಶಿವಮೊಗ್ಗ ಭೇಟಿ ನಂತರ ಮತ್ತಷ್ಟು ಸಂಚಲನ ಸೃಷ್ಟಿ ಆಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಅವರು, ನಾಳೆ ರಾಹುಲ್ ಗಾಂಧಿಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಎಲ್ಲಾ ತಾಲೂಕಿನಿಂದ ಜನ ಬರುತ್ತಾರೆ. ಫ್ರೀಡಂ ಫಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಹುಲ್ ಗಾಂಧಿಯವರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಎಲ್ಲ ಕಡೆ ಉತ್ತಮ ವಾತಾವರಣ ಕಂಡು ಬರುತ್ತಿದೆ. ನಮ್ಮ ಬೂತ್ ನಮ್ಮ ಜವಾಬ್ದಾರಿ ಒಳ್ಳೆಯ ರೀತಿಯಲ್ಲಿ ವರ್ಕೌಟ್ ಆಗುತ್ತಿದೆ. ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಒಗ್ಗಟಾಗಿ ಕೆಲಸ ಆಗುತ್ತಿದೆ. ಹೆಚ್ಚಿನ ಅಂತರದಲ್ಲಿ ಈ ಬಾರಿ ನಾವು ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.
ನಾಳೆ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ರಾಹುಲ್ ಗಾಂಧಿಯವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ನಾಳೆಯ ಕಾರ್ಯಕ್ರಮಕ್ಕೆ ಸ್ಟಾರ್ ನಟರೂ ಸಹ ಭಾಗವಹಿಸುತ್ತಾರೆ. ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹಿಳೆಯರು ಸೇರುತ್ತಿದ್ದಾರೆ ಎಂದು ಮಧು ಬಂಗಾರಪ್ಪ |ಹೇಳಿದ್ದಾರೆ. ಸಹೋದರ ಕುಮಾರ ಬಂಗಾರಪ್ಪ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ ಅವರು, ಕುಮಾರ ಬಂಗಾರಪ್ಪ ಇಷ್ಟು ದಿನ ಎಲ್ಲಿದ್ದರು? ಯಾಕೇ ಸೋತರು? ಕೊಚ್ಚೆ ಬಗ್ಗೆ ಮಾತಾಡಲ್ಲ.
ಕುಮಾರ ಬಂಗಾರಪ್ಪ ಈಗ ರೀಚಾರ್ಜ್ ಆಗಿ ಬಂದಿದ್ದಾರೆ ಎಂದು ಕುಮಾರ ಬಂಗಾರಪ್ಪ ವಿರುದ್ಧ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ. ಪ್ರಧಾನಿಗಳ ಹಾವಾಭಾವ ನೋಡಿದರೆ ಹತಾಶರಾಗಿ ಮಾತನಾಡುತ್ತಿದ್ದಾರೆ. ಮತದಾರರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ದೇಶದ ಸುರಕ್ಷತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 10 ವರ್ಷ ಪ್ರಧಾನ ಮಂತ್ರಿಯಾಗಿ ದೇಶ ಹಾಗೂ ವಿಶ್ವವೇ ಮೆಚ್ಚುವಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ದೂರದೃಷ್ಟಿಯುಳ್ಳ ನಾಯಕರು. ಅವರು ಒಂದು ವ್ಯಕ್ತಿಯಲ್ಲಿ ಈ ದೇಶದ ಶಕ್ತಿ. ದೇಶದ ೨ ಸುರಕ್ಷತೆ ಮತ್ತು ಇನ್ನೂ ಅಭಿವೃದ್ಧಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಇದರಲ್ಲಿ ಅನುಮಾನವೇ ಬೇಡಾ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ ಆರ್.ನಿರಾಣಿ ಹೇಳಿದರು.
ಬೀಳಗಿ ಪಟ್ಟಣದಲ್ಲಿ ಮಂಗಳವಾರ ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಬಿಜೆಪಿ ಅಭ್ಯರ್ಥಿ ಸಂಸದ ಪಿ.ಸಿ.ಗದ್ದಿಗೌಡರ ಪರವಾಗಿ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಹತ್ತು ವರ್ಷದ ಹಿಂದೆ ಅಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವದಕ್ಕಿಂತ ಮುಂಚೆ ದೇಶ ಆರ್ಥಿಕ ಸ್ಥಿತಿಯಲ್ಲಿ 14 ನೇ ಸ್ಥಾನದಲ್ಲಿತ್ತು. ಇಂದು ಮುಂದುವರೆದ ದೇಶಗಳನ್ನು ಹಿಂದಕ್ಕಿ 5ನೇ ಅತಿದೊಡ್ಡ ಆರ್ಥಿಕಕತೆಯ ದೇಶವಾಗಿ ರೂಪಿಸಿದ್ದಾರೆ. ಕೇಲವೇ ದಿನಗಳಲ್ಲಿ ವಿಶ್ವದಲ್ಲಿಯೇ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ವಿಲ್ಲ. ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅಭಿವೃದ್ಧಿ ” ಮಾಡಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿ ಅವರಿಗೆ 10 ಸಾವಿರಕ್ಕಿಂತ ಅಧಿಕ ಮತಗಳು ದೊರೆಯಲಿದೆ ಎಂದರು.
ಶಾಸಕ ಜೆ.ಟಿ.ಪಾಟೀಲರು ತಮ್ಮ ಹಿಂದಿನ 15 ವರ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಮತ್ತು ಈಗಿನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಜನರ ಮುಂದೆ ಇಡಲಿ ಎಂದರಲ್ಲದೇ ನನ್ನ ಅಧಿಕಾರದ ಅವಧಿಯಲ್ಲಿ ಬೀಳಗಿ ಕ್ರಾಸಿನಿಂದ ಸರ್ಕಾರಿ ಆಸ್ಪತ್ರೆಯವರೆ ಅನೇಕ ಸರ್ಕಾರಿ ಕಟ್ಟಡಗಳ ನಿರ್ಮಾಣ, 1ಲಕ್ಷದ 25 ಸಾವಿರ ನೀರಾವರಿ ಯೋಜನೆ, ರೈತಾಪಿ ಜನರಿಗೆ ವಿದ್ಯುತ್ ಸಮಸ್ಯೆ ಆಗಬಾರದೆಂದು ಜಿಲ್ಲಾಪಂಚಾಯತಿ ವ್ಯಾಪ್ತಿಯಲ್ಲಿ ಕೆಇಬಿ ಟೇಶನ್, ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಅನೇಕ ಅಭಿವೃದ್ಧಿ ಯೋಜನೆಗಳು ತರಲಾಗಿದೆ. ತಮ್ಮ ಅಧಿರಾದ ಅವದೀಯಲ್ಲಿ ಯಾವ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ ಅನುವುದು ಜನರ ಮುಂದೆ ಇಡಲಿ ಎಂದರು.
ಭ್ರಷ್ಟಾಚಾರ ರಹಿತವಾದ ಮೋದಿ ಅವರ ಆಡಳಿತ, ಬಿಡುವಿಲ್ಲದ ಕೆಲಸ, ದೂರ ದೃಷ್ಟಿಯೇ ಕಾರಣವಾಗಿದೆ. ಮತ್ತೊಮ್ಮೆ ಪ್ರಧಾನಿಯಾದರೆ ಆರ್ಥಿಕ ಸ್ಥಿತಿಯಲ್ಲಿ 3ನೇ ಸ್ಥಾನಕ್ಕೆ ತರುತ್ತೇನೆಂದು ಭರವಸೆ ನೀಡಿದ್ದು, ಸೂರ್ಯ ಚಂದ್ರರು ಹುಟ್ಟುವುದು ಎಷ್ಟು ಸತ್ಯವೋ, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಮಂತ್ರಿಯಾಗುವುದು ಅಷ್ಟೇ ಸತ್ಯವಾಗಿದೆ. ಸುನಗದ ದಿ. ಎಸ್. ಬಿ. ಪಾಟೀಲರು 4 ಬಾರಿ ಸಂಸದರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಪಿ. ಸಿ. ಗದ್ದಿಗೌಡರು ನಾಲ್ಕು ಬಾರಿ ಸಂಸದರಾಗಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮತದಾರ ಪ್ರಭುಗಳು 5ನೇ ಬಾರಿಗೆ ಗದ್ದಿಗೌಡರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆ.ಡಿ.ಎಸ್. ಮುಖಂಡ ವೀರೇಂದ್ರ ಶೀಲವಂತ ಮಾತನಾಡಿ, ಜಗತ್ತಿನಲ್ಲಿ ಭಾರತ ತಲೆ ಎತ್ತಿ ನಿಲ್ಲಬೇಕಾದರೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವುದು ಅತ್ಯಾವಶ್ಯಕವಾಗಿದೆ. ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ ಪಕ್ಷ ಆ ಭಯದಿಂದ ಬಿಜೆಪಿ ಅವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ. ತುರ್ತು ಪರಿಸ್ಥಿತಿ ಹೇರುತ್ತಾರೆಂದು ಸುಳ್ಳು ಹೇಳುತ್ತಿರುವರು. ಕಾಂಗ್ರೆಸ್ ಪಕ್ಷದ ಸುಳ್ಳುಗಳಿಗೆ ಮತದಾರರು ಬಲಿಯಾಗದೇ ನರೇಂದ್ರ ಮೋದಿ ಅವರ ಬಲಿಷ್ಠ ನಾಯತ್ವಕ್ಕೆ ಮತ ನೀಡುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಲಿದ್ದಾರೆ.
ಪ್ರಾಮಾಣಿಕ, ಸಜ್ಜನ ರಾಜಕಾರಣಿಯಾಗಿರುವ ಪಿ. ಸಿ. ಗದ್ದಿಗೌಡರ ಗೆಲುವು ನಿಶ್ಚಿತವೆಂದು ಎಂದರು. ಮಲ್ಲಿಕಾರ್ಜುನ ಅಂಗಡಿ, ಮುಖಂಡರಾದ ವಿ.ಜಿ.ರೇವಡಿಗಾರ, ಬಸವರಾಜ ಉಮಚಗಿಮಠ, ಬಿಜೆಪಿ ತಾಲೂಕಾ ಮಾಜಿ ಅಧ್ಯಕ್ಷಾರ ಸಂಗಪ್ಪ ಕಟಗೇರಿ, ಎಂ.ಎಂ.ಶಂಬೋಜಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ಕಾಳಪ್ಪಗೋಳ, ಪಪಂ ಸದಸ್ಯ ಮತ್ತು ಬೋರ್ಜಿ, ಸಂತೋಷ ನಿಂಬಾಳ್ಯರ, ಮುತ್ತವ್ವ ಗಾಣಿಗೇರ ಹಾಗೂ ಇನ್ನೂ ಅನೇಕರು ಇದ್ದರು. ಸುನಗ ಗ್ರಾಮದಲ್ಲಿ ಮಾಜಿ ಸಚಿವ ಮರುಗೇಶ ಯಲ್ಲಪ್ಪ ಹಳ್ಳೂರ, ಶ್ರೀಶೈಲ ಯಂಕಂಚಿಮಠ, ತಿಮ್ಮಣ್ಣ ಎರಡೆಮ್ಮಿ, ವಿಠಲ ದೊಡಮನಿ, ರಾಮಣ್ಣ ದೊಡಮನಿ, ಕಾವೇರಿ ರಾಠೋಡ, ಮಲ್ಲಪ್ಪ ತೋಳಮಟ್ಟಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.