ಆತ್ಮೀಯ ರೈತ ಬಾಂಧವರಿಗೆ ತೋಟಗಾರಿಕಾ ಇಲಾಖೆಯಿಂದ ರೈತರಿಗಾಗಿ ಒಂದು ಸಿಹಿ ಸುದ್ದಿ ಬಂದಿದೆ. ಏನು ಸಿಹಿ ಸುದ್ದಿ ಇದು ಎಂದು ಇಲ್ಲಿ ತಿಳಿಯೋಣ. ತೋಟಗಾರಿಕೆ ಯಾಂತ್ರಿಕರನ ಎಂಬ ಯೋಜನೆ ಅಡಿ ರೈತರಿಗಾಗಿ ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ ಯಂತ್ರಗಳನ್ನು ತೋಟಗಾರಿಕಾ ಇಲಾಖೆಯು 25 ರಿಂದ 35 ರವರೆಗೆ ಸಬ್ಸಿಡಿ ಮುಖಾಂತರ ರೈತರಿಗೆ ಉಪಯುಕ್ತವಾಗಲೆಂದು ನೀಡುತ್ತಿದ್ದಾರೆ.
ಈ ಯೋಜನೆಯಿಂದ ರೈತರು ಸಬ್ಸಿಡಿಯನ್ನು ಹೇಗೆ ಪಡೆಯಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಯಾವ ಯಾವ ದಾಖಲೆಗಳನ್ನು ನೀಡಬೇಕು ಎಂದು ತಿಳಿಯಲು ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಬೇಕಾಗುತ್ತದೆ. ಮೊದಲು ಯಾವ ಯಂತ್ರಗಳಿಗೆ ಎಷ್ಟು ಸಬ್ಸಿಡಿ ಇದೆ ಎಂದು ತಿಳಿಯೋಣ.
ಮಿನಿ ಟ್ರ್ಯಾಕ್ಟರ್
ಮಿನಿ ಟ್ರ್ಯಾಕ್ಟರ್ಗೆ ತೋಟಗಾರಿಕಾ ಇಲಾಖೆಯಿಂದ ಸಾಮಾನ್ಯ ವರ್ಗದ ರೈತರಿಗೆ 25 ಪ್ರತಿಶತ ಸಬ್ಸಿಡಿಯನ್ನು ನೀಡುತ್ತಾರೆ. ಅಂದರೆ ನಿಮಗೆ 75 ಸಾವಿರ ರೂಪಾಯಿಗಳ ಸಬ್ಸಿಡಿ ದೊರೆಯುತ್ತದೆ. ಇನ್ನು ಪ್ರತಿಷ್ಠಿತ ಜಾತಿ, ಪ್ರತಿಶತ ಪಂಗಡ ರೈತರಿಗಾಗಿ 35 ಪ್ರತಿಶತ ಸಬ್ಸಿಡಿಯನ್ನು ನೀಡುತ್ತಾರೆ. ಅಂದರೆ ನಿಮಗೆ ಒಂದು ಲಕ್ಷ ರೂಪಾಯಿ ಸಬ್ಸಿಡಿ ದೊರೆಯುತ್ತದೆ.
ಪವರ್ ಟಿಲ್ಲರ್
ತೋಟಗಾರಿಕಾ ಇಲಾಖೆಯು ಈ ಯಂತ್ರಕ್ಕೆ ಸಾಮಾನ್ಯ ವರ್ಗದ ರೈತರಿಗೆ 40% ಸಬ್ಸಿಡಿಯನ್ನು ನೀಡುತ್ತಾರೆ. ಅಂದರೆ ನಿಮಗೆ 40,000 ಸಬ್ಸಡಿ ದೊರೆಯುತ್ತದೆ. ಇನ್ನು ಪ್ರತಿಷಿತ ಜಾತಿ ಮತ್ತು ಪ್ರತಿಷ್ಠಿತ ಪಂಗಡ ಜನರಿಗೆ 50 ಪ್ರತಿಶತ ಸಬ್ಸಿಡಿ ಅಂದರೆ ನಿಮಗೆ 50,000 ಸಬ್ಸಿಡಿ ದೊರೆಯುತ್ತದೆ.
ದಾಖಲೆಗಳು ಏನು ಬೇಕು ಮತ್ತು ಅರ್ಜಿಯಲ್ಲಿ ಸಲ್ಲಿಸಬೇಕು?
ನಿಮ್ಮ ಹೊಲದ ಪಹಣಿ ಪತ್ರ, ಆ ರೈತನ ಆಧಾರ್ ಕಾರ್ಡ್, ನಿಮ್ಮ ಊರಿನ ತಲಾಟಿ ಸೆಟ್, ಭಾವಚಿತ್ರ, ನೀವು ಅರ್ಜಿ ನಮೂನೆ ಯನ್ನು ಆ ಇಲಾಖೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲವನ್ನು ತೆಗೆದುಕೊಂಡು ಹೋಗಿ ಇದೇ ತಿಂಗಳ ಜುಲೈ 31ರ ಒಳಗಾಗಿ ಪಾವಗಡ ತಾಲೂಕಿನ ಹಿರಿಯ ರೈತರ ಸಹಾಯಕ ತೋಟಿಗಾರಿಕಾ ನಿರ್ದೇಶಕರ ಬಲಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. ಈ ಹೇಳಿಕೆಯನ್ನು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ವಿಶ್ವನಾಥ ಗೌಡ ಅವರು ಎಲ್ಲ ರೈತರಿಗೂ ಉಪಯುಕ್ತವಾಗಲೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಸಂಚಿಕೆ ಕರೆ ಮಾಡಿ. 0816-244189
ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ 13 ಫಲಾನುಭವಿ ಆಧಾರಿತ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಸೇವಾಸಿಂದು ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿಟಿಜೆನ್ಸ್ ಪೋರ್ಟಲ್ ಆನ್‌ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದೆ. ಫಲಾನುಭವಿ ಆಧಾರಿತ ಯೋಜನೆಗಳಾದ ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ, ಅಂಧ ವಿದ್ಯಾರ್ಥಿಗಳ ಟಾಕಿಂಗ್ ಲ್ಯಾಪ್‌ಟಾಪ್, ದೈಹಿಕ ವಿಕಲಚೇತನರ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಸಾಧನ ಸಲಕರಣೆಗಳ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೆಲ್ ಕಿಟ್ ಯೋಜನೆಗಳಾಗಿವೆ.
ಅರ್ಜಿಯನ್ನು ಸೇವಾಸಿಂದು ಪೋರ್ಟನ್‌ನಲ್ಲಿ ಜುಲೈ 1 ರಿಂದ ಆಗಸ್ಟ 31 ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ತಾಲೂಕಿನ ಜಿಲ್ಲಾ ಸಂಯೋಜಕರ ಕಚೇರಿ ಎಂ.ಆರ್. ಡಬ್ಲೂ ಪ್ರತಿಭಾ ಮಾದರ (9606151149), ಪಂಚಾಯತಿ ಪಾಂಡು (9538714441), ಬಾದಾಮಿ ಮತ್ತು ಗುಳೇದಗುಡ್ಡ ತಾಲೂಗೆ ಎಂ.ಬಿ.ಪಾಟೀಲ (9481135932), ಹುನಗುಂದ ಮತ್ತು ಇಳಕಲ್ಲ ತಾಲೂಕಿನ ಎಂ.ಆರ್. ಡಬ್ಲೂ ಎಸ್.ಟಿ.ಬೀರಗೊಂಡ (8970565869), ಬೀಳಗಿ ತಾಲೂಕಿನ ಕಾವ್ಯಾ ಛಬ್ಬಿ (7676980002), ತಾಲೂಕಿನ ಎಂ.ಬಿ.ಮುನ್ನೂರ (9008173773), ತಾಲೂಕಿನ ಎನ್.ಬಿ.ಹನಗಂಡಿ (9900417764), – ಬನಹಟ್ಟಿ ತಾಲೂಕಿನ ಶಬ್ಬಿರ (9739936205) ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಮಹಾವಿದ್ಯಾಲಯ : ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂದರ್ಶನ
ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಒಂದು ಹುದ್ದೆಗೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ಜುಲೈ 18ರಂದು ಬೆಳಗ್ಗೆ 11ಕ್ಕೆ ಸಂದರ್ಶನ ನಡೆಯಲಿದೆ ಎಂದು ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರು ತಿಳಿಸಿದ್ದಾರೆ. ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ತಮ್ಮ ಭಾವಚಿತ್ರದೊಂದಿಗೆ ಅರ್ಜಿ ನಮೂನೆಗೆ ಲಗತ್ತಿಸಿ, ಸಂದರ್ಶನಕ್ಕೆ ಆಗಮಿಸುವಾಗ ತೆಗೆದುಕೊಂಡು ಬರುವುದು ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08352-295411 ಮೊ:9880640287ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿ ನಿಲಯ ಪ್ರವೇಶ : ಅರ್ಜಿ ಆಹ್ವಾನ
2024-25ನೆ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳಲು ಎಚ್.ಎಂಐಎಸ್ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಪ.ಜಾ/ಪ.ಪಂ ವಿದ್ಯಾರ್ಥಿಗಳು ಇಲಾಖೆಯ ವೆಬ್ ಸೈಟ್, ತಿ.ಞಚಿಡಿ. ಟುಛಿಟಿ ಮೂಲಕವೂ ಹಾಗೂಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗೂ (ಮ್ಯಾನ್ಯುಯಲ್) ಖುದ್ದಾಗಿ ಸಲ್ಲಿಸಬಹುದು ಎಂದು ವಿಜಯಪುರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಯೋಜನೆಯ ಹಣ ರೈತರಿಗೆ ನೀಡಿ
ರಾಜ್ಯದಲ್ಲಿನ ಭೀಕರ ಬರಗಾಲದಿಂದ ನೊಂದಿರುವ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿರುವ ವಿವಿಧ ಯೋಜನೆಯ ಬ್ಯಾಂಕಿನ ಅಧಿಕಾರಿಗಳು ಹಣವನ್ನು ಸಾಲದ ಖಾತೆಗೆ ಜಮಾ ಮಾಡುತ್ತಿದ್ದಾರೆ. ಈ ಹಣವನ್ನು ರೈತರಿಗೆ ನೀಡುವಂತೆ ಒತ್ತಾಯಿಸಿ ನ್ಯಾಶನಲ್ ಹೂಮನ್ ರೈಟ್ಸ್ ಸಂಸ್ಥೆಯ ತಾಲ್ಲೂಕು ಘಟಕದ ಪಧಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಬರಗಾಲದಿಂದ ಸಂಕಷ್ಟದಲ್ಲಿದ್ದು ರೈತರ ಬ್ಯಾಂಕ್ ಖಾತೆಗೆ ಬೆಳೆಹಾನಿ, ಬೆಳೆವಿಮೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ವಿವಿಧ ಮೂಲದ ಹಣ ಜಮಾ ಆಗಿದೆ. ಇಂತ ಹಣವನ್ನು ಬ್ಯಾಂಕಿನ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ.
ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಭಾರಿ ಮುಂಗಾರು ಮಳೆ ಚೆನ್ನಾಗಿ ಸುರಿದಿದ್ದು ರೈತರಿಗೆ ಬೀಜ, ಗೊಬ್ಬರಕ್ಕಾಗಿ ಹಣದ ಅವಶ್ಯಕತೆ ಇದೆ. ವಿವಿಧ ಮೂಲದಿಂದ ಜಮಾ ಆಗಿರುವ ಹಣವನ್ನು ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕೊಡುವಂತೆ ಒತ್ತಾಯಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಸೀರಅಹ್ಮದ ಬೈರೆಕದಾರ, ಸಂಘಟನಾ ಕಾರ್ಯದರ್ಶಿ ಹನಮಂತ ತಿಪರಡ್ಡಿ, ಈರಣ್ಣ ಕಲ್ಯಾಣಿ, ಬಿ. ಜಿ. ಖಾನೋಜಿ, ಯಂಕಪ್ಪ ಮುದಕಣ್ಣವರ, ಪಿ.ಕೆ.ಪಾಟೀಲ, ಎಫ್. ಎಂ.ದಾನಕಟಗಿ, ಕೆ.ಬಿ. ಹನಮಸಾಗರ ಇದ್ದರು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಗದಗ : 2024-25ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ಈ ಕೆಳಗಿನ 13 ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ಯೋಜನೆ,ದೈಹಿಕ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ,ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬೈಕಿಟ್ ಯೋಜನೆಗೆ https://sevasindhu.karnataka.gov.in/Sevasindhu/DepartmentServicesKannada)
ಅಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ತಾಲ್ಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಮ್.ಆರ್.ಡಬ್ಲ್ಯೂಗಳಾದ ಖಾಜಾಹುಸೇನ ಕಾತರಕಿ, ತಾಲ್ಲೂಕ ಪಂಚಾಯತ, ಗದಗ 8867556465, ಬಸವರಾಜ ಓಲಿ, ತಾಲ್ಲೂಕ ಪಂಚಾಯತ, ರೋಣ – 9741615926, ಶಶಿಕಲಾ ವಡ್ಡಟ್ಟಿ, ತಾಲ್ಲೂಕ ಪಂಚಾಯತ, ಮುಂಡರಗಿ 9611922445, ಭಾರತಿ ಮುರಶಿಳ್ಳಿ, ತಾಲ್ಲೂಕ ಪಂಚಾಯತ, ಶಿರಹಟ್ಟಿ 8951128679 ಶಿವಾನಂದ ಹಾದಿಮನಿ, ತಾಲ್ಲೂಕ ಪಂಚಾಯತ, ನರಗುಂದ 9591679022 ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 029 ರ ದೂರವಾಣಿ ಸಂಖ್ಯೆ: 08372-220419 ಮೂಲಕ ಸಂಪರ್ಕಿಸಬಹುದಾಗಿದೆ.