20 ಲಕ್ಷ ರೈತರು ಬೆಳೆ ವಿಮೆ ಪಡೆದಿದ್ದು, ಸಿಗಲಿರುವ ಪರಿಹಾರ 2,500 ಕೋಟಿ. ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರದ ಕಾರ್ಯತತ್ಪರತೆ. ಮೊದಲ ಕಂತಾಗಿ ರೈತರಿಗೆ ತಲಾ ₹ 2,000 ಮು೦ದಿನ ವಾರದಿಂದ ಪಾವತಿ. ₹20 ಕೋಟಿ ವೆಚ್ಚದಲ್ಲಿ ಈಗಾಗಲೇ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‌ಗಳ ಖರೀದಿ. ಕುಡಿಯುವ ನೀರು ಒದಗಿಸಲು 90 ಜನವಸತಿ ಪ್ರದೇಶಗಳ ಪೈಕಿ 60 ಕಡೆ ಖಾಸಗಿ ಬೋರ್‌ವೆಲ್‌ಗಳ ಬಾಡಿಗೆಗೆ ಎಂದು ಕೃಷ್ಣ ಬೈರೇಗೌಡ, ಕಂದಾಯ ಸಚಿವರು ಹೇಳಿದ್ದಾರೆ.
ಬಿಎಂಟಿಸಿ : ಹೊಸ ಮಾರ್ಗ ಪರಿಚಯ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಚಿಕ್ಕಬಾಣಾವರದಿಂದ ಮೇಡರಹಳ್ಳಿ, ರೈಲ್ವೇ ಗೇಟ್, ಶೆಟ್ಟಿಹಳ್ಳಿ, ಬಸವೇಶ್ವರ ಬಸ್ ನಿಲ್ದಾಣ, ಜಾಲಹಳ್ಳಿ ಕ್ರಾಸ್, ರಾಜಗೋಪಾಲನಗರ ಪೊಲೀಸ್ ಠಾಣೆ ಮಾರ್ಗವಾಗಿ ಲಗ್ಗರೆಗೆ ಹೊಸ ಮಾರ್ಗ ಸಂಖ್ಯೆ ಎಂಎಫ್-32 ಅನ್ನು ಮಾರ್ಚ್ 11 ರಿಂದ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಚ ಗಂಗಾ ಒಣದ್ರಾಕ್ಷಿ ಸಂಸ್ಕರಣಾ ಘಟಕಕ್ಕೆ ಚಾಲನೆ
ಉದ್ಯಮಿ ಅಣ್ಣಾರಾಯ ಎಸ್. ಬಿರಾದಾರ ಆರಂಭಿಸಿದ ಪಂಚ-ಗಂಗಾ ಒಣದ್ರಾಕ್ಷಿ ಸಂಸ್ಕರಣಾ ಘಟಕಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಚಾಲನೆ ಇಂದು ನೀಡಿದರು. ಅವರು ಪಂಚ-ಗಂಗಾ ಒಣದ್ರಾಕ್ಷಿ ಸಂಸ್ಕರಣಾ ಘಟಕದ ಯಂತ್ರದಲ್ಲಿ ಒಣದ್ರಾಕ್ಷಿಯನ್ನು ಹಾಕುವ ಮೂಲಕ ಸಚಿವ ಎಂ. ಬಿ. ಪಾಟೀಲ ವಿಂಗಡಣೆ ಯಂತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಣ್ಣಾರಾಯ ಎಸ್. ಬಿರಾದಾರ, ನಿತೀನ ಎ. ಬಿರಾದಾರ, ವಿಠಲ ಕಟಕದೊಂಡ, ಎಸ್.ಎಂ.ಪಾಟೀಲ ಗಣಿಹಾರ, ಪ್ರಕಾಶಗೌಡ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು. ನಗರದ ಸೋಲಾಪುರ ರಸ್ತೆಯ ಯಶೋಧಾ ಆಸ್ಪತ್ರೆ ಹಿಂದೆ ಇರುವ ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಇಂದು ಶನಿವಾರ ಈ ಕಾರ್ಯಕ್ರಮ ನಡೆಯಿತು.
ಘಟಕದ ಕಾರ್ಯವನ್ನು ವೀಕ್ಷಿಸಿ. ಒಣದ್ರಾಕ್ಷಿ ಸಂಗ್ರಹ, ಸಂಸ್ಕರಣೆ, ಮಾರಾಟ ಹಾಗೂ ರಫ್ತು ಮಾಡುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಈ ಘಟಕ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಅಣ್ಣಾರಾಯ ಎಸ್. ಬಿರಾದಾರ ಮತ್ತು ಅವರ ಪುತ್ರ ನಿತೀನ ಎ.ಬಿರಾದಾರ ಅವರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ವಿಜಯಪುರ ಜ್ಞಾಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ, ನಾಗಠಾಣ ಶಾಸಕ ವಿಠಲ ಕಟಕದೊಂಡ, ಪಶ್ಚಿಮ ಬಂಗಾಳ ನಿವೃತ್ತ ಡಿಜಿಪಿ ಜಿ.ಎಂ.ಪಿ ರೆಡ್ಡಿ, ಉದ್ಯಮಿಗಳಾದ ಪ್ರಕಾಶಗೌಡ ಪಾಟೀಲ, ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ಬಸವರಾಜ ದೇಸಾಯಿ, ಡಾ.ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಕುನಾರ್ ಹೆಂಬ್ರಮ್
ರಾಜೀನಾಮೆ ಕೊಲ್ಕತ್ತಾ : ಪಶ್ಚಿಮ ಬಂಗಾಳದ ಝರ್ಗಮ್ ಕ್ಷೇತ್ರದ ಬಿಜೆಪಿ ಸಂಸದ ಕುನಾರ್ ಹೆಂಬ್ರಮ್ ಅವರು ಇಂದು ಪಕ್ಷಕ್ಕೆ “ವೈಯಕ್ತಿಕ ಕಾರಣಗಳನ್ನು” ನೀಡಿ ರಾಜೀನಾಮೆ ನೀಡಿದ್ದಾರೆ. ತಾನು ಸಂಸದ ಸ್ಥಾನವನ್ನೂ ತೊರೆಯುವುದಾಗಿ ಆರಂಭದಲ್ಲಿ ಹೇಳಿದ್ದ ಹೆಂಬ್ರಮ್ ನಂತರ ತನ್ನ ನಿರ್ಧಾರ ಬದಲಾಯಿಸಿ ಸಂಸದರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಕೊನೆಗೊಳ್ಳಲಿರುವ ನನ್ನ ಅವಧಿ ಮುಗಿಯುವ
ತನಕ ಸಂಸದನಾಗಿ ಮುಂದುವರಿಯುತ್ತೇನೆ. ಸಂಸದ ದಿಢೀರ್ ಎಂದು ಹುದ್ದೆ ತೊರೆದರೆ ಜನರಿಗೆ ಕಷ್ಟವಾಗುತ್ತದೆ,” ಎಂದು ಅವರು ಹೇಳಿದ್ದಾರೆ. ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹೆಂಬ್ರಮ್ ತಾವು ಬೇರೆ ಯಾವುದೇ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಪುಸ್ತಕ ಬರೆಯುತ್ತಾ ಹಾಗೂ ಸಮಾಜ ಸೇವೆ ಮಾಡುತ್ತಾ ಸಮಯ ಕಳೆಯುತ್ತೇನೆ.” ಎಂದು ಅವರು ತಿಳಿಸಿದ್ದಾರೆ.
ಹೆಂಬ್ರಮ್ ತಮ್ಮ ನಿರ್ಧಾರದ ಬಗ್ಗೆ ಕೆಲ ದಿನಗಳ ಹಿಂದೆಯೇ ಪಕ್ಷಕ್ಕೆ ತಿಳಿಸಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಬಿಜೆಪಿ ಈ ಕ್ಷೇತ್ರದಲ್ಲಿ ಸೋಲಲಿದೆ ಎಂದು ಅರಿತು ಹೆಂಬ್ರಮ್ ರಾಜೀನಾಮೆ ನೀಡಿದ್ದಾರೆಂದು ಟಿಎಂಸಿ ಸಂಸದ ಶಂತನು ಸೇನೆ ಹೇಳಿದ್ದಾರೆ.
ಆನೆಗೊಂದಿ ಉತ್ಸವ : ಮುಕ್ತ ಮ್ಯಾರಥಾನ್ ಸ್ಪರ್ಧೆ ಮಾ.10ಕ್ಕೆ
ಕೊಪ್ಪಳ : ಆನೆಗೊಂದಿ ಉತ್ಸವ-2024ರ ಅಂಗವಾಗಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಮ್ಯಾರಥಾನ್ ಸ್ಪರ್ಧೆಯನ್ನು ಮಾರ್ಚ್ 10ರಂದು ಬೆಳಿಗ್ಗೆ 6.30 ಗಂಟೆಗೆ ಆನೆಗೊಂದಿಯ ಕಡೆಬಾಗಿಲುದಲ್ಲಿ ಏರ್ಪಡಿಸಲಾಗಿದೆ. ಮ್ಯಾರಾಥಾನ್ ಆನೆಗೊಂದಿಯ ಕಡೆಬಾಗಿಲುದಿಂದ ಪ್ರಾರಂಭಗೊಂಡು ಅಂಜನಾದ್ರಿ ಬೆಟ್ಟದ ದಾರಿ, ಪಂಪಾ ಸರೋವರವರೆಗೆ ಮುಕ್ತಾಯವಾಗಲಿದೆ. ಮಾ.10ರ ಬೆಳಿಗ್ಗೆ 6 ಗಂಟೆಯೊಳಗಾಗಿ ನೋದಣಿ ಕಡ್ಡಾಯವಾಗಿರುತ್ತದೆ. ಈ ಮ್ಯಾರಾಥಾನ್ ಸ್ಪರ್ಧೆಯು 5 ಕಿ.ಮೀ ರಸ್ತೆ ಓಟ ಒಳಗೊಂಡಿದ್ದು, ಸ್ಪರ್ಧಾಳುಗಳ ವೈದ್ಯರಿಂದ ದೈಹಿಕ ಸಧೃಡ ಪ್ರಮಾಣ ಪತ್ರ ಕಡ್ಡಾಯವಾಗಿ ತರತಬೇಕು.
ಸ್ಪರ್ಧಾಳುಗಳು ನಿಗದಿತ ಸಮಯದೊಳಗೆ ಹಾಜರಿರಬೇಕು. ನಿರ್ಣಾಯಕರ ನಿರ್ಣಯವೇ ಅಂತಿಮ ತೀರ್ಮಾನವಾಗಿರುತ್ತದೆ. ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇದ್ದು, ಪ್ರಯಾಣ ಭತ್ಯೆ, ದಿನಭತ್ಯೆ, ನೀಡಲಾಗುವುದಿಲ್ಲ. ನೋಂದಣಿ ಮಾಡಿಸುವಾಗ ತಂಡದ ಪ್ರತಿಯೊಬ್ಬ ಸದಸ್ಯರ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಝರಾಕ್ಸ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶರಣಬಸವ ಬಂಡಿಹಾಳ 9036773070, 9916799482, 20 ನಾಗ್ಲಿ ಮೊ: 9964279957ಗೆ ಸಂಪರ್ಕಿಸಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠಲ ಜಾಬಗೌಡ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.