ರಾಜ್ಯಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಪ್ರಾಪ್ತರ ಕೈಗೆ ಬೈಕ್ ಹಾಗೂ ಕಾರು ಓಡಿಸಲು ಕೊಟ್ಟರೆ ಪೋಷಕರಿಗೆ 25 ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಇಂದಿನಿಂದಲೇ ಈ ಆದೇಶ ಜಾರಿಗೆ ಬರಲಿದ್ದು, RTO ಪರವಾನಗಿ DL ಇಲ್ಲದೆ ವಾಹನ ಚಲಾಯಿಸಿದಬೆ9K ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಪ್ರಾಪ್ತರು ಬೈಕ್ ಹಾಗೂ ಕಾರು ಓಡಿಸೋದು ಕಂಡು ಬಂದರೆ ಪೋಷಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ
-ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 335 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರಮೋದಿ ಅವರು 3.0 ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಸಮೀಕ್ಷೆಭವಿಷ್ಯನುಡಿದಿದೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ನಡುವೆ ಒಂದೊಂದು ಸಮೀಕ್ಷೆಗಳು ಒಂದೊಂದು ಅಂಕಿಗಳನ್ನು ನೀಡುತ್ತಿದ್ದು ಮೂರನೇ ಬಾರಿಗೆ ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬರುವುದು ಖಾತ್ರಿ ಆದರೆ 400 ಸ್ಥಾನಗಳನ್ನು ಪಡೆಯುವುದಿಲ್ಲ ಎಂದಿದೆ.
ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎನ್ನುವ ಕುರಿತು ದೇಶದ ಜನರ ಅಭಿಪ್ರಾಯ ತಿಳಿಸಲು ” ಮೂಡ್ ಆಪ್ ದಿ ನೇಷನ್” ಕುರಿತ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದ್ದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಕೇವಲ 166 ಸ್ಥಾನ ಪಡೆಯಲಿದೆ ಎಂದು ಅಂದಾಜು ಮಾಡಿದೆ.
ಸಮೀಕ್ಷೆಯ ಪ್ರಕಾರ, ಈಗ ಲೋಕಸಭೆ ಚುನಾವಣೆ ನಡೆದರೆ, ಬಿಜೆಪಿ ನೇತೃತ್ವದ ಎನ್‌ಡಿಎ 335 ಸ್ಥಾನಗಳನ್ನು ಪಡೆಯುವ ಮೂಲಕ ತನ್ನ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ, ಸರ್ಕಾರ ರಚನೆಗೆ ಅಗತ್ಯವಾದ 272 ಕ್ಷೇತ್ರಗಳಲ್ಲಿ ನಿರಾಯಾಸವಾಗಿ ತಲುಪಲಿದೆ. ಎನ್ ಡಿಎ ಮೈತ್ರಿಕೂಟ ಈಗಿರುವ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ ಇಂಡಿಯಾಒಕ್ಕೂಟ- ಕೈ ಹೆಚ್ಚು ಲಾಭದಾಯಕವಾಗಿದೆ ಎಂದು ಅಂದಾಜು ಮಾಡಿದೆ. ಮೂಡ್ ಆಫ್ ದಿ ನೇಷನ್ನ ಫೆಬ್ರವರಿ 2024 ರ ಆವೃತ್ತಿಯು ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ 35,801 ಪ್ರತಿಕ್ರಿಯಿಸಿದವರಸಮೀಕ್ಷೆ ಆಧರಿಸಿದೆ. ಸಮೀಕ್ಷೆಯನ್ನು 2023ರ ಡಿಸೆಂಬರ್ 15 ಮತ್ತು 2024ರ ಜನವರಿ 28ರ ನಡುವೆ ನಡುವೆ ನಡೆಸಲಾಗಿತ್ತು.
ಕಾಂಗ್ರೆಸ್ ಪಕ್ಷ ಒಳಗೊಂಡಂತೆ ಇಂಡಿಯಾ ಮೈತ್ರಿಕೂಟ 166 ಸ್ಥಾನಗಳನ್ನು ಪಡೆಯುವನಿರೀಕ್ಷೆಯಿದೆ. ಆದರೆ ಎನ್ ಡಿಎ ಮೈತ್ರಿಕೂಟದ ಭದ್ರಕೋಟೆ ಅಲುಗಾಡಿಸಲು ಈ ಬಾರಿಯೂ ಸಾಧ್ಯವಿಲ್ಲ ಎನ್ನಲಾಗಿದೆ ಪಕ್ಷವಾರು ಸೀಟು ಹಂಚಿಕೆಗೆ ಸಂಬಂಧಿಸಿದಂತೆ. ಬಿಜೆಪಿ 543 ಸ್ಥಾನಗಳಲ್ಲಿ 304 ಸ್ಥಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಸ್ವತಂತ್ರವಾಗಿ ಸರಳ ಬಹುಮತ ಗಳಿಸುವ ಸಾಮಥ್ಯ ಹೊಂದಿದೆ. ಬಿಜೆಪಿ 2019 ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನ ಹೊಂದಿದ್ದು ಬಾರಿ ಒಂದು ಸ್ಥಾನ ಹೆಚ್ಚಿಗೆ ಪಡೆಯುವ ಸಾಧ್ಯತೆ ಸ್ವಾನತ
ಕಾಂಗ್ರೆಸ್ ಕಳೆದ ಬಾರಿಗಿಂತ 19 ಸ್ಥಾನಗಳನ್ನು ಹೆಚ್ಚಿಸಿಕೊಂಡು 71 ಸ್ಥಾನಗಳೊಂದಿಗೆ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರರು ಸೇರಿದಂತೆ ಇತರರು ಉಳಿದ 168 ಸ್ಥಾನಗಳಿಸಲಿದ್ದಾರೆ.