ರಾಜ್ಯ ಸರಕಾರವು ಕೃಷಿ ಇಲಾಖೆ ನೇತೃತ್ವದಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನೀರಿಕ್ಷಿತ ಹವಾಮಾನ ವೈಪರಿತ್ಯದಿಂದ ರೈತರ ಬೆಳೆ ನಷ್ಟವದಲ್ಲಿ ರೈತರಿಗೆ ಅರ್ಥಿಕವಾಗಿ ನೆರವಾಗಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿ ಮಾಡಲಾಗುತ್ತದೆ.
ಇದರಂತೆ 2022ನೇ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಸೇರಿ ಒಟ್ಟು 10.54 ಲಕ್ಷ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ನಷ್ಟಕ್ಕೆ ರೂ 973 ಕೋಟಿಗಳ ಬೆಳೆ ವಿಮೆ ಪರಿಹಾರವನ್ನು ನಿಗದಿಪಡಿಸಲಾಗಿದ್ದು, ಈ ಹಿಂದಿನ ವರ್ಷಗಳಲ್ಲಿ ಅದೇ ವರ್ಷ ಆದ ಬೆಳೆ ಹಾನಿಗೆ ಮರು ವರ್ಷ ಪರಿಹಾರ ಪಾವತಿಯಾಗುತ್ತಿತ್ತು ಆದರೆ ಈ ವರ್ಷ ಮೊದಲ ಬಾರಿಗೆ ಈ ವರ್ಷ ಆದ ಬೆಳೆ ಹಾನಿಗೆ ಈ ವರ್ಷವೇ ಒಟ್ಟು 5.59 ಲಕ್ಷ ರೈತರಿಗೆ 297.93 ಕೋಟಿ ಮಧ್ಯಂತರ ಬೆಳೆ ವಿಮೆ ಹಣವನ್ನು ಪಾವತಿಸಲಾಗಿದೆ ಎಂದು ಡಾ.ಜಿ. ಟಿ ಪುತ್ರ ಕೃಷಿ ಇಲಾಖೆಯ ಕೃಷಿ ನಿರ್ದೇಶಕರು,ಬೆಂಗಳೂರುರವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದು ಯಾವ ಹಂಗಾಮಿನ ಬೆಳೆ ವಿಮಾ ಪರಿಹಾರ? 2022-23ರ ಮುಂಗಾರು ಹಂಗಾಮಿನಲ್ಲಿ ಕಳಪೆ ಬೀಜ ಮತ್ತು ಇತರ ಕಾರಣಕ್ಕೆ ಬಿತ್ತನೆ ಅಥವಾ ನಾಟಿಯಲ್ಲಿ ವೈಫಲ್ಯವಾದಲ್ಲಿ, ಸ್ಥಳ ನಿರ್ದಿಷ್ಟ ಪ್ರಕೋಪಗಳಿಂದ ಬೆಳೆ ಹಾನಿ ಉಂಟಾದಲ್ಲಿ ಮಧ್ಯಂತರ ಬೆಳೆ ವಿಮೆ ಹಾಗೂ ಕೊಯ್ದೆತ್ತರ ಬೆಳೆ ಹಾನಿ ಸೇರಿದಂತೆ ನಾನಾ ಹಂತಗಳಲ್ಲಿ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದ ರೈತರಿಗೆ ಈ ಬೆಳೆ ವಿಮಾ ಪರಿಹಾರ ಜಮೆಯಾಗಿದೆ.
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.samrakshane.karnataka.gov.in/
ನಂತರ ವರ್ಷದ ಆಯ್ಕೆ 2022-23″ ಮತ್ತು ಋುತು “kharif ಎಂದು select ಮಾಡಿ, “ಮುಂದೆ/Go” ಮೇಲೆ click ಮಾಡಿ
.
Farmer ಕಾಲಂನಲ್ಲಿ “Check status.” ಮೇಲೆ ಕ್ಲಿಕ್ ಮಾಡಿ
ಇದು ಆದ ನಂತರ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ ಕಟ್ಟಿದ Acknowledgment number ಅಥವಾ Mobile number ಹಾಕಿದರೆ ಈ ಕೆಳಗಿನಂತೆ ಬೆಳೆವಿಮೆ ಜಮಾ ಮಾಹಿತಿ ದೊರೆಯಲಿದೆ.
ಇದನ್ನೂ ಓದಿ :- ಬೆಳೆ ವಿಮಾ ಹಣ ನಿಮಗೆ ಯಾಕೆ ಬಂದಿಲ್ಲ?ನೀವು ಈ ತಪ್ಪನ್ನು ಕಂಡಿತಾ ಮಾಡಿರುತ್ತಿರಾ ನೋಡಿ
ಇದನ್ನೂ ಓದಿ :- ಕೇವಲ ಒಂದು ಕರೆ ಮಾಡಿದರೆ ಸಾಕು ಟ್ರಾಕ್ಟರ್ ಸಬ್ಸಿಡಿಯನ್ನು ಪಡೆಯುತ್ತೀರಿ
ಇದನ್ನೂ ಓದಿ :- 10000 ರೂಪಾಯಿ ಜಮಾ,5 ಲಕ್ಷ ಸಾಲ ಹಾಗೂ 1 ಲಕ್ಷ ರೂಪಾಯಿ ಸಬ್ಸಿಡಿ ಕೇವಲ ಯುವಕರಿಗೆ