ಆತ್ಮೀಯ ರೈತ ಬಾಂಧವರೇ,
2022-23 ನೇ ಸಾಲಿನಲ್ಲಿ ಮುಂಗಾರು ಮಳೆಯ ಅಭಾವದ ಹಿನ್ನೆಲೆ ಜಿಲ್ಲೆಯಲ್ಲಿ ಸಂಪೂರ್ಣ ಹೆಸರು ಬೆಳೆ ನಾಶವಾಗಿದ್ದು, ಈ ಬಾರಿ ಈ ಜಿಲ್ಲೆಯ ತಾಲೂಕುಗಳಿಗೆ ಹೆಸರು ಬೆಳೆಯ ಬೆಳೆ ವಿಮೆ ಮಂಜೂರಾಗಿದೆ. ರಾಜ್ಯದಲ್ಲಿ ಹೆಸರು ಬೆಳೆಗೆ 42 ಕೋಟಿ ಒನ್ ಟೈಂ ಸೆಟ್ಲಮೆಂಟ್(ಓಟಿಎಸ್) ವಿಮೆ ನೀಡಲು ಖಾಸಗಿ ವಿಮೆ ಕಂಪನಿ ಒಪ್ಪಿಕೊಂಡಿದೆ. ಅದರಲ್ಲಿ ಗದಗ ಜಿಲ್ಲೆಗೆ ಬರೋಬ್ಬರಿ ಒಟ್ಟಾರೆ 34.99 ಕೋಟಿ ರೂ. ದೊರೆತಿದೆ.
ಗದಗ ಜಿಲ್ಲೆಯ 2023-24 ನೇಯ ಸಾಲಿನ ಮುಂಗಾರು ಆರಂಭದಲ್ಲಿ ಹೆಸರು ಬೆಳೆಯ ಬಿತ್ತನೆ ಭರ್ಜರಿಯಾಗಿ ಜರುಗಿದ್ದು ಆದರೂ ಕೂಡ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಬಿತ್ತನೆ ಗುರಿ ಪೈಕಿ ಶೇ. 25ಕ್ಕಿಂತ ಕಡಿಮೆ ಬಿತ್ತನೆ ಜರುಗಿದೆ. 27183 ಸಾವಿರ ಹೆಕ್ಟೇರ್(ಶೇ.21.75) ಬಿತ್ತನೆ ಮಾತ್ರ ನಡೆದಿದ್ದು, ಬಿತ್ತದ ಬೆಳೆಯೂ ಸಂಪೂರ್ಣ ನಾಶವಾಗಿದೆ. ಹೆಸರಿ ಬೆಳೆ ಪರಿಹಾರಕ್ಕೆ ರೈತ ಮುಖಂಡರು ಹಲವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ರೈತ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವಿಮೆ ಕಂಪನಿ ಅಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಸಂಕಷ್ಟ ಸೂತ್ರದ ಮೂಲಕ ವಿಮೆ ಪರಿಹಾರ ಕಂಡುಕೊಳ್ಳಲಾಗಿದೆ. ಅದರಂತೆ ವಿಮೆ ಪರಿಹಾರದ ಶೇ. 25ರಷ್ಟು ವಿಮೆಯನ್ನು ಒಟಿಎಸ್ ಮೂಲಕ ರೈತರ ಖಾತೆಗೆ ನೀಡಲು ತೀರ್ಮಾಣ ಕೈಗೊಳ್ಳಲಾಗಿತ್ತು.
ಈಗಾಗಲೇ ಹಲವಾರು ರೈತರಿಗೆ ಡಿಬಿಟಿ ಮೂಲಕ ಬೆಳೆ ವಿಮೆ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆಯಲ್ಲಿದ್ದು, 15 ದಿನದ ಒಳಗಾಗಿ ರೈತರ ಖಾತೆಗೆ ಹೆಸರು ಬೆಳೆ ವಿಮೆ ಪರಿಹಾರ ದೊರೆಯಲಿದೆ ಎಂದು ಸ್ಪಷ್ಟವಾಗಿದೆ.
ಬೆಳೆ ವಿಮಾ ಕಂತು ಮತ್ತು ಯಾರು ಯಾರಿಗೆ ಪರಿಹಾರ:
ಪ್ರತಿ ಹೆಕ್ಟೇರ್ಗೆ ರೈತರು 665 ರೂ. ವಿಮಾ ಕಂತಿನ ಹಣವನ್ನು ಪಾವತಿಸಿದ್ದಾರೆ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ 2.60 ಕೋಟಿ ರೂ.ವಿಮಾ ಕಂತು ಪಾವತಿ ಆಗಿದೆ. ನಿಯಮ ಪ್ರಕಾರ ಹೆಕ್ಟೇರ್ ಪ್ರದೇಶಕ್ಕೆ 33250 ಹೆಸರು ಬೆಳೆ ವಿಮೆ ಪರಿಹಾರ ಜಮೆ ಆಗಬೇಕು. ಆದರೆ ಶೇ.25 ಕ್ಕಿಂತ ಬಿತ್ತನೆ ಜರುಗಿ, ಕೆಲವಡೆ ಬಿತ್ತನೆಯೇ ಆಗದ ಹಿನ್ನೆಲೆ ಒಟ್ಟಾರೆ ಹೆಕ್ಟೇರ್ಗೆ ಬೆಳೆ ವಿಮೆ ಪರಿಹಾರದ ಶೇ.25 ರಷ್ಟು ವಿಮೆ ಪರಿಹಾರ ಪಾವತಿ ಮಾಡಲಾಗುತ್ತಿದೆ. ಈ ಪ್ರಕಾರ ಪ್ರತಿ ಹೆಕ್ಟೇರ್ಗೆ ರೈತನ ಖಾತೆಗೆ ಸರಾಸರಿ 8312.5 ರೂ.ಗಳು ಜಮೆ ಆಗಲಿದೆ.
ತಾಲೂಕ ಗಳಿಗೆ ಪರಿಹಾರ:-
ತಾಲೂಕು – ಹೆಸರು ಬಿತ್ತನೆ ಗುರಿ – ಬಿತ್ತನೆ – ಬೆಳೆವಿಮೆ ಪರಿಹಾರ(ಕೋಟಿ)
ಗದಗ – 35500 ಹೆ. – 8249 ಹೆ. – 9.49 ಕೋಟಿ
ಗಜೇಂದ್ರಗಡ – 16350 ಹೆ. – 3839 ಹೆ. – 6.75 ಕೋಟಿ
ಲಕ್ಷ್ಮೇಶ್ವರ – 4800 ಹೆ. – 1250 ಹೆ. – 9.50 ಕೋಟಿ
ನರಗುಂದ – 17600 ಹೆ. – 4500 ಹೆ. – 6 ಕೋಟಿ
ರೋಣ – 37750 ಹೆ. – 8893 ಹೆ. – 11.25 ಕೋಟಿ
ಶಿರಹಟ್ಟಿ – 4000 ಹೆ. – 403 ಹೆ. – 4.56 ಕೋಟಿ
ಇದನ್ನೂ ಓದಿ :- ಭೋಜನಾಲಯ ಕೇಂದ್ರ ಮತ್ತು ವಿಭೂತಿ ನಿರ್ಮಾಣ ಘಟಕ ನಿರ್ಮಾಣ ಮಾಡಲು ಸಾಲ ಮತ್ತು ಸಹಾಯಧನ
ಇದನ್ನೂ ಓದಿ :- ಈ FRUITS ID ಇದ್ದರೆ ಮಾತ್ರ ನಿಮಗೆ ಸರ್ಕಾರ್ ದಿಂದ ಎಲ್ಲ ಲಾಭಗಳು ಯೋಜನೆಗಳು ದೊರೆಯುತ್ತವೆ