ಆತ್ಮೀಯ ರೈತ ಬಾಂಧವರೇ,
ಮೊನ್ನೆ ಮೊನ್ನೆ ತಾನೆ ಬೆಳೆಹಾನಿ ಪರಿಹಾರದ ಹಣ ರಾಜ್ಯದ ಎಲ್ಲ ರೈತರಿಗೆ ಜಮ ಆಗಿದೆ. ಇದೀಗ ಹೊಸ ಸಿಹಿ ಸುದ್ದಿಯೊಂದನ್ನು ರೈತರಿಗೆ ಸರ್ಕಾರವು ನೀಡಿದೆ.
ಕಳೆದ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಭತ್ತ, ಗೋವಿನ ಜೋಳದಂತಹ ಬೆಳೆಗಳನ್ನು ಬೆಳೆದು ನೀರಿಲ್ಲದೆ ತತ್ತರಿಸಿ ಹೋಗಿದ್ದಾರೆ. ಈ ಕಾರಣದಿಂದಾಗಿ ಎಲ್ಲರಿಗೂ ಬೆಳೆ ಹಾನಿ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣವನ್ನು ನೀಡಲಾಗಿತ್ತು. ಬೆಳೆಗೆ ಹಾನಿಯಾಗಿ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ಬೆಳೆ ವಿಮೆ ಬಿಡುಗಡೆಯಿಂದಾಗಿ ಭತ್ತ, ಗೋವಿನ ಜೋಳ ಬೆಳೆದು ಜೀವನ ಜೀವನ ಸಾಗಿಸುತ್ತಿದ್ದ ಹಲವಾರು ರೈತರಿಗೆ ಆರ್ಥಿಕ ಶಕ್ತಿ ಬಂದಂತಾಗಿದೆ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿಗೆ ₹84,85,610, ಮುಂಡಗೋಡ ತಾಲ್ಲೂಕಿಗೆ ₹18,41,53,186 ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ₹15,90,59,753 (ಒಟ್ಟು ₹35 ಕೋಟಿ) ರೈತರಿಗೆ ಲಭಿಸಿದೆ. ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪರಿಹಾರ ಒದಗಿಲಾಗಿದೆ. ವಿಮೆ ಕಂಪನಿಯ ಮಾನದಂಡದ ಅನ್ವಯವಾಗಿ ಉತ್ತರ ಕನ್ನಡ ಜಿಲ್ಲೆಯ ಭತ್ತ ಹಾಗೂ ಗೋವಿನ ಜೋಳವನ್ನು ಬೆಳೆದ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮೂಲಕ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ’ ಎಂದು ‘ಕಳೆದ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಭತ್ತ, ಗೋವಿನ ಜೋಳ ಬೆಳೆಗೆ ಹಾನಿಯಾಗಿ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ಬೆಳೆ ವಿಮೆ ಬಿಡುಗಡೆಯಿಂದಾಗಿ ಭತ್ತ, ಗೋವಿನ ಜೋಳ ಬೆಳೆದು ಜೀವನ ಜೀವನ ಸಾಗಿಸುತ್ತಿದ್ದ ಹಲವಾರು ರೈತರಿಗೆ ಆರ್ಥಿಕ ಶಕ್ತಿ ಬಂದಂತಾಗಿದೆ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :-ಬೆಳೆಹಾನಿ ಪರಿಹಾರ ಖಾತೆಗೆ ಜಮಾ ಆಗದಿದ್ದರೆ ಈ ಕಚೇರಿಗೆ ಅಹವಾಲು ಸಲ್ಲಿಸಿ
‘ಯಲ್ಲಾಪುರ ತಾಲ್ಲೂಕಿಗೆ ₹84,85,610, ಮುಂಡಗೋಡ ತಾಲ್ಲೂಕಿಗೆ ₹18,41,53,186 ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ₹15,90,59,753 (ಒಟ್ಟು ₹35 ಕೋಟಿ) ರೈತರಿಗೆ ಲಭಿಸಿದೆ. ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿ ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪರಿಹಾರ ಒದಗಿಲಾಗಿದೆ. ವಿಮೆ ಕಂಪನಿಯ ಮಾನದಂಡದ ಅನ್ವಯವಾಗಿ ಉತ್ತರ ಕನ್ನಡ ಜಿಲ್ಲೆಯ ಭತ್ತ ಹಾಗೂ ಗೋವಿನ ಜೋಳವನ್ನು ಬೆಳೆದ ರೈತರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮೂಲಕ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಬೆಳೆ ವಿಮೆಯನ್ನು ಕೃಷಿ ಉತ್ಪಾದಕರು ಖರೀದಿಸುತ್ತಾರೆ ಮತ್ತು ಆಲಿಕಲ್ಲು, ಬರ ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳಿಂದ ಬೆಳೆ-ಇಳುವರಿ ವಿಮೆ ಅಥವಾ ಬಾಕಿ ಇರುವ ಆದಾಯದ ನಷ್ಟದಿಂದ ತಮ್ಮ ಬೆಳೆಗಳ ನಷ್ಟದಿಂದ ರಕ್ಷಿಸಲು ಒಂದು ದೇಶದ ಸರ್ಕಾರವು ಸಬ್ಸಿಡಿ ನೀಡುತ್ತದೆ ಕೃಷಿ ಸರಕುಗಳ ಬೆಲೆಯಲ್ಲಿ ಇಳಿಕೆಗೆ ಬೆಳೆ-ಆದಾಯ ವಿಮೆ.
ಬೆಳೆವಿಮೆ ಪರಿಹಾರ ಸ್ಟೇಟಸ್ ಚೆಕ್ ಹೇಗೆ ಮಾಡಬೇಕು?
ಈ ಬೆಳೆ ವಿಮೆಯನ್ನು ಎಲ್ಲಿ ಮಾಡಿಸುವುದೆಂದರೆ’ ಪ್ರಧಾನ್ ಮಂತ್ರಿ ಫಸಲ್ ಭೀಮ ಯೋಜನೆ ಅಡಿಯಲ್ಲಿ ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ.ಬೆಳೆ ಸಾಲ ಪಡೆಯದ ರೈತರು’ ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ’ಯ ಅಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕುಗಳಲ್ಲಾಗಲಿ ಅಥವಾ ಗ್ರಾಮಾ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಅರ್ಜಿಯೊಂದಿಗೆ ಜಮೀನು ಹೊಂದಿದ ಪಹಣಿಯನ್ನು ನೀಡಬೇಕು. ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ನೀಡಬೇಕು.ಅರ್ಜಿಯೊಂದಿಗೆ ಯಾವ ಬೆಳೆಗೆ ವಿಮೆ ಮಾಡಿಸಿದ್ದೋರೋ ವಿಮೆ ಕಂಪನಿಗೆ ನೀವು ಬೆಳೆ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.
ರೈತರು ಬೆಳೆ ವಿಮೆ ಮಾಡಿಸುತ್ತಾರೆ ಆದರೆ ಯಾವ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸುತ್ತಾರೋ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ರೈತರು http://www.samrakshane.karnataka.gov ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎಂಬ ಪಟ್ಟಿ ಸಿಗುತ್ತದೆ.
ಬರ ಪರಿಹಾರ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು?
ಮುಖ್ಯವಾಗಿ ಹೇಳಬೇಕೆಂದರೆ ಈಗಾಗಲೇ ಬಿಡುಗಡೆಯಾದ ಪರಿಹಾರ ಹಣವನ್ನು ರೈತರು ಈ ವಿಧಾನದಲ್ಲಿ ತಮ್ಮ ಹಣದ ಮಾಹಿತಿಯನ್ನು ಪಡೆಯಬಹುದು. ಮುಖ್ಯವಾಗಿ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು ಈ https://landrecords.karnataka.gov.in/PariharaPayment/
ಬರ ಆಯ್ಕೆ ಮಾಡಿ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಇದನ್ನೂ ಓದಿ :-ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಹೊಲಿಗೆ ಯಂತ್ರ ತರಬೇತಿ
ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹೋದ ನಂತರ ನಿಮಗೆ ಈ ಕೆಳಗಿನಂತೆ ಚಿತ್ರ ಕಾಣಿಸುತ್ತದೆ.ಆ ಲಿಂಕ್ ಮೇಲೆ ಕ್ಲಿಕ್ ಮಾಡಿ,ಮಾಡಿದ ನಂತರ ಏನು ಮುಂದುವರೆಸುವುದು ಎಂದು ತಿಳಿಸಿಕೊಡುತ್ತೆವೆ ನೋಡಿ.ಮುಖಪುಟದಲ್ಲಿ ‘ಫಾಮರ್ಸ್ ಕಾರ್ನರ್’ (farmer’s corner) ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ‘ಫಲಾನುಭವಿ ಸ್ಥಿತಿ’ (beneficiary status) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.ಈಗ ನೀವು ನಿಮ್ಮ ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ನೀವು ಅದನ್ನು ಸರಿಯಾಗಿ ಭರ್ತಿ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.ನಿಮಗೆ ನೋಂದಣಿ ಸಂಖ್ಯೆ ಗೊತ್ತಿಲ್ಲವಾದಲ್ಲಿ ಅದನ್ನು ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ಹಾಗೂ OTP ಬರುತ್ತದೆ ಬಂದ ನಂತರ ಕಾಪ್ಕ್ಯ ಟೈಪ್ ಮಾಡಿ ಹಾಕಿದರೆ ನಿಮ್ಮ ನೋಂದಣಿ ಸಂಖ್ಯೆ ಗೊತ್ತಾಗುತ್ತದೆ. ನೀವು ಸರಿಯಾಗಿ ಎಲ್ಲಾ ಪ್ರಕ್ರಿಯೆಯನ್ನು ಭರ್ತಿ ಮಾಡಿದ್ದೀರಿ ಅಥವಾ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ನಿಮಗೆ ಪಿಎಂ ಕಿಸಾನ್ ಹಣ ದೊರಕುತ್ತದೆಯೊ ಇಲ್ಲೋ ಎಂದು ತಿಳಿಯಿರಿ.
ಹಾಗೆಯೇ ಈ ವರ್ಷದ ಬಿಸಿಲಿಗೆ ತತ್ತರಿಸಿದ ಕರ್ನಾಟಕ ಜನತೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದಾರೆ. ಅದುವೇ ಮುಂಗಾರು ಮಳೆಯ ಪ್ರವಾಹವು ಎದುರಾಗಲಿದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮುಂಗಾರು ಪೂರ್ವ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಅಧಿಕಾರಿಗಳು ಸನ್ನದರಾಗಬೇಕೆಂದು ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜರುಗಿದ ಬರಪರಿಸ್ಥಿತಿ ಹಾಗೂ ಮುಂಗಾರು ಮಳೆ ಪ್ರವಾಹ ಪೂರ್ವ ಸಿದ್ಧತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್, ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಆಗುವ ಸಂಭವ ಇದ್ದು ಮಳೆ, ಗುಡುಗು, ಮಿಂಚು ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಜೀವ ಹಾನಿಯಾಗದಂತೆ ತಡೆಯಲು ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ತಹಶೀಲ್ದಾರರು, ತಾ.ಪಂ. ಇಓಗಳು, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಧ್ವನಿವರ್ಧಕ ಬಳಸಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಸಂಬಂಧಿತ ಎಲ್ಲ ಸಂಘ, ಸಂಸ್ಥೆಗಳಲ್ಲಿ ಮಳೆ, ಗುಡುಗು, ಮಿಂಚಿನಿಂದ ತಪ್ಪಿಸಿಕೊಳ್ಳಲು ಮುಂಜಾಗೃತ ಕ್ರಮಗಳನ್ನು ಪ್ರಚಾರಗೊಳ್ಳಿಸಬೇಕು. ಮಳೆ ಬಂದಾಗ ರೈತರು ಹೊಲ, ಗದ್ದೆಗಳ ಬಯಲಲ್ಲಿ ಇರದೆ ಸುರಕ್ಷತಾ ಸ್ಥಳದಲ್ಲಿರಬೇಕು.
ಎಂದು ತಿಳಿಸಿದರು. ಗ್ರಾಮಗಳಲ್ಲಿ ಕೆರೆಗಳು ಭರ್ತಿಯಾಗುವ ಹಾಗೂ ದುರ್ಬಲ ಬಂಡ/ಬದುಗಳನ್ನು ಮುಂಜಾಗೃತವಾಗಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಈಗಲೇ ದುರಸ್ಥಿ ಕಾರ್ಯ ಕೈಗೊಳ್ಳಲಬೇಕೆಂದರು.
2019 ಹಾಗೂ 2021ರಲ್ಲಿ ಜಿಲ್ಲೇಯ 78 ಗ್ರಾಮಗಳನ್ನು ಪ್ರವಾಹ ಪೀಡಿತ ಎಂದು ಗುರುತಿಸಲಾಗಿದ್ದು, ತಹಶೀಲ್ದಾರರು ಹಾಗೂ ತಾ.ಪಂ ಇಓಗಳು ತಮ್ಮ ವ್ಯಾಪ್ತಿಯ ಪ್ರವಾಹ ಸಂಭವನಿಯ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸತಕ್ಕದ್ದು, ಮುಂಜಾಗೃತ ಕ್ರಮಗಳು ಹಾಗೂ
ಪರ್ಯಾಯ ವ್ಯವಸ್ಥೆಗಳ ಬಗ್ಗೆ ವರದಿ ಸಿದ್ಧಪಡಿಸತಕ್ಕದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ರಾಜ ಕಾಲುವೆ ಹಾಗೂ ಚರಂಡಿಗಳನ್ನು ತಕ್ಷಣವೇ ಸ್ವಚ್ಛಗೊಳಿಸತಕ್ಕದು. ಹಾಗೂ ನೀರು ಸರಾಗವಾಗಿ ಹೊಗುವಂತೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಈಶ್ವರ ಉಳಾಗಡ್ಡಿ ಅವರಿಗೆ ತಿಳಿಸಿದರು. ರಸ್ತೆ ಬದಿಯಲ್ಲಿ ಅಪಾಯಕಾರಿ ಗಿಡ ಮರಗಳನ್ನು ಹಾಗೂ ಟೊಂಗೆಗಳನ್ನು ಈಗಲೇ ತೆರವುಗೊಳ್ಳಿಸತಕ್ಕದು. ತಕ್ಷಣವೆ ಮುಚ್ಚತಕ್ಕದು ಎಂದು ತಿಳಿಸಿದರು.
ಹೆಸ್ಕಾಂ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಕಂಬಗಳ ಬಗ್ಗೆ ಈಗಲೇ ಗಮನ ವಹಿಸಿ, ಸ್ಥಳಾಂತರಗೊಳ್ಳಿಸಬೇಕು. ವಿದ್ಯುತ್ ಸಂಪರ್ಕದಿಂದ ಯಾವುದೇ ಅನಾಹುತಗಳು ಆಗದಂತೆ ವಿವಿಧ ಸ್ಥಳನ್ನು ಗುರುತಿಸಿ, ಈಗಲೇ ಕ್ರಮಕೈಗೊಳ್ಳತಕ್ಕದು ಎಂದು ತಿಳಿಸಿದರು. ಎಲ್ಲ ತಾಲೂಕಾ ಈಗಲೇ ಮುಂಜಾಗೃತೆಯಾಗಿ ಸಿದ್ಧಗೊಳ್ಳಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ 78 ಖಾಸಗಿ ಕೊಳವೆ ಭಾವಿಗಳಿಂದ 51 ಗ್ರಾಮಗಳಲ್ಲಿ ನೀರು ಪೂರೈಸಲಾಗುತ್ತಿದೆ. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಒಟ್ಟು 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಮೇ 14 ರಿಂದ 10 ದಿನಗಳ ಕಾಲ ನೀರು ಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯ ಅಜೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.