ಆತ್ಮೀಯ ರೈತ ಬಾಂಧವರೇ ನೀವು ಈಗಾಗಲೇ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬರುವಂತಹ ಎಲ್ಲ ಲಾಭಗಳ ಬಗ್ಗೆ ತಿಳಿದಿದ್ದೀರಿ. ಈಗ ಗಂಗಾ ಕಲ್ಯಾಣ ಯೋಜನೆಯಿಂದ ಸರಕಾರವು ರೈತರಿಗೆ ಉಚಿತ ಬೋರ್ವೆಲ್ ಅನ್ನು ಕೊರೆಸಲು ಸಹಾಯಧನವನ್ನು ನೀಡಲು ನಿರ್ಧಾರ ಮಾಡಿದೆ. ಈ ಬಾರಿ ಸರ್ಕಾರವು ರೈತರಿಗೆ 3.5 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಆದಕಾರಣ ರೈತರು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಈ ಯೋಜನೆಗೆ ಯಾರು ಅರ್ಹತೆಯನ್ನು ಹೊಂದುತ್ತಾರೆ ಮತ್ತು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂದು ತಿಳಿಯಬೇಕು.
ಈ ಯೋಜನೆಯ ಯಾವ ರೈತರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಾರೆ ಮತ್ತು ಅವರು ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು ಮತ್ತು ಒಂದು ಎಕರೆ 20 ಗುಂಟೆ ಹೊಲದಿಂದ 5 ಎಕರೆ ತನಕ ಮಾತ್ರ ಹೊಲವನ್ನು ಹೊಂದಿರಬೇಕು. ಆದರೆ ಸ್ವಲ್ಪ ಜಿಲ್ಲೆಗಳಲ್ಲಿ ಅಂದರೆ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕಮಂಗಳೂರು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂದು ಎಕರೆ ಹೊಲ ಇದ್ದರೆ ಮಾತ್ರ ಸಾಕು.
ಅರ್ಜಿ ಸಲ್ಲಿಸಲು ಅರ್ಹತೆಗಳು?
ಅರ್ಜಿ ಸಲ್ಲಿಸುವ ರೈತರು 18ರಿಂದ 55 ವರ್ಷಗಳವರೆಗೆ ಮಾತ್ರ ವಯಸ್ಸನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ರೈತರು ಕರ್ನಾಟಕ ನಿವಾಸಿಗಳಾಗಿರಬೇಕು, ಅವರು ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕು, ಅರ್ಜಿ ಸಲ್ಲಿಸುವ ರೈತರ ವಾರ್ಷಿಕ ಆದಾಯ 90,000 ರೂಪಾಯಿಗಳ ಒಳಗೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ಅವರು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅವರು ತಮ್ಮ ಹೊಲದ ಪಹಣಿ, ತಮ್ಮ ಆಧಾರ್ ಕಾರ್ಡ್, ತಮ್ಮ ಬ್ಯಾಂಕ್ ಪಾಸ್ ಬುಕ್, ಇತ್ತೀಚಿನ ಫೋಟೋ ಮತ್ತು ಭೂಕಂದಾಯವನ್ನು ಪಾವತಿ ಮಾಡಿರುವಂತಹ ಒಂದು ರಸ್ತೆಯನ್ನು ಹೊಂದಿರುವುದು ಅತಿ ಮುಖ್ಯವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ?
ಮೊದಲು ನಾವು ಕೆಳಗಿನ ಮೇಲೆ ಕ್ಲಿಕ್ ಮಾಡಿ
https://kmdconline.karnataka.gov.in/Portal/home
ಅದು ನಿಮ್ಮನ್ನು ಒಂದು ವೆಬ್ಸೈಟ್ಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ನೀವು ಆನ್ಲೈನ್ ಅಪ್ಲಿಕೇಶನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ಅದು ಗಂಗಾ ಕಲ್ಯಾಣ ಯೋಜನೆ ನಮೂನೆಯು ನಿಮ್ಮ ಮುಂದೆ ತೆರೆಯುತ್ತದೆ. ಅಲ್ಲಿ ನೀವು ನಿಮ್ಮ ಎಲ್ಲಾ ಮಾಹಿತಿಗಳನ್ನು ತುಂಬಬೇಕಾಗುತ್ತದೆ. ನಂತರ ಅಲ್ಲಿ ಕೆಲ ದಾಖಲಾತಿಗಳನ್ನು ನೀವು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ.
ನಿಮ್ಮ ಹೊಲದ ಸರ್ವೆ ನಂಬರ್ ಇಂದ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಿರಿ
ಬೇವಿನಿಂದ ಸಂರಕ್ಷಣಾ ಔಷಧ, ಬೇವಿನ ಬೀಜ ಕಷಾಯ ತಯಾರಿಕೆ ವಿಧಾನ
ಕೀಟನಾಶಕಗಳ ಮಿತ ಬಳಕೆ ಯಾಕೆ ಮಾಡಬೇಕು? ಇಲ್ಲಿದೆ ಸಂಪೂರ್ಣ್ ಮಾಹಿತಿ
ನ್ಯಾನೋ ಯೂರಿಯಾ ಬಳಸುವ ವಿಧಾನ ಮತ್ತು ಅದರ ಉಪಯೋಗಗಳು