Breaking
Tue. Dec 17th, 2024

ಸ್ವಾವಲಂಬಿ ಸಾರಥಿ ಯೋಜನೆಯಡಿ ಟ್ಯಾಕ್ಸಿ ಖರೀದಿಸುವ 4 ಲಕ್ಷ ಸಹಾಯಧನ

Spread the love

ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳು. ಉದ್ಯಮಶೀಲತೆ ಅಭಿವೃದ್ಧಿ ಯೋಜನೆಗೆ ಅರ್ಜಿ ಆಹ್ವಾನ

ಉದ್ದೇಶಗಳು:

• ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
• ಬ್ಯಾಂಕ್ ಸಾಲದ ಶೇ.20ರಷ್ಟು ಸಹಾಯಧನ ಅಥವಾ ಗರಿಷ್ಠ ₹1 ಲಕ್ಷ
• ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಠ 72 ಲಕ್ಷ

ಸ್ವಾವಲಂಬಿ ಸಾರಥಿ

ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ. ಸಾಲದ ಮೊತ್ತದ ಶೇ.75ರಷ್ಟು ಸಹಾಯಧನ ಅಥವಾ ಗರಿಷ್ಠ 4 ಲಕ್ಷ.

ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು ಸ್ಕ್ಯಾನ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9482300400

ಸೂಚನೆ : 2023-24ನೇ ಸಾಲಿನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. DEPARTMENT OF INFORMATION AND PUBLIC RELATION.

ನೇರ ಸಂದರ್ಶನಕ್ಕೆ ಆಹ್ವಾನ

ಯಾದಗಿರಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿವತಿಯಿಂದ 2024ರ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಒಂದು ಖಾಸಗಿ ಕಂಪನಿಗಳು ಭಾಗವಹಿಸಲಿವೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಭಾಕರ್ ಅವರು ತಿಳಿಸಿದ್ದಾರೆ.

ಯಾದಗಿರಿ ಬಜಾಜ ಮೈಕ್ರೋಫೈನಾನ್ಸ್ ಪ್ರೈ.ಲಿ, ಸೆಂಟರ್ ಮ್ಯಾನೇಜ‌ರ್ ಹುದ್ದೆಗಳು 25 ಇದ್ದು, ವಿದ್ಯಾರ್ಹತೆ 12ನೇ ಪಾಸ್ ಹೊಂದಿರಬೇಕು, ಯಾದಗಿರಿ, ಸುರಪುರ, ಕುಲಬುರಗಿ, ಜೇವರ್ಗಿ, ಆಳಂದ ಉದ್ಯೋಗ ಸ್ಥಳವಾಗಿದೆ. 19 ರಿಂದ 28 ವರ್ಷ ಒಳಗಿರಬೇಕು, ಪುರುಷ ಅಭ್ಯರ್ಥಿ ಮಾತ್ರ. ಅಪರೇಷನ್ ಮ್ಯಾನೇಜ‌ರ್ ಹುದ್ದೆಗಳು 02 ಇದ್ದು, ವಿದ್ಯಾರ್ಹತೆ ಯಾವುದೇ ಪದವಿ ಹೊಂದಿರಬೇಕು, ಯಾದಗಿರಿ, ಜೇವರ್ಗಿ ಉದ್ಯೋಗ ಸ್ಥಳವಾಗಿದೆ. 19 ರಿಂದ 28 ವರ್ಷ ಮಹಿಳೆ ಅಭ್ಯರ್ಥಿ ಮಾತ್ರ. ಬ್ರಾ ?ಯಂಚ್ ಮ್ಯಾನೇಜ‌ರ್ ಹುದ್ದೆಗಳು 05 ಇದ್ದು, ವಿದ್ಯಾರ್ಹತೆ ಯಾವುದೇ ಪದವಿ 3 ವರ್ಷ ಅನುಭವ ಹೊಂದಿರಬೇಕು, ಯಾದಗಿರಿ, ಜೇವರ್ಗಿ, ಕಲಬುರಗಿ ಉದ್ಯೋಗ ಸ್ಥಳವಾಗಿದೆ. 19 ರಿಂದ 32 ವರ್ಷ ಒಳಗಿರಬೇಕು.

ಪುರುಷ ಅಭ್ಯರ್ಥಿ ಮಾತ್ರ. ಅಭ್ಯರ್ಥಿಗಳಿಗೆ ಸೂಚನೆ 2024ರ ಸೆಪ್ಟೆಂಬರ್ 20 ರಂದು ನೇರ ಸಂದರ್ಶನದಲ್ಲಿ ಉದ್ಯೋಗದಾತರನ್ನು ಭೇಟಿಯಾಗಿ ಸಂದರ್ಶನಕ್ಕೆ ಒಳಪಟ್ಟು ಉದ್ಯೋಗವಕಾಶ ಪಡೆದುಕೊಳ್ಳಬೇಕು. ನೇರ ಸಂದರ್ಶನಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿ ಪರಿಚಯ (ರೆಗ್ಯೂಮ್, ಬಯೋಡಾಟಾ) 01 ಝರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು. ನೋಂದಣಿಯಾಗಲು ಕ್ಯೂ ಆರ್ ಕೋಡ್ ಸ್ಕಾ ?ಯನ್ ಮಾಡುವುದರ ಮೂಲಕ ನೋಂದಾಯಿಸಬಹುದಾಗಿದೆ. ಅಥವಾ ಕ್ಯೂ ಆರ್ ಕೋಡ್ ಸ್ಕಾ ?ಯನ್ ನೋಂದಣಿ ಮಾಡದೇ ಇರುವವರು 2024ರ ಸೆಪ್ಟೆಂಬರ್ 20 ರಂದು ನೇರ ಸಂದರ್ಶನದಲ್ಲಿ ಭಾಗವಹಿಸಬೇಕು ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನೇರ ಸಂದರ್ಶನ ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಚಿತ್ತಾಪೂರ ರಸ್ತೆ, ಜಿಲ್ಲಾಡಳಿತ ಭವನ, (ಮಿನಿ ವಿಧಾನಸೌಧ) ರೂಂ.ನಂ.ಬಿ1, ಬಿ2, 2ನೇ ಮಹಡಿ . ..08473 253718, ..7026261999, 9448566765 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಆಹಾರ ಸಂಸ್ಕರಣಾ ಕ್ಷೇತ್ರದ ವ್ಯಾಪ್ತಿ ವಿಸ್ತರಣೆ

ಭಾರತವು ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ದೇಶದ ಆಹಾರ ಸಂಸ್ಕರಣಾ ಉದ್ಯಮವು ಆರ್ಥಿಕ ಬೆಳವಣಿಗೆ ಚಾಲನೆ ಮಾಡುವಲ್ಲಿ ಮತ್ತು ಆಹಾರ ಭದ್ರತೆ ಖಾತರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ರಾಷ್ಟ್ರವು ಅಭೂತಪೂರ್ವ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ, ರೋಮಾಂಚಕ ಮತ್ತು ವೈವಿಧ್ಯಮಯ ಆರ್ಥಿಕತೆಯಿಂದ ಪ್ರೇರಿತವಾದ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ.

ಸರ್ಕಾರದ ಪ್ರಗತಿಪರ ನೀತಿ ಉಪಕ್ರಮಗಳು ಮತ್ತು ಮಧ್ಯಸ್ಥಿಕೆಗಳ ಕಾರಣದಿಂದಾಗಿ, ಇತಿ- ಚಿನ ವರ್ಷಗಳಲ್ಲಿ ಈ ವಲಯವು ಗಮನಾರ್ಹ ಕಾರ್ಯಕ್ಷಮತೆ ತೋರಿಸಿದೆ. 2022-23ರ ಆರ್ಥಿಕ ವರ್ಷದ ಅಂತ್ಯಕ್ಕೆ ಅನ್ವಯವಾಗುವಂತೆ, ಉತ್ಪಾದನೆ ಕ್ಷೇತ್ರದಲ್ಲಿ ಒಟ್ಟು ಮೌಲ್ಯವರ್ಧನೆ ಸೇರ್ಪಡೆ(ಜಿವಿಎ) ಯಲ್ಲಿ 7.66% ಮತ್ತು ಕೃಷಿ ವಲಯಕ್ಕೆ 8.45% ಜಿವಿಎ ಕೊಡುಗೆ ನೀಡಿದೆ.

ಭಾರತವು ತನ್ನ ಶ್ರೀಮಂತ ಮತ್ತು ವೈವಿಧ್ಯಮಯ ಕೃಷಿ ಸಂಪನ್ಮೂಲಗಳೊಂದಿಗೆ ಜಾಗತಿಕ ಆಹಾರ ಉತ್ಪಾದನೆಯಲ್ಲಿ ಮಹತ್ವದ ಪಾಲುದಾರ(ಆ- ಟಗಾರ)ನಾಗಿ ನೆಲೆ ನಿಂತಿದೆ. ಭಾರತವು ಹಾಲು, ರಾಗಿ, ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಚಹಾ ಮತ್ತು ಮೀನುಗಳಂತಹ ಹಲವಾರು ಆಹಾರ ಸರಕುಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಇದು ಆಹಾರ ಸಂಸ್ಕರಣಾ ಉದ್ಯಮಕ್ಕೆ ಭದ್ರ ಬುನಾದಿ ಹಾಕಿದೆ. ಭಾರತದ ಕೃಷಿ-ಆಹಾರ ರಫ್ತುಗಳು 2023-24ರ ಆರ್ಥಿಕ ವರ್ಷದಲ್ಲಿ ಪ್ರಭಾವಶಾಲಿ 46.4 ಶತಕೋಟಿ ಡಾಲರ್ ಗೆ ಏರಿಕೆ ಕಂಡಿದೆ. ಈ ವಲಯದ ತ್ವರಿತ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಜಾಗತಿಕ ಪ್ರಭಾವವನ್ನು ಇದು ಎತ್ತಿ ತೋರಿಸುತ್ತಿದೆ. ಒಟ್ಟು ಕೃಷಿ-ಆಹಾರ ರಫ್ಟಿನಲ್ಲಿ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಪಾಲು 2014-15ರಲ್ಲಿ ಇದ್ದ 4.90 ಶತಕೋಟಿ ಡಾಲರ್ ನಿಂದ 2023-24ರಲ್ಲಿ 10,88 ಶತಕೋಟಿ ಡಾಲರ್ ಗೆ ಹೆಚ್ಚಳ ಕಂಡಿದೆ.

ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿರುವ ಅವಕಾಶಗಳು ವಿಶಾಲವಾಗಿವೆ ಮತ್ತು ವೈವಿಧ್ಯಮಯವಾಗಿವೆ. ಪ್ರತಿಯೊಂದು ಉಪ- ವಲಯವು ವಿಶಿಷ್ಟ ಬೆಳವಣಿಗೆಯ ನಿರೀಕ್ಷೆಗಳನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನದ ಆಗಮನವು ಉದ್ಯಮವನ್ನು ಕ್ರಾಂತಿಕಾರಿಗೊಳಿಸಿದೆ. ಆಹಾರ ಸುರಕ್ಷತೆ, ಪ್ಯಾಕೇಜಿಂಗ್, ಸರಕು

ಸಾಗಣೆ(ಲಾಜಿಸ್ಟಿಕ್ಸ್) ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಪ್ರಗತಿಯನ್ನು ಸಕ್ರಿಯಗೊಳಿಸುತ್ತಿದೆ. ಇ-ವಾಣಿಜ್ಯದಲ್ಲಾದ ತ್ವರಿತ ಬೆಳವಣಿಗೆ ಮತ್ತು ಸಿದ್ಧ-ತಿನಿಸು ಮತ್ತು ಅನುಕೂಲಕರ ಆಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯು, ಈ ವಲಯದ ಬೆಳವಣಿಗೆಗೆ ಮತ್ತಷ್ಟು ಹೊಸ ಮಾರ್ಗಗಳನ್ನು ತೆರೆದಿದೆ. ಹಾಗಾಗಿ, ಇದ ಇದು ಹೂಡಿಕೆದಾರರು ಮತ್ತು ಉದ್ಯಮಶೀಲರಿಗೆ ಉತ್ತೇಜಕ ಸಮಯವಾಗಿದೆ. ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು ವಿವಿಧ ಯೋಜನೆಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತಂದಿದೆ. ಇದು ಈ ವಲಯದಲ್ಲಿ ಪರಿವರ್ತನೆಗಳನ್ನು ತರಲು ಮತ್ತು ದೃಢವಾದ ಪರಿಸರ ವ್ಯವಸ್ಥೆ ಪೋಷಿಸಲು ಪ್ರಮುಖವಾಗಿದೆ.

ಈ ಪರಿಸರ ವ್ಯವಸ್ಥೆಯು ಸಣ್ಣ, ಅತಿಸಣ್ಣ, ಮಧ್ಯಮ ಮತ್ತು ಬೃಹತ್ ಗಾತ್ರದ ಉದ್ಯಮಗಳಲ್ಲಿ ನಾವೀನ್ಯತೆ, ಹೂಡಿಕೆ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತದೆ. ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ(ಪಿ- ಎಂಕೆಎಸ್ ವೈ)ಯು ಕೃಷಿ ತೋಟಗಳಿಂದ ಹಿಡಿದು ಬಿಡಿ ಮಾರಾಟ ಮಳಿಗೆಗಳ ತನಕ ಸಮರ್ಥ ಪೂರೈಕೆ ಸರಪಳಿ ನಿರ್ವಹಣೆಯೊಂದಿಗೆ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಲು ನಿರ್ಣಾಯಕ ಪಾತ್ರ ವಹಿಸಿದೆ. ಈ ಎಲ್ಲಾ ಪ್ರಯತ್ನಗಳು ಸುಗ್ಗಿ ಕಾಲದ ನಂತರದ ನಷ್ಟ ಕಡಿಮೆ ಮಾಡುವುದಲ್ಲದೆ.

ರಫ್ತು ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಭಾರತದ ಆಹಾರ ಸಂಸ್ಕರಣಾ ಉದ್ಯಮದ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಪ್ರಮುಖ ಪ್ರಯತ್ನವನ್ನು ಪ್ರತಿನಿಧಿಸುತ್ತಿದೆ. ದೇಶದಲ್ಲಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು ಮತ್ತು ಉನ್ನತೀಕರಿಸಲು ಹಣಕಾಸು, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲ ಒದಗಿಸಲು ಸಚಿವಾಲಯವು. ಕೇಂದ್ರ ಪ್ರಾಯೋಜಿತ ‘ಮೈಕ್ರೋ ಫುಡ್ సింగా ఎంబరావ్యననా (ఓఎంఎఫోఎంఇ) ಯೋಜನೆ”ಯನ್ನು ಸಹ ಜಾರಿಗೊಳಿಸುತ್ತಿದೆ. ವರ್ಲ್ಡ್ ಫುಡ್ ಇಂಡಿಯಾ: ಭಾರತವನ್ನು ಜಾಗತಿಕ ಆಹಾರ ಬುಟ್ಟಿ(ಗಮ್ಯತಾಣ)ಯಾಗಿ ತೋರಿಸಲಾಗುತ್ತಿದೆ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು ನಿರೂಪಿಸಿದ ‘ವರ್ಲ್ಡ್ ಫುಡ್ ಇಂಡಿಯಾ(ವಿಶ್ವ ಆಹಾರ ಭಾರತ)’ವು ಪರಿಕಲ್ಪನೆಯು ಭಾರತವು ಜಾಗತಿಕ ಆಹಾರ ಸಂಸ್ಕರಣೆಯ ಗಮ್ಯ ತಾಣವಾಗುವ ದೇಶದ ಬದ್ಧತೆಗೆ ಸಾಕ್ಷಿಯಾಗಿದೆ. ಈ ವಾರ್ಷಿಕ ಸಂಭ್ರಮವು ಜಾಗತಿಕ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ, ಆಹಾರ ಮೌಲ್ಯ ಸರಪಳಿಯ ವಿವಿಧ ಭಾಗಗಳ ಪಾಲುದಾರರನ್ನು ಒಟ್ಟುಗೂಡಿಸುತ್ತದೆ.

ಸಹಭಾಗಿತ್ವವನ್ನು ಉತ್ತೇಜಿಸುತ್ತದೆ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುತ್ತದೆ. ಜಾಗತಿಕ ಆಹಾರ ಸಂಸ್ಕರಣಾ ಶಕ್ತಿ ಕೇಂದ್ರವಾಗುವ ತನ್ನ ದೃಷ್ಟಿಕೋನ ಅಥವಾ ದೂರದೃಷ್ಟಿ ಸಾಧಿಸುವತ್ತ ಭಾರತವನ್ನು ಪ್ರೇರೇಪಿಸುತ್ತದೆ. ಬಹುನಿರೀಕ್ಷಿತ “ವರ್ಲ್ಡ್ ಫುಡ್ ಇಂಡಿಯಾ” ಬೃಹತ್ ಕಾರ್ಯಕ್ರಮವು 2024 ಸೆಪ್ಟೆಂಬರ್ 19ರಿಂದ 22ರ ವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಹಿಂದಿನ ಆವೃತ್ತಿಗಳ ಯಶಸ್ಸಿನ ಆಧಾರದ ಮೇಲೆ, ಈ ವರ್ಷದ ಕಾರ್ಯಕ್ರಮ ಜಾಲ ಮತ್ತು ಸಹಭಾಗಿ- ತ್ವಕ್ಕಾಗಿ ಸರಿಸಾಟಿಯಿಲ್ಲದ ಅವಕಾಶಗಳನ್ನು ನೀಡುವ ಮೂಲಕ ಹೆಚ್ಚು ಪ್ರಭಾವಶಾಲಿಯಾಗಿದೆ.

ಜಾಗತಿಕ ಹೂಡಿಕೆದಾರರು. ಉದ್ಯಮ ನಾಯಕರು, ಆಹಾರ ಸಂಸ್ಕರಣಾ ಹೆಚ್ಚುವರಿಯಾಗಿ, ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್‌ ಐ), ಕಂಪನಿಗಳು, ರಫ್ತುದಾರರು, ಆಮದುದಾರರು, ನಾವೀನ್ಯಕಾರರು ಮತ್ತು ಸರ್ಕಾರದ ಪ್ರತಿನಿಧಿಗಳು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮತ್ತು ಭಾರತದ ಬೃಹತ್ ಆಹಾರ ಮಾರುಕಟ್ಟೆ ಮತ್ತು ಆರ್ಥಿಕ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸಚಿವಾಲಯವು ಆಹ್ವಾನಿಸುತ್ತಿದೆ. ವರ್ಲ್ಡ್ ಫುಡ್ ಇಂಡಿಯಾ-2024ರಲ್ಲಿ ಅಚ್ಚುಮೆಚ್ಚಿನ ಆಹಾರ(ಪೆಟ್ ಫುಡ್), ಹೋ ರೆ ಕಾ (ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಟ- ರಿಂಗ್) ಮತ್ತು ಕೊಯೋತ್ತರ ಯಂತ್ರೋಪಕರಣಗಳು ಸೇರಿದಂತೆ ಹಲವಾರು ಹೊಸ ವಲಯಗಳಿಗೆ ಮೀಸಲಾಗಿರುವ ವಿಶೇಷ ವಲಯಗಳನ್ನು ಪರಿಚಯಿಸಲಾಗುತ್ತಿದೆ. ಈ ಎಲ್ಲಾ ಸೇರ್ಪಡೆಗಳು ಆಹಾರ ಉದ್ಯಮದ ವಿಕಾಸಗೊಳ್ಳುತ್ತಿರುವ ಭೂದೃಶ್ಯವನ್ನು ಪ್ರತಿಬಿಂಬಿಸುತ್ತವೆ, ಅಲ್ಲದೆ ವೈವಿಧ್ಯಮಯ ಹೂಡಿಕೆಗಳು ಮತ್ತು ನಾವೀನ್ಯತೆಗಳನ್ನು ಆಕರ್ಷಿಸುವ ಗುರಿ ಹೊಂದಿವೆ.

ಉದ್ಯಮದ ಪಾಲುದಾರರ ನಡುವೆ ಜ್ಞಾನ ಹಂಚಿಕೆ ಮತ್ತು ಸಹಭಾಗಿತ್ವ ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ವಿಷಯಾಧಾರಿತ ಅವಧಿಗಳ ಸರಣಿಯನ್ನು ಕಾರ್ಯಕ್ರಮದಲ್ಲಿ ಆಯೋಜಿಸಲಾಗುತ್ತಿದೆ. ಪ್ರಮುಖ ವಿಷಯಗಳು ಸಮರ್ಥನೀಯ ಪ್ಯಾಕೇಜಿಂಗ್ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತವೆ. ತ್ಯಾಜ್ಯ ಕಡಿಮೆ ಮಾಡುವುದು, ಮೌಲ್ಯ ಹೆಚ್ಚಿಸುವುದು. ಪಾಲುದಾರರ ನಡುವೆ ಆಹಾರ ಮತ್ತು ವ್ಯಾಪಾರ ಕ್ರಾಂತಿಕಾರಿಗೊಳಿಸುವುದು ಇದರ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಸಂವಾದ ಮತ್ತು ಚರ್ಚಾ ಕಲಾಪಗಳನ್ನು ಆಯೋಜಿಸಲಾಗುತ್ತಿದ್ದು, ತಜ್ಞ- ರಿಗೆ ಸವಾಲುಗಳನ್ನು ಎದುರಿಸಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಸಮರ್ಥನೀಯ ಬೆಳವಣಿಗೆ ಕಾರ್ಯತಂತ್ರಗಳನ್ನು ಅನ್ವೇಷಿಸಲು ವೇದಿಕೆ ಒದಗಿಸುತ್ತವೆ. ಸಮಾನಾಂತರವಾಗಿ, “ರಿವರ್ಸ್ ಬಯರ್ ಸೆಲ್ಲರ್ ಮೀಟ್” ಸಭೆಯು ಅಂತಾರಾಷ್ಟ್ರೀಯ ಖರೀದಿದಾರರು ಮತ್ತು ಭಾರತೀಯ ಮಾರಾಟಗಾರರ ನಡುವೆ ನೇರ ಸಂವಾದ ಸಕ್ರಿಯಗೊಳಿಸುತ್ತದೆ. ಮಾರುಕಟ್ಟೆ ಪ್ರವೇಶ ಹೆಚ್ಚಿಸುತ್ತದೆ ಮತ್ತು ಹೊಸ ಪಾಲುದಾರಿಕೆಗಳನ್ನು ಉತ್ತೇಜಿಸುತ್ತದೆ.

ಮೇಲಿನವುಗಳ ಜತೆಗೆ, ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಆಯೋಜಿಸಿರುವ ಜಾಗತಿಕ ಆಹಾರ ನಿಯಂತ್ರಕ ಶೃಂಗಸಭೆಯು ”ವರ್ಲ್ಡ್ ಫುಡ್ ಇಂಡಿಯಾ ಜತೆಗೆ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ. ಈ ಶೃಂಗಸಭೆಯು ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನಾವೀನ್ಯತೆಯಲ್ಲಿನ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ಆಹಾರ ನಿಯಂತ್ರಕರ ನಡುವೆ ನಿರಂತರ ಸಂವಾದ ಮತ್ತು ಸಹಭಾಗಿತ್ವ ಉತ್ತೇಜಿಸುವ ಗುರಿ ಹೊಂದಿದೆ.

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ರೋಮಾಂಚಕ ಮತ್ತು ಹೆಚ್ಚು ಹೊಂದಾಣಿಕೆಯ ವಲಯವನ್ನಾಗಿ ರೂಪಿಸಲು ಬದ್ಧವಾಗಿದೆ. ಅದು ಭಾರತದ ಆರ್ಥಿಕ ಸಮೃದ್ಧಿಗೆ ಕೊಡುಗೆ ನೀಡುವುದಲ್ಲದೆ ಜನರ ಯೋಗಕ್ಷೇಮವನ್ನು ಖಾತ್ರಿಗೊಳಿಸುತ್ತದೆ.

ಅಮೃತಾಧಾರೆ ಕೇಂದ್ರದಿಂದ ನವಜಾತ ಶಿಶುಗಳಿಗೆ ತಾಯಿ ಹಾಲು ಪೂರೈಕೆ

ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿರುವ ಅಮೃತಾಧಾರೆ ತಾಯಿಹಾಲು ಕೇಂದ್ರದಿಂದ ಸಾವಿರಾರು ತಾಯಿಯ ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ತಾಯಿ ಹಾಲು ಪೂರೈಸಲಾಗಿದೆ ಎಂದು ಬಿ.ಎಲ್.ಡಿ.ಇ ವಿಶ್ವವಿದ್ಯಾಲ್ಯದ ಕುಲಪತಿ ಡಾ. ಆರ್.ಎಸ್. ಮುಧೋಳ ತಿಳಿಸಿದ್ದಾರೆ. ಬಿ.ಎಲ್.ಡಿ.ಇ ವಿವಿಯ ಶ್ರೀ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ 2023ರ ಏ. 7 ರಿಂದ ಈ ಅಮೃತಧಾರೆ ತಾಯಿ ಎದೆ ಹಾಲಿನ ಕೇಂದ್ರ ನವಜಾತ ಶಿಶುಗಳಿಗೆ ಸುರಕ್ಷಿತ ಮತ್ತು ಪೌಷ್ಟಿಕ ಎದೆಹಾಲು ಒದಗಿಸಲಾಗುತ್ತಿದೆ. ಈ ಮೂಲಕ ತಮ್ಮ ತಾಯಂದಿರಿಂದ ಸಾಕಷ್ಟು ಎದೆ ಹಾಲು ಪಡೆಯಲು ಸಾಧ್ಯವಾಗದ ಶಿಶುಗಳಿಗೆ ಎದೆ ಹಾಲಿನ್ನು ಪೂರೈಸಲಾಗುತ್ತಿದೆ. ಪ್ರತಿಯೊಂದು ಮಗುವಿಗೆ ತಾಯಿಯ ಎದೆಹಾಲು ಅಮೃತವಿದ್ದಂತೆ. ಕನಿಷ್ಠ ಆರು ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲು ಬೇಕು. ಹೀಗಾಗಿ ಎದೆಹಾಲು ಹೆಚ್ಚಿರುವ ತಾಯಂದಿರು ಹಾಲು ದಾನ ಮಾಡಬಹುದು. ಇದರಿಂದ ದಾನ ಮಾಡುವ ತಾಯಂದಿರ ಆರೋಗ್ಯವೂ ಉತ್ತಮವಾಗಿರುತ್ತದೆ.

Related Post

Leave a Reply

Your email address will not be published. Required fields are marked *