ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಜನರು ಕೃಷಿ ಮಾಡಲು ಹೆಚ್ಚಿನ ಆದ್ಯತೆಯನ್ನು
ಕೊಡುತ್ತಾರೆ.ಆತ್ಮೀಯ ರೈತ ಬಾಂಧವರೇ 2023 ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ, ಮಧ್ಯಂತರ ವಿಮಾ ಪರಿಹಾರ ಬಿಡುಗಡೆಯಾಗಿದ್ದು ರೈತರ ಖಾತೆಗಳಿಗೆ ಜಮಯಾಗಲಿದೆ. ಸರ್ಕಾರದ ಮನವಲಿದು ರೈತರ ಉದ್ದಾರಕ್ಕಾಗಿ ಈಗ ಬೆಳೆವಿಮೆ ಕಟ್ಟಿದ ರೈತರಿಗೆ 400 ಕೋಟಿ ರೂಪಾಯಿ ಹಣ ಮಂಜೂರು ಮಾಡಿದೆ. ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ಪಾವತಿ ತಡವಾಗಬಾರದು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಕೃಷಿ ಅಧಿಕಾರಿಗಳು ವಿಮಾ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದು ಹೇಳಿದರು.
ಯಾವ ಜಿಲ್ಲೆಗೆ ಎಷ್ಟು ಬೆಳೆ ವಿಮೆ?
ಮೊದಲು ರೈತರು ಯಾವ ಜಿಲ್ಲೆಯ ರೈತರಿಗೆ ಬೆಳೆಯ ವಿಮೆ ದೊರೆಯುತ್ತದೆ ಎಂದು ತಿಳಿಯಬೇಕು. ಸರ್ಕಾರವು ಹಾವೇರಿ ಜಿಲ್ಲೆಯ ರೈತರಿಗೆ ಮೊದಲು ಹಣವನ್ನು ಜಮಾ ಮಾಡಲು ನಿರ್ಧರಿಸಿದೆ. ಬೆಳೆ ವಿಮೆ ಹಣವನ್ನು ಪಾವತಿಸಿದ ರೈತರಿಗೆ ಹಣವನ್ನು ಬಿಡುಗಡೆ ಮಾಡಿದೆ. ನೀವು ಬೆಳೆದ ಬೆಳೆಯ ನಷ್ಟವನ್ನು ನೋಡಿಕೊಂಡು ರೈತರಿಗೆ ಸರ್ಕಾರ ಹಣವನ್ನು ಜಮಾ ಮಾಡುತ್ತದೆ. ರೈತರು ಸತತವಾಗಿ ಹೋರಾಟ ಮಾಡಿ ಹಣವನ್ನು ಜಮಾ ಮಾಡಿಕೊಂಡಿದ್ದಾರೆ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ್ದು ಏನೆಂದರೆ ಹಾವೇರಿ ಜಿಲ್ಲೆಯಲ್ಲಿ ಎರಡು ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದರು. ಇದರಲ್ಲಿ ಒಂದೂವರೆ ಲಕ್ಷ ಜನರಿಗೆ ಬೆಳೆ ವಿಮೆ ಮಂಜೂರಾಗಿದೆ. ಈ 400 ಕೋಟಿ ಹಣವು ರೈತರ ಖಾತೆಗೆ ಬಂದು ಕೆಲವೇ ದಿನಗಳಲ್ಲಿ ಬರುತ್ತದೆ.
ಆಧಾರ್ ಕಾರ್ಡ್ ಜೋಡಣೆ ಆಗದೇ ಇರುವ ರೈತರ ಸಂಖ್ಯೆ ಸಾಕಷ್ಟು ಇರುವುದನ್ನು ಗಮನಿಸಿದ ಅವರು, ‘ಬೆಳೆ ವಿಮೆಗೆ ಆಧಾರ್ ಕಾರ್ಡ್ ಜೋಡಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ವಿಮಾ ಕಂಪನಿಗಳೊಂದಿಗೆ ಆಧಾರ್‌ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ನನ್ನ ಗಮನಕ್ಕೆ ತರಬೇಕು. ರೈತರೂ ಇದನ್ನು ಗಮನಿಸಬೇಕು’ ಎಂದೂ ಸಲಹೆ ನೀಡಿದರುಪ್ರವಾಹದಿಂದ ಬೆಳೆ ನಷ್ಟ ಆಗಿರುವ ಬಗ್ಗೆ ಸಂಪೂರ್ಣವಾಗಿ ಸರ್ವೇಮಾಡಿ ವಿವಿಧ ಬೆಳೆಗಳ ನಷ್ಟದ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಅರ್ಜಿಯ ಆನ್‌ಲೈನ್ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಹೇಗೆ ಎಂದು ತಿಳಿಯಿರಿ?
ಮೊದಲು PMFBY ವೆಬ್‌ಸೈಟ್‌ಗೆ ಹೋಗಿ: www.pmfby.gov.in ನಂತರ ಆ ಪುಟದಲ್ಲಿರುವ “ಅಪ್ಲಿಕೇಶನ್ ಸ್ಥಿತಿ – ಪ್ರತಿ ಹಂತದಲ್ಲೂ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ತಿಳಿಯಿರಿ” ಮತ್ತು ಅದನ್ನು ಕ್ಲಿಕ್ ಮಾಡಿ. ಆಮೇಲೆ PMFBY ರೈತ ಆನ್‌ಲೈನ್ ಅರ್ಜಿ ಸ್ಥಿತಿ ಫಾರ್ಮ್ ಪರದೆಯ ಮೇಲೆ ಕಾಣಿಸುತ್ತದೆ. ಆನಂತರ ಅಲ್ಲಿ ಇರುವಂತಹ “ಕ್ಯಾಪ್ಚಾ” ಜೊತೆಗೆ “ಅಪ್ಲಿಕೇಶನ್ ಸಂಖ್ಯೆ” ಅನ್ನು ನಮೂದಿಸಬೇಕು. ಕೊನೆಗೆ ನಿಮ್ಮ PMFBY ರೈತರ ಅರ್ಜಿ ಸ್ಥಿತಿಯನ್ನು ನೋಡಲು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಕ್ಲಿಕ್ ಮಾಡಬೇಕು.
ಇದನ್ನೂ ಓದಿ :- ಹೆಣ್ಣು ಮಕ್ಕಳಿಗೆ ಸಿಗಲಿದೆ 1.6 ಲಕ್ಷ ರೂಪಾಯಿ
ಸುಕನ್ಯಾ ಸಮೃದ್ಧಿ ಯೋಜನೆಯ ಅಡಿ ಅರ್ಜಿ ಸಲ್ಲಿಸಲು ನೀವು ಹೀಗೆ ಮಾಡಿದರೆ ಸಾಕು 250 ರೂಪಾಯಿ ಹೂಡಿಕೆ ಮಾಡಿ ಮತ್ತು ಲಕ್ಷ ಲಕ್ಷ ಲಾಭ ಪಡೆಯಿರಿ
ಇದನ್ನೂ ಓದಿ :- ಅಕ್ರಮ ಸಕ್ರಮ ಯೋಜನೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ