ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಜನರು ಕೃಷಿ ಮಾಡಲು ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ.ರಾಜ್ಯದ ತೋಟಗಾರಿಕಾ ಇಲಾಖೆಯು ಜೇನುಸಾಕಣೆ ಮತ್ತು ಪ್ರಚಾರ ಸೇರಿದಂತೆ ಸಬ್ಸಿಡಿ ಮೊತ್ತವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಇದರ ಅಡಿಯಲ್ಲಿ ರೈತರು, ರೆತರು ಮತ್ತು ನಿರುದ್ಯೋಗಿ ಯುವಕರು ಜೇನು ಸಾಕಾಣಿಕೆ ಉದ್ಯಮವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು. ಜೇನು ಪೆಟ್ಟಿಗೆ, ಮರದ ಎಂಟು ಖಾನೆಗಳು, ಸಂಸಾರ ಕೋಣೆ, ಕಬ್ಬಿಣದ ಸ್ಟ್ಯಾಂಡ್ ಕೊಳ್ಳಲು 400 ರೂಪಾಯಿಗಳು,ಒಂದೇ ಮಾತಿನಲ್ಲಿ ಹೇಳುವದಾದರೆ ಆಯ್ಕೆ ಆದ ರೈತರಿಗೆ ಗರಿಷ್ಟ ರೂಪಾಯಿಗಳನ್ನೂ ಸಹಾಯಧನವಾಗಿ ನೀಡುತ್ತಾರೆ.
ಜೇನು ಪೆಟ್ಟಿಗೆ ಕೊಳ್ಳಲು ಸಾಮಾನ್ಯ ವರ್ಗದವರಿಗೆ 3500 ರೂಪಾಯಿ ಸಹಾಯಧನ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ 4000 ರೂಪಾಯಿಗಳ ಸಹಾಯಧನವನ್ನು ನೀಡುತ್ತಾರೆ. ತೋಟಗಾರಿಕಾ ಇಲಾಖೆ ಪ್ರಕಾರ, ರೈತರು, ತೋಟಗಾರರು ಮತ್ತು ನಿರುದ್ಯೋಗಿ ಯುವಕರು ನೇರವಾಗಿ ತೋಟಗಾರಿಕಾ ಅಧಿಕಾರಿಗಳು ಅಥವಾ ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದು. 50 ರಿಂದ 60 ಸಾವಿರ ಜೇನುನೊಣಗಳನ್ನು ಜೇನುನೊಣ ಅಥವಾ ಪೆಟ್ಟಿಗೆಯಲ್ಲಿ ಇಡಬಹುದು. ಇದರೊಂದಿಗೆ 1 ಕ್ವಿಂಟಲ್ ವರೆಗೆ ಜೇನು ಉತ್ಪಾದನೆಯನ್ನು ಪಡೆಯಬಹುದು.
ಜೇನು ಕೃಷಿಯು ಸುಲಭ ತಾಂತ್ರಿಕತೆಯಿಂದ ಕೂಡಿದೆ. ಜೇನು ನೊಣಗಳು ಪರಾಗಸ್ಪರ್ಶದ ಮೂಲಕ ಹಲವಾರು ತೋಟಗಾರಿಕೆ ಬೆಳೆಗಳಿಗೆ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿ, ಪರೋಕ್ಷವಾಗಿ ರೈತರ ಆದಾಯ ಹೆಚ್ಚಿಸುತ್ತದೆ.ಜೇನು ಸಾಕಣೆಯಿಂದಾಗಿ ತೋಟಗಾರಿಕೆ ಬೆಳೆಗಳಾದ ಸೌತೆ, ಕುಂಬಳ, ದ್ರಾಕ್ಷಿ, ಸೀಬೆ, ಟೊಮ್ಯಾಟೊ, ಕಲ್ಲಂಗಡಿ, ತೆಂಗು, ಮಾವು, ಅಡಿಕೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಬಹುದು. ತೋಟಗಾರಿಕೆ ಬೆಳೆಗಳಾದ ಏಲಕ್ಕಿ, ನಿಂಬೆ ಹಾಗೂ ತರಕಾರಿ ಬೆಳೆಗಳಾದ ಸೀಮೆಬದನೆ, ಹಾಗಲಕಾಯಿ, ಹೂವಿನ ಬೆಳೆಗಳು, ಔಷಧಿ ಹಾಗೂ ಸುಗಂಧ ದ್ರವ್ಯದ ಬೆಳೆಗಳು ಜೇನು ಸಾಕಣೆ ಪರಾಗ ಸ್ಪರ್ಶದಿಂದ ಪ್ರಯೋಜನ ಪಡೆಯುತ್ತವೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಫಲಾನುಭವಿಗಳು ದಾಖಲಾತಿಗಳಾದ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಚೆಕ್ ಬಂದಿ, ಸ್ವಯಂ ಬೆಳೆ ದೃಢೀಕರಣ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಎಲ್ಲವನ್ನು ನೀವು ತೆಗೆದುಕೊಂಡು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು ಆದಮೇಲೆ ತೋಟಗಾರಿಕೆ ಇಲಾಖೆಯವರು ನಿಮ್ಮ ಅರ್ಜಿಯನ್ನು ನೋಡಿ ದಾಖಲೆಗಳನ್ನು ಪರಿಶೀಲಿಸಿ ಸಹಾಯಧನವನ್ನು ನೀಡುತ್ತಾರೆ.
ಇದನ್ನೂ ಓದಿ :- ನೀವು ಹೊಲವನ್ನು ಖರೀದಿಸಲು ಅಥವಾ ಭೂಮಿಯನ್ನು ಖರೀದಿಸಲು ಯೋಚಿಸುತಿದ್ದೀರಾ?
ಇದನ್ನೂ ಓದಿ :- ನಿಮ್ಮ ತಾಯಿಯ ಆಸ್ತಿಯಲ್ಲಿ ನೀವು ಪಾಲನ್ನು ಪಡೆದಿಲ್ಲವೇ ಪಾಲು ಪಡೆಯಬೇಕಾದರೆ ಏನು ಮಾಡಬೇಕು? ಕೇವಲ ಈ ಕೆಲಸವನ್ನು ಮಾಡಿದರೆ ಸಾಕು ನಿಮ್ಮ ತಾಯಿಯ ಚಿರಾಸ್ತಿ ಹೆಸರಿಗೆ ಬರುತ್ತೆ