ಜಿಲ್ಲೆಯ 63566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗರುದತ್ತ ಹೆಗಡೆ ತಿಳಿಸಿದ್ದಾರೆ. 2023 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಧಾರವಾಡ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿತ್ತು. ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೊಂದಾಯಿಸಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಪ್ರಾರಂಭವಾಗಿದೆ.
ಈ ಜಿಲ್ಲೆಯ ಯಾವ ತಾಲೂಕಿಗೆ ಎಷ್ಟು ಹಣ?
ಅಳ್ಳಾವರ ತಾಲ್ಲೂಕಿನ 3052 ಜನ ರೈತರಿಗೆ 1.82 ಕೋಟಿ ರೂ ಗಳ, ಅಣ್ಣಿಗೇರಿ ತಾಲ್ಲೂಕಿನ 6044 ಜನ ರೈತರಿಗೆ 6.45 ಕೋಟಿ ರೂ. ಗಳ, ಧಾರವಾಡ 9978 ಜನ ರೈತರಿಗೆ 6.575 ಕೋಟಿ ರೂ. ಗಳ, ಹುಬ್ಬಳ್ಳಿ ತಾಲ್ಲೂಕಿನ 9472 ಜನ ರೈತರಿಗೆ 9.12 ಕೋಟಿ ರೂ ಗಳ, ಹುಬ್ಬಳ್ಳಿ ನಗರ ತಾಲ್ಲೂಕಿನ 301 ಜನ ರೈತರಿಗೆ 0.365 ಕೋಟಿ ರೂ ಗಳ, ಕಲಘಟಗಿ ತಾಲ್ಲೂಕಿನ 15248 ಜನ ರೈತರಿಗೆ 9.731 ಕೋಟಿ ರೂ ಗಳ ಮತ್ತು ನವಲಗುಂದ ತಾಲ್ಲೂಕಿನ 5286 ಜನ ರೈತರಿಗೆ 5.282 ಕೋಟಿ ರೂ ಗಳ ಮಧ್ಯಂತರ ವಿಮಾ ಪರಿಹಾರ ಜಮಾವಣೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾಕೆ ಜಿಲ್ಲೆಗೆ ಎಷ್ಟು ಹಣ ಬಿಡುಗಡೆಯಾಗಿದೆ?
ಮಳೆಯ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿ ಬರ ಪರಿಸ್ಥಿತಿ ನಿರ್ಮಾಣವಾದ ಪ್ರಯುಕ್ತ ಬೆಳೆ ವಿಮೆ ಯೋಜನೆಯಡಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಧ್ಯಂತರ ವಿಮೆ ಪರಿಹಾರ ಪಡೆಯಲು ಅವಕಾಶವಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ಯ ಜಿಲ್ಲೆಯ 63566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ವಿಮೆಗೊಳಪಟ 56995 ಹೆಕ್ಟೇರ ಪ್ರದೇಶಕ್ಕೆ ವಿಮೆ ಪರಿಹಾರ ದೊರೆಯಲಿದೆ.
ಧಾರವಾಡ ಜಿಲ್ಲೆಯ 111057 ಜನ ರೈತರು ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ನೊಂದಾಯಿಸಿಕೊಂಡಿರುತ್ತಾರೆ. ಒಟ್ಟು 105065 ಹೆಕ್ಟೇರನಷ್ಟು ಬೆಳೆ ಪ್ರದೇಶ ವಿಮೆ ಯೋಜನೆಗೆ ಒಳಪಟ್ಟಿತ್ತು. ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ನೆರವಾಗುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಕ್ರಾಪ್ ಕೋಡ್ ಎಂದರೇನು?
ಮುಂದೆ ನೀವು ಬೆಳೆ ಸಮೀಕ್ಷೆ ಮಾಡುವಾಗ ಮತ್ತು ಬೆಳೆಯುಮೆಯನ್ನು ತುಂಬುವಾಗ ನೀವು ಬೆಳೆದ ಬೆಳೆಗಳನ್ನು ತುಂಬಾ ಮೊದಲು ಅವುಗಳ ಕ್ರಾಪ್ ಕೋಡ್ ಅಂದರೆ ಪ್ರತಿಯೊಂದು ಬೆಳೆಗೆ ತನ್ನದೇ ಆದ ಬಿಡುಗಡೆ ಮಾಡಿದೆ ನೀವು ಸರ್ವೆ ಮಾಡುವ ಅಥವಾ ವಿಮೆಯನ್ನು ತುಂಬುವ ಸಮಯದಲ್ಲಿ ಈ ಕ್ರಾಪ್ ಕೊಡನ್ನು ತಿಳಿದುಕೊಂಡು ಸರಿಯಾಗಿ ತುಂಬ ಬೇಕಾಗುತ್ತದೆ ಇಲ್ಲವಾದರೆ ನಿಮಗೆ ಇದರಿಂದ ತಪ್ಪಾದ ಮಾಹಿತಿಯನ್ನು ನೀಡಿದ್ದಕ್ಕೆ ನಿಮಗೆ ಹಣ ಬರುವುದಿಲ್ಲ.
ಕೆಳಗಿನ ಚಿತ್ರಗಳಲ್ಲಿ ಪ್ರತಿಯೊಂದು ಬೆಳೆಯ ಕೊಡನ್ನು ನಾವು ನೀಡಿದ್ದೇವೆ ನೋಡಿ
ಆರೋಗ್ಯ ಕಾಪಾಡುವಲ್ಲಿ ಆಯುರ್ವೇದದ ಪಾತ್ರ
ಔಷಧ ಪದ್ಧತಿ ಎಲ್ಲ ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಆರೋಗ್ಯ ಹಾಗೂ ದೀರ್ಘ ಆಯಸ್ಸನ್ನು ಹೇಗೆ ಪಡೆಯುವುದು ಎಂಬುದನ್ನು ಹೇಳುವುದೇ ಸಂಹಿತೆಗಳು ಮೂಲ ಉದ್ದೇಶ. ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ ಪ್ರಾಚೀನ ಭಾರತದಿಂದ ಬೆಳೆದು ಬಂದದ್ದು ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯ ಕ್ರಮಗಳನ್ನು ಇಂದು ಕೂಡ ಆಧುನಿಕ ವೈದ್ಯ ಪದ್ಧತಿಯ ಅನುಸರಿಸುತ್ತಿದೆ ಚರಕ ಸಂಹಿತೆ, ಸುಶ್ರುತ ಸಂಹಿತೆ ಇವೇ ಮೊದಲಾದ ಸಂಹಿತೆಗಳು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಆಯುರ್ವೇದ ವೈದ್ಯ ಪದ್ಧತಿಯ ಪ್ರಧಾನ ಚಿಕಿತ್ಸೆ
ಪಂಚಕರ್ಮ ಆಯುರ್ವೇದ ಪದ್ಧತಿಯ
ವಿಶೇಷ ಚಿಕಿತ್ಸೆ ಬಹಳ ದಿನಗಳಿಂದ ಬಾಧಿಸುತ್ತಿರುವ ಕಾಯಿಲೆಗಳಿಗೆ, ಗಟ್ಟಿಯಾಗಿ ಬೇರೂರಿರುವ ರೋಗಗಳಿಗೆ, ಕಾಯಿಲೆಗಳನ್ನು ಬೇರು ಸಹಿತ ಕಿತ್ತೊಗೆಯುವ ಉಪಾಗಿರು ವಮನ (ವಾಂತಿ ಮಾಡಿಸುವುದು), ವಿರೇಚನ (ಬೇಧಿ ಮಾಡಿಸುವುದು) ಬಸ್ತಿ (ಔಷಧಿಸಿದ್ದ ತೈಲ, ಕಷಾಯಗಳನ್ನು ಗುದದ್ವಾರದ ಮೂಲಕ ಕೊಡುವುದು), ನಸ್ಯ (ಮೂಗಿಗೆ ಔಷಧಿ ಹಾಕುವುದು) ರಕ್ತ ಮೋಕ್ಷಣ (ರಕ್ತಸ್ರಾವ ಉಂಟಾಗುವಂತೆ ಮಾಡುವುದು), ಇವುಗಳಿಗೆ ಚಿಕಿತ್ಸೆಯ ಮೊದಲು ಮತ್ತು ನಂತರ ವಿವಿಧ ತಯಾರಿ ಅವಶ್ಯವಿರುತ್ತದೆ.
ಈ ಚಿಕಿತ್ಸೆಗಳು ಅತೀ ಪ್ರಭಾವಶಾಲಿಯಾಗಿದ್ದು ನುರಿತ ವೈದ್ಯರ ಮಾರ್ಗದರ್ಶನದಲ್ಲಿಯೇ ಪಡೆಯಬೇಕಾಗುತ್ತದೆ ಆಯುವೇರ್ದದ ಪ್ರಕಾರ ರೋಗಗಳುಂಟಾಗಲು, ನಮ್ಮ ಆಹಾರ, ಆಹಾರ ಕ್ರಮ, ವಿಹಾರ (ಅಭ್ಯಾಸಗಳು) ಮುಖ್ಯ ಕಾರಣ, ಇದನ್ನೇ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಲ್ಲಿ ಕಾಣಬಹುದು. ನಮ್ಮ ಆರೋಗ್ಯಕ್ಕೆ ಹಾಗೂ ಅನಾರೋಗ್ಯಕ್ಕೆ ಶರೀರವನ್ನು ಪ್ರತಿನಿಧಿಸುವ ವಾತ, ಪಿತ್ತ, ಕಥೆಗಳೆಂಬ ಅಂಶಗಳ ಸಾಮ್ಯಾವಸ್ಥೆ ಹಾಗೂ ವಿಷಮಾವಸ್ಥೆಯೇ ಕ್ರಮವಾಗಿ, ಕಾರಣ. ನಿಯಮಿತ ಸಮುಚಿತ ಆಹಾರ ವಿಹಾರಗಳು ಆರೋಗ್ಯ- ಕೈ ಕಾರಣವಾದರೆ, ಇದರ ವಿಪರೀತ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಕಾಲಕಾಲಕ್ಕೆ ಉಂಟಾಗುವ ನೈಸರ್ಗಿಕ ಬದಲಾವಣೆಳಿಂದಲೂ ಕೂಡ ವಾತ, ಪಿತ್ತ, ಕಫಗಳಲ್ಲಿ ಏರು ಪೇರ ಉಂಟಾಗುತ್ತದೆ.
ಇವುಗಳು ರೋಗಗಳನ್ನುಂಟು ಮಾಡುವ ಮೊದಲೇ, ದೇಹದಲ್ಲಿ ಸಂಗ್ರಹಿಸಲ್ಪಟ್ಟ ಅನಾವಶ್ಯಕ ಅಂಶಗಳನ್ನು ಪಂಚಕರ್ಮದ ಮೂಲಕ ಹೊರ ಹಾಕುವುದರಿಂದ ಬರಲಿರುವ ರೋಗಗಳನ್ನು ತಡೆಗಟ್ಟಬಹುದು. ಉತ್ತಮ ಆರೋಗ್ಯವನ್ನು ಕಾಪಾಡಲು, ಆಕಾಲ ಮುದಿತನವನ್ನು ಹೋಗಲಾಡಿಸಲು. ಶರೀರಕ್ಕೆ ಕಾಯಕಲ್ಪವನ್ನು ನೀಡಿ ದೀರ್ಘಾಯುಗಳಾಗಲು ಉಪಯೋಗಿಸುವ ರಸಾಯನ ಚಿಕಿತ್ಸೆ ಹಾಗೂ ಉತ್ತಮ ಸಂತಾನ ಪ್ರಾಪ್ತಿಗೆ ಕೌಟುಂಬಿಕ ಸುಖಕ್ಕೆ ಉಪಯೋಗಿಸುವ ವಾಜೀಕರಣ ಚಿಕಿತ್ಸೆಯ ಪೂರ್ವದಲ್ಲಿ ಪಂಚಕರ್ಮ ಚಿಕಿತ್ಸೆಯಿಂದ (ಶರೀರದಿಂದ ಕೊಳೆ ತೆಗೆಯುವ ವಿಧಾನ) ಇದಲ್ಲದೇ ಮಾನಸಿಕ ಅತ್ಯಗತ್ಯ.
ಚೈತನ್ಯವನ್ನು ನೀಡಲು ಪಂಚಕರ್ಮ ಚಿಕಿತ್ಸೆ ಪರಿಣಾಮಕಾರಿಯಾಗಿದೆ.
ವಮನ : ಅಸ್ತಮಾ, ಅಪಸ್ಮಾರ, ಸೋರಿಯಾಸಿಸ್ ಮುಂತಾದ ಚರ್ಮ ವ್ಯಾಧಿಗಳಲ್ಲಿ ಈ ಚಿಕಿತ್ಸೆಯನ್ನು ಉಪಯೋಗಿಸುತ್ತಾರೆ.
ವಿರೇಚನ :-ವಿರೇಚನ ಕರ್ಮವನ್ನು ಸಾಮಾನ್ಯವಾಗಿ ಕುಷ್ಟ, ಚರ್ಮರೋಗ, ಜಾಂಡೀಸ್, ಕಾಮಲೆ, ಅಸ್ತಮಾ ಮುಂತಾದ ಪಿತ್ತ ಪ್ರಧಾನ ರೋಗಗಳಲ್ಲಿ ಉಪಯೋಗಿಸುತ್ತಾರೆ.
ಬಸ್ತಿ :- ಇದು ವಾತ ಸಂಬಂಧಿ ಕಾಯಿಲೆಗಳಲ್ಲಿ ಬಹು ಉಪಯುಕ್ತ ಇದನ್ನು ಪಾರ್ಶವಾಯು ಶಿರಸಂಬಂಧಿತ ಹಾಗೂ ನರರೋಗ ಕಾಯಿಲೆಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ನಸ್ಯ : ಮೈಗ್ರೇನ್, ಮೂಗು ಕಟ್ಟುವುದು, ತಲೆನೋವು, ಪದೇ ಪದೇ ಶೀತ, ನೆಗಡಿ ತೊಂದರೆಗಳಲ್ಲಿ, ಹಣೆಯ ಒಳಭಾಗದಲ್ಲಿ ಕಫ ಕಟ್ಟಿ ಪದೇ ಪದೇ ಸೈನಸೈಟಿಸ್ ಸೋಂಕು ಉಂಟಾಗುತ್ತಿದ್ದಲ್ಲಿ ನಸ್ಯ ಉತ್ತಮ ಚಿಕಿತ್ಸಾ ಆಯ್ಕೆ ಮೂಗು ಗಂಟಲುಗಳನ್ನು ಶುದ್ದಿಗೊಳಿಸಬೇಕು. ಇದು ಮೂಗು, ಹಣೆಯಲ್ಲಿ ಸಂಗ್ರಹವಾದ ಕಫ, ಕೀವುಗಳನ್ನು ಹೊರ ಹಾಕುತ್ತದೆ.
ರಕ್ತ ಮೋಕ್ಷಣ : ವಿಶೇಷವಾಗಿ ಚರ್ಮರೋಗಗಳಲ್ಲಿ, ವಿಷ ಪ್ರಯೋಗಗಳಲ್ಲಿ, ರಕ್ತ ದೃಷ್ಟಿಯಿಂದಾದ ರೋಗಗಳಲ್ಲಿ ಸರ್ಪಸುತ್ತು, ಕುರ ಇತ್ಯಾದಿಗಳಲ್ಲಿ ಆಶುದ್ಧ ರಕ್ತ ಹೊರಹಾಕುವುದು ಅವಶ್ಯವೆಂದು ಕಂಡಾಗ ಪ್ರಯೋಗಿಸಲಾಗುತ್ತದೆ. ಆಯುರ್ವೇದ ವೈದ್ಯಪದ್ಧತಿ ಯಾಕೆ ಪ್ರಯೋಜಕಾರಿ ಎಂದರೆ ಸುಲಭ ಚಿಕಿತ್ಸೆ, ಅತಿಯಾಗಿ ಮಾತ್ರೆ ಔಷಧ ತಿನ್ನುವ ಶ್ರಮವಿಲ್ಲ, ನೋವಿಲ್ಲದ ಚಿಕಿತ್ಸೆ, ಶೀಘ್ರ ಪರಿಣಾಮಕಾರಿ.
ಪಕ್ಷಘಾತ (ಲಕ್ವ) ರೋಗಕ್ಕೆ ಶಿರೋಬಸ್ತಿ : ಕಣ್ಣು, ಕಿವಿ, ಮೂಗು ಇತ್ಯಾದಿ ಕುತ್ತಿಗೆಯ ಮೇಲ್ಬಾಗದ ಅವಯವಗಳ ತೊಂದರೆಯಲ್ಲಿ, ಮೆದುಳು, ನರಮಂಡಲಕ್ಕೆ ಸಂಬಂಧಿಸಿದ ರೋಗಗಳಲ್ಲಿ ಇದೊಂದು ಚಿಕಿತ್ಸಾಕ್ರಮ ಪ್ರಭಾವಶಾಲಿ.