ಆತ್ಮೀಯ ನಾಗರಿಕರೇ, ಈಗಾಗಲೇ ಕೇಂದ್ರ ಸರ್ಕಾರವು ಜನರ ಉದ್ಧಾರಕ್ಕಾಗಿ ಹಲವಾರು ಯೋಜನೆ ತಂದಿದೆ. ಅದೇ ರೀತಿ pmfme ಯೋಜನೆ ಎಂಬ ಹೊಸ ಯೋಜನೆಯನ್ನು ತಂದಿದ್ದಾರೆ. ಇದರಲ್ಲಿ ಶಾವಿಗೆ ತಯಾರಿಕೆ ಮಾಡುವ, ರೊಟ್ಟಿ ತಯಾರಿಕೆ ಮಾಡುವ, ಹಪ್ಪಳ ತಯಾರಿಕೆ ಮಾಡುವ, ಬೇಕರಿ ಪದಾರ್ಥ ತಯಾರಿಕೆ ಮಾಡುವ, ಸಿರಿಧಾನ್ಯ ಸಂಸ್ಕರಣೆ ಮಾಡುವ, ಹಿಟ್ಟು ತಯಾರಿಕೆ ಮಾಡುವ, ಶೇಂಗಾ ಪದಾರ್ಥಗಳು ತಯಾರಿಕೆ ಮಾಡುವ, ಅಡುಗೆ ಎಣ್ಣೆ ತಯಾರಿಕೆ ಮಾಡುವ, ಕಾರದಪುಡಿ ತಯಾರಿಕೆ ಮಾಡುವ, ಮಸಾಲೆ ಪುಡಿ ತಯಾರಿಕೆ ಮಾಡುವ, ಉಪ್ಪಿನಕಾಯಿ ತಯಾರಿಕೆ ಮಾಡುವ, ಅರಿಶಿಣ ಪುಡಿ ತಯಾರಿಕೆ ಮಾಡುವ, ಚುರುಮುರಿ ಅವಲಕ್ಕಿ ಮಾಡುವ ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಕೆ ಮಾಡುವಂತಹ ಕೆಲಸಗಳಿಗೆ ಸಹಾಯಧನವನ್ನು ನೀಡುತ್ತಾರೆ.
ಈ ಯೋಜನೆಯ ಅರ್ಜಿ ಸಲ್ಲಿಸಲು ಯಾವ ದಾಖಲಾತಿಗಳು ಬೇಕು
ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ತಮ್ಮ ಆಧಾರ್ ಕಾರ್ಡ್, ತಮ್ಮ ಕರೆಂಟ್ ಬಿಲ್, ತಮ್ಮ ವಾಸ್ತು ಸ್ಥಳದ ಪ್ರಮಾಣ ಪತ್ರ, ಇಷ್ಟ ಇಲ್ಲದೆ ಅವರು ಸ್ಥಾಪನೆ ಮಾಡುವ ಘಟಕದ ಹತ್ತಿರ ಹತ್ತಿರ ನಿಂತು ಒಂದು ಫೋಟೋ ತಗಿಸಿಕೊಂಡು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಇಷ್ಟ ಇಲ್ಲದೆ ಅವರು ಮುನ್ಸಿಪಾಲಿಟಿಯಿಂದ ಒಂದು ಲೈಸನ್ಸ್ ತೆಗೆದುಕೊಳ್ಳಬೇಕು. ಮತ್ತು ಈ ಕಾರ್ಯಗಳನ್ನು ಮಾಡಲು ಅವರು ತರಬೇತಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಮೇಲೆ ಕ್ಲಿಕ್ ಮಾಡಿ ಈ ವೆಬ್ ಸೈಟಿಗೆ ಭೇಟಿ ನೀಡಿ. www.pmfme.mofpi.gov.in
ಆಮೇಲೆ ಕ್ಲಿಕ್ ಮಾಡಿದ ಮೇಲೆ ಚಿತ್ರದಲ್ಲಿ ಕಾಣುವ ಹಾಗೆ ಪಿಎಂಎಫ್‌ಎಂಇ ಸೈಡಿಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ನೀವು ಯೋಜನೆಯ ಭಾರತದ ಆಹಾರ ಸಂರಕ್ಷಣಾ ಕ್ಷೇತ್ರವನ್ನು ಬಳಸಿಕೊಂಡು ನೀವು ಸೂಕ್ಷ್ಮಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರ ನಿಮಗೆ ಹಲವಾರು ರೀತಿಯ ಸಾಲವನ್ನು ನೀಡುತ್ತದೆ. ಈ ಯೋಜನೆಯಿಂದಾಗಿ ಸರ್ಕಾರವು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಹಲವಾರು ಜನರಿಗೆ ಉಪಯುಕ್ತವಾಗಿದೆ.
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ
ಸ್ವಯಂ ಉದ್ಯೋಗ ಮಾಡಲು ಹಿಂದುಳಿದ ವರ್ಗಗಳ ಇಲಾಖೆಯಿಂದ 1.5 ಲಕ್ಷ ಸಾಲ ಸೌಲಭ್ಯ
ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ