ಯೋಜನೆಯ ವಿವರ
ರೊಟ್ಟಿ ತಯಾರಿಕೆ, ಶಾವಿಗೆ ತಯಾರಿಕೆ, ಹಪ್ಪಳ ತಯಾರಿಕೆ, ಬೇಕರಿ ಪದಾರ್ಥಗಳು, ಚಕ್ಕಲಿ ತಯಾರಿಕೆ, ಸಿರಿಧಾನ್ಯ ಸಂಸ್ಕರಣೆ, ಹಿಟ್ಟು/ರವಾತಯಾರಿಕೆ, ಶೇಂಗಾ ಪದಾರ್ಥಗಳು, ಅಡಿಗೆಎಣ್ಣೆತಯಾರಿಕೆ, ಖಾರಾ ಪುಡಿತಯಾರಿಕೆ, ಮಸಾಲೆ ಖಾರತಯಾರಿಕೆ, ವಿವಿಧಚ ಪುಡಿಗಳು. ಕುರುಕಲುತಿಂಡಿತಯಾರಿಕೆ, ಉಪ್ಪಿನಕಾಯಿತಯಾರಿಕೆ. ಲಿಂಬೆ ಜಾಮ್/ಗುಳಂ, ಹಣ್ಣು/ತರಕಾರಿ ಸಂಸ್ಕರಣೆ, ಅರಿಶಿನ ಪೌಡರ್, ಚುರುಮರು(ಮಂಡಕ್ಕಿ)/ಅವಲಕ್ಕಿ ತಯಾರಿಕೆ, ಬೆಳ್ಳುಳ್ಳಿ/ಈರುಳ್ಳಿ ಸಂಸ್ಕರಣೆ, ಹಾಲಿನ ಉತ್ಪನ್ನಗಳು.
ಬೇಕಾಗುವ ದಾಖಲಾತಿಗಳು:
1)ಆಧಾರಕಾರ್ಡ, 2) ಪಾನ್‌ಕಾರ್ಡ, 3) ಬ್ಯಾಂಕ್ ಪಾಸ್ ಬುಕ್ 4) ಕರೆಂಟ್ ಬಿಲ್, 5)ಉದ್ಯೋಗ ಸ್ಥಳದ ಉತಾರಿ, ಬಾಡಿಗೆಕರಾರು ಪತ್ರ, 6) ಎಂ. ಎಸ್. ಎಂ. ಇ ಲೈಸೆನ್ಸ್ (ಉದ್ಯಮ), 7) ಸೈಟಿನ ಬಳಿ ನಿಂತಿರುವಅರ್ಜಿದಾರರ ಭಾವಚಿತ್ರ
ಬ್ಯಾಂಕ್ ಅಧಿಕಾರಿಗಳು ಒಪ್ಪಿದ ಸೂಚಿಸಿದ ನಂತರ ನೀಡಬೇಕಾದ ದಾಖಲೆಗಳು
1)ಪಂಚಾಯ್ತಿ ಅಥವಾ ಮುನ್ಸಿಪಾಲಿಟಿ ಲೈಸೆನ್ಸ್ ಮತ್ತು ಎನ್ ಓ ಸಿ. 2) ಬ್ಯಾಂಕ್ ಸಿವಿಲ್ ಸ್ಕೋರ್‌ಚೆನ್ನಾಗಿರಬೇಕು, 3) ತರಬೇತಿ ಪ್ರಮಾಣ ಪತ್ರ, 4) ಫಲಾನುಭವಿ ವಂತಿಗೆ 10% ಯಂತ್ರಗಳಿಗೆ ಹಾಗೂ 20% ವಂತಿಗೆ ಬಂಡವಾಳಕ್ಕೆ ಮೇಲಿನ ದಾಖಲೆಗಳ ಜೊತೆ ಬಂದರೆಅರ್ಜಿ ಸಲ್ಲಿಸಿ, ಲೋನ್ ಗೆ ಶಿಫಾರಸ್ಸು ಮಾಡಲಾಗುವುದು.
ಜಿಲ್ಲೆಯ ಪ್ರತಿ ಕುಟುಂಬ ಪಂಚ ಯೋಜನೆಗಳ ಫಲಾನುಭವಿಯಾಗಬೇಕು : ಜನರ ಜಾಗೃತಿಗಾಗಿ ಯೋಜನಾ ಸಮಾವೇಶ
ರಾಜ್ಯ ಸರಕಾರದ ಐದು ಪ್ರಮುಖ ಯೋಜನೆಗಳು ರಾಷ್ಟ್ರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳೆಂದು ಪ್ರಸಿದ್ದಿಯಾಗಿದ್ದು, ಪ್ರತಿ ಕುಟುಂಬವು ಪಂಚ ಯೋಜನೆಗಳ ಫಲಾನುಭವಿಗಳಾಗಬೇಕು. ಸರಕಾರದ ಪ್ರಮುಖ, ಜನಪ್ರಿಯ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶಗಳನ್ನು ಸರಕಾರದ ನಿರ್ದೇಶನದ ಮೇರೆಗೆ ಆಯೋಜಿಸಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಧಾರವಾಡ ಸಕ್ಯೂಟ್ ಹೌಸ್‌ದಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಿದ್ಧತೆಗಾಗಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.
ಧಾರವಾಡ ನಗರದ ಕೆಸಿಡಿ ಮೈದಾನದಲ್ಲಿ ನಾಳೆ, ಫೆಬ್ರುವರಿ 5 ರಂದು ಸಂಜೆ 5 ಗಂಟೆಗೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಯೋಜನೆಗಳು ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಲಾಗಿದೆ. ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ ಮತಕ್ಷೇತ್ರದ ಹಾಗೂ ಅಳ್ಳಾವರ ತಾಲೂಕಿನ ಫಲಾನುಭವಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಫಲಾನುಭವಿಗಳ ಧಾರವಾಡ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಂಟು ಸಾವಿರ, ಆಹಾರ ಮತ್ತು ನಾಗರಿಕ ಇಲಾಖೆಯ 10 ಸಾವಿರ. ಕೆಎಂಎಫ್ ಇಲಾಖೆಯ ಒಂದು ಸಾವಿರ ಮತ್ತು ಕಾರ್ಮಿಕ ಇಲಾಖೆಯ ಒಂದು ಸಾವಿರ ಜನ ಸೇರಿ ವಿವಿಧ ಇಲಾಖೆಗಳ ಅಂದಾಜು 21 ಸಾವಿರ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು. ಸಮಾವೇಶಕ್ಕೆ ಫಲಾನುಭವಿಗಳು ಗ್ರಾಮೀಣ ಭಾಗದ 141 ವಿವಿಧ ಗ್ರಾಮಗಳ ಸ್ಥಳಗಳಿಂದ ಮತ್ತು ಧಾರವಾಡ ನಗರದ 82 ಸ್ಥಳಗಳಿಂದ ಆಗಮಿಸುತ್ತಿದ್ದು, ಅವರ ಬರುವಿಕೆಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸುಮಾರು 223 ಬಸ್‌ಗಳನ್ನು ನಿಯೋಜಿಸಲಾಗಿದ್ದು, ಅಂದಾಜು 303 ಟ್ರಿಕೆಎಗಳಲ್ಲಿ ಫಲಾನುಭವಿಗಳು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಸಚಿವರು ಹೇಳಿದರು.
ಕೆಸಿಡಿ ಮೈದಾನದಲ್ಲಿ ಸಮಾವೇಶಕ್ಕಾಗಿ ಬೃಹತ್ತ ವೇದಿಕೆ ಹಾಕಲಾಗುತ್ತಿದೆ. ಎಲ್ಲರಿಗೂ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿದೆ. ಮತ್ತು ಬೇರೆ ಬೇರೆ ಗ್ರಾಮ, ಸ್ಥಳಗಳಿಂದ ಆಗಮಿಸುವ ಫಲಾನುಭಿಗಳಿಗೆ ಲಘುಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಸಮಾವೇಶಕ್ಕಾಗಿ ಆಗಮಿಸುವ ಬಸ್, ವಾಹನಗಳ ನಿಲುಗಡೆಗೆ ಕೆಸಿಡಿ ಮೈದಾನ ಸಮೀಪದ ವಿವಿಧ ಸ್ಥಳಗಳಲ್ಲಿ ಅವಕಾಶ ಮಾಡಲಾಗಿದೆ. ಸುಗಮ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು, ಸಾರ್ವಜನಿಕರಲ್ಲಿ ಯೋಜನೆಗಳ ಕುರಿತು ಅರಿವು ಮೂಡಿಸುವುದು ಮುಖ್ಯವಾಗಿದೆ.
ಸರಕಾರದ ನಿರ್ದೇಶನದಂತೆ ಧಾರವಾಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶ ಸಂಘಟಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಕ್ಷೇತ್ರಮಟ್ಟದ ಸಿಬ್ಬಂದಿಗಳು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು. ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದರು.
ವಿಶ್ವ ಕ್ಯಾನ್ಸರ್ ದಿನಾಚರಣೆ ಉಚಿತ ತಪಾಸಣೆ ಮತ್ತು ಜಾಗೃತಿ ಜಾಥಾ ಆಯೋಜನೆ
ಧಾರವಾಡ : ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಫೆಬ್ರವರಿ 5 ರಂದು ಬೆಳಿಗ್ಗೆ 10 ಘಂಟೆಗೆ ಜಿಲ್ಲಾ ಪಂಚಾಯತ ಆವರಣದಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆಗಳಲ್ಲಿ, ಎನ್‌ಸಿಡಿ ಕ್ಲೀನಿಕ್‌ಗಳಲ್ಲಿ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಫೆಬ್ರುವರಿ 5 ರ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ. ಅವರು ಚಾಲನೆ ನೀಡಲಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಾಗೃತಿ ಜಾಥಾ ಕಾರ್ಯಕ್ರಮವು ಜಿಲ್ಲಾ ಪಂಚಾಯತ ಆವರಣದಿಂದ ಪ್ರಾರಂಭಗೊಂಡು ಕೋರ್ಟ ಸರ್ಕಲ್ ಮಾರ್ಗವಾಗಿ ಆಲೂರ ವೆಂಕಟರಾವ್ ವೃತ (ಜುಬ್ಲಿ ಸರ್ಕಲ್) ದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.
ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಂಬಾಕು ವ್ಯಸನಮುಕ್ತ ಕೇಂದ್ರ, ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ತಾಲೂಕಾ ಎನ್.ಸಿ.ಡಿ ಕ್ಲಿನಿಕ್, ಕಲಘಟಗಿ ಕುಂದಗೋಳ, ನವಲಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಫೆ.5 ರಂದು 30 ವರ್ಷ ಮೇಲ್ಪಟ್ಟವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಹಾಗೂ ಸಾಮಾನ್ಯ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.