ಆತ್ಮೀಯ ನಾಗರಿಕರೇ, ಜನರ ಉದ್ದಾರಕ್ಕಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ತಂದು ಅವರ ಅಭಿವೃದ್ಧಿಗೆ ಕಾರಣವಾಗಿದೆ. ಈಗ ನಮ್ಮ ಕೇಂದ್ರ ಸರ್ಕಾರವು ಬೀದಿ ವ್ಯಾಪಾರಿಗಳಿಗೆ ಒಂದು ಹೊಸ ಯೋಜನೆಯನ್ನು ತಂದು ಅವರಿಗೆ ಅನುದಾನವನ್ನು ನೀಡಲು ನಿರ್ಧಾರ ಮಾಡಿದೆ. ಏನಿದು ಅನುದಾನ ಎಷ್ಟು? ಅನುದಾನ ಕೊಡುತ್ತಾರೆ ಇದಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು?
ಇಡೀ ನಮ್ಮ ದೇಶದಲ್ಲಿರುವಂತಹ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ ಯೋಜನೆಯನ್ನು ಪ್ರಾರಂಭ ಮಾಡಿದೆ. ಈ ಯೋಜನೆಯ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ತಮ್ಮ ಜೀವನೋಪಾಯ ಮತ್ತು ಊಟದ ವ್ಯವಸ್ಥೆಗೆ ಮಾಡಿರುವಂತಹ ಒಂದು ಯೋಜನೆಯಾಗಿದೆ. ಆದ ಕಾರಣ ನಮ್ಮ ಸರ್ಕಾರವು ಅತಿ ಕಡಿಮೆ ಬಡ್ಡಿ ದರದಲ್ಲಿ ಈ ಹಣವನ್ನು ನೀಡಿ ಜನರಿಗೆ ಉಪಯುಕ್ತವಾಗುವಂತ ಕೆಲಸವನ್ನು ಮಾಡಿದೆ.
ಯಾರಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
ಹಾಲು ಮಾರಾಟ ಮಾಡುವವರು, ದಿನಪತ್ರಿಕೆಯನ್ನು ಹಾಕುವವರು, ಬೀದಿಯ ಬದಿಯಲ್ಲಿ ವ್ಯಾಪಾರ ಮಾಡುವವರು, ಸಣ್ಣ ಪ್ರಮಾಣದಲ್ಲಿ ಉದ್ಯಮಗಳನ್ನು ಪ್ರಾರಂಭ ಮಾಡುವವರು. ಮೊದಲು ನಿಮಗೆ ಸರ್ಕಾರವು 10,000ಗಳ ಹಣವನ್ನು ನೀಡುತ್ತಾರೆ. ಆಮೇಲೆ ಕಂತುಗಳ ಆಧಾರದ ಮೇಲೆ ನಿಮಗೆ ಉಳಿದ ಹಣವನ್ನು ಕೊಡುತ್ತಾ ಹೋಗುತ್ತಾರೆ. ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಹೇಗೆ ಎಂದು ತಿಳಿಯಬೇಕಾಗಿದೆ.
ಈ ಯೋಜನೆಯ ಎಲ್ಲ ಕಂತುಗಳನ್ನು ಪಡೆಯುವುದು ಹೇಗೆ?
ಮೊದಲು ನಿಮಗೆ ಕೊಟ್ಟಿರುವಂತಹ 10000 ಸಾಲವನ್ನು ನೀವು 12 ತಿಂಗಳಲ್ಲಿ ಸರಿಯಾಗಿ ಮರುಪಾವತಿ ಮಾಡಬೇಕಾಗುತ್ತದೆ. ಆಗ ಮಾತ್ರ ನಿಮಗೆ ಎರಡನೆಯ ಕಂತು ಅಂದರೆ 20 ಸಾವಿರ ರೂಪಾಯಿಗಳನ್ನು ನೀಡುತ್ತಾರೆ. ಈ ಹಣವನ್ನು ನೀವು 18 ತಿಂಗಳಲ್ಲಿ ಮರುಪಾವತಿ ಮಾಡಲೇಬೇಕು. ಅಂದಾಗ ಮಾತ್ರ ನಿಮಗೆ ಕೊನೆಯ ಕಂತಾದ 50 ಸಾವಿರ ರೂಪಾಯಿಗಳನ್ನು ಸರ್ಕಾರವು ನಿಮಗೆ ನೀಡುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಜನರು ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಬೇಕು. ಅಲ್ಲಿಗೆ ಹೋಗುವ ಮುನ್ನ ನಿಮ್ಮ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ನಿಮ್ಮ ವಿಳಾಸ ಮತ್ತು ಆಧಾರ್ ಕಾರ್ಡನ್ನು ತೆಗೆದುಕೊಂಡುತೆಗೆದುಕೊಂಡು ಹೋಗಲೇಬೇಕಾಗುತ್ತದೆ. ನಿಮ್ಮ ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಕೊಡಲಿ ಅರ್ಜಿ ಸಲ್ಲಿಸಿ ಇದರಿಂದ ಸಾಲವನ್ನು ಪಡೆದುಕೊಂಡು ನಿಮ್ಮ ಉದ್ಯೋಗವನ್ನು ಮತ್ತು ನಿಮ್ಮ ಅಭಿವೃದ್ಧಿಗಾಗಿ ಬಯಸಿಕೊಳ್ಳಬೇಕಾಗಿ ವಿನಂತಿ.
PM ವಿಶ್ವಕರ್ಮ ಯೋಜನೆ, ➡️ ಕುಶಲಕರ್ಮಿಗಳಿಗೆ 15 ದಿನ ವಿಶೇಷ ತರಬೇತಿ ನೋಂದಣಿ ಮಾಡಿ*
ಈ ಗಿಡ್ಡ ತೆಂಗಿನ ತಳಿ ಬೆಳೆದು 2-3 ವರ್ಷದಲ್ಲಿ ಲಕ್ಷಗಟ್ಟಲೆ ಲಾಭ ಪಡೆಯಿರಿ
ಬೆಳೆವಿಮೆ ಹಣ ಪರಿಹಾರ, ಈ ಜಿಲ್ಲೆಯ ರೈತರಿಗೆ ಬರೋಬ್ಬರಿ 34.99 ಕೋಟಿ ರೂಪಾಯಿ ಬಿಡುಗಡೆಯಾಗಿದೆ*