ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿಸೆಂಬರ್ 16 ರಂದು ಸಂಜೆ ಧಾರವಾಡಕ್ಕೆ ಆಗಮಿಸಲಿದ್ದು, ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಯೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ತಿಳಿಸಿದರು. ಧಾರವಾಡದ ನೂತನ ಅತಿಥಿ ಗೃಹದಲ್ಲಿ ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಸಚಿವರು ದಿನಾಂಕ: 16 ರಂದು ಸಂಜೆ ಕೆಸಿಡಿ ಮೈದಾನದಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದಾರೆ.
ಬೃಹತ್ ಕಾರ್ಯಕ್ರಮದಲ್ಲಿ ಸಿಎಆರ್ ಅನುದಾನದಲ್ಲಿ ಅಂಗವಿಕಲರಿಗೆ 500 ಕ್ಕೂ ಹೆಚ್ಚು ತ್ರಿಚಕ್ರ ವಾಹನ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡುವರು. ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಹಾಗೂ ಐದು ಗ್ಯಾರಂಟಿಗಳ ಮಾಹಿತಿ ಹಾಕಲಾಗುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆಯೆಂದು ಸಚಿವರು ತಿಳಿಸಿದರು.
ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು. ಮುಖ್ಯ ವೇದಿಕೆ, ಆಸನದ ವ್ಯವಸ್ಥೆ, ಅತಿಥಿಗಳ ಕಾರ್ಯಕ್ರಮ, ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಕುರಿತಂತೆ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಇನ್ನೊಮ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದೆಂದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ.
ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರನ್, ಕಾರ್ಮಿಕ ಆಯುಕ್ತ ಡಾ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಸಿಇಓ ಸ್ವರೂಪ ಟಿ.ಕೆ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿ ಉಪಸ್ಥಿತರಿದ್ದರು. ನಂತರ ಸಚಿವರು ಕೆಸಿಡಿ ಮೈದಾನವನ್ನು ವೀಕ್ಷಿಸಿದರು.
ಹಳೆಯ ವಾಹನ ಹರಾಜು ಪ್ರಕಟಣೆ
ಬೆಂಗಳೂರು : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರ ಗ್ರಂಥಾಲಯ, ದಕ್ಷಿಣ ವಲಯ, ಜಯನಗರ, ಬೆಂಗಳೂರು ಈ ಕಛೇರಿ ವ್ಯಾಪ್ತಿಯ ಸ್ಥಗಿತಗೊಂಡಿರುವ ಹಳೆಯ ಅಂಬಾಸಿಡರ್ ಕಾರನ್ನು “ಹೇಗಿದಿಯೋ ಹಾಗೆ” ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆ ಅಧಿನಿಯಮ 2000 ರನ್ವಯ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ವಿಲೇವಾರಿ ಮಾಡಲಾಗುವುದು. ಅಸಕ್ತಿಯುಳ್ಳವರು ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಭಾಗವಹಿಸಬಹುದು.
ಹಳೆಯ ಅಂಬಾಸಿಡರ್ ಕಾರಿನ ಕನಿಷ್ಠ ವಿಲೇವಾರಿ ಮೊತ್ತ 17,000/- to 2,000/ http://eproc.karnataka.gov.in ವೆಬ್‌ಸೈಟ್‌ನಲ್ಲಿ ವಿಲೇವಾರಿ ನಿಯಮ ಹಾಗೂ ನಿಬಂದನೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ವಿಲೇವಾರಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಖಾತರಿ ಪಡಿಸುವ ಕೊನೆ ದಿನಾಂಕ ಹಾಗೂ ಸಮಯ ಡಿಸೆಂಬರ್ 26 ರ ಮಧ್ಯಾಹ್ನ 3.00 ಗಂಟೆ. ಆನ್‌ಲೈನ್‌ನಲ್ಲಿ ನೇರ ವಿಲೇವಾರಿ ಪ್ರಾರಂಭ ಹಾಗೂ ಮುಕ್ತಾಯವಾಗುವ ದಿನಾಂಕ ಡಿಸೆಂಬರ್ 28 ರ ಮಧ್ಯಾಹ್ನ 11.00 ಗಂಟೆಯಿಂದ ಮಧ್ಯಾಹ್ನ 3.00 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ನಗರ ಕೇಂದ್ರ ಗ್ರಂಥಾಲಯ, ದಕ್ಷಿಣ ವಲಯ, ಜಯನಗರ, ಬೆಂಗಳೂರು ಕಛೇರಿಯಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮನೆಯಂಗಳಕ್ಕೆ ಅಂಚೆ ಇಲಾಖೆ ಸೇವೆಗಳು
ಆಧಾರ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ಮೂಲಕ ನಗದು ಸೌಲಭ್ಯದ ಜತೆಗೆ ಅತ್ಯಂತ ಪ್ರಮುಖ ಸೇವೆಯಲ್ಲಿ ಒಂದಾಗಿರುವ ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ನಿವೃತ್ತ ಪಿಂಚಿಣಿದಾರರ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು 70 ರೂ.ಗಳ ಶುಲ್ಕ ತುಂಬಿ ಪೋಸ್ಟ ಇನ್‌ಫೋ ಅಲ್ಲಿಕೇಷನ್ ಮೂಲಕ ಪಡೆಯಲು ಅವಕಾಶ ಇರುತ್ತದೆ. ಪ್ರತಿವರ್ಷ ಪಿಂಚಿಣಿದಾರರು, ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಇದಕ್ಕಾಗಿ ಬ್ಯಾಂಕುಗಳಿಗೆ ಅಲೆದಾಡುವ ಅಗತ್ಯವಿಲ್ಲ. ನಿವೃತ್ತ ಜೀವನ ಕಳೆಯುವ ಹಿರಿಯ ನಾಗರಿಕರು ತಮ್ಮ ಬಡಾವಣೆ, ಗ್ರಾಮದ ಅಂಚೆ ಕಚೇರಿಗೆ ಭೇಟಿ ನೀಡಿ ಇಲ್ಲವೇ ಅಂಚೆಯಣ್ಣನನ್ನು ಸಂಪರ್ಕಿಸಿ ಈ ಸೌಲಭ್ಯ ಪಡೆಯಬಹುದಾಗಿದೆ. ಜೀವನ ಪ್ರಮಾಣ ಪತ್ರವನ್ನು ಪ್ರತಿವರ್ಷ ನವೆಂಬರ್ ಮತ್ತುಡಿಸೆಂಬರ ತಿಂಗಳಿನಲ್ಲಿ ಪಡೆದುಕೊಳ್ಳಲು ಅವಕಾಶ ಇರುತ್ತದೆ. ದೇಶದ ಯಾವುದ ಮೂಲೆಯಲ್ಲಿರುವರು ಪಿಂಚಿಣಿದಾರರು. ಅಲ್ಲಿನ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ ಮತ್ತು ಪಿಂಚಿಣಿ ಸಂಖ್ಯೆ ಸೇರಿದಂತೆ ಇತರ ಮಾಹಿತಿಯನ್ನು ನೀಡುವ ಮೂಲಕ ಇ-ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ಇರುತ್ತದೆ. ಅಲ್ಲದೇ ಮನೆಯಲ್ಲಿಯೇ ಕುಳಿತು ಈ ಸೌಲಭ್ಯ ಪಡೆಯಲು ಟೋಲ್-ಫ್ರೀ ಕಾಲ ಸಂಖ್ಯೆ: 155299 ಗೆ ಕರೆ ಮಾಡಿ ತಮಗೆ ಬೇಕಾಗುವ ಸೇವೆಯ ಕುರಿತು ರಿಕ್ವೆಸ್ಟ್ ಕೋರಿಕೆಯನ್ನು ಮಾಡಿದ್ದಲ್ಲಿ ತಮ್ಮ ಮನೆಯ ಬಾಗಿಲಿಗೆ ಅಂಚೆಯಣ್ಣ ಹಾಜರಾಗುತ್ತಾರೆ.
ಅಲ್ಲದೇ ಅಂಚೆ ಉಳಿತಾಯ ಖಾತೆ, ಮಕ್ಕಳ ಆಧಾರ ಕಾರ್ಡ್, ವಾಹನಗಳ ಇನ್ಸೂರೆನ್ಸ್, ಮೊಬೈಲ್ ಡಿಟಿಎಚ್ ರಿಚಾಜ್, ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಯನ್ನು ಮಾಡಬಹುದು.
ಅತ್ಯಂತ ಪ್ರಭಾವ ಶಾಲಿಯಾಗಿರುವ ಎಟಿಎಂ ಮಾದರಿಯಲ್ಲಿನಗದನ್ನು ಆಧಾರ ಎಇಪಿಎಸ್ ಮೂಲಕ ಗ್ರಾಹಕರು ಪಡೆದುಕೊಳ್ಳಲು ಅವಕಾಶ ಇರುತ್ತದೆ. ಈ ಸೇವೆಯ ಬಲವರ್ಧನೆಗಾಗಿ ಮಾಸಿಕವಾಗಿ ನಗದು (ಕ್ಯಾಶ) ವಹಿವಾಟು ನಡೆಸಲು ಅಂಚೆಯಣ್ಣನಿಗೆ ಇಲಾಖೆ ಗುರಿ ನೀಡಿದೆ ಹೀಗಾಗಿಯೇ ಮನೆಗೆ ಬರುವ ಅಂಚೆಯಣ್ಣ ನಿಮಗೆ ಕ್ಯಾಶ್ ಬೇಕಾ ಎಂದು ಕೇಳಿದರೂ ಕೇಳಬಹುದು. ಇಲಾಖೆಯ ಸೇವೆಗೆ ಉತ್ತೇಜನ ನೀಡಲು ಗ್ರಾಹಕರು ತಮ್ಮ ವ್ಯವಹಾರನ್ನು ಇಲ್ಲಿ ಮುಂದುವರೆಸಬೇಕು. ಮನೆ ಬಾಗಿಲಿಗೆ ಸಿಗುವ ಇಲಾಖೆಯ ಹಲವು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳದಿದ್ದಲ್ಲಿ ನಾಗರಿಕರಾದ ನಮಗೆ ನಷ್ಟವೇ ಹೋರತು ಇಲಾಖೆಗೆ ಅಲ್ಲ. ಇಲಾಖೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಸಾರ್ವಜನಿಕರು, ಗ್ರಾಹಕರು ನಡೆಸುವ ವಹಿವಾಟುಗಳ ಮೆಲೆ ಅವಲಂಬಿಸಿದೆ.
https://chat.whatsapp.com/Gm6a0DqjrOGLAWzSIe62LU