Breaking
Tue. Dec 17th, 2024

ಕೃಷಿ ಸಿಂಚಾಯಿ ಯೋಜನೆಯಡಿ ಸ್ಪ್ರಿಂಕ್ಲರ್, ಪೈಪ್ ಖರೀದಿಗೆ 5000 ಸಹಾಯಧನ

Spread the love

ಕೃಷಿ ಸಿಂಚಾಯಿ ಯೋಜನೆಯಡಿ ಸ್ಪ್ರಿಂಕ್ಲರ್, ಪೈಪ್ ಖರೀದಿಗೆ 5000 ಸಹಾಯಧನ. ಜಲಾನಯನ ಅಭಿವೃದ್ಧಿ ಘಟಕ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 2.0 (WDC-PMKSY 2.0). IWMP ಅನ್ನು “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ” (PMKSY-WDC) ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಕೇಂದ್ರ ಮತ್ತು ರಾಜ್ಯದ ಹಂಚಿಕೆ ಮಾದರಿಯು 60:40 ಅನುಪಾತದಲ್ಲಿದೆ.

PMKSY ಯ ಮುಖ್ಯ ಉದ್ದೇಶ:

➤ ಮಣ್ಣಿನ ತೇವಾಂಶ ಮತ್ತು ಪೋಷಕಾಂಶಗಳನ್ನು ಸಂರಕ್ಷಿಸಲು.
➤ ಅಂತರ್ಜಲ ಮರುಪೂರಣ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು.
➤ ಅರಣ್ಯೀಕರಣ ಮತ್ತು ಒಣ ಭೂಮಿ ತೋಟಗಾರಿಕೆ ಮೂಲಕ ಸಸ್ಯವರ್ಗವನ್ನು ಸುಧಾರಿಸಲು.

PMKSY-WDC 2.0 ರ ದೃಷ್ಟಿಕೋನವು ಮಳೆಯಾಶ್ರಿತ ಪ್ರದೇಶದ ಕೃಷಿಯ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸುವುದು. ಜಲಾನಯನ ಮಟ್ಟದಲ್ಲಿ, ರೈತರಿಗೆ ಹೆಚ್ಚಿನ ಆದಾಯವನ್ನು ಸಾಧಿಸುವುದು, ಭೂರಹಿತ ವ್ಯಕ್ತಿಗಳಿಗೆ ವಿಸ್ತೃತ ಜೀವನೋಪಾಯದ ಆಯ್ಕೆಗಳು, ಕಾರ್ಯಕ್ರಮದ ಪ್ರಯೋಜನಗಳ ವಿತರಣೆಯಲ್ಲಿ ಸಮಾನತೆ, ಸಮುದಾಯದ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಸಾಧಿಸುವುದು ಯೋಜನೆಯ ಗುರಿಯಾಗಿದೆ.

ಹಾಗಾದರೆ ಈ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ನೀವು ಸಬ್ಸಿಡಿಯನ್ನು ಪಡೆಯುವುದಾದರೆ ಹೇಗೆ ಪಡೆಯಬೇಕು ಎಂದು ಈ ಕೆಳಗೆ ತಿಳಿಸಿಕೊಟ್ಟಿದ್ದೇವೆ. ಈ ಯೋಜನೆಯು ಕೇವಲ ಹಲವು ಜಿಲ್ಲೆಗಳಲ್ಲಿ ಮಾತ್ರ ಲಭ್ಯವಿದ್ದು ನೀವು ನಿಮ್ಮ ಹತ್ತಿರದ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಅಗ್ರಿಕಲ್ಚರ್ ಕಚೇರಿಗಳಿಗೆ ಹೋಗಿ ವಿಚಾರಿಸಿದರೆ ಅಲ್ಲಿ ನಿಮ್ಮ ತಾಲೂಕಿನಲ್ಲಿ ಈ ಅರ್ಜಿಯನ್ನು ತೆಗೆದು ಕೊಳ್ಳಲಾಗುತ್ತದೆಯೋ ಅಥವಾ ಯಾವ ಸಮಯಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿಕೊಡುತ್ತಾರೆ. ಒಂದು ವೇಳೆ ಅರ್ಜಿಯನ್ನು ಸ್ವೀಕರಿಸುತ್ತಾರೆ ಎಂದಲ್ಲಿ ನೀವು ಈ ಕೆಳಗಿನ ಕೆಲಸವನ್ನು ಮಾಡಬೇಕಾಗಿದೆ.

ತಾಲ್ಲೂಕಿನ ಆಸಕ್ತ ರೈತರು ಅರ್ಜಿಯೊಂದಿಗೆ ತಮ್ಮ ಜಮೀನಿನ ಪಹಣಿ, ಆಧಾ‌ರ್ ಕಾರ್ಡ್ ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರದೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಲ್ಲಾ ಪಂಚಾಯಿತಿ) ಕಚೇರಿಯಲ್ಲಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

2021-22ನೇ ಸಾಲಿನಿಂದ ರಾಜ್ಯದ 62 ತಾಲೂಕುಗಳಲ್ಲಿ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸರಾಸರಿ 4800-5000 ಯೋಜನಾ ಗಾತ್ರದೊಂದಿಗೆ 62 ಜಲಾನಯನ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು 2023-24 ಸಾಲಿನಲ್ಲಿ ಎಷ್ಟು ಮಾಡುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ.

ಹೆಕ್ಟೇರ್ ಪ್ರದೇಶ, ಯೋಜನೆಯಡಿಯಲ್ಲಿ, ಸ್ಯಾಚುರೇಶನ್ ವಿಧಾನದಲ್ಲಿ ಮತ್ತು 5 ವರ್ಷಗಳ ಅವಧಿಗೆ MGNREGA, PMKSY-PDMC ಮತ್ತು ಇತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಒಮ್ಮುಖವಾಗಿದೆ. ಹಂಚಿಕೆ ಮಾದರಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40.

ಹರ್ ಖೇತ್ ಕೋ ಪಾನಿ “ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ”

ಜಲ ಸಂರಕ್ಷಣೆ ಮತ್ತು ಅದರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ಭಾರತ ಸರ್ಕಾರ ಬದ್ಧವಾಗಿದೆ. ಈ ಪರಿಣಾಮಕ್ಕಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸುವ ದೃಷ್ಟಿಯಲ್ಲಿ ವಿನ್ಯಾಸಗೊಳಿಸಲಾಗಿದೆ ‘ಹರ್ ಖೇತ್ ಕೋ ಪಾನಿ’ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವ ‘ಒಂದು ಹನಿಗೆ ಹೆಚ್ಚು ಬೆಳೆ’ ಎಂದು ಕೇಂದ್ರೀಕೃತ ರೀತಿಯಲ್ಲಿ ಕೊನೆಯಿಂದ ಅಂತ್ಯದ ಪರಿಹಾರದೊಂದಿಗೆ. ಮೂಲ ರಚನೆ, ವಿತರಣೆ, ನಿರ್ವಹಣೆ, ಕ್ಷೇತ್ರ ಅಪ್ಲಿಕೇಶನ್ ಮತ್ತು ಚಟುವಟಿಕೆಗಳು. ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜುಲೈ 1, 2015 ರಂದು ತನ್ನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ (PMKSY) ಅನುಮೋದನೆ ನೀಡಿದೆ.

DA&FW ಪರ್ ಡ್ರಾಪ್ ಮೋರ್ ಕ್ರಾಪ್ ಯೋಜನೆ ಜಾರಿಯಲ್ಲಿದೆ, ಇದು ದೇಶದಲ್ಲಿ 2015-16 ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಡ್ರಾಪ್ ಮೋರ್ ಕ್ರಾಪ್ ಯೋಜನೆಯು ಮುಖ್ಯವಾಗಿ ಮೈಕ್ರೋ ನೀರಾವರಿ (ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ) ಮೂಲಕ ಕೃಷಿ ಮಟ್ಟದಲ್ಲಿ ನೀರಿನ ಬಳಕೆಯ ದಕ್ಷತೆಯ ಮೇಲೆ ಕೇಂದ್ರೀಕರಿಸುತ್ತದೆ. PDMC ರಿಂದ 2022-23 ರಿಂದ RKVY ಅಡಿಯಲ್ಲಿ ಅಳವಡಿಸಲಾಗಿದೆ.

10.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು, ದಕ್ಷಿಣ ಕನ್ನಡ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಕರಾವಳಿ ತೀರ ಭಾಗಗಳಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ ಸಾಮಾನ್ಯ ಮಳೆ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಜಾಸ್ತಿ ಮಳೆಯಾಗುವ ಮುನ್ಸೂಚನೆ ಇದ್ದರೂ ತೀವ್ರತೆ ಕಡಿಮೆ ಇರಬಹುದು.

ಧಾರವಾಡ, ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳಲ್ಲಿ ಉತ್ತಮ ಹಾಗೂ ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೋಲಾರ ಒಂದೆರಡು ಕಡೆ, ತುಮಕೂರು (ಪಾವಗಢ ಸೇರಿದಂತೆ) ಒಂದೆರಡು ಕಡೆ, ಚಿತ್ರದುರ್ಗ, ವಿಜಯಪುರ, ಜಿಲ್ಲಾ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.

ಈಗಿನಂತೆ ಜುಲೈ 12ರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಒಳನಾಡು ಭಾಗಗಳಲ್ಲಿಯೂ ಅಲ್ಲಲ್ಲಿ ಮಳೆಯ ಮುನ್ಸೂಚೆನೆ ಇದೆ. ಆದರೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಸಾಧ್ಯತೆಗಳಿವೆ.
ಕರಾವಳಿ ಭಾಗಗಳಲ್ಲಿ ಅಡಿಕೆ ತೋಟಗಳಿಗೆ, ಮಲೆನಾಡು ಭಾಗಗಳಲ್ಲಿ ಕಾಪಿ ತೋಟಗಳಿಗೆ ಔಷಧಿ ಸಿಂಪಡಿಸಲು ಇವತ್ತು ಹಾಗೂ ಜುಲೈ 11ರ ತನಕ ಸ್ವಲ್ಪ ಅವಕಾಶ ಸಿಗಬಹುದು. ಮಧ್ಯಾಹ್ನ ನಂತರ ಅವಕಾಶ ಕಡಿಮೆಯಾಗಬಹುದು. ಮಳೆ ಸಂಪೂರ್ಣ ಬಿಟ್ಟು ಸಿಗುವ ಸಾಧ್ಯತೆ ಕಡಿಮೆ.

09.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆ ಹೆಚ್ಚಿರುವ ಸಾಧ್ಯತೆ ಇದೆ.

ಇವತ್ತು ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಬಾಗಲಕೋಟೆ, ವಿಜಯಪುರ, ಗದಗ, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಮೈಸೂರು, ಮಂಡ್ಯ, ಫ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ದಕ್ಷಿಣ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಹಾವೇರಿ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಾವಣಗೆರೆ, ಚಿತ್ರದುರ್ಗ ಉತ್ತರ, ಬಳ್ಳಾರಿ ಜಿಲ್ಲೆಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.

ಈಗಿನಂತೆ ಜುಲೈ 9ರಿಂದ ಎರಡು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗುವ ಲಕ್ಷಣಗಳಿವೆ. ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ಜುಲೈ 11ರಿಂದ ಕರಾವಳಿ, ಮಲೆನಾಡು ಭಾಗಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.

08.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಹಾಸನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಹೆಚ್ಚಿನ ಭಾಗಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು.

ತುಮಕೂರು, ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಭಾಗಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ದಕ್ಷಿಣ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ ಜುಲೈ 9 ಅಥವಾ 10ರಿಂದ ದಕ್ಷಿಣ ಕರಾವಳಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಉತ್ತರ ಒಳನಾಡು ಹಾಗೂ ಉತ್ತರ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.

Related Post

Leave a Reply

Your email address will not be published. Required fields are marked *