ಆತ್ಮೀಯ ರೈತ ಬಾಂಧವರೇ,
ಇಂದು ಸರ್ಕಾರದ ಹೊಸ ಯೋಜನೆಯ ಬಗ್ಗೆ ತಿಳಿಯೋಣ, ಆ ಯೋಜನೆ ಹೆಸರು ಪರಂಪರಾಗತ್ ಕೃಷಿ ವಿಕಾಸ ಯೋಜನೆ. ಈ ಯೋಜನೆಯ ಉದ್ದೇಶ ಏನೆಂದರೆ ರೈತರು ಸಾವಯ ಕೃಷಿಯನ್ನು ಪ್ರಾರಂಭಿಸಬೇಕು ಮತ್ತು ಅವರು ತಮ್ಮ ಹೊಲದಲ್ಲಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು. ತಮ್ಮ ಹೊಲದ ಮಣ್ಣಿಗೆ ರಾಸಾಯನಿಕ ಮುಕ್ತವಾದ ಗೊಬ್ಬರ ಮತ್ತು ಪೌಷ್ಟಿಕಾಂಶ ಹೊಂದಿರುವ ಬೆಳೆಯನ್ನು ಉತ್ಪಾದಿಸಲು ಪ್ರಯತ್ನಿಸಬೇಕು ಮತ್ತು ಕೀಟನಾಶಕಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಈ ಯೋಜನೆಯು ರೈತರಿಗೆ ಸಾವಯುವ ಕೃಷಿ ಮಾಡಲು ಬೇಕಾಗುವ ಎಲ್ಲ ಸೌಕರ್ಯಗಳನ್ನು ಮತ್ತು ಮಾರಾಟ ಮಾಡಲು ಹಣಕಾಸಿನ ನೆರವನ್ನು ಕೊಡುತ್ತದೆ. ಇಲ್ಲಿ ನೋಡಿ ರೈತರೇ ಈ ಪರಂಪರಾಗತ್ ಕೃಷಿ ವಿಕಾಸ ಯೋಜನೆಯು ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 50000 ಆರ್ಥಿಕ ನೆರವು ದೊರಕಿಸಿಕೊಡುತ್ತದೆ. ಈ ಸಾವಯುವ ಕೃಷಿಯೂ 3 ವರ್ಷಗಳ ಕಾಲ ಇದರಲ್ಲಿ ಬರುವ ಮೊತ್ತದಿಂದ ಪ್ರತಿ ಹೆಕ್ಟರ್ ಗೆ 31000 ಕೀಟನಾಶಕ, ಸಾವಯವ ಗೊಬ್ಬರ, ಬೀಜಗಳನ್ನು ಪಡೆಯಬಹುದು. ಮೂಲ ವರ್ಧನೆ ಮತ್ತು ಬೆಳೆದ ಉತ್ಪನ್ನವನ್ನು ವಿತರಿಸುವ ಸಲುವಾಗಿ 8800 ರೂಪಾಯಿಗಳು. ಕ್ಲಸ್ಟರ್ ರಚನೆಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ 3000 ರೂಪಾಯಿಗಳು ನೀಡುತ್ತಾರೆ. ರೈತರು ಸಾರಿಗೆ, ಸಂರಕ್ಷಣಾ ಘಟಕ ನಿರ್ಮಾಣಕ್ಕಾಗಿ ಈ ನಿಧಿಯನ್ನು ಬಳಸಿಕೊಳ್ಳಬಹುದು.
ಈ ಯೋಜನೆಯ ಕಾರ್ಯ ಹೇಗೆ ಎಂದು ತಿಳಿಯೋಣ?
ಮೊದಲು 50 ರೈತರು ಒಟ್ಟಾಗಿ ಸೇರಿ 50,000 ಜಮೀನಿನ ಕ್ಲಸ್ಟರ್ ಗಳನ್ನು ರಚಿಸುತ್ತಾರೆ. ನಂತರ ಮೂರು ವರ್ಷಗಳಲ್ಲಿ ಹತ್ತು ಸಾವಿರ ಕ್ಲಸ್ಟರ್ ಗಳನ್ನು ರಚಿಸುವ ಗುರಿಯನ್ನು ಹೊಂದುತ್ತಾರೆ. ಇವೆಲ್ಲಾ 5 ಲಕ್ಷ ಎಕ್ಕರೆ ಭೂಮಿಯನ್ನು ಸಾವಯವ ಕೃಷಿಗಾಗಿ ಅಭಿವೃದ್ಧಿ ಗೊಳಿಸಲು ಕಾರಣವಾಗುತ್ತದೆ. ಇದರಲ್ಲಿ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬಳಸಿಕೊಳ್ಳುತ್ತಾರೆ. ಇದರಲ್ಲಿ ಬೇವಿನ ಕೇಕ್ ಗೊಬ್ಬರ, ಸಾರಜನಕ ಕೊಯ್ಲು,ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತದೆ. ಎಲ್ಲಾ ರೈತರು ಹಣ ಮತ್ತು ಪ್ರಮಾಣೀಕರಣವನ್ನು ಪಡೆಯುತ್ತಾರೆ. ಕೃಷಿಯು ಬೀಜಗಳು, ಕೊಯ್ಲು, ವಿತರಣೆ, ಮಾರುಕಟ್ಟೆ ಮತ್ತು ಹೆಚ್ಚಿನವುಗಳಲ್ಲಿ ಹಣಕಾಸಿನ ಬೆಂಬಲವನ್ನು ಈ ಯೋಜನೆ ಹೊಂದಿರುತ್ತದೆ.
ಯಾರು ಪರಂಪರಾಗತ್ ಕೃಷಿ ವಿಕಾಸ ಯೋಜನೆಗೆ ಅರ್ಹರು ಮತ್ತು ಅರ್ಜಿ ಸಲ್ಲಿಸಲು ದಾಖಲೆಗಳು ಯಾವುವು?
ಯೋಜನೆಗೆ ರೈತರು ಮಾತ್ರ ಅರ್ಹರು. ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸನ್ನು ಹೊಂದಿರಬೇಕು. ಭಾರತದಲ್ಲಿ ಶಾಶ್ವತ ನಿವಾಸವನ್ನು ಹೊಂದಿರುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಲು ದಾಖಲೆಗಳು- ನಿವಾಸ ಪ್ರಮಾಣಪತ್ರ, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಪಡಿತರ ಚೀಟಿ, ಆದಾಯ ಪ್ರಮಾಣಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ನಂಬರ
ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?
ಯೋಜನೆಯ ಅಧಿಕೃತ ವೆಬ್‌ಸೈಟ್ https://pgsindia-ncof.gov.in ಗೆ ಭೇಟಿ ನೀಡಬೇಕು.
ನಂತರ, ಅದು ನಿಮ್ಮನ್ನು ಮುಖಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ನೀವು ಕ್ಲಿಕ್ ಮಾಡಬೇಕಾದ Apply Now ಟ್ಯಾಬ್ ಅನ್ನು ನೀವು ಕಾಣಬಹುದು. ಇದು ಅರ್ಜಿ ನಮೂನೆಯನ್ನು ತೆರೆಯುತ್ತದೆ. ಹೆಸರು, ವಿಳಾಸ, ಬ್ಯಾಂಕ್ ವಿವರಗಳು ಮುಂತಾದ ಎಲ್ಲಾ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಬೇಕು. ನಂತರ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಕೊನೆಗೆ, ಸಲ್ಲಿಸು ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಗೆ ಹೋಗುತ್ತದೆ.
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡೋದು ಹೇಗೆ?