ಜನವರಿ 25ರ ವರೆಗೆ ಬರಪೀಡಿತ ಪ್ರದೇಶದ 29 ಲಕ್ಷ ರೈತರಿಗೆ 545 ಕೋಟಿ ರೂ. ಪರಿಹಾರ ನೀಡಲಾಗಿದೆ. ರೈತರ ಬೆಳೆಹಾನಿ ಸಮೀಕ್ಷೆಯ ನಂತರ ಇನ್ನೂ 8-9 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ಬೆಳೆ ಹಾನಿ ಸಮೀಕ್ಷೆಯನ್ನು ಫೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ದಾಖಲೀಕರಣದಲ್ಲಿ ಎದುರಾಗಿರುವ ತೊಡಕುಗಳನ್ನು ಸರಿಪಡಿಸಲಾಗಿದೆ.
ಬರಪೀಡಿತ ಪ್ರದೇಶದಲ್ಲಿ ನಮ್ಮ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಆದರೆ ಕೇಂದ್ರ @BJP4India ಸರ್ಕಾರ ಜಿದ್ದಿಗೆ ಬಿದ್ದವರಂತೆ ಪೈಸೆ ಪರಿಹಾರವನ್ನು ನೀಡದೆ ಅನ್ಯಾಯ ಮಾಡುತ್ತಿದೆ. ಈ ವೈಫಲ್ಯವನ್ನು ಮುಚ್ಚಿಹಾಕಲು ರಾಜ್ಯದ @BJP4Karnataka ನಾಯಕರು ನಮ್ಮ ಸರ್ಕಾರದ ವಿರುದ್ಧ ಹೋರಾಟದ ನಾಟಕ ಮಾಡುತ್ತಿದ್ದಾರೆ.
ಹಂಪಿ ಉತ್ಸವ : ಫೆ.1ರಂದು ಬೈಕ್ ರ್ಯಾಲಿ
ಫೆ.2ರಿಂದ ಫೆ.4ರವರೆಗೆ ನಡೆಯುವ ಹಂಪಿ ಉತ್ಸವದ ಅಂಗವಾಗಿ ಫೆ.01ರಂದು ಬೆಳಿಗ್ಗೆ 8 ಗಂಟೆಗೆ ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಜನವರಿ 31ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ಬಸವರಾಜ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬೇಕು. ಈ ರ್ಯಾಲಿಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್, ಡಿ.ಎಲ್ ಹೇಲೇಟ್ ಮತ್ತು ಸ್ವಂತ ದ್ವಿಚಕ್ರ ವಾಹನ ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ಎತ್ತುಗಳ, ಟಗರುಗಳ, ಶ್ವಾನಗಳ ಸ್ಪರ್ಧೆ : ಹೆಸರು ನೋಂದಾಯಿಸಲು ಅವಕಾಶ
ವಿಜಯನಗರ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಂಪಿ ಉತ್ಸವ-2024 ಅಂಗವಾಗಿ ಫೆ.02ರಂದು ಜಿಲ್ಲಾ ಮಟ್ಟದ ಎತ್ತುಗಳ, ಫೆ.3ರಂದು ಟಗರುಗಳ ಹಾಗೂ ಫೆ.4ರಂದು ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಾನುವಾರುಗಳ ಮಾಲೀಕರು, ಟಗರು ಮಾಲೀಕರು ಮತ್ತು ಶ್ವಾನ ಮಾಲೀಕರುಗಳು ತಮ್ಮ ಜಾನುವಾರುಗಳನ್ನು ಮುಂಚಿತವಾಗಿ ನೋಂದಣಿ ಮಾಡಲು ಕೋರಲಾಗಿದೆ. ಈ ಪ್ರದರ್ಶನಗಳ ನೋಂದಣಿಯನ್ನು ಜನವರಿ 30ರ ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಳಿಸಲಾಗುವುದು.
ಜಿಲ್ಲೆಯ ವಿವಿಧ ತಾಲೂಕಿನ ಆಯಾ ತಾಲೂಕಿನ ಜಾನುವಾರುಗಳನ್ನು ಆಯಾ ತಾಲೂಕಿನ ಹತ್ತಿರ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಅಥವಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಬೇಕಾಗಿದೆ. ನೋಂದಾಯಿಸಿಕೊಳ್ಳಲು ಬರುವ ಎಲ್ಲಾ ಆಸಕ್ತರುಗಳಿಗೆ ಜಾನುವಾರುಗಳ ಛಾಯಾಚಿತ್ರ ಕಡ್ಡಾಯವಾಗಿರುತ್ತದೆ. ನೋಂದಾಯಿಸಿದ ಎಲ್ಲಾ ಆಸಕ್ತರ ಪಟ್ಟಿಯನ್ನು ತಜ್ಞರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ತದನಂತರ ನೋಂದಣಿಗಾಗಿ ಬಂದ ಯಾವುದೇ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಲು ಗುಂಡು ಎತ್ತುವ ಸ್ಪರ್ಧೆಗೆ ಹೆಸರು ನೋಂದಾಸಲು ಅವಕಾಶ
ಹಂಪಿ ಉತ್ಸವ-2024ರ ಪ್ರಯುಕ್ತ ಫೆ.03ರಂದು ಬೆಳಗ್ಗೆ 10 ಗಂಟೆಗೆ ಶ್ರೀವಿಜಯ ವಿದ್ಯಾರಣ ಪ್ರೌಢಶಾಲೆ ಮೈದಾನ ಹೊಸ ಮಲಪನಗುಡಿಯಲ್ಲಿ ಕಲ್ಲು ಗುಂಡು ಎತ್ತುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಗೆ ಭಾಗವಹಿಸುವ ಸ್ಪರ್ಧಾಳುಗಳು ಫೆ.03ರ ಬೆಳಗ್ಗೆ 08 ರಿಂದ 10 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ. ಆಸಕ್ತ ಸ್ಪರ್ಧಾಳುಗಳು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಯೊಂದಿಗೆ ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9972552385, 8217324522, 9483480101. ಮೂರು ವಿಭಾಗದಲ್ಲಿ ಕ್ರೀಡಾಕೂಟ ಏರ್ಪಡಿಸಲಾಗುವುದು., ಸಮಯದ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಅತಿ ಹೆಚ್ಚು ತೂಕದ ಕಲ್ಲು ಗುಂಡಿನ ಮೇಲೆ ನಿರ್ಧರಿಸಲಾಗುವುದು. ಸ್ಪರ್ಧೆಗೆ 03 ಅವಕಾಶಗಳನ್ನು ನೀಡಲಾಗುವುದು. ನಿರ್ಣಾಯಕರ ತೀರ್ಪು ಅಂತಿಮವಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.