Breaking
Wed. Dec 18th, 2024

ಮನರೇಗಾ ಯೋಜನೆಯಿಂದ ರೇಷ್ಮೆ ಮನೆ ನಿರ್ಮಿಸಲು ಸರ್ಕಾರದಿಂದ 67000 – 3,60,000 ರೂಪಾಯಿಗಳ ಸಹಾಯಧನ

Spread the love

ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಈಗ ಅತಿ ಲಾಭದಾಯಕ ಮತ್ತು ಉತ್ಪಾದನೆಗೆ ಸರಳವಾಗಿ ಮಾಡುವ ಕೃಷಿ ಎಂದರೆ ರೇಷ್ಮೆ ಕೃಷಿ. ಇದು ಏಷ್ಯಾದಲ್ಲೇ ಅತೀ ದೊಡ್ಡದಾಗಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ನಿತ್ಯ 40 ಟನ್ ಗೂಡು ಆವಕಗೊಳ್ಳುತ್ತಿದ್ದು, 2 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯುತ್ತಿದೆ. ಹೀಗಾಗಿ ಇಲ್ಲಿನ ಮಾರುಕಟ್ಟೆಯನ್ನು ಹೈಟೆಕ್‌ ಗೊಳಿಸಲು ಈಗಾಗಲೇ ಸಚಿವ ಸಂಪುಟ ಅನುಮೊದನೆ ನೀಡಿದ್ದು, ಕೆಲ ದಿನಗಳಲ್ಲಿಯೇ ಭೂಮಿ ಪೂಜೆ ನಡೆಯಲಿದೆ. ಇದರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿಯೂ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಶಿಫಾರಸು ಮಾಡಲಾಗಿದ್ದು, ಹಾವೇರಿ, ಕಲಬುರಗಿಯಲ್ಲಿಯು ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರಕಾರ ಚಿಂತನೆ ನಡೆಸಿದೆ. ಸರ್ಕಾರವು ಮನರೇಗಾ ಯೋಜನೆ ಮೂಲಕ ರೇಷ್ಮೆ ಬೆಳೆಗಾರರಿಗೆ ಆದ್ಯತೆಯನ್ನು ನೀಡಿ ಅವರಿಗೆ ಸರ್ಕಾರದಿಂದ ಸಹಾಯಧನವನ್ನು ನೀಡಲು ನಿರ್ಧಾರ ಮಾಡಿದೆ.

ಮನರೆಗಾ ಯೊಜನೆಯ ಉಪಯೋಗ?

ರೇಷ್ಮೆ ಬೆಳೆ ಉತ್ಪಾದನೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮನರೇಗಾ ಯೋಜನೆಯಡಿ ರೇಷ್ಮೆ ಕಡ್ಡಿಗಳ ನಾಟಿ, ರೇವಿಂಗ್ ಹೌಸ್, ಹನಿ ನೀರಾವರಿ ಅಳವಡಿಕೆ, ಸಲಕರಣೆಗಳ ಖರೀದಿ..ಹೀಗೆ ಹತ್ತಾರು ಯೋಜನೆಗಳ ಬೆಳೆಗಾರರ ಪಾಲಿಗೆ ಅಮೃತವಾಗಿ ಪರಿಣಮಿಸಿವೆ. ಆದರೆ, ಬೆಳೆಗಾರರು ಹವಾಮಾನಕ್ಕೆ ತಕ್ಕಂತೆ ಕೆಲ ಮಾರ್ಪಡುಗಳ ಮೂಲಕ ಬೆಳೆ ಬೆಳೆಯಬೇಕು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಪ್ರತಿ ವರ್ಷ 10 ಸಾವಿರ ಹೆಕ್ಟೇರ್‌ನಷ್ಟು ರೇಷ್ಮೆ ಕೃಷಿ ಭೂಮಿ ವಿಸ್ತೀರ್ಣದ ಗುರಿ ಹೊಂದಿರುವ ರಾಜ್ಯ ಸರಕಾರ ತನ್ನ ಗುರಿಯತ್ತ ಮುನ್ನುಗುತ್ತಿದೆ.

ಈ ರೇಷ್ಮೆ ಕೃಷಿಗೆ ಸರ್ಕಾರದಿಂದ ಎಷ್ಟು ಸಹಾಯಧನ?

ತಾಲೂಕು ಪಂಚಾಯಿತಿ ಅನುದಾನದಲ್ಲಿ ನರೇಗಾ ಯೋಜನೆಯಡಿ ಹಿಪ್ಪುನೇರಳೆ ನಾಟಿ ಮಾಡಿದ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಎಕರೆಗೆ 50 ಸಾವಿರ ರೂ.ಗಳ ಘಟಕ ದರದಲ್ಲಿ ಶೇ.7 5ರಂತೆ 37,500 ರೂ.ವರೆಗೆ ಸಹಾಯಧನ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳಲ್ಲಿ ಶೇ.90ರಂತೆ 45,000 ರೂ.ಗಳ ಸಹಾಯಧನ, ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ದ್ವಿತಳಿ ಬೆಳೆಗಳಿಗೆ ಬೆಳೆಯ ಮೊದಲು ಮತ್ತು ನಂತರ ಹಾಗೂ ಮಿಶ್ರತಳಿ ಬೆಳೆಗಳು ವಿಫಲಗೊಂಡರೆ, ಸೋಂಕು ನಿವಾರಕಗಳನ್ನು ಖರೀದಿಸಿ ರೇಷ್ಮೆ ಬೆಳೆಗಾರರಿಗೆ ಉಚಿತ ವಿತರಣೆ.

ಮನರೇಗಾ ಯೋಜನೆಯಿಂದ ರೇಷ್ಮೆ ಹುಳು ಮನೆ ನಿರ್ಮಿಸಲು ಸರ್ಕಾರದಿಂದ 67000 – 3,60,000 ರೂಪಾಯಿಗಳ ಸಹಾಯಧನ, ಸಲಕರಣೆಗಳ ಖರೀದಿಗೆ ಶೇ.70ರಿಂದ – ಶೇ.90ರ ವರೆಗೂ ಸಹಾಯಧನ ನೋಂದಾಯಿತ 6 ಸಾಕಣೆ ಕೇಂದ್ರ ಸ್ಥಾಪನೆಗೆ ಸಹಾಯಧನ, ದ್ವಿತಳಿ ಚಾಕಿ ಸಾಕಣೆಗೆ, ಸಹಾಯಧನ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಹಾಯಧನ, ಟ್ರಂಚಿಂಗ್ ಮತ್ತು ಮಲ್ಟಿಂಗ್ ಘಟಕಕ್ಕೆ ಸಹಾಯಧನ, ದ್ವಿತಳಿ ರೇಷ್ಮೆ ಗೂಡನ್ನು ಸರಕಾರಿ 100% ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಪ್ರತಿ ಟನ್ ಗೂಡಿಗೆ 10 ಸಾವಿರ ರೂ.ಗಳ ಪ್ರೋತ್ಸಾಹಧನ.

ಇದನ್ನೂ ಓದಿ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ 2000 ಜಮಾ ಆಗಿದೆಯಾ ನೋಡಿ

ಇದನ್ನೂ ಓದಿ :- ಕೇವಲ ಈ ಕೆಲಸ ಮಾಡಿ ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಲಿದೆ 2.5 ಲಕ್ಷ ರೂಪಾಯಿ ಹಣ

ಇದನ್ನೂ ಓದಿ :- ಮೊಬೈಲ್ ಸಂಖ್ಯೆ ಅಥವಾ ರಶೀದಿ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ

ಇದನ್ನೂ ಓದಿ :- SBI ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳು ಏನು?

ಇದನ್ನೂ ಓದಿ :- ಕೇವಲ ಒಂದು ಕರೆ ಮಾಡಿದರೆ ಸಾಕು ಟ್ರಾಕ್ಟರ್ ಸಬ್ಸಿಡಿಯನ್ನು ಪಡೆಯುತ್ತೀರಿ

Related Post

Leave a Reply

Your email address will not be published. Required fields are marked *