ಆತ್ಮೀಯ ರೈತ ಬಾಂಧವರೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ- ಕಿಸಾನ್), ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲವನ್ನು ಒದಗಿಸುವ ಭಾರತ ಸರ್ಕಾರದ ಯೋಜನೆಯಾಗಿದೆ.ಕರ್ನಾಟಕ ಸರ್ಕಾರ ವರ್ಷಕ್ಕೆ 2 ಬಾರಿ ಹಣ ಬಿಡುಗಡೆ ಮಾಡುತ್ತದೆ. ಈವರೆಗೆ ರಾಜ್ಯ ಸರ್ಕಾರ 6 ಕಂತುಗಳ ಹಣ ರಿಲೀಸ್ ಮಾಡಿದೆ. 2022 ಆಗಸ್ಟ್ ತಿಂಗಳ ಬಳಿಕ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿಲ್ಲ.ಈ ಯೋಜನೆಯು ಕೃಷಿ ಹಾಗೂ ಪೂರಕ ಚಟುವಟಿಕೆಗಳು ಮತ್ತು ರೈತರ ಇತರೆ ಅಗತ್ಯಗಳಿಗೆ ಪೂರಕ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.
ಇದನ್ನೂ ಓದಿ :- ನಿಮ್ಮ ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲವೇ?ತಕ್ಷಣವೇ ರೀಚಾರ್ಜ್ ಮಾಡಿಸಿ
ಪಿಎಂ ಕಿಸಾನ್ ಹಣ ಯಾವಾಗ ಬಿಡುಗಡೆಗೆ?
ಕಿಸಾನ್ ಸಮ್ಮಾನ್ ಯೋಜನೆಯ 6ನೇ ಕಂತಿನ 2,000 ರೂಪಾಯಿ ರೈತರ ಖಾತೆ ಜಮಾ ಮಾಡುವ ಮೂಲಕ ಯುಗಾದಿ ಗಿಫ್ಟ್ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಾರ್ಚ್ 21ರಂದು ಪಿಎಂ ಕಿಸಾನ್ ಯೋಜನೆಯ 6ನೇ ಕಂತಿನ ಹಣವನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ತಲಾ 2,000 ರೂಪಾಯಿಯಂತೆ ರಾಜ್ಯದ 48,75,000 ರೈತರ ಬ್ಯಾಂಕ್ ಖಾತೆಗೆ ಒಟ್ಟು 975 ಕೋಟಿ ರೂಪಾಯಿ ಜಮಾ ಮಾಡಲಾಗಿದೆ.
ಹೇಗೆ ಸ್ಟೇಟಸ್ ಚೆಕ್ ಮಾಡುವುದು?
ನಿಮಗೆ ಹಣ ಬಂದಿದೆಯೇ ಇಲ್ಲೋ ಚೆಕ್ ಮಾಡಿ ಕಳೆದ ಫೆಬ್ರವರಿ 27ರಂದು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದ 2,000 ರೂಪಾಯಿ ಮತ್ತೀಗ ರಾಜ್ಯ ಸರಕಾರ ಬಿಡುಗಡೆ ಮಾಡಿರುವ 2,000 ರೂಪಾಯಿ ಬಹಳಷ್ಟು ರೈತರಿಗೆ ತಲುಪಿಲ್ಲ. ಅನೇಕ ರೈತರು ಇಕೆವೈಸಿ ಮಾಡಿಲ್ಲದಿರುವುದು ಸೇರಿದಂತೆ ಅನೇಕ ಕಾರಣಗಳಿಂದಾಗ ರೈತರಿಗೆ ಈ ಹಣ ತಲುಪಿಲ್ಲ. ಹೀಗಾಗಿ ಬಹಳಷ್ಟು ರೈತರಿಗೆ ನಮಗೆ ಪಿಎಂ ಕಿಸಾನ್ ಹಣ ಬಂದಿದೆಯೋ ಇಲ್ಲವೋ ಎಂಬ ಅನುಮಾನವಿದೆ. ಅಂತಹ ರೈತರು ಮೊಬೈಲ್‌ನಲ್ಲೇ ತಮ್ಮ ಸ್ಟೇಟಸ್ ಚೆಕ್ ಮಾಡಬಹುದು.
https://fruitspmk.karnataka.gov.in
ಇದನ್ನೂ ಓದಿ :- ಕೇಂದ್ರ ಸರ್ಕಾರದಿಂದ 90 ಲಕ್ಷ ರೈತರ ಸಾಲ ಮನ್ನಾ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಇದನ್ನೂ ಓದಿ :- ಹಾಗಾದರೆ ಈ ರೈತ ಮಾಡಿದ್ದು ಆದರೂ ಏನು, ಈತನ ಬೆಳೆ ಪದ್ದಿತಿಯನ್ನು ನೀವೆಲ್ಲೂ ನೋಡಿಲ್ಲ