25 ವರ್ಷ ಹಳೆಯ ಪಹಣಿ ಮೊಬೈಲ್‌ನಲ್ಲಿ ಪಡೆಯುವುದು ಹೇಗೆ?

ಕರ್ನಾಟಕದಲ್ಲಿ ರೈತರಿಗೆ ತಮ್ಮ ಜಮೀನಿನ ದಾಖಲೆಗಳನ್ನು ಕಂದಾಯ ಇಲಾಖೆ ಸರಳವಾಗಿ ಲಭ್ಯವಾಗುವಂತೆ ಮಾಡಿದೆ. ಪಹಣಿ (RTC) ಎನ್ನುವುದು ಒಂದು ಮುಖ್ಯ ದಾಖಲೆ. ಈ ದಾಖಲೆಯಲ್ಲೇ ರೈತರು ತಮ್ಮ ಜಮೀನಿನ ಬಗ್ಗೆ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದು. ಹಿಂದೆ ಪಹಣಿ ಪಡೆಯಲು ರೈತರು ತಮ್ಮ ಹೋಬಳಿ ಕಚೇರಿ ಅಥವಾ ತಾಲ್ಲೂಕು ಕಚೇರಿಗೆ ಹೋಗಬೇಕಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನದ ನೆರವಿನಿಂದ ಪಹಣಿ ಸೇರಿದಂತೆ ಎಲ್ಲಾ ಜಮೀನಿನ ದಾಖಲೆಗಳನ್ನು ಮೊಬೈಲ್‌ನಲ್ಲೇ ಪಡೆಯುವ ಅವಕಾಶ ಬಂದಿದೆ.

ಹಳೆಯ ಪಹಣಿ ಪಡೆಯುವುದು ರೈತರಿಗೆ ಬಹಳ ಉಪಯುಕ್ತ. ಏಕೆಂದರೆ ಹಳೆಯ ದಾಖಲೆಗಳಿಂದ ಜಮೀನಿನ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಯಾರಿಂದ ಯಾರಿಗೆ ಜಮೀನು ಹಸ್ತಾಂತರವಾಗಿದೆ, ಯಾವ ವರ್ಷದಲ್ಲಿ ಯಾವ ಬೆಳೆ ಬೆಳೆದಿದೆ, ಮುಟೇಶನ್ ವಿವರಗಳು ಹೇಗೆ ಬದಲಾಗಿವೆ ಎಂಬುದನ್ನು ತಿಳಿದುಕೊಳ್ಳಬಹುದು.

ಹಳೆಯ ಪಹಣಿ ಪಡೆಯಲು ಬಳಸುವ ವೆಬ್‌ಸೈಟ್

ರೈತರು ಹಳೆಯ ಪಹಣಿಯನ್ನು ಪಡೆಯಲು ಈ ಲಿಂಕ್ ಬಳಸಬಹುದು:
https://landrecords.karnataka.gov.in/Service2/

ಇದು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್ ಆಗಿದ್ದು, ಇದರ ಮೂಲಕ RTC, Mutation Status, Khata Extract, Survey Document, Akarbandh ಮುಂತಾದ ಹಲವಾರು ಸೇವೆಗಳು ಲಭ್ಯವಿವೆ.

ಹಳೆಯ ಪಹಣಿ ಪಡೆಯುವ ಕ್ರಮ

1. ಮೊದಲು ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಬ್ರೌಸರ್ (Chrome ಅಥವಾ ಯಾವುದೇ ಬ್ರೌಸರ್) ತೆರೆಯಿರಿ.

2. https://landrecords.karnataka.gov.in/Service2/ ಮೇಲಿನ ಲಿಂಕ್ ಕ್ಲಿಕ್ ಮಾಡಿದರೆ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.

3. ಅಲ್ಲಿ ನಿಮಗೆ Current Year RTC, Old Year RTC, MR, Mutation Status, Khata Extract, Survey Document, Akarbandh ಎಂಬ ಆಯ್ಕೆಗಳು ಕಾಣಿಸುತ್ತವೆ.

4. ನೀವು ಹಳೆಯ ಪಹಣಿ ಪಡೆಯಬೇಕೆಂದರೆ Old Year ಆಯ್ಕೆಮಾಡಿ.

5. ಈಗ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆಮಾಡಬೇಕು.

6. ನಂತರ ಸರ್ವೇ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ.

7. Surnoc ನಲ್ಲಿ ಸ್ಟಾರ್ ಗುರುತನ್ನು ಆಯ್ಕೆ ಮಾಡಬಹುದು.

8. ಹಿಸ್ಸಾ ನಂಬರ್ ನಮೂದಿಸಿ.

9. Period ವಿಭಾಗದಲ್ಲಿ ಎಷ್ಟು ವರ್ಷ ಹಳೆಯ ಪಹಣಿ ಬೇಕೆಂದು ನಮೂದಿಸಿ.

10. Year ವಿಭಾಗದಲ್ಲಿ ನೀವು ಯಾವ ವರ್ಷದಿಂದ ಪಹಣಿ ಬೇಕೆಂದು ಆಯ್ಕೆ ಮಾಡಿ.

11. Fetch details ಮೇಲೆ ಕ್ಲಿಕ್ ಮಾಡಿದರೆ ಆ ವರ್ಷದ ಪಹಣಿ ತೆರೆದುಕೊಳ್ಳುತ್ತದೆ.

ಪಹಣಿಯಲ್ಲಿ ದೊರೆಯುವ ಮಾಹಿತಿಗಳು

ಪಹಣಿ ಒಂದು ಸಂಪೂರ್ಣ ದಾಖಲೆ ಆಗಿದ್ದು, ರೈತರಿಗೆ ಅತ್ಯಂತ ಉಪಯುಕ್ತ. ಇದರಲ್ಲಿರುವ ಮಾಹಿತಿಗಳು ಸರ್ವೇ ನಂಬರಿನ ವಿವರ, ಜಮೀನಿನ ಒಟ್ಟು ಎಕರೆ ಅಳತೆ, ಹಿಸ್ಸಾ ನಂಬರಿನ ಪ್ರಕಾರ ಜಮೀನಿನ ಹಂಚಿಕೆ, ಮಾಲೀಕರ ಹೆಸರು ಮತ್ತು ತಂದೆಯ ಹೆಸರು, ಪ್ರತಿ ಮಾಲೀಕನಿಗೆ ಸೇರಿದ ಎಕರೆ ವಿವರ ಹಾಗೂ ಖಾತೆ ನಂಬರಿನ ಮಾಹಿತಿ. ಜೊತೆಗೆ ಜಮೀನಿನ ಹಸ್ತಾಂತರವಾದ ಮುಟೇಶನ್ ವಿವರಗಳು, ಮುಂಗಾರು ಮತ್ತು ಹಿಂದಾಗುರ ಹಂಗಾಮಿಗೆ ಬೆಳೆದ ಬೆಳೆಗಳ ಮಾಹಿತಿ, ಬಾವಿ, ಕಾಲುವೆ, ಹಳ್ಳ ಅಥವಾ ಟ್ಯಾಂಕ್ ಮುಂತಾದ ನೀರಾವರಿ ಮೂಲಗಳ ವಿವರಗಳು ಕೂಡ ದೊರೆಯುತ್ತವೆ. ಇವುಗಳೆಲ್ಲ ರೈತರಿಗೆ ತಮ್ಮ ಜಮೀನಿನ ಇತಿಹಾಸವನ್ನು ತಿಳಿದುಕೊಳ್ಳಲು ನೆರವಾಗುತ್ತವೆ.

ಪಹಣಿಯನ್ನು ಡೌನ್‌ಲೋಡ್ ಮತ್ತು ಮುದ್ರಣ ಮಾಡುವ ವಿಧಾನ

ಪಹಣಿಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಉಚಿತ. ರೈತರು ಇದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಮಾಹಿತಿಗಾಗಿ ಬಳಸಿಕೊಳ್ಳಬಹುದು. ಆದರೆ ಅಧಿಕೃತ RTC ಅಗತ್ಯವಿದ್ದರೆ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸಿದ ನಂತರ RTC ಡೌನ್‌ಲೋಡ್ ಮಾಡಿಕೊಂಡು ಹತ್ತಿರದ ಝೆರಾಕ್ಸ್ ಅಂಗಡಿಯಲ್ಲಿ ಮುದ್ರಣ ಮಾಡಬಹುದು.

ಹಳೆಯ ಪಹಣಿಯ ಮಹತ್ವ

ಹಳೆಯ ಪಹಣಿ ರೈತರ ಬದುಕಿನಲ್ಲಿ ಬಹಳ ಮುಖ್ಯವಾದ ದಾಖಲೆ. ಜಮೀನಿನ ಹಕ್ಕು ಸಂಬಂಧಿ ಪ್ರಕರಣಗಳಲ್ಲಿ ಪಹಣಿ ಸಾಕ್ಷಿ ದಾಖಲೆ ಆಗುತ್ತದೆ. ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆಯುವಾಗ RTC ಅಗತ್ಯ. ಭೂಮಿ ಖರೀದಿ ಅಥವಾ ಮಾರಾಟ ಮಾಡುವಾಗ RTC ಪರಿಶೀಲನೆ ಮಾಡಲೇಬೇಕು. ಸರ್ಕಾರದಿಂದ ದೊರೆಯುವ ಸಬ್ಸಿಡಿ ಹಾಗೂ ಕೃಷಿ ಸಹಾಯಧನ ಪಡೆಯಲು ಸಹ ಪಹಣಿ ಉಪಯೋಗವಾಗುತ್ತದೆ. ಇದಲ್ಲದೆ ಹಳೆಯ ಪಹಣಿಯಿಂದ ಜಮೀನಿನ ಇತಿಹಾಸವನ್ನು ತಿಳಿದುಕೊಳ್ಳಬಹುದು.

ಆನ್‌ಲೈನ್ ಸೇವೆಯ ಲಾಭಗಳು

ಹಳೆಯ ಪಹಣಿಯನ್ನು ಪಡೆಯಲು ರೈತರು ಕಚೇರಿಗಳಿಗೆ ಓಡಾಡಬೇಕಾಗಿಲ್ಲ. ಇದರಿಂದ ಸಮಯ ಮತ್ತು ಹಣ ಎರಡೂ ಉಳಿಯುತ್ತವೆ. ಮೊಬೈಲ್ ಮೂಲಕ ಎಲ್ಲಿಂದ ಬೇಕಾದರೂ ದಾಖಲೆ ಪಡೆಯಬಹುದು. ದಾಖಲೆಗಳ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ರೈತರು ಯಾವಾಗ ಬೇಕಾದರೂ ತಮ್ಮ ಭೂಮಿ ದಾಖಲೆಗಳನ್ನು ಪರಿಶೀಲಿಸಬಹುದು.

ಮೊಬೈಲ್ ಆಪ್ ಮೂಲಕ ಹಳೆಯ ಪಹಣಿ ಪಡೆಯುವುದು

ರೈತರು ವೆಬ್‌ಸೈಟ್ ಮಾತ್ರವಲ್ಲದೆ ಮೊಬೈಲ್ ಆಪ್ ಮೂಲಕವೂ ಹಳೆಯ ಪಹಣಿ ಪಡೆಯಬಹುದು. Google Play Store ನಲ್ಲಿ Bhoomi RTC ಅಥವಾ Dishaank ಆಪ್ ಡೌನ್‌ಲೋಡ್ ಮಾಡಿ. ಆಪ್ ತೆರೆದು ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೇ ನಂಬರಿನ ಮಾಹಿತಿಯನ್ನು ನಮೂದಿಸಿ Old Year RTC ಆಯ್ಕೆ ಮಾಡಿದರೆ ಬೇಕಾದ ದಾಖಲೆಗಳನ್ನು ವೀಕ್ಷಿಸಿ PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Bhoomi RTC ಆಪ್‌ನಲ್ಲಿ ಹಳೆಯ ಪಹಣಿ ನೋಡುವ ವಿಧಾನ

1. ಮೊದಲು ನಿಮ್ಮ ಮೊಬೈಲ್‌ನಲ್ಲಿ Google Play Store ತೆರೆದು Bhoomi RTC ಆಪ್‌ನ್ನು ಡೌನ್‌ಲೋಡ್ ಮಾಡಿ. ಲಿಂಕ್ https://play.google.com/store/apps/details?id=com.bmc.bhoomilandrecords

2. ಆಪ್ ಇನ್‌ಸ್ಟಾಲ್ ಆದ ನಂತರ ಅದನ್ನು ತೆರೆಯಿರಿ.

3. ಮೆನುಗಳಲ್ಲಿ RTC (Record of Rights, Tenancy and Crops) ಆಯ್ಕೆಯನ್ನು ಆರಿಸಿ.

4. ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರಿನ ಮಾಹಿತಿಯನ್ನು ನಮೂದಿಸಿ.

5. ನಂತರ ನೀವು ಬೇಕಾದ ವರ್ಷವನ್ನು ಆಯ್ಕೆ ಮಾಡಿ. ಹಳೆಯ ಪಹಣಿ ಬೇಕಿದ್ದರೆ Old Year RTC ಕ್ಲಿಕ್ ಮಾಡಿ.

6. ಕೆಲವು ಕ್ಷಣಗಳಲ್ಲಿ ಪಹಣಿ ಸ್ಕ್ರೀನ್ ಮೇಲೆ ತೋರಿಸುತ್ತದೆ.

7. ಅದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು, ಮೊಬೈಲ್‌ನಲ್ಲಿ ಉಳಿಸಬಹುದು.

Dishaank ಆಪ್‌ನಲ್ಲಿ ಹಳೆಯ ಪಹಣಿ ನೋಡುವ ವಿಧಾನ

1. ಮೊದಲು Google Play Store ತೆರೆದು Dishaank ಆಪ್‌ನ್ನು ಡೌನ್‌ಲೋಡ್ ಮಾಡಿ. ಲಿಂಕ್ https://play.google.com/store/apps/details?id=com.ksrsac.sslr

2. ಆಪ್ ತೆರೆಯುತ್ತಿದ್ದಂತೆ GPS/Location ಅನ್ನು ಆನ್ ಮಾಡಿ, ಏಕೆಂದರೆ ಇದು ನಕ್ಷೆ ಆಧಾರಿತ ಆಪ್.

3. ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆಮಾಡಿ.

4. ನಕ್ಷೆ ಮೇಲೆ ನಿಮ್ಮ ಜಮೀನಿನ Survey Number ಹುಡುಕಿ.

5. Survey Number ಮೇಲೆ ಕ್ಲಿಕ್ ಮಾಡಿದರೆ, ಆ ಜಮೀನಿನ RTC ಹಾಗೂ ಇತರೆ ದಾಖಲೆಗಳ ಮಾಹಿತಿ ತೆರೆದುಕೊಳ್ಳುತ್ತದೆ.

6. RTC ಆಯ್ಕೆ ಮಾಡಿ, ನಂತರ ವರ್ಷವನ್ನು ಆರಿಸಿ. ಹಳೆಯ ಪಹಣಿ ಬೇಕಿದ್ದರೆ Old Year RTC ಆಯ್ಕೆಮಾಡಿ.

7. ದಾಖಲೆಗಳನ್ನು PDF ರೂಪದಲ್ಲಿ ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಬಹುದು.

2001ಕ್ಕೂ ಹಿಂದಿನ ದಾಖಲೆಗಳು

ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿ 2001ರಿಂದ ಇಂದಿನವರೆಗೆ ಹಳೆಯ ಪಹಣಿಗಳು ಲಭ್ಯ. ಆದರೆ 2001ಕ್ಕೂ ಹಿಂದಿನ ದಾಖಲೆಗಳನ್ನು ಪಡೆಯಲು ರೈತರು ತಮ್ಮ ತಾಲ್ಲೂಕು ಕಚೇರಿ ಅಥವಾ ಉಪ-ನೋಂದಣಿ ಕಚೇರಿಗೆ (Sub-Registrar Office) ಭೇಟಿ ನೀಡಬೇಕಾಗುತ್ತದೆ.

ಪಹಣಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು

ಪಹಣಿ ದಾಖಲೆಗಳಲ್ಲಿ ಕೆಲವು ಅಸಮಾನತೆಗಳು ಕಂಡುಬರುವ ಸಾಧ್ಯತೆಗಳಿವೆ. ಉದಾಹರಣೆಗೆ ಮಾಲೀಕರ ಹೆಸರು ತಪ್ಪಾಗಿ ನಮೂದಾಗಿರುವುದು, ಎಕರೆ ಅಳತೆಯಲ್ಲಿ ವ್ಯತ್ಯಾಸ, ಮುಟೇಶನ್ ವಿವರ ತಪ್ಪಾಗಿರುವುದು ಅಥವಾ ಬೆಳೆ ಮಾಹಿತಿ ನವೀಕರಿಸದಿರುವುದು. ಇಂತಹ ಸಂದರ್ಭಗಳಲ್ಲಿ ರೈತರು ತಮ್ಮ ಹೋಬಳಿ ಕಚೇರಿ ಅಥವಾ ತಹಶೀಲ್ದಾರರ ಕಚೇರಿಗೆ ಹೋಗಿ ತಿದ್ದುಪಡಿ ಮನವಿ ಸಲ್ಲಿಸಬೇಕು.

ಮುಕ್ತಾಯ

ಹಳೆಯ ಪಹಣಿಯನ್ನು ಮೊಬೈಲ್‌ನಲ್ಲಿ ಪಡೆಯುವ ವಿಧಾನವು ರೈತರ ಜೀವನವನ್ನು ಸುಲಭಗೊಳಿಸಿದೆ. ಕೆಲವೇ ನಿಮಿಷಗಳಲ್ಲಿ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಂದಿನ ಕಾಲದಲ್ಲಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಕಚೇರಿಗಳಲ್ಲಿ ಸಮಯ ವ್ಯರ್ಥ ಮಾಡಬೇಕಾಗಿಲ್ಲ. ರೈತರು ತಮ್ಮ ಸ್ಮಾರ್ಟ್‌ಫೋನ್‌ನಿಂದಲೇ ಹಳೆಯ ಪಹಣಿಯನ್ನು ಪಡೆದು ಕೃಷಿ ಹಾಗೂ ಜಮೀನು ಸಂಬಂಧಿತ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮುಗಿಸಬಹುದು.

Leave a Comment