ಗಂಗಾ ಕಲ್ಯಾಣ ಯೋಜನೆಯಡಿ 3.25 ಇಂದ 4.25 ಲಕ್ಷ ಸಾಲ, ಕೇವಲ 4% ಬಡ್ಡಿ ಸಬ್ಸಿಡಿ

ಈ ಕೆಳಗೆ ನೀಡಿರುವ ಅಭಿವೃದಿ ನಿಗಮಗಳ ಸಾಲ/ಸಹಾಯಧನ ಅರ್ಜಿ ಕರೆಯಲಾಗಿದು. ಅರ್ಜಿ ವಿವರಗಳು ಕೆಳಗಿನಂತಿವೆ.

ಡಾ|| ದೇವರಾಜ ಅರಸು ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ನಿಗಮ, ಮಡಿವಾಳ ಮಾಚಿದೇವ ನಿಗಮ, ವೀರಶೈವ ಲಿಂಗಾಯತ ನಿಗಮ, ಮರಾಠ ನಿಗಮ, ಸವಿತಾ ಸಮಾಜ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ ಕರ್ನಾಟಕ ಅಲೆಮಾರಿ ನಿಗಮ, ವಿಶ್ವಕರ್ಮ ಸಮುದಾಯ ನಿಗಮ, ಅಂಬಿಗ ಚೌಡಯ್ಯ ಅಭಿವೃದ್ಧಿ ನಿಗಮ.

ಗಂಗಾ ಕಲ್ಯಾಣ ಯೋಜನೆಗೆ ಬೇಕಾಗುವ ದಾಖಲೆಗಳು?

1. ಜಾತಿ ಪ್ರಮಾಣಪತ್ರ

2. ಆದಾಯ ಪ್ರಮಾಣಪತ್ರ

3. ಆಧಾರ್ ಕಾರ್ಡ್ ಕಲರ್ ಪ್ರತಿ (ನಿವಾಸದ ಪುರಾವೆ)

4. 1 ಫೋಟೋ

5. ಬ್ಯಾಂಕ್ ಪಾಸ್ ಬುಕ್

6. ಸಣ್ಣ ಹಿಡುವಳಿ ಪ್ರಮಾಣ ಪತ್ರ

7. RTC

8. ರೇಷನ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ?

ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.kaushalkar.com/ ಅಥವಾ http://sevasindhu.karnataka.gov.in ಹೋಗಿ ಅರ್ಜಿ ಸಲ್ಲಿಸಿ.

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲಾಗುವ ವೈಯಕ್ತಿಕ ಕೊಳವೆ ಬಾವಿ ಯೋಜನೆಯ ಮುಖ್ಯ ಅಂಶಗಳು:

* ಹಿಂದುಳಿದ ವರ್ಗಗಳ ಸಣ್ಣ ಹಾಗೂ ಅತಿ ಸಣ್ಣ ರೈತರ ಕೃಷಿ ಭೂಮಿಗಳಿಗೆ ವೈಯಕ್ತಿಕ ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುವುದು.

* ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೆ ಘಟಕದ ಒಟ್ಟು ವೆಚ್ಚ ರೂ. 4.25 ಲಕ್ಷ ಇರುತ್ತದೆ.

* ಉಳಿದ ಎಲ್ಲಾ ಜಿಲ್ಲೆಗಳಿಗೆ ಘಟಕ ವೆಚ್ಚವನ್ನು ರೂ. 3.25 ಲಕ್ಷವೆಂದು ನಿಗದಿಪಡಿಸಲಾಗಿದೆ.

* ಯಾವುದೇ ಕಾರಣಕ್ಕಾಗಿ ಯೋಜನೆಯ ಘಟಕವನ್ನು ಪೂರ್ಣಗೊಳಿಸಲಾಗದಿದ್ದರೆ, ರೈತರಿಗೆ ರೂ. 50,000 ರಷ್ಟು ಸಾಲವನ್ನು ಕೇವಲ 4% ಬಡ್ಡಿದರದಲ್ಲಿ ನೀಡಲಾಗುತ್ತದೆ.

* ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ರೈತರು ಕನಿಷ್ಠ 1 ಎಕರೆ ಜಮೀನನ್ನು ಹೊಂದಿರಬೇಕು.

* ಉಳಿದ ಜಿಲ್ಲೆಗಳ ರೈತರು ಕನಿಷ್ಠ 2 ಎಕರೆ ಮತ್ತು ಗರಿಷ್ಠ 5 ಎಕರೆ ಜಮೀನನ್ನು ಹೊಂದಿರುವುದು ಕಡ್ಡಾಯ.

* ವಾರ್ಷಿಕ ಆದಾಯದ ಮಿತಿ:

  * ಗ್ರಾಮೀಣ ಪ್ರದೇಶದ ರೈತರಿಗೆ ಕುಟುಂಬದ ವಾರ್ಷಿಕ ಆದಾಯ ರೂ. 98,000 ಮಿತಿಯೊಳಗಿರಬೇಕು.
  * ಪಟ್ಟಣ ಪ್ರದೇಶದ ರೈತರಿಗೆ ವಾರ್ಷಿಕ ಆದಾಯ ರೂ. 1,20,000 ಮಿತಿಯೊಳಗಿರಬೇಕು.

01.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮುಂಗಾರು ದುರ್ಬಲಗೊಂಡಿದ್ದರೂ ಆಗಸ್ಟ್ 3ರ ತನಕ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ನಂತರ ಮೋಡ ಹಾಗೂ ಬಿಸಿಲಿನ ವಾತಾವರಣದ ಸಾಧ್ಯತೆಗಳಿದ್ದರೂ, ಸುಮಾರು ಆಗಸ್ಟ್ 7ರ ಸಮಯದಲ್ಲಿ ತಮಿಳುನಾಡು ಕರಾವಳಿ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ. ಇದರ ಮೇಲೆ ಅವಲಂಬಿಸಿದೆ.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ. ಈಗಿನಂತೆ ಆಗಸ್ಟ್ 4ರ ನಂತರ ಅಲ್ಲಲ್ಲಿ ಗುಡುಗು ಮಳೆಯ ಸಾಧ್ಯತೆಗಳನ್ನು ತೋರಿಸುತ್ತಿದೆ.

ಒಳನಾಡು : ಉತ್ತರ ಒಳನಾಡಿನ ವಿಜಯನಗರ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು(ಪಾವಗಢ ಸಹಿತ), ಚಿತ್ರದುರ್ಗ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಆಗಸ್ಟ್ 4ರಿಂದ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ.

ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಆಗಸ್ಟ್ 4ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ತಮಿಳುನಾಡು ಮೂಲಕ ಹಾದು ಬರುವ ಮೋಡಗಳಿಂದ ಗುಡುಗು ಸಹಿತ ಉತ್ತಮ ಮಳೆಯ ಸಾಧ್ಯತೆಗಳನ್ನು ತೋರಿಸುತ್ತಿದೆ ಹಾಗೂ ಮತ್ತಿನ 2 ದಿನಗಳಲ್ಲಿ ಉತ್ತರ ಒಳನಾಡು ಭಾಗಗಳಿಗೂ ವ್ಯಾಪಿಸುವ ಸೂಚನೆಗಳಿವೆ.

31.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಎರಡು ಮೂರು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಗಾಳಿಯ ಸಾಧ್ಯತೆಯೂ ಇದೆ. ಕಾಸರಗೋಡು ರಾತ್ರಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಈಗಿನಂತೆ ಮುಂದಿನ 10 ದಿನಗಳವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ದಿನದಲ್ಲಿ ಒಂದೆರಡು ಮಳೆಯ ಸಾಧ್ಯತೆಗಳಿವೆ.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಒಂದೆರಡು ತುಂತುರು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಮಲೆನಾಡು ಭಾಗಗಳಲ್ಲಿ ಮಳೆ ಕಡಿಮೆಯಾಗಿದ್ದು, ಆಗಸ್ಟ್ 1ರಿಂದ ಮೋಡ ಹಾಗೂ ಬಿಸಿಲಿನ ವಾತಾವರಣದ ಸಾಧ್ಯತೆಗಳಿವೆ. ಆಗಸ್ಟ್ 4ರ ನಂತರ ಮತ್ತೆ ಮಳೆಯ ಮುನ್ಸೂಚೆನೆ ಇದೆ.

ಒಳನಾಡು : ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಈ ವಾತಾವರಣವು ಆಗಸ್ಟ್ 3ರ ವರೆಗೆ ಮುಂದುವರಿಯುವ ಸಾಧ್ಯತೆಗಳಿದ್ದು, 4ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಆಗಸ್ಟ್ 7ರ ನಂತರ ಉತ್ತರ ಒಳನಾಡು ಭಾಗಗಳಲ್ಲಿಯೂ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ.

ಉತ್ತರ ಪೆಸಿಫಿಕ್ ಸಾಗರದಲ್ಲಿ ಬದಲಾಗುತ್ತಿರುವ ಹವಾಮಾನ (ಪ್ರಭಲ ಭೂಕಂಪ ಹಾಗೂ ಸುನಾಮಿ) ನಮ್ಮ ಮುಂಗಾರು ಮೇಲೆ ಯಾವ ರೀತಿಯ ಪರಿಣಾಮಗಳು ಬೀರಬಹುದು ಕಾದು ನೋಡಬೇಕಾಗಿದೆ.

30.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ :  ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಸುಮಾರು ಮುಂಜಾನೆ 11.30 ಗಂಟೆಯ ನಂತರ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ ಹಾಗೂ ಬಿಡುವಿನ ಸಮಯ ಹೆಚ್ಚಿರಬಹುದು. ಈಗಿನಂತೆ ಆಗಸ್ಟ್ 1ರ ತನಕ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. ನಂತರ ಕಡಿಮೆಯಾಗಲಿದ್ದು, 3ರಿಂದ ಬಿಸಿಲಿನ ವಾತಾವರಣದ ಸಾಧ್ಯತೆಗಳಿವೆ.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ತುಂತುರು ಹಾಗೂ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 1ರ ತನಕ ಈ ವಾತಾವರಣ ಮುಂದುವರಿಯುವ ಸಾಧ್ಯತೆಗಳಿದ್ದು 3ರ ನಂತರ ಬಿಸಿಲು ಹಾಗೂ ಮೋಡದ ವಾತಾವರಣದ ಸೂಚನೆಗಳಿವೆ.

ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ತುಂತುರು ಮಳೆಯ ಮುನ್ಸೂಚೆನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.
ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ. ನಂತರ ಕಾದು ನೋಡಬೇಕಾಗಿದೆ.

ಮಧ್ಯಪ್ರದೇಶ ಹಾಗೂ ಉತ್ತರ ಮಹಾರಾಷ್ಟ್ರ ಭಾಗಗಳಲ್ಲಿ ತಿರುವಿಕೆಯ ಕಾರಣದಿಂದ ಈ ರಾಜ್ಯಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದ್ದು, ಮಹಾರಾಷ್ಟ್ರ ಕಡೆಯಿಂದ ಕರ್ನಾಟಕದ ಉತ್ತರ ಒಳನಾಡು ಭಾಗಗಳಿಗೆ ಹರಿದು ಬರುತ್ತಿರುವ ನದಿಗಳಲ್ಲಿ ನೀರು ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.

Leave a Comment