Breaking
Wed. Dec 18th, 2024

ಸಾವಯವ ಕೃಷಿ ಮಾಡಿ ವರ್ಷಕ್ಕೆ 50 ಲಕ್ಷ ಆದಾಯ ಪಡೆದುಕೊಂಡ ರೈತ

Spread the love

ತಾಲ್ಲೂಕಿನ ಗ್ರಾಮದ ಈರಣ್ಣ ಮಲ್ಲಿಕಾರ್ಜುನ ಕುದರಿ ಕುಟುಂಬಕ್ಕೆ 27 ಎಕರ ಜಮೀನಿದ್ದು, 4 ಜನ ಅಣ್ಣತಮ್ಮಂದಿರಿದ್ದಾರೆ. ಇವರಲ್ಲಿ ಇಬ್ಬರು ಸರ್ಕಾರಿ ನೌಕರಿಯಲ್ಲಿದ್ದರೆ, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 5 ಎಕರೆ ದಾಕ್ಷಿ, 9 ಎಕರೆ ಕಬ್ಬಿನ ಜೊತೆಗೆ ಇನ್ನಿತರ ಜಮೀನಿನಲ್ಲಿ ಉದ್ದು, ಸೋಯಾಬೀನ್. ಈರುಳ್ಳಿ, ಸಿರಿಧಾನ್ಯ, ತೆಂಗು, ಮಾವು, ಪೇರಲ, ಸೀತಾಫಲ, ರಾಮಫಲ, ಹನುಮಫಲ ತರಹದ ಬೆಳೆಗಳನ್ನು ಬೆಳೆದು ವರ್ಷಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಜೋಳ, ತೊಗರಿ, ಕಡಲೆ, ಹೆಸರು, ಹೀಗೆ ಒಟ್ಟು ಸುಮಾರು 30 ರಿಂದ 35, 2. 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ‘ಈ ಎಲ್ಲ ಬೆಳೆಗಳ ಕಟಾವು ಮತ್ತು ನಿರ್ವಹಣೆಗೆ ತಗುಲುವ ಕೂಲಿ, ಸಗಣಿ ಗೊಬ್ಬರ ಮತ್ತು ಕಬ್ಬಿನ ರವದಿ ಖರೀದಿ ಮತ್ತು ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್ ಗೆ ಡಿಜಿತ್ ಮತ್ತು ಇನ್ನಿತರ ರಿಪೇರಿ ಖರ್ಚಿಗೆ ಸುಮಾರು15 ಲಕ್ಷದಿಂದ 18 ಲಕ್ಷ ಖರ್ಚಾಗುತ್ತದೆ, ಇದನ್ನು ತೆಗೆದರೆ ಸುಮಾರು 30 ಲಕ್ಷದಿಂದ 35 ಲಕ್ಷ ಪ್ರತಿ ವರ್ಷ ಆದಾಯ ಪಡೆದುಕೊಳ್ಳುತ್ತೇವೆ.ಸಾವಯವ ಕೃಷಿ ಮಾಡಿ ಹೆಚ್ಚಿನ ಆದಾಯ ತೆಗೆಯಲು ಸರಳ ಉಪಾಯವೆಂದರೆ ತೋಟದಲ್ಲಿಯೇ ಸಿಗುವ ಕಚ್ಚಾ ಪದಾರ್ಥಗಳಾದ 10 ಜಾತಿಯ ಗಿಡಗಳ ಎಲೆಗಳು, ಗೋಮೂತ್ರ, ಸಗಣಿ, ಮೆಣಸಿನಕಾಯಿ,ಅದರಕ, ಬೆಳ್ಳುಳ್ಳಿ, ತಿನ್ನುವ ತಂಬಾಕು ಮುಂತಾದವುಗಳನ್ನು ಬಳಸಿ ‘ದಶವರ್ಣಿ ಅರ್ಕ’ ಎನ್ನುವ ಔಷಧ ಸಿದ್ಧಗೊಳಿಸಿ ರೋಗ ಬರುವ ಬೆಳೆಗಳಿಗೆ ಸಿಂಪರಣೆ ಮಾಡುವುದು ಎನ್ನುತ್ತಾರೆ ಅವರು.ಬೆಳೆಗಳಿಗೆ ಬರುವ ರೋಗ ನಿಯಂತ್ರಣಕ್ಕಾಗಿ ಸ್ವಾಭಾವಿಕವಾಗಿ ಸಿಗುವ ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ಇಂತಹ ಔಷಧಗಳನ್ನು ಸಿದ್ಧಗೊಳಿಸಿ ಬೆಳೆಗಳಿಗೆ ರೋಗ ಬಂದರೆ ಸಿಂಪರಣೆ ಮಾಡಿ, ರೋಗ ನಿಯಂತ್ರಣ ಮಾಡಲಾಗುತ್ತದೆ.

ಯಾರು ಬಂದರೂ ತರಬೇತಿ!’

ನನ್ನ ತೋಟಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 10 ರಿಂದ 12 ಜನ ರೈತರು ಬಂದರೆ ಅವರಿಗೆ ಸಾವಯವ ಕೃಷಿ ಬಗ್ಗೆ ತರಬೇತಿ ನೀಡುತ್ತೇನೆ. ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದಲೂ ಕೂಡಾ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಮತ್ತು ಸಮಗ್ರ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆಯ ತರಬೇತಿ ನೀಡುತ್ತೇನೆ’ ಎನ್ನುತ್ತಾರೆ ಈರಣ್ಣ ಕುದರಿ.

ಪ್ರಶಸ್ತಿಗಳು:

ಈರಣ್ಣ ಕುದರಿ ಅವರಿಗೆ ಸಾವಯವ ಕೃಷಿಗಾಗಿ ಬೆಂಗಳೂರು ‘ಕೃಷಿ ವಿಶ್ವ ವಿದ್ಯಾಲಯ ಪ್ರಶಸ್ತಿ ಪತ್ರವನ್ನು ಒಳಗೊಂಡ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡ ಮಾಡುವ ನೇಗಿಲಯೋಗಿ ಜಿಲ್ಲಾ ಪ್ರಶಸ್ತಿ ಸಂದಿದೆ. ಇದೇ ರೀತಿ ಜಿಲ್ಲೆ ಮತ್ತು ತಾಲ್ಲೂಕುಗಳ ರೈತ ಸಂಘಟನೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಇನ್ನು ಬೆಳೆಗಳು ಸಮೃದ್ಧಿಯಾಗಿ ಬೆಳೆಯಲು ಜೀವಾಮೃತ, ಗೋಕೃಪಾಮೃತ, ಎರೆಜಲ, ಪಂಚಗವ್ಯ ಮುಂತಾದ ಗೊಬ್ಬರಗಳನ್ನು ಸಿದ್ಧಗೊಳಿಸಿಕೊಂಡು ಬೆಳೆಗಳಿಗೆ ಹಾಕುವುದು. ಇಷ್ಟು ಮಾಡಿದರೆ ಯಾವುದೇ ತರಹದ ರಸ ಗೊಬ್ಬರದ ಅಗತ್ಯವಿಲ್ಲ ಎನ್ನುತ್ತಾರೆ ಈರಣ್ಣ ಕುದರಿ, ಎರೆಹುಳ, ಔಷಧ, ಇನ್ನಿತರ ಗೊಬ್ಬರ ಸಿದ್ದಗೊಳಸಲು ಅಗತ್ಯವಿರುವ ಗೋಮೂತ್ರ ಮತ್ತು ಸಗಣಿಗಾಗಿಯೇ 5 ದೇಸಿ ಆಕಳು, 8 ಕುರಿಗಳು, 2 ಎತ್ತುಗಳು 20 ಕೋಳಿಗಳನ್ನು ಸಾಕಲಾಗಿದೆ. ಇವುಗಳಿಂದ ಬೆಳೆಗಳಿಗೆ ಅಗತ್ಯವಿರುವ ಔಷಧ, ಗೊಬ್ಬರ ಸಿದ್ಧಗೊಳಿಸಲಾಗುತ್ತದೆ. ಇದರ ಜೊತೆಗೆ ಮನೆಗೆ ಅಗತ್ಯವಿರುವಷ್ಟು ಹಾಲು ಸಿಗುತ್ತದೆ ಎಂದು ತಿಳಿಸಿದರು.

ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?

ನಿಮ್ಮ ಮೊಬೈಲ್ ನಲ್ಲಿಯೇ ಮಳೆ ಆಗುವ ಮಾಹಿತಿ ತಿಳಿಯುವುದು ಹೇಗೆ? ನಿಮ್ಮ ಜಿಲ್ಲೆಯಲ್ಲಿ ಏಷ್ಟು ಮಳೆ ಆಗುತ್ತದೆ ಎಂದು ತಿಳಿಯಿರಿ

ಜಮೀನು ಅಥವಾ ಮನೆ ಖರೀದಿಸಲು ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ, ಈ ಕೆಲಸ ಮಾಡದಿದ್ದರೆ ನೋಂದಣಿ ರದ್ದು ಮಾಡಲಾಗುತ್ತದೆ

ಮೊಬೈಲ್ ಸಂಖ್ಯೆ ಇದ್ದರೆ ಸಾಕು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿಯಬಹುದು

Related Post

Leave a Reply

Your email address will not be published. Required fields are marked *