Breaking
Sat. Dec 21st, 2024

ಜನೇವರಿ 21 ರಿಂದ 23 ರವರೆಗೆ ಮೂರು ದಿವಸ ಬೃಹತ್ ಕೃಷಿ ಮೇಳ, krushimela

Spread the love

ನಗರದ ಹೊರವಲಯದ ವಿಜಯಪುರ ಹಿಟ್ನಳ್ಳಿ ಫಾರ್ಮದಲ್ಲಿ ದಿನಾಂಕ: 21 ರಿಂದ 23ನೇ ಜನೇವರಿ 2024 ರ ವರೆಗೆ ಬೃಹತ್ ಕೃಷಿಮೇಳವನ್ನು ಕೃಷಿ ವಿಶ್ವವಿದ್ಯಾಲಯ ವಿಜಯಪುರ ಆವರಣ ಹಾಗೂ ಕೃಷಿ ಮತ್ತು ಕೃಷಿ ಸಂಬಂದಿತ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆಬೃಹತ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ಸಲದ ಕೃಷಿ ಮೇಳದ ಘೋಷವಾಕ್ಯವು “ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ” ಆಗಿರುತ್ತದೆ.

ರೈತರಿಗೆ ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿಮೇಳಗಳಂತಹ ಬೃಹತ್ ವಿಸ್ತರಣಾ ಕಾರ್ಯಕ್ರಮಗಳು ಬಹಳ ಮಹತ್ವವನ್ನು ಪಡೆದಿವೆ.

ಈ ಸಲದ ಕೃಷಿಮೇಳವನ್ನು ದಿನಾಂಕ 21-01-2024 ರಂದು ಬೆಳೆಗ್ಗೆ 11 ಗಂಟೆಗೆ ಕೃಷಿ ಸಚಿವ ಎಚ್.ಚೆಲುವರಾಯಸ್ವಾಮಿ ಇವರಿಂದ ಉದ್ಘಾಟನೆಗೊಳ್ಳುವುದು. ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಧೋಂಡಿಬಾ ಕಟಕಗೊಂಡ ಅಧ್ಯಕ್ಷತೆ ವಹಿಸುವರು, ಕೃಷಿ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಡಾ. ಎಂ. ಬಿ. ಪಾಟೀಲ ನೆರವೇರಿಸಿದರೆ, ಕೃಷಿ ಪ್ರಕಟಣೆಗಳನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಬಿಡುಗಡೆಗೊಳಿಸುವರು.

ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೃಷಿಕ ಸಮಾಜದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಹಾಗೂ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ, ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಉಪಸ್ಥಿತರಿರುವರು. ಈ ಸಲದ ಕೃಷಿಮೇಳದಲ್ಲಿ ರೈತರಿಗಾಗಿ ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಿ ಅದರಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆ, ಸಿರಿಧಾನ್ಯ, ಕೃಷಿ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಳಿಗೆ, ವಿವಿಧ ಸಂಶೋಧನಾ ಕೇಂದ್ರಗಳ ಮಳಿಗೆ,ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವದು ಮತ್ತು ಕೃಷಿ ಸಲಹಾ ಕೇಂದ್ರ ಏರ್ಪಡಿಸಿ ಇದರಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಲಭ್ಯವಿದ್ದು, ಮೇಳಕ್ಕೆ ಬರುವ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿವಸ ಮದ್ಯಾಹ್ನ ವಿವಿಧ ತಜ್ಞರಿಂದ ಹಾಗೂ ಅನುಭವ ರೈತರಿಂದ ವಿವಿಧ ವಿಷಯಗಳ ಮೇಲೆ ಕೃಷಿ ಗೋಷ್ಠಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮಗಳು ಜರುಗಲಿವೆ.

ಇದರ ಜೊತೆಗೆ ತಜ್ಞರೊಂದಿಗೆ ಚರ್ಚೆ, ಪ್ರಯೋಗ ತಾಕುಗಳ ಭೇಟಿ. ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಕೀಟನಾಶಕ ಸಿಂಪರಣೆಗಾಗಿ “ಡೋನ್” ಬಳಕೆ, ಸೌರ ಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪಸೆಟ್ಟಿನಿಂದ ನೀರೆತ್ತುವುದು. ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಪದ್ಧತಿ. ಕೃಷಿ ಹವಾಮಾನ ಶಾಸ್ತ್ರ, ಒಣಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿಯ ಅಭಿವೃದ್ಧಿ, ಮಳೆ ನೀರು ಕೊಯ್ದು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಬೀಜೋತ್ಪಾದನೆ ಹಾಗೂ ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ/ ಗೃಹ ವಿಜ್ಞಾನ ಕುರಿತಂತೆ ಮಾಹಿತಿ ನೀಡಲಾಗುವದು.

ರೈತರಿಗೆ ಆಶಾಕಿರಣವಾಗಿರುವ ಈ ಸಲದ ಕೃಷಿಮೇಳಕ್ಕೆ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೈತಬಾಂಧವರು ಆಗಮಿಸುವಂತೆ ಕೃಷಿ ಮೇಳ ಸಮಿತಿ ಅಧ್ಯಕ್ಷರು ಹಾಗೂ ಡೀನ್ ಡಾ.ಭೀಮಪ್ಪ ಎ. ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್, ಸಜ್ಜನ, ಜಂಟಿ ಕೃಷಿ ನಿರ್ದೇಶಕ ಡಾ.ಡಿ.ಡಬ್ಲ್ಯೂ.ವಿಲಿಯಮ್ ರಾಜಶೇಖರ ಮತ್ತು ಸಹ ವಿಸ್ತರಣಾ ನಿರ್ದೇಶಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಆರ್.ಬಿ. ಬೆಳ್ಳಿ ಇವರುಗಳು ಕೋರಿದ್ದಾರೆ.

ರಾಜ್ಯದ ಎಲ್ಲ ಸರ್ಕಾರಿ ವಿವಿ, ಕಾಲೇಜುಗಳಲ್ಲಿ ಒಂದೇ ಶುಲ್ಕ

ಉದಾಹರಣೆಗೆ ಬೆಂಗಳೂರು ವಿವಿಯಲ್ಲಿ ಯಾವುದೇ ಬಿಎ ಕೋರ್ಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ ಬಿಎ ಕೋರ್ಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿ ಅಥವಾ ಇನ್ಯಾವುದೇ ವಿವಿಯ ವಿದ್ಯಾರ್ಥಿ ಎಲ್ಲರಿಗೂ ಒಂದೇ ರೀತಿಯ ಶುಲ್ಕ ಇರುತ್ತದೆ. ಪ್ರವೇಶ ಶುಲ್ಕ ಮಾತ್ರವಲ್ಲ, ಪರೀಕ್ಷಾ ಶುಲ್ಕ, ಲೈಬ್ರರಿ ಶುಲ್ಕ, ವಿದ್ಯಾರ್ಥಿ ನಿಧಿ, ಬೋಧನಾ ಶುಲ್ಕ ಸೇರಿದಂತೆ ಯಾವ್ಯಾವ ರೀತಿಯ ಶುಲ್ಕಗಳಿವೆಯೋ ಎಲ್ಲವೂ ಏಕ ಮಾದರಿಯಲ್ಲಿರುತ್ತದೆ.

ಈ ಸಂಬಂಧ ರಾಜ್ಯದ ಎಲ್ಲಾ ವಿವಿಗಳ ಕುಲಪತಿಗಳು ಮತ್ತು ಕುಲ ಸಚಿವರಿಗೆ ಪತ್ರ ಬರೆದಿರುವ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು, ಎಲ್ಲ ವಿವಿಗಳಲ್ಲಿ ಏಕರೂಪ ವಿದ್ಯಾರ್ಥಿ ಶುಲ್ಕ ಮತ್ತು ಪರೀಕ್ಷಾ ಶುಲ್ಕ ನಿಗದಿಪಡಿಸಲು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಪ್ರೊ.ಸಿದ್ದೇಗೌಡ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಈಸಮಿತಿಯು ತಯಾರಿಸಿ ಕೊಟ್ಟ ಏಕರೂಪ ಶುಲ್ಕದ ವರದಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನಿಂದ ಇದನ್ನು ತಮ್ಮ ವಿವಿಗಳಲ್ಲಿ ಅಳವಡಿಸಿಕೊಂಡು ಸರ್ಕಾರಕ್ಕೆವರದಿಸಲ್ಲಿಸುವಂತೆ ಸೂಚಿಸಿದ್ದಾರೆ.

ಸರ್ಕಾರದ ಈ ಆದೇಶದಿಂದ ನಿಗದಿತ ಏಕರೂಪ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿದ್ದ ವಿವಿಗಳಿಗೆ ನಷ್ಟವಾಗಲಿದೆ, ಕಡಿಮೆ ಶುಲ್ಕ ಪಡೆಯುತ್ತಿದ್ದ ವಿವಿಗಳಿಗೆ ಲಾಭವಾಗಲಿದೆ. ಕನ್ನಡೇತರ ವಿದ್ಯಾರ್ಥಿಗಳು ಈ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ 5000 ರು, ಎನ್‌ಆರ್‌ಐ ವಿದ್ಯಾರ್ಥಿಗಳು 8ರಿಂದ 12 ಸಾವಿರ ರು. ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ 12 ಸಾವಿರ ರು. ವಿಶೇಷ ಶುಲ್ಕ ನಿಗದಿಪಡಿಸಲಾಗಿದೆ.

ಸಂಭಾವನೆ, ಭತ್ಯೆಗಳೂ ಏಕರೂಪ:

ವಿದ್ಯಾರ್ಥಿ ಗಳಿಂದ ಪಡೆಯುವ ಶುಲ್ಕ ಮಾತ್ರವಲ್ಲದೆ ಪರೀಕ್ಷೆಗಳಲ್ಲಿ ಮೌಲ್ಯಮಾಪಕರಿಗೆ ನೀಡುವ ಸಂಭಾವನೆ, ವಿವಿಧ ಭತ್ಯೆಗಳೂ ಸೇರಿದಂತೆ ಇನ್ನೂ ಹಲವು ವಿಚಾರಗಳಲ್ಲಿ ಏಕರೂಪತೆ ತರಲಾಗಿದೆ.

Related Post

Leave a Reply

Your email address will not be published. Required fields are marked *