ಆತ್ಮೀಯ ನಾಗರಿಕರೇ ನಮ್ಮ ರಾಜ್ಯ ಸರ್ಕಾರದಿಂದ ನಿಮಗಾಗಿ ಒಂದು ಸಿಹಿಸುದ್ದಿ ಬಂದಿದೆ. ಏನಪ್ಪಾ ಎಸಿ ಸುದ್ದಿ ಎಂದು ತಿಳಿಯಲು ಈ ಲೇಖನವನ್ನು ಓದಿ.ಷಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯನ್ನು 2023-24 ನೇ ಸಾಲಿನಲ್ಲಿ ವೃತ್ತಿ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಟ್ಟು 1,00,000/- ಸಾಲದೊಂದಿಗೆ ಬದಲಾಯಿಸಿದೆ. ಇದರಲ್ಲಿ 50% ಸಾಲ ಮತ್ತು 50% ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡುತ್ತಿದ್ದಾರೆ. ಆದಕಾರಣ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
ಅರ್ಜಿದಾರರು ಮೊದಲು ಕರ್ನಾಟಕದ ನಿವಾಸಿ ಆಗಿರಬೇಕು. ಅರ್ಜಿದಾರರು ಸರ್ಕಾರಿ ನೌಕರಿಯಲ್ಲಿ ಇರಬಾರದು. ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಬೇಕಾಗುತ್ತದೆ. ಅರ್ಜಿ ಸಲ್ಲಿಸುವರು 18 ರಿಂದ 55 ವರ್ಷಗಳ ಇರಬೇಕಾಗುತ್ತದೆ. ಅರ್ಜಿದಾರರು ನಗರ ಪ್ರದೇಶದಲ್ಲಿ ಇದ್ದರೆ ಅವರ ವಾರ್ಷಿಕ ಆದಾಯವು ತಮ್ಮ ವಾರ್ಷಿಕ ಆದಾಯವು ರೂ.1,03,000/- ಒಳಗೆ ಇರಬೇಕು ಮತ್ತು ಗ್ರಾಮೀಣ ಪ್ರದೇಶದವರು ಆಗಿದ್ದರೆ ಅವರ ಕುಟುಂಬದ ಆದಾಯವು ರೂ.81,000/- ಗಿಂತ ಕಡಿಮೆಯಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಷ್ಟು ಮತ್ತು ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 03-Oct-2023, ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://kmdconline.karnataka.gov.in/Portal/login ಆಗ ನೀವು ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ಒಂದು ವೆಬ್ ಸೈಟಿಗೆ ಭೇಟಿ ನೀಡುತ್ತೀರಿ. ಅಲ್ಲಿ ಕೇಳುವ ಎಲ್ಲ ದಾಖಲಾತಿಗಳು ಮತ್ತು ಎಲ್ಲಾ ವಿಷಯವನ್ನು ತುಂಬಿ ಅರ್ಜಿ ಸಲ್ಲಿಸಬೇಕು. ಅಥವಾ ನೀವು ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸೇವಾ ಸಿಂಧುಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ಯೋಜನಾ ವರದಿ, ಆಧಾರ್ ಕಾರ್ಡ್ ಪ್ರತಿ, ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ ಅಲ್ಪಸಂಖ್ಯಾತ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ
ಜೀವ ಜಲ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಲು 3 ಲಕ್ಷ ಸಹಾಯಧನ*
ಎರಡು ದಿನದ ಅಣಬೆ ಕೃಷಿ ತರಬೇತಿ ಅಕ್ಟೋಬರ್ 5 ನೊಂದಣಿ ಮಾಡಲು ಕೊನೆಯ ದಿನಾಂಕ*
ಮ್ಯಾಂಗೋಸ್ಟಿನ್ ಹಣ್ಣಿನ ಬೇಸಾಯ ಎಕರೆಗೆ ಲಕ್ಷಗಟ್ಟಲೆ ಸಂಪಾದನೆ, ಒಂದು ಕೆಜಿ ಹಣ್ಣಿಗೆ 200 ರೂಪಾಯಿ*