Breaking
Tue. Dec 17th, 2024

1.58 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಆಗಿರುವುದರಿಂದ ಸುಮಾರು ₹120 ಕೋಟಿ ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗೆ ಒಂದು ವಾರದ ಒಳಗಾಗಿ ಜಮಾ ಮಾಡಲಾಗುತ್ತದೆ

Spread the love

ಆತ್ಮೀಯ ರೈತ ಬಾಂಧವರೇ,

ಈಗಾಗಲೇ ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಸುರಿದ ಅಕಾಲಿಕ ಮಳೆಗೆ ಹಾನಿಯಾದ 1.58 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಆಗಿರುವುದರಿಂದ ಸುಮಾರು ₹120 ಕೋಟಿ ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗೆ ಒಂದು ವಾರದ ಒಳಗಾಗಿ ಜಮಾ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ತಿಳಿಸಿದ್ದಾರೆ.

Bele hani parihara-ಹಿಂಗಾರು ಹಂಗಾಮಿನ ₹120 ಕೋಟಿ ಬೆಳೆ ಹಾನಿ ಪರಿಹಾರ ಯಾವ ಯಾವ ರೈತರ ಖಾತೆಗೆ ಬರಲಿದೆ?

ಇದನ್ನೂ ಓದಿ:- ಬೆಳೆ ಪರಿಹಾರ ಲಿಸ್ಟ್ ನಲ್ಲಿರುವ ಅನರ್ಹ ಪಟ್ಟಿಯನ್ನು ಪ್ರಕಟಣೆ ಮಾಡಲಾಗಿದೆ.
ಹೀಗೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ

ಬೆಳೆ ಹಾನಿ ಪರಿಹಾರದ ಅರ್ಜಿ ಸ್ಥಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡುವುದು ಎಂದು ಈ ಕೆಳಗೆ ವಿವರಿಸಲಾಗಿದೆ. ಅನಿರೀಶ್ಟಿತ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರವನ್ನು ಒದಗಿಸಲು ಹಣ ವರ್ಗಾವಣೆಯಲ್ಲಿ(Bele hani parihara status) ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ಕಂದಾಯ ಇಲಾಖೆಯಿಂದ ಪರಿಹಾರ(www.parihara.gov.in) ನೆಟ್ವರ್ಕ್ ಬಳಕೆ ಮಾಡಲಾಗುತ್ತದೆ. ಈ ತಂತ್ರಾಂಶದಲ್ಲಿ ಬೆಳೆ ಹಾನಿಯಾದ ರೈತರ ವಿವರವನ್ನು ದಾಖಲಿಸಿ ಅರ್ಹ ರೈತರಿಗೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ.

ಒಂದು ವಾರದ ಒಳಗಾಗಿ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ:

ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರವನ್ನು ಒದಗಿಸಲು ಕಂದಾಯ ಇಲಾಖೆಯಿಂದ ಪೂರಕ ಸಿದ್ದತೆಯನ್ನು ನಡೆಸಿದ್ದು, 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಅಗಿದ್ದು, ಇದಕ್ಕೆ ಪರಿಹಾರವನ್ನು ನೀಡಲು ಸುಮಾರು ₹120 ಕೋಟಿ ವೆಚ್ಚ ಭರಿಸಬೇಕಾಗುತ್ತದೆ ಎಂದು ಕಂದಾಯ ಸಚಿವರು ವಾರ್ತಾ ಇಲಾಖೆಯ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ರೈತರಿಗೆ ಒಂದು ವಾರದ ಒಳಗಾಗಿ ನೇರ ನಗದು ವರ್ಗಾವಣೆ ಮೂಲಕ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆಯಲ್ಲಿ ಕಂದಾಯ ಸಚಿವ ತಿಳಿಸಿದ್ದಾರೆ.

ಇದನ್ನು ಓದಿ:- ನಿಮ್ಮ ರೇಶನ್ ಕಾರ್ಡ್ ರದ್ದಾಗಿದ್ದರೆ ಈ ಕೆಲಸವನ್ನು ಕೂಡಲೇ ಮಾಡಿ ನಿಮ್ಮ ರೇಶನ್ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಎಂದು ಮೊಬೈಲ್ ನಲ್ಲಿಯೇ ಹೀಗೆ ಚೆಕ್ ಮಾಡಿಕೊಳ್ಳಿ

Bele parihara status-ಬೆಳೆ ಹಾನಿ ಪರಿಹಾರದ ಅರ್ಜಿಯ ಸ್ಥಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು:

ಬೆಳೆ ಹಾನಿ ಪರಿಹಾರದ ಅರ್ಜಿಯ ಸ್ಥಿತಿಯನ್ನು ಮತ್ತು ಹಣ ಜಮಾ ಅಗಿರುವ ವಿವರವನ್ನು ರೈತರು ತಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು.

Step-1: Parihara status check ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ ಈ ವೆಬ್ಸೈಟ್ ನಲ್ಲಿ ಕನ್ನಡ/English ಎರಡು ಆಯ್ಕೆಗಳು ಕಾಣುತ್ತವೆ. ಇದರಲ್ಲಿ ಕನ್ನಡ ಎಂದು ಆಯ್ಕೆ ಮಾಡಿಕೊಂಡು ಮುಂದುವರೆಯಬಹುದು. ಇದಾದ ನಂತರ “Parihara Payment Reports” ವಿಭಾಗದಲ್ಲಿ “Village Wise List” ಬಟನ್ ಮೇಲೆ ಕ್ಲಿಕ್ ಮಾಡಿ “Select year/ವರ್ಷ ಆಯ್ಕೆಮಾಡಿ” ಆಯ್ಕೆಯಲ್ಲಿ ಎಂದು ಅಯ್ಕೆ ಮಾಡಿಕೊಂಡು “Select season/ಋತು ಆಯ್ಕೆ ಮಾಡಿ ” Calamity Type/ವಿಪತ್ತಿನ ವಿಧ.

Step-3: ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಸೆಲೆಕ್ಟ್ ಮಾಡಿಕೊಂಡು Get Report/ವರದಿ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಬೆಳೆ ಹಾನಿ ಪರಿಹಾರವನ್ನು ಪಡೆಯಲು ಅರ್ಹರಿರುವ/ ಹಣ ಜಮಾ ಅಗಿರುವ ರೈತರ ಪಟ್ಟಿ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇರುವುದನ್ನು ಗುರುತಿಸಿ ಅದರ ಮುಂದಿನ ಕಾಲಂ ನಲ್ಲಿ ಎಷ್ಟು ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೋಡಬಹುದು.

https://chat.whatsapp.com/Gm6a0DqjrOGLAWzSIe62LU

Related Post

Leave a Reply

Your email address will not be published. Required fields are marked *