Breaking
Tue. Dec 17th, 2024
Spread the love

ಕೃಷಿ ನವೋದ್ಯಮ ಯೋಜನೆ ಸೌಲಭ್ಯಕ್ಕೆ ಮನವಿ. ರೈತರು ‘ಕೃಷಿ ನವೋದ್ಯಮ’ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಅವರು ತಿಳಿಸಿದ್ದಾರೆ. 2023-24ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು “ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ‘ನವೋದ್ಯಮ ಎಂಬ ಹೊಸ ಯೋಜನೆಯನ್ನು ಘೋಷಿಸಿರುತ್ತಾರೆ.

ಯೋಜನೆಯ ಗುರಿ:

ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಯೋಜಿಸಲಾಗಿದೆ.

ಉದ್ದೇಶಗಳು

ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಿ ಕೃಷಿ ವಲಯದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವುದು. ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುವುದು. ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸಲಾದ ನೂತನ ಆವಿಷ್ಕಾರಗಳು ಹಾಗೂ ತಾಂತ್ರಿಕತೆಗಳ ವಾಣಿಜ್ಯಕರಣವನ್ನು ಉತ್ತೇಜಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಯೋಜನೆಯ ಕಾರ್ಯವ್ಯಾಪ್ತಿ:

ರೈತರ ನೂತನ ಪರಿಕಲ್ಪನೆಗಳೆಗೆ ಉತ್ತೇಜನ ನೀಡಿ ಕೃಷಿಯೊಂದಿಗೆ ಉದ್ಯಮಿಗಳಾಗಿ ಪರಿವರ್ತನೆ ಹೊಂದುವಂತೆ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿ ಸಹಕಾರಿಯಾಗುವಂತೆ ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು, ನವೀನ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುವುದು.

ಹೆಚ್ಚುವರಿ ಮೇವು ಲಭ್ಯತೆ ಮಾಹಿತಿ ಸಲ್ಲಿಸಿ

ಹೊಸ ಕೃಷಿ ನವೋದ್ಯಮಗಳಿಗೆ ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ.50ರಷ್ಟು ಸಹಾಯಧನವನ್ನು (ಕನಿಷ್ಠ ರೂ. 5 ಲಕ್ಷದಿಂದ ಗರಿಷ್ಠ ರೂ. 20 ಲಕ್ಷಗಳವರೆಗೆ) ಬ್ಯಾಂಕ್ ಸಾಲದ ಮುಖಾಂತರ ಆರ್ಥಿಕ ನೆರವು ನೀಡಲಾಗುವುದು. ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇ.50ರಷ್ಟು ಸಹಾಯಧನವನ್ನು (ಕನಿಷ್ಠ ರೂ. 20 ಲಕ್ಷದಿಂದ ಗರಿಷ್ಠ ರೂ. 50 ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ಆರ್ಥಿಕ ನೆರವು ನೀಡಲಾಗುವುದು.

ಕೃಷಿ ನವೋದ್ಯಮಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮದಡಿ ಆಯ್ಕೆಯಾದ ನವೋದ್ಯಮಿಗಳ ಸಾಮರ್ಥ್ಯಾಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ, ಐ.ಸಿ.ಎ.ಆರ್., ಸಿ.ಎಫ್.ಟಿ.ಆ‌ರ್.ಐ.. ಸಿ.ಎಸ್.ಐ.ಆರ್., ಸಿ-ಸಿಎಎಂಪಿ ಹಾಗೂ ಇತರೆ ಸಂಶೋಧನಾ ಸಂಸ್ಥೆಗಳಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಸ್ಥಾಪಿತವಾಗಿರುವ ಕೃಷಿ ನಾವೀನ್ಯತೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ತರಬೇತಿಗಳನ್ನು ನೀಡಲಾಗುವುದು.

ನೋಂದಣಿ ಹಾಗೂ ಅರ್ಜಿ ಸಲ್ಲಿಸುವಿಕೆ:

ಅರ್ಜಿ ನಮೂನೆ ಹಾಗೂ ಇತರೆ ಸಂಬಂಧಿತ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ (ವಿ.ತ) ಬಿ.ಮಹಮ್ಮದ್ ಹಾರೂನ್ ರಷೀದ್ ಮೊ: 8277929662, ಇವರನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚುವರಿ ಮೇವು ಲಭ್ಯತೆ ಮಾಹಿತಿ ಸಲ್ಲಿಸಿ

ಹೊಸಪೇಟೆ(ವಿಜಯನಗರ) : ಹೊಸಪೇಟೆ ತಾಲ್ಲೂಕಿನ ರೈತರು ತಮ್ಮಲ್ಲಿರುವ ಹೆಚ್ಚುವರಿ ಮೇವು ಲಭ್ಯತೆಯ ಮಾಹಿತಿ ಸಲ್ಲಿಸುವಂತೆ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ತಹಶೀಲ್ದಾರ ವಿಶ್ವಜಿತ್ ಮೆಹ್ರಾ ಅವರು ತಿಳಿಸಿದ್ದಾರೆ. ಹೊಸಪೇಟೆ ತಾಲ್ಲೂಕನ್ನು ಈಗಾಗಲೇ ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ್ದು, ಜಾನುವಾರುಗಳಿಗೆ ಅಗತ್ಯವಿರುವ ಮೇವು ಖರೀದಿ ಮಾಡಬೇಕಾಗಿರುತ್ತದೆ. ಹೊಸಪೇಟೆ ತಾಲ್ಲೂಕಿನ ರೈತರ ಬಳಿ ಇರುವ ಮೇವಿಗೆ ಒಂದು ಟನ್ ಭತ್ತ ಅಥವಾ ರಾಗಿ ಹುಲ್ಲಿಗೆ (ಸಾಗಾಣಿಕೆ ವೆಚ್ಚ ಸೇರಿದಂತೆ) 6,000 ರೂ.ಗಳು ನಿಗದಿಯಾಗಿರುತ್ತದೆ. ಆಸಕ್ತ ರೈತರು ತಮ್ಮ ಮೇವು ಲಭ್ಯತೆ ಮಾಹಿತಿಯೊಂದಿಗೆ ಹೊಸಪೇಟೆ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬೆಣ್ಣೆ ಮೊ.ಸಂ: 9448127848, ಇವರನ್ನು ಸಂಪರ್ಕಿಸಬಹುದಾಗಿದೆ.

https://chat.whatsapp.com/Gm6a0DqjrOGLAWzSIe62LU


ಆಕ್ಷೇಪಣೆ ಆಹ್ವಾನ

ಹೊಸಪೇಟೆ(ವಿಜಯನಗರ) : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ ವಿವಿಧ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗೆ ಆಹ್ವಾನಿಸಲಾಗಿದೆ. ವಿಜಯನಗರ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್.ಎಲ್.ಇ.ಪಿ., ಎನ್. ಎಂ.ಹೆಚ್.ಪಿ ಕಾರ್ಯಕ್ರಮದಡಿ ಮಂಜೂರಾಗಿರುವ ಜಿಲ್ಲಾ ಕುಷ್ಠರೋಗ ಸಲಹೆಗಾರ, ಸಮುದಾಯ ಸ್ಟಾಫ್ ನರ್ಸ್, ಸೈಕಿಯಾಟ್ರಿಕ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿ, ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಈ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರು ಆಕ್ಷಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಡಿ.29ರ ಸಂಜೆ 5ರ ಒಳಗಾಗಿ ಕಚೇರಿಯ ಸಮಯದಲ್ಲಿ ಲಿಖಿತ ರೂಪದಲ್ಲಿ ಆಕ್ಷಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಿಯಮ್ಮನಹಳ್ಳಿ: ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹೊಸಪೇಟೆ(ವಿಜಯನಗರ): ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮರಿಯಮ್ಮನಹಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿ ವಾಸಿಸುವಂತಹ ನಿವೇಶನ ರಹಿತ ಹಾಗೂ ವಸತಿ ರಹಿತ ನಾಗರೀಕರಿಗೆ ವಿವಿಧ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲಾಗುತ್ತಿದೆ.

ಅರ್ಹರು ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ರೇಷನ್ ಕಾರ್ಡ್, ಜಾತಿ & ಆದಾಯ ಪ್ರಮಾಣ ಪತ್ರ, ಅರ್ಜಿದಾರರ ಹೆಸರಿನಲ್ಲಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ನಿವೇಶನ, ವಸತಿ ಹೊಂದಿರುವುದಿಲ್ಲ ಎಂಬುದರ ಬಗ್ಗೆ ಪ್ರಮಾಣ ಪತ್ರದೊಂದಿಗೆ ಡಿ.30ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ನಿಗದಿತ ದಿನಾಂಕದೊಳಗೆ ಬಂದಂತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಕಾರರು ಇ-ಶ್ರಮ ಪೋರ್ಟನಲ್ಲಿ ನೊಂದಾಯಿಸಿ

ಬಾಗಲಕೋಟೆ : ಕೇಂದ್ರ ಸರಕಾರವು ಇ-ಶ್ರಮ ಪೋರ್ಟಲ್‌ನ್ನು ಅಭಿವೃದ್ಧಿಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಕಾರ್ಮಿಕರಿಗೆ ಹೊಸ ಯೋಜನೆ, ಸೌಲಭ್ಯ, ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ (http://register.eshram.gov.in/#/user/self) ಪೋರ್ಟಲ್‌ನಲ್ಲಿ ತಮ್ಮ ಮಾಹಿತಿಯನ್ನು ನೊಂದಾಯಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *