ಆತ್ಮೀಯ ನಾಗರಿಕರೇ,
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿದಿನ ಕರ್ನಾಟಕ ರಾಜ್ಯದ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ತೋರಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈಗ ಗಂಡು ಮಕ್ಕಳು ಹಾಗೂ ರಾಜ್ಯದ ಎಲ್ಲಾ ನಾಗರಿಕರು ಖುಷಿ ಪಡುವಂತಹ ಒಂದು ಸುದ್ದಿಯನ್ನು ಹುಬ್ಬಳ್ಳಿ ಮತ್ತು ಕಾರವಾರ ಡಿವಿಜನ್ ನ ಕೆ ಎಸ್ ಆರ್ ಟಿ ಸಿ ಇಲಾಖೆಯವರು ಹೊಸ ವರ್ಷಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಅದೇನೆಂದು ಕುತೂಹಲದಿಂದ ಕಾಯುತ್ತಿದ್ದೀರಾ?
ಎಲ್ಲರಿಗೂ ಅನುಭವ ಆಗಿರುವ ಹಾಗೆ ಪ್ರತಿದಿನ ಬಸ್ಸಿನಲ್ಲಿ ಲಕ್ಷಾಂತರ ಜನರು ಪ್ರಯಾಣವನ್ನು ಮಾಡುತ್ತಾರೆ. ಆ ಪ್ರಯಾಣವನ್ನು ಮಾಡುವಾಗ ಟಿಕೆಟ್ ಅನ್ನು ಖರೀದಿಸುವಾಗ ಕಂಡಕ್ಟರ್ ಬಳಿ ಹಣ ಕೊಡುವುದು ಮತ್ತು ಚಿಲ್ಲರೆಗಳನ್ನು ಹಿಂಪಡೆಯುವುದನ್ನು ನಾವು ದಿನನಿತ್ಯ ನೋಡಿದ್ದೇವೆ. ಈ ಚಿಲ್ಲರೆ ಅನ್ನೋ ಹಿಂಪಡೆಯುವಾಗ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಸ್ವಲ್ಪ ಕಷ್ಟವಾಗುವ ಕಾರಣ ಕರ್ನಾಟಕ ಸಾರಿಗೆ ನಿಗಮ ಹುಬ್ಬಳ್ಳಿ ಮತ್ತು ಕಾರವಾರ ಇವರು ನಮ್ಮ ಭಾರತದ ಆತ್ಮ ನಿರ್ಭರ ಯೋಜನೆ ಹಾಗೂ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಎತ್ತಿ ಹಿಡಿಯಲು ಇದೀಗ UPI ಎಂದರೆ ನೀವು ದೈನಂದಿನ ಬಳಸುವ ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ನಂತಹ ಹಲವಾರು ಅಪ್ಲಿಕೇಶನ್ ಗಳನ್ನು ಬಳಸಿ ಇದೀಗ ಹಣವನ್ನು ಪಾವತಿಸಿ ಟಿಕೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ.
ನಮ್ಮ ಪ್ರಧಾನಮಂತ್ರಿಗಳಾಗಿರುವ ಶ್ರೀ ಮಾನ್ಯ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಎಂಬ ಕಾರ್ಯಕ್ರಮವನ್ನು ಜುಲೈ 1, 2015 ರಂದು ಪರಿಚಯಿಸಿದ್ದಾರೆ.
ಇದನ್ನು ಎತ್ತಿ ಹಿಡಿಯುವ ನೆಟ್ಟಿನಲ್ಲಿ ಈಗಾಗಲೇ ನಮ್ಮ ದೇಶದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಇಲಾಖೆಗಳು ತಮ್ಮದೇ ಆದ ಹೊಸ ಕಾರ್ಯಕ್ರಮಗಳನ್ನು ನಿಯೋಜಿಸಿದ್ದಾರೆ. ಅದರಲ್ಲೂ ಈಗಿನ ದಿನಗಳಲ್ಲಿ ನೀವೆಲ್ಲರೂ ಫೋನ್ ಪೇ ಪೇಟಿಎಂ ನಂತಹ ಹಲವಾರು ಆಪ್ ಗಳನ್ನು ಬಳಸಿಯೇ ನಿಮ್ಮ ಪಾವತಿಗಳನ್ನು ಸ್ವೀಕರಿಸುವುದು ಹಾಗೂ ನೆರವೇರಿಸುವುದನ್ನು ಮಾಡುತ್ತಿದ್ದೀರಾ. ಬೆಂಗಳೂರು ಹುಬ್ಬಳ್ಳಿ ಅಂತಹ ನಗರಗಳಲ್ಲಿ ವಾಸಿಸುತ್ತಿರುವ ನಾಗರಿಕರು ಮೆಟ್ರೋ ಹಾಗೂ ಚಿಗುರಿ ಬಸ್ ನಲ್ಲಿ ಪ್ರಯಾಣವನ್ನು ಮಾಡಿದ್ದೀರಾ ಅಲ್ಲಿ ನೀವು ಇದೆ UPI ಅಪ್ಲಿಕೇಶನ್ ಇಂದ ಹಣವನ್ನು ಪಾವತಿಸುತ್ತಿದ್ದೀರ. ಇದನ್ನು ಉದಾರಣೆಯಾಗಿದ್ದು ತೆಗೆದುಕೊಂಡು ಕೆಎಸ್ಆರ್ಟಿಸಿ ಹೊಸ ಹೆಜ್ಜೆ ಒಂದನ್ನು ಇಟ್ಟಿದೆ. ಇಷ್ಟು ದಿನ ಹೆಣ್ಣು ಮಕ್ಕಳು ತಮ್ಮ ಆಧಾರ್ ಕಾರ್ಡನ್ನು ಉಪಯೋಗಿಸಿ ಹಣವಿಲ್ಲದೆ ಪ್ರಯಾಣವನ್ನು ಮಾಡುತ್ತಿದ್ದರು. ಹಾಗೆಯೇ ಇನ್ನು ಮುಂದೆ ಎಲ್ಲರೂ ಕೂಡ ಹಣವಿಲ್ಲದೆ ಪ್ರಯಾಣವನ್ನು ಮಾಡಬಹುದು.
ಇದು ಸ್ಮಾರ್ಟ್ ಫೋನ್ ಇರುವ ನಾಗರಿಕರಿಗೆ ತುಂಬಾ ಸಹಾಯವಾಗುತ್ತದೆ ಹಾಗೂ ಎಲ್ಲೇ ಹೋದರು ಹಣವನ್ನು ತಮ್ಮ ಹತ್ತಿರ ಇಟ್ಟುಕೊಂಡು ಹೋಗುವ ಭಾರವನ್ನು ಕಡಿಮೆ ಮಾಡಿ ಹೋದಂತಾಗಿದೆ. ಇದರಿಂದ ಕಳ್ಳರಂತಹ ಹಾಗೂ ದರೋಡೆಕೋರು ಮಾಡುವ ಹಿತಕಾರಿಯಾಗುವ ಘಟನೆಗಳು ನಮ್ಮ ಸಮಾಜದಲ್ಲಿ ಕಡಿಮೆಯಾಗಲಿವೆ. ಹಾಗೆಯೇ ಸೀನಿಯರ್ ಸಿಟಿಜನ್ ಎಂದರೆ ವಯಸ್ಸಾದ ವ್ಯಕ್ತಿಗಳು ಹಾಗೂ ಚಿಕ್ಕ ಮಕ್ಕಳು ಫೋನ್ ಪೇ ಅಂತಹ ಅಪ್ಲಿಕೇಶನ್ ಅನ್ನು ಬಳಸಲು ಬಾರದ ಎಷ್ಟೋ ಜನರಿಗೆ ಇದು ಸ್ವಲ್ಪಮಟ್ಟಿಗೆ ಅರಿವನ್ನು ಮೂಡಿಸಿ ಅವರಿಂದಲೂ ಫೋನ್ ಪೇ ಅಂತಹ ಆಪ್ ಗಳನ್ನು ಬಳಸುವುದರ ಮೂಲಕ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ನಾವು ನೀವೆಲ್ಲರೂ ಸೇರಿ ಮುಂದುವರಿಸೋಣ ಹಾಗೂ ಇನ್ನೂ ಉಳಿದ ರಾಜ್ಯಗಳಿಗೆ ಮತ್ತು ಇತರ ದೇಶಗಳಿಗೆ ಭಾರತ ಒಂದು ಡಿಜಿಟಲ್ ಇಂಡಿಯಾ ಎನ್ನುವ ಮಾದರಿಯನ್ನು ನೀಡೋಣ. ಇದಕ್ಕೆ ನೀವೆಲ್ಲರೂ ಕೂಡ ಸಹಕರಿಸಬೇಕು.
ಕೊರೊನಾ ಬಂದರೆ 7 ದಿನ ಗೃಹಬಂಧನ
ಕೋವಿಡ್ ಪಾಸಿಟಿವ್ ಬಂದವರು ಕಡ್ಡಾಯವಾಗಿ 7 ದಿನ ಮನೆಯಲ್ಲೇ ಪ್ರತ್ಯೇಕವಾಗಿ ರಬೇಕು. ಕೊರೊನಾ ಖಾತ್ರಿಯಾದ ಉದ್ಯೋಗಿ ಗಳಿಗೆ, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು 7 ದಿನಗಳು ರಜೆ ನೀಡಬೇಕು ಎಂದು ಸರ್ಕಾರ ಸೂಚಿಸಿದೆ. ಈ ಸಂಬಂಧ ಮಾರ್ಗದರ್ಶಿ ಸೂತ್ರ ಗಳನ್ನು ಬಿಡುಗಡೆ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊರೊನಾ ನೂತನ ರೂಪಾಂತರಿ ಜೆಎನ್.1 ಬೇಗ ಹರಡುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು. ಅಲ್ಲಿಗೆ 2020ರಲ್ಲಿನ ಬಿಗುನಿಯಮ ಗಳಿಗೇ ರಾಜ್ಯ ಮರಳಿದಂತಾಗಿದೆ. ಜನರು ಮತ್ತೊಮ್ಮೆ ಕಠಿಣ ನಿಯಮಗಳಿಗೆ ಮುಖಾಮುಖಿಯಾಗುವ ಅನಿವಾರ್ಯತೆ ಉಂಟಾಗಿದೆ.
ಮಕ್ಕಳಲ್ಲಿ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ ಜ್ವರ, ನೆಗಡಿ ಸೇರಿದಂತೆ ಯಾವುದೇ ಸಮಸ್ಯೆ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಮನೆಯಲ್ಲೇ ಸೂಕ್ತ ಆರೈಕೆಗೆ ವ್ಯವಸ್ಥೆ ಮಾಡಬೇಕು. ಹೊಸ ವರ್ಷಾಚರಣೆ ಸೇರಿದಂತೆ ಯಾವುದೇ ಕಾರ್ಯಕ್ರಮ ಅಥವಾ ಜನರ ಓಡಾಟಕ್ಕೆ ಸದ್ಯ ನಿರ್ಬಂಧ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದೆ.
ಕೋವಿಡ್ ನಿರ್ವಹಣೆ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಸಚಿವ ದಿನೇಶ್, ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು, ರಾಜ್ಯ ಮಟ್ಟದವರೆಗಿನ ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲಾಗಿದೆ. ಒಮಿಕ್ರಾನ್‌ನಂತೆ ಜೆಎನ್-1 ಕೂಡ ವೇಗವಾಗಿ ಹರಡುವ ತಳಿಯಾಗಿದೆ.