Breaking
Tue. Dec 17th, 2024

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ, ಯಾವ ಯಾವ ಜಿಲ್ಲೆಗಳಿಗೆ ನೋಡಿ?

Spread the love

ಯಾವ ಜಿಲ್ಲೆಗಳಿಗೆ ರೇಶನ್ ಕಾರ್ಡ್ ತಿದ್ದುಪಡಿ ಪ್ರಾರಂಭ?

• ಬಳ್ಳಾರಿ
• ಬೀದರ್
• ಚಿಕ್ಕಬಳ್ಳಾಪುರ
• ಚಿತ್ರದುರ್ಗ
• ದಾವಣಗೆರೆ
• ಕಲಬುರ್ಗಿ
• ಕೋಲಾರ
• ಕೊಪ್ಪಳ
• ರಾಯಚೂರು
• ರಾಮನಗರ
• ಶಿವಮೊಗ್ಗ
• ತುಮಕೂರು
• ಯಾದಗಿರಿ
• ವಿಜಯಪುರ.

ವಂಚಿತರ ಕಲ್ಯಾಣ ಪ್ರಧಾನಿ ಮೋದಿ ಸರ್ಕಾರದ ಆದ್ಯತೆ

ಕೇಂದ್ರ ಸರ್ಕಾರವು ದುರ್ಬಲ ಬುಡಕಟ್ಟು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ 24,104 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಪಿಎಂ ಜನ್‌ಮನ್ ಮಿಷನ್ ಆರಂಭಿಸಿದೆ. 75 ದುರ್ಬಲ ಬುಡಕಟ್ಟು ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ 24,104 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಆರಂಭಿಸಲಾಗಿದೆ.

ಪಿಎಂ ಜನ್‌ಮನ್‌ ಮಿಷನ್ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಿಗೆ ರಸ್ತೆ, ದೂರಸಂಪರ್ಕ, ವಿದ್ಯುತ್ ಮತ್ತು ವಸತಿಯಂತಹ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 39 ಲಕ್ಷ ಬುಡಕಟ್ಟು ಜನರಿಗೆ ಪ್ರಯೋಜನ ದೊರೆಯಲಿದೆ. ಸ್ವಾತಂತ್ರ್ಯದ ಬಳಿಕ 75 ವರ್ಷಗಳ ವರೆಗೆ ವಂಚಿತರಾಗಿದ್ದವರಿಗೆ ಇಂದು ಆದ್ಯತೆ ನೀಡುತ್ತಿದೆ ಪ್ರಧಾನಿ ಮೋದಿ ಸರ್ಕಾರ.

ಫಲಪುಷ್ಪ ಪ್ರದರ್ಶನ-2024 ಉದ್ಘಾಟನಾ ಸಮಾರಂಭ

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭವು ಫೆಬ್ರುವರಿ 10 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಎ.ಪಿ.ಎಂ.ಸಿ. ವಿವೇಕಾನಂದ ಸಭಾಭವನದಲ್ಲಿ ಜರುಗಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಅವರುಗಳು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು.

ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್.ಪಾಟೀಲ, ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯರುಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ನರಗುಂದ ಶಾಸಕರಾದ ಸಿ.ಸಿ.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ ಆಗಮಿಸುವರು.

10 ರಂದು ತೋಟಗಾರಿಕೆ ಮೇಳಕ್ಕೆ ಉದ್ಘಾಟನೆ

ಬಾಗಲಕೋಟೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉದ್ಯಾನಗಿರಿಯಲ್ಲಿ ಫೆಬ್ರವರಿ 10 ರಿಂದ 12 ವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಫೆಬ್ರವರಿ 10 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆ‌ರ್.ಬಿ.ತಿಮ್ಮಾಪೂರ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ನವದೆಹಲಿಯ ವಿಶೇಷ ಪ್ರತಿನಿಧಿ-2 ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಹುನಗುಂದ ಶಾಸಕ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ. ಫೆ.11 ರಂದು ಬೆಳಿಗ್ಗೆ 11 ಗಂಟೆಗೆ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪಾಲ್ಗೊಳ್ಳಲಿದ್ದಾರೆ.

ಫೆ.12 ರಂದು ಬೆಳಿಗ್ಗೆ 11ಕ್ಕೆ ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸೇರಿದಂತೆ ಇತರೆ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಬರ ಸಹಿಷ್ಣುತೆಗಾಗಿ ಫೆ.10 ರಂದು ಮಧ್ಯಾಹ್ನ 2.30 ರಿಂದ 3.30 ವರೆಗೆ ತೋಟಗಾರಿಕೆಯಲ್ಲಿ ಬರ ನಿರ್ವಹಣಾ ಕ್ರಮಗಳು, 3.30 ರಿಂದ ಸಂಜೆ 4.30 ವರೆಗೆ ಕಿರು ಸಂಸ್ಕರಣಾ ಘಟಕಗಳಾಗಿ ರೈತರರ ತೋಟಗಳು, ಫೆ.11 ರಂದು ಮಧ್ಯಾಹ್ನ 2.30 ರಿಂದ 3.30 ವರೆಗೆ ಸಮಗ್ರ ತೋಟಗಾರಿಕಾ ನಿರ್ವಹಣೆ : ಸಾಧ್ಯತೆಗಳು ಮತ್ತು ಸವಾಲುಗಳು, 3.30 ರಿಂದ ಸಂಜೆ 4.30 ವರೆಗೆ ಭೌಗೋಳಿಕ ಮಾನ್ಯತೆ ಪಡೆದ ತೋಟಗಾರಿಕಾ ಬೆಳೆಗಳ ಮಹತ್ವ ಕುರಿತು ತಾಂತಿಕ ಗೋಷಿಗಳು ನಡೆಯಲಿವೆ.

Related Post

Leave a Reply

Your email address will not be published. Required fields are marked *