ಆತ್ಮೀಯ ಕರ್ನಾಟಕ ರಾಜ್ಯ ಜನರಿಗೆ, ಈಗಾಗಲೇ ನಿಮಗೆ ತಿಳಿದ ಹಾಗೆ ಕಾಂಗ್ರೆಸ್ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲ ಜನರಿಗೆ ಉಚಿತ ಅಕ್ಕಿಯನ್ನು ನೀಡುತ್ತೇವೆ ಎಂದು ತಮ್ಮ ಒಂದು ಗ್ಯಾರಂಟಿಯಲ್ಲಿ ತಿಳಿಸಿದ್ದರು. ಅದನ್ನು ಈಗ ಕಾರ್ಯರೂಪಕ್ಕೆ ತರಲು ಸರ್ಕಾರವು ಸಜ್ಜಾಗಿದೆ. ಆದಕಾರಣ ನಮ್ಮ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಅಕ್ಕಿಗಳು ಜನರಿಗೆ ಕೊಡಲು ತಯಾರಾಗಿಲ್ಲ. ಆದಕಾರಣ ಅದರ ಬದಲಿಗೆ ಜನರಿಗೆ ಹಣವನ್ನು ನೀಡುವುದರ ಮುಖಾಂತರ ಜನರಿಗೆ ಈ ಗ್ಯಾರಂಟಿಯನ್ನು ತಲುಪಿಸುವುದು ಅವರ ಮುಖ್ಯ ಉದ್ದೇಶವಾಗಿದೆ.
ಆದಕಾರಣ ಸರಕಾರವು ಜನರ ಖಾತೆಗೆ ನಿರ್ದಿಷ್ಟವಾದ ಹಣವನ್ನು ಜಮಾ ಮಾಡುತ್ತಿದ್ದಾರೆ. ನನ್ನ ಖಾತೆಗೂ ಕೂಡ ಈ ಹಣವು ಬಂದು ತಲುಪಿದೆ. ನಿಮಗೂ ಈ ಯೋಜನೆ ಅನ್ವಯವಾಗುತ್ತಿದ್ದರೆ ನಿಮ್ಮ ಖಾತೆಗೂ ಹಣ ಬಂದೇ ಬರುತ್ತದೆ. ನಿಮ್ಮ ಖಾತೆಗೆ ಹಣ ಬಂದಿದೆ ಇಲ್ಲವೋ ಎಂದು ತಿಳಿಯುವುದು ಹೇಗೆ? ನಿಮ್ಮ ಖಾತೆಗೆ ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಸುಲಭ ಮಾರ್ಗ. ನಿಮಗೂ ಹಣ ಬರುತ್ತದೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಾವು ತಿಳಿಸುವ ಸುಲಭ ವಿಧಾನಗಳನ್ನು ಪಾಲಿಸಿ.
ನಿಮ್ಮ ಖಾತೆಗೆ ಹಣ ಬಂದಿದೆ ಎಂದು ಚೆಕ್ ಮಾಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahara.kar.nic.in/Home/EServices
ಈಗ ನೀವು ಚಿತ್ರದಲ್ಲಿ ಕಾಣುವ ಹಾಗೆ ಒಂದು ವೆಬ್ ಸೈಟ್ ಗೆ ಭೇಟಿ ನೀಡುತ್ತೀರಿ. ಅಲ್ಲಿ ಮೇಲೆ ಕಾಣುವ ಹಾಗೆ ಮೂರು ಗೆರೆಗಳು ಕಾಣುತ್ತವೆ ಆ ಗೆರೆಗಳ ಮೇಲೆ ನೀವು ಕ್ಲಿಕ್ ಮಾಡಬೇಕು. ನಂತರ ನಿಮಗೆ ಅಲ್ಲಿ e-Status ಎಂಬ ಆಯ್ಕೆಯು ಕಾಣುತ್ತದೆ. ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ಕೆಳಗೆ ಇನ್ನೂ ಮೂರು ಆಯ್ಕೆಗಳು ಕಂಡುಬರುತ್ತವೆ.
ಅದರಲ್ಲಿ ನೀವು ಮೂರನೇ ಆಯ್ಕೆಯಾದ DBT Status ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಇಷ್ಟಾದ ಮೇಲೆ ನಿಮ್ಮ ಮುಂದೆ ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಇನ್ನೊಂದು ಮುಖಪುಟವು ತೆರೆದು ಬರುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆಯು ಆ ಮೂರು ಆಯ್ಕೆಗಳಲ್ಲಿ ಹುಡುಕಿ ಆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ನಂತರ ಚಿತ್ರದಲ್ಲಿ ಕಾಣುವ ಹಾಗೆ ನೀವು Status of DBT ನೇರ ನಗದು ವರ್ಗಾವಣೆಯ ಸ್ಥಿತಿ(DBT) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನೀವು ಅಲ್ಲಿ ವರ್ಷ ತಿಂಗಳು ಮತ್ತು ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕಬೇಕಾಗುತ್ತದೆ. ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ನಿಮಗೆ ಒಟ್ಟು ಎಷ್ಟು ಹಣ ಬರುತ್ತದೆ ಎಂದು ಸಂಪೂರ್ಣ ಮಾಹಿತಿಯು ನಿಮಗೆ ದೊರೆತು ಬಿಡುತ್ತದೆ.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಮೇಕೆ ಘಟಕ ಸ್ಥಾಪನೆ ಮಾಡಲು ಸಹಾಯಧನಕ್ಕೆ ಅರ್ಜಿ ಆಹ್ವಾನ
ಉತ್ತಮ ತಳಿಯ ಮೀನು ಮರಿಗಳು ಕಡಿಮೆ ದರದಲ್ಲಿ ಮಾರಾಟ, ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮೀನು ಖರೀದಿಸಿ☎️
ಕೂಡಲೇ ಅರ್ಜಿ ಸಲ್ಲಿಸಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆಯಿರಿ
ಅಡಿಕೆ, ಮಾವು, ದಾಳಿಂಬೆ ಮತ್ತು ಇತರ ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಕೆ