ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/status1/status_of_dbt_new.aspx
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ Status of DBT ನಲ್ಲಿ Select Year, Select Month ಮಾಡಿ. Enter RC Number/RC do ಆಮೇಲೆ ಕ್ಯಾಪ್ಟಾ ನಮೂದಿಸಿ, GO ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಸಾವು ಗೆದ್ದ ಸಾತ್ವಿಕ್ ಸಿದ್ದಲಿಂಗನಾದ
ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದು ಸುರಕ್ಷಿತವಾಗಿ ಬದುಕುಳಿದು ಬಂದಿರುವ ಸಾತ್ವಿಕ್ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಸಾತ್ವಿಕ್‌ನ ಸುರಕ್ಷತೆ ಹಾಗೂ ಚೇತರಿಕೆಗಾಗಿ ಆತನ ತಾಯಿ ಪೂಜಾ ದೇವರಿಗೆ ಹಲವು ಹರಿಕೆ ಕಟ್ಟಿಕೊಂಡಿದ್ದು, ಅವುಗಳಲ್ಲಿ ಸಾತ್ವಿಕ್ ಹೆಸರು ಬದಲಾವಣೆಯೂ ಒಂದಾಗಿದೆ. ಮಗನನ್ನು ಬದುಕಿಸಿಕೊಡುವಂತೆ ದೇವರಲ್ಲಿ ಹರಕೆ ಹೊತ್ತಿದ್ದ ತಾಯಿ ಪೂಜಾ, ಮನೆಯಿಂದ ಮಠದವರೆಗೆ ದೀಡ್ ನಮಸ್ಕಾರ ಹಾಕಿ, ಮಗುವಿಗೆ ಮರು ನಾಮಕರಣ ಮಾಡುವುದಾಗಿ ಹೇಳಿಕೊಂಡಿದ್ದರು.
ಹೀಗಾಗಿ ಬರುವ 28ರಂದು ಪೂಜಾ ತಮ್ಮ ಮನೆಯಿಂದ ಲಚ್ಯಾಣ ಸಿದ್ದಲಿಂಗ ಮಹಾರಾಜರ ಮಠದವರೆಗೆ ದೀಡ್ ನಮಸ್ಕಾರ ಹಾಕಿ ಮಠದಲ್ಲಿ ತೊಟ್ಟಿಲು ಕಟ್ಟಿ ಮರುನಾಮಕರಣ ಮಾಡಲಿದ್ದಾರೆ. ಸಿದ್ದಲಿಂಗ ಮಹಾರಾಜರ ಪವಾಡದಿಂದ ನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಸಾತ್ವಿಕ್ ಹೆಸರು ಬದಲಿಗೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡುತ್ತೇವೆ. ರಕ್ಷಣೆ ಮಾಡಿದ ಎಲ್ಲ ಸಿಬ್ಬಂದಿಗೆ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇನೆ.” ಎಂದು ಪೂಜಾ ಹೇಳಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ದಾರೆ. ಸಾತ್ವಿಕ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಪಲ್ಸ್, ಉಸಿರಾಟ ಸಾಮಾನ್ಯ ಸ್ಥಿತಿಯಲ್ಲಿದೆ. ಎರಡೂ ತೋಳಿಗೆ ಕೊಂಚ ‘ಗಾಯವಾಗಿದ್ದು, ಆಯಿಂಟ್‌ಮೆಂಟ್ ಹಚ್ಚಲಾಗಿದೆ.
ವೈದ್ಯರು ಬಾಲಕನ ಎಕ್ಸ್‌ರೇ ಮಾಡಿಸಿದ್ದು, ಸಿಟಿ ಸ್ಕ್ಯಾನ್ ಕೂಡ ನಾರ್ಮಲ್ ಡಾ ಸುನೀಲ್ ರೂಡಗಿ, ಡಾ. ಶೈಲಶ್ರೀ ಪಾಟೀಲ್, ಡಾ. ರವಿ ಬರಡೊ, ಡಾ. ಸಾವಳಗಿ ಸೇರಿ ಐದು ಮಕ್ಕಳ ತಜ್ಞರಿಂದ ಮಗುವಿನ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ನೇತ್ರ, ಎಲುಬು, ಕೀಲು, ನೇತ್ರ ತಜ್ಞರು, ಇ.ಎನ್.ಟಿ ತಜ್ಞರು, ಮಕ್ಕಳ ಶಸ್ತ್ರ ಚಿಕಿತ್ಸಕರಿಂದಲೂ ತಪಾಸಣೆ ನಡೆಸಲಾಗಿದೆ. ಮಗುವಿನ ಎಲ್ಲಾ ರಿಪೊರ್ಟ್ ನಾರ್ಮಲ್ ಆಗಿವೆ. ಮಗು ಆರೋಗ್ಯದ ಕುರಿತು ಸಂತಸವಿದೆ. ಆದಾಗ್ಯೂ ನಾವು 48 ತಾಸುಗಳ ಕಾಲ ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ ಡಿ.ಎಚ್.ಓ ಬಸವರಾಜ ಹುಬ್ಬಳ್ಳಿ ಮಾಹಿತಿ ನೀಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಬಜೆಟ್‌ನಲ್ಲಿ 20 ಕೋಟಿ ಅನುದಾನ ಮೀಸಲು
ಕೇಂದ್ರದಲ್ಲಿ ಡಾ.ಮನಮೋಹನ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ಬೀದಿಬದಿ ವ್ಯಾಪಾರಿಗಳ ಭದ್ರತೆಗೆ ಕಾನೂನನ್ನು ರೂಪಿಸಿದ್ದಾರೆ. ಅದರಂತೆ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಚಿಕ್ಕಮಳಿಗೆಗಳನ್ನು, ತಳ್ಳು ಗಾಡಿಗಳನ್ನು ನೀಡಲು ರೂ.20 ಕೋಟಿ ಅನುದಾನವನ್ನು ಕಾಯ್ದಿರಿಸಿದ್ದಾರೆ ಎಂದು ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಡಾ.ಸಿ.ಇ. ರಂಗಸ್ವಾಮಿ ಹೇಳಿದರು. ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಿಭಾಗದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯಪುರ ಮಹಾನಗರಪಾಲಿಕೆಯಲ್ಲಿ ರೂ.1 ಕೋಟಿ ಅನುದಾನ ಮೀಸಲಿಡಲಾಗಿದೆ. ಇದರ ಸದುಪಯೋಗವನ್ನು ಬೀದಿಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವಿಗೆ ತಮ್ಮ ಬಳಿ ಬರುವ ಗ್ರಾಹಕರ ಮನವೊಲಿಸಿ ಪ್ರಯತ್ನಿಸಬೇಕೆಂದು ಕರೆ ನೀಡಿದರು. ರಾಜ್ಯ ಉಪಾಧ್ಯಕ್ಷ ಮಣಿಗೌಡ, ಜಿಲ್ಲಾ ಅಧ್ಯಕ್ಷ ಲಾಲಸಾಬ ಕೊರಬು, ಓಬಿಸಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ಕಾಲೇಬಾಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಅಬ್ದುಲ್ ಸತ್ತಾರ ಬಾಗವಾನ, ಮೈಬೂಬ ವಾಟಿ, ರಮಜಾನ ಶೇಖ, ಅನೀಲ ಚವ್ಹಾಣ, ಮೈಬೂಬ ಜಾಗೀರದಾರ, ಜುಮ್ಮಣ್ಣ ತಾಳಿಕೋಟಿ, ಚಾಂದಸಾಬ ದೇಸಾಯಿ, ಶರಣಮ್ಮ ನಾಯಕ, ಸಿದ್ದು ಹಡಪದ, ವಿದ್ಯಾಶ್ರೀ, ಭಾಗ್ಯಶ್ರೀ, ಜಯರಾಬಿ ಚೌಧರಿ, ಎಂ.ಎಂ. ಮುಲ್ಲಾ, ಫಿರೋಜ ಶೇಖ, ಸೋಮಣ್ಣ ತಳವಾರ, ಕೃಷ್ಣಾ ಲಮಾಣಿ, ಸಂತೋಷ ಬಾಲಗಾಂವಿ, ಮಹಾದೇವ ಜಾಧವ, ಎ.ಆರ್. ಕಂಬಾಗಿ, ಜಯಪ್ರಭು ಕೊಳಮಲಿ, ಭೀಮರಾಯ ಸೀತಿಮನಿ, ಮಹಾಲಿಂಗ ಕೆಂಗಲಗುತ್ತಿ, ರಮೇಶ ಪೂಜಾರಿ, ಶಾಂತವ್ವ ಹೊಸಮನಿ, ಅಬ್ದುಲ್‌ಪೀರಾ ಜಮಖಂಡಿ, ಬಸಪ್ಪ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.